ಕೇಂದ್ರದಿಂದ ಕರ್ನಾಟಕಕ್ಕೆ 30 ಸಾವಿರ ಕೋಟಿ ಬಾಕಿ: ಬಾಯ್ಬಿಡದ ಸರ್ಕಾರ!

By Kannadaprabha NewsFirst Published Feb 2, 2020, 8:24 AM IST
Highlights

30 ಸಾವಿರ ಕೋಟಿ ಬಾಕಿ ಬಗ್ಗೆ ಬಾಯ್ಬಿಡದ ಕೇಂದ್ರ| ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳ ಅನುದಾನದ ಬಾಕಿ ಪ್ರಸ್ತಾಪವೇ ಇಲ್ಲ| ಕೇವಲ ಜಿಎಸ್‌ಟಿ ಪರಿಹಾರ ಬಗ್ಗೆ ಮಾತ್ರ ಘೋಷಣೆ| ಕೇಂದ್ರದ ನಿಲುವಿಗೆ ಬೇಸರ

ಬೆಂಗಳೂರು[ಫೆ.02]: ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ (2019-20) ಘೋಷಿಸಿದ್ದ ಅನುದಾನ, ಜಿಎಸ್‌ಟಿ ಪರಿಹಾರ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ .30 ಸಾವಿರ ಕೋಟಿಗಳಷ್ಟುಅನುದಾನ ಬಾಕಿ ಉಳಿಸಿಕೊಂಡಿದೆ. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ಜಿಎಸ್‌ಟಿ ಪರಿಹಾರ ಹೊರತುಪಡಿಸಿ ಉಳಿದ ಹಣದ ಬಗ್ಗೆ ಪ್ರಸ್ತಾವನೆಯೇ ಮಾಡದಿರುವುದು ಗೊಂದಲ ಮೂಡಿಸಿದೆ.

ಕಳೆದ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಣೆಯಾಗಿದ್ದ ಹಣವೂ ಬಂದಿಲ್ಲ. ಇನ್ನು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಹಾಗೂ ಕಾರ್ಯಕ್ರಮಗಳ ಭವಿಷ್ಯ ಏನಾಗಲಿದೆ ಎಂಬುದನ್ನು ಅರಿಯಲು ಒಂದು ವರ್ಷ ಕಾಯಬೇಕು ಎಂದು ಹಣಕಾಸು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿವಿಡೆಂಡ್‌ ತೆರಿಗೆ ರದ್ದು, ಷೇರುದಾರರಿಗೆ ಶಾಕ್!

ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚು ಜಿಎಸ್‌ಟಿ ಹಣ ಸಂಗ್ರಹವಾಗುತ್ತಿದೆ. 2019-20ನೇ ಸಾಲಿನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿ ಹಣ ಹೆಚ್ಚಾಗಿದ್ದು ಹಾಗೂ ಕೇಂದ್ರ ನೀಡುತ್ತಿರುವ ಅನುದಾನ ಕಡಿಮೆ ಇದೆ. ಹೀಗಾಗಿ ಇದನ್ನು ಸರಿಹೊಂದಿಸಲು ಪ್ರತಿ ಎರಡು ತಿಂಗಳಿಗೊಮ್ಮೆ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಈ ರೀತಿ ಪ್ರಸಕ್ತ ವರ್ಷದಲ್ಲಿ .17,249 ಕೋಟಿ ಜಿಎಸ್‌ಟಿ ಪರಿಹಾರ ನೀಡಬೇಕಿದ್ದು, ಪ್ರತಿ ಎರಡು ತಿಂಗಳಿಗೊಮ್ಮೆ ಕಂತಿನ ರೂಪದಲ್ಲಿ ಪರಿಹಾರದ ಹಣ ನೀಡುತ್ತಿದೆ. ಆದರೆ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ಕಂತಿನ ಬಳಿಕ ಅಕ್ಟೋಬರ್‌-ನವೆಂಬರ್‌ ಹಾಗೂ ಡಿಸೆಂಬರ್‌-ಜನವರಿ ಕಂತಿನ ನಾಲ್ಕು ತಿಂಗಳ ಹಣ ಪಾವತಿ ಮಾಡಿಲ್ಲ. ಹೀಗಾಗಿ ಸುಮಾರು .7 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

2019-20ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಪರಿಹಾರದ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಬದಲಿಗೆ 2016-17, 2017-18ನೇ ಸಾಲಿನಲ್ಲಿ ಬಾಕಿ ಇರುವ ಪರಿಹಾರದ ಮೊತ್ತವನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದನ್ನು ಜಿಎಸ್‌ಟಿ ಪರಿಹಾರ ಸೆಸ್‌ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಹೇಳಲಾಗಿದೆ.

ತೆರಿಗೆ ಪಾಲು ಸಹ ಬಾಕಿ: ಉಳಿದಂತೆ 14ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಶೇ.4.7 ರಷ್ಟುಹಣ ಬರಬೇಕು ಎಂದು ನಿಗದಿ ಮಾಡಲಾಗಿದೆ. ಅದರಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 5 ವರ್ಷದಲ್ಲಿ .1.09 ಲಕ್ಷ ಕೋಟಿ ತೆರಿಗೆ ಪಾಲು ನೀಡಬೇಕು. 2019-20ನೇ ಸಾಲಿನಲ್ಲಿ .39,806 ಸಾವಿರ ಕೋಟಿ ನೀಡಬೇಕಿದ್ದು, ಪ್ರಸ್ತುತ ಇನ್ನೂ .10 ಸಾವಿರ ಕೋಟಿಗಳಷ್ಟುಅನುದಾನ ಬಾಕಿ ಉಳಿಸಿಕೊಂಡಿದೆ. ಕೇಂದ್ರ ಸರ್ಕಾರದ ಅನುದಾನದ ಮೊತ್ತ .16,645 ಕೋಟಿ ನೀಡಬೇಕಿದ್ದು, ಇದರಲ್ಲೂ .6-7 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ.

ಹೊಸ ತೆರಿಗೆ ವ್ಯವಸ್ಥೆ ಅನುಸರಿಸಿದ್ರೆ 70 ತೆರಿಗೆ ವಿನಾಯ್ತಿಗಳು ರದ್ದು!

ಉಳಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಬೇಕಿದ್ದ ಒಟ್ಟು ಅನುದಾನ .5,335 ಕೋಟಿಗಳಲ್ಲಿ .911 ಕೋಟಿ ಮಾತ್ರ ಬಂದಿದೆ. ಉಳಿದಂತೆ ಸುಮಾರು .29,200 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

click me!