ಕ್ರೀಡಾಭಿವೃದ್ಧಿಗೆ ಕೇಂದ್ರ ಬಜೆಟ್‌ನಲ್ಲಿ 2826 ಕೋಟಿ

By Kannadaprabha News  |  First Published Feb 2, 2020, 8:29 AM IST

ಕ್ರೀಡೆಗೆ 2826 ಕೋಟಿ, ಕಳೆದ ವರ್ಷಕ್ಕಿಂತ 50 ಕೋಟಿ ಏರಿಕೆ| ಖೇಲೋ ಇಂಡಿಯಾಗೆ ನೀಡುವ ಅನುದಾನವನ್ನು 291.42 ಕೋಟಿ ಏರಿಕೆ| ದೇಶದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಶಿಬಿರಗಳ ಆಯೋಜನೆ| 


ನವದೆಹಲಿ(ಫೆ.02): ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 2826.92 ಕೋಟಿ ಅನುದಾನ ಘೋಷಿಸಲಾಗಿದೆ. 2019-20ರ ಸಾಲಿಗೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ 50 ಕೋಟಿ ಹೆಚ್ಚುವರಿ ಅನುದಾನ ಸಿಗಲಿದೆ. 

ತಳಮಟ್ಟದಲ್ಲಿ ಕ್ರೀಡೆಯ ಅಭಿವೃದ್ಧಿ ಹಾಗೂ ದೇಶಾದ್ಯಂತ ಪ್ರತಿಭಾನ್ವೇಷಣೆ ನಡೆಸುವ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ಖೇಲೋ ಇಂಡಿಯಾಗೆ ನೀಡುವ ಅನುದಾನವನ್ನು 291.42 ಕೋಟಿಯಷ್ಟು ಏರಿಕೆ ಮಾಡಲಾಗಿದೆ. ಆದರೆ ಕ್ರೀಡಾಪಟುಗಳಿಗೆ ನೀಡುವ ಸಹಾಯಧನದಲ್ಲಿ ಗಣನೀಯ ಪ್ರಮಾಣದ ಇಳಿಕೆ ಮಾಡಲಾಗಿದೆ.

Latest Videos

undefined

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

111 ಕೋಟಿಯಿಂದ 70 ಕೋಟಿಗೆ ಇಳಿಸಲಾಗಿದೆ. ದೇಶದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಶಿಬಿರಗಳ ಆಯೋಜನೆ, ಮೂಲಭೂತ ಸೌಕರ್ಯಗಳು, ಪರಿಕರಗಳ ಪೂರೈಕೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನೀಡುವ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಕಳೆದ ವರ್ಷ 615 ಕೋಟಿ ಮೀಸಲಿಡಲಾಗಿತ್ತು. ಈ ಸಾಲಿನಲ್ಲಿ ಆ ಮೊತ್ತವನ್ನು 500 ಕೋಟಿಗೆ ಇಳಿಕೆ ಮಾಡಲಾಗಿದೆ.
 

click me!