
ಮುಂಬೈ[ಆ.12]: ಚಂಡೀಗಢದ ಸ್ಟಾರ್ ಹೋಟೆಲೊಂದು ಖ್ಯಾತ ನಟ ರಾಹುಲ್ ಬೋಸ್ ಅವರಿಗೆ 2 ಬಾಳೆಹಣ್ಣಿಗೆ ಜಿಎಸ್‌ಟಿ ಸಹಿತವಾಗಿ 422 ರು. ದರ ವಿಧಿಸಿ, ತೆರಿಗೆ ಅಧಿಕಾರಿಗಳಿಂದ 25000 ರು. ದಂಡ ವಿಧಿಸಿಕೊಂಡಿತ್ತು. ಇದೀಗ ಇನ್ನೊಂದು ಸ್ಟಾರ್ ಹೋಟೆಲ್‌ನ ಕಥೆ. ಇದು ಎರಡು ಮೊಟ್ಟೆಯ ಬಿಲ್ ಕಥೆ.
ಹೌದು, ಮುಂಬೈನ ಫೋರ್‌ಸೀಸನ್ಸ್ ಹೋಟೆಲ್, ಕಾರ್ತಿಕ್ ಧರ್ ಎಂಬ ಗ್ರಾಹಕರೊಬ್ಬರಿಗೆ ಕೇವಲ ಎರಡು ಮೊಟ್ಟೆಗೆ ಭರ್ಜರಿ 1700 ರು. ದರ ವಿಧಿಸಿ, ವಿವಾದದ ಕೇಂದ್ರಬಿಂದುವಾಗಿದೆ. ಕಾರ್ತಿಕ್ ಇತ್ತೀಚೆಗೆ ಹೋಟೆಲ್‌ಗೆ ಹೋಗಿದ್ದ ವೇಳೆ ವಿವಿಧ ವಸ್ತುಗಳನ್ನು ಸೇವಿಸಿದ್ದಕ್ಕೆ 6398 ರು. ಬಿಲ್ ನೀಡಿತ್ತು. ಆದರೆ ಈ ಪೈಕಿ ಎರಡು ಬೇಯಿಸಿದ ಮೊಟ್ಟೆಗಳಿಗೆ ಹೋಟೆಲ್ 1700 ರು. ಬಿಲ್ ನೀಡಿದ್ದು ಕಾರ್ತಿಕ್‌ರನ್ನು ಆಚ್ಚರಿಗೆ ಗುರಿ ಮಾಡಿದೆ.
ಈ ದುಬಾರಿ ಬಿಲ್ ನೋಡಿದ ಕಾರ್ತಿಕ್ ಈ ವಿಷಯವನ್ನು ಬಿಲ್ ಸಮೇತ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ನಟ ರಾಹುಲ್ ಬೋಸ್‌ಗೆ ಟ್ಯಾಗ್ ಮಾಡಿ ‘ಅಣ್ಣಾ ಈ ಬಗ್ಗೆ ಪ್ರತಿಭಟನೆ ಮಾಡೋಣವೇ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿ, ಮೊಟ್ಟೆಯೊಂದಿಗೆ ಚಿನ್ನವೂ ಬಂದಿದೆಯೇ ಎಂದು ವ್ಯಂಗ್ಯವಾಡಿದರೆ, ಇನ್ನೋರ್ವ ಈ ಮೊಟ್ಟೆಗಳು ಶ್ರೀಮಂತ ಕುಟುಂಬದ ಕೋಳಿಯಿಂದ ಬಂದಿರಬೇಕು ಎಂದು ಕಿಚಾಯಿಸಿದ್ದಾನೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.