Forbes 30 under 30 list: 26 ವಯಸ್ಸಿನ ಭಾರತೀಯನ ಅಪ್ರತಿಮ ಸಾಧನೆ; ಫೋಬ್ಸ್ ಪಟ್ಟಿಯಲ್ಲಿ ಉದ್ಯಮಿ ಅಶ್ವಿನ್ ಶ್ರೀನಿವಾಸ್

Suvarna News   | Asianet News
Published : Dec 22, 2021, 08:44 PM IST
Forbes 30 under 30 list: 26 ವಯಸ್ಸಿನ ಭಾರತೀಯನ ಅಪ್ರತಿಮ ಸಾಧನೆ; ಫೋಬ್ಸ್ ಪಟ್ಟಿಯಲ್ಲಿ ಉದ್ಯಮಿ ಅಶ್ವಿನ್ ಶ್ರೀನಿವಾಸ್

ಸಾರಾಂಶ

*ಕೇರಳ ಮೂಲದ ಅಶ್ವಿನ್ ಅಮೆರಿಕದಲ್ಲಿ ಕ್ಯಾಂಫೈರ್ ಎಂಬ ಸ್ಟಾರ್ಟ್ಅಪ್ ನಡೆಸುತ್ತಿದ್ದಾರೆ *ಕಂಪೆನಿಗಳಿಗೆ ಕಮ್ಯೂನಿಟಿ ಬಿಲ್ಡ್ ಮಾಡಲು ಕಾಂಫೈರ್ ನೆರವು ನೀಡುತ್ತದೆ *ಕೊಚ್ಚಿಯಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿರೋ ಅಶ್ವಿನ್ 

ನ್ಯೂಯಾರ್ಕ್ (ಡಿ.22):  ಇತ್ತೀಚೆಗಷ್ಟೇ ಫೋಬ್ಸ್ (Forbes) ನಿಯತಕಾಲಿಕಾ ಬಿಡುಗಡೆ ಮಾಡಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 4 ಭಾರತೀಯ ಮಹಿಳೆಯರು ಸ್ಥಾನ ಗಿಟ್ಟಿಸಿಕೊಳ್ಳೋ ಮೂಲಕ ಹೆಮ್ಮೆಪಡುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಭಾರತೀಯರು ಹೆಮ್ಮೆ ಪಡೋ ಸುದ್ದಿಯೊಂದಿದೆ. ಕೇರಳ(Kerala) ಮೂಲದ ಉದ್ಯಮಿ 26 ವರ್ಷದ ಅಶ್ವಿನ್ ಶ್ರೀನಿವಾಸ್ (Ashwin Sreenivas) ಜನಪ್ರಿಯ ನಿಯತಕಾಲಿಕಾ ಫೋಬ್ಸ್ (Forbes) ವಾರ್ಷಿಕ '30 ಅಂಡರ್ 30' ಪಟ್ಟಿಯಲ್ಲಿ(30 under 30 list) ಸ್ಥಾನ ಪಡೆದಿದ್ದಾರೆ. ಇವರು ಅಮೆರಿಕದಲ್ಲಿ ಕ್ಯಾಂಫೈರ್ ( Campfire) ಎಂಬ ಟೆಕ್ ಸ್ಟಾರ್ಟ್ ಅಪ್(Startup) ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. 

ಕ್ಯಾಂಫೈರ್ ಕೃತಕ ಬುದ್ಧಿಮತ್ತೆ (AI)ಬಳಸಿಕೊಂಡು ಕಂಪೆನಿಗಳಿಗೆ ಕಮ್ಯೂನಿಟಿಗಳನ್ನು(Community) ಸೃಷ್ಟಿಸಿಕೊಳ್ಳಲು  ನೆರವು ನೀಡುತ್ತದೆ.  ಅಶ್ವಿನ್ ಶ್ರೀನಿವಾಸ್ 2021ರಲ್ಲಿಅಂದ್ರೆ ಈ ವರ್ಷವೇ  ಈ ಸ್ಟಾರ್ಟ್ ಅಪ್ (Startup) ಪ್ರಾರಂಭಿಸಿ ಫೋಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿರೋದು ವಿಶೇಷವೇ ಸರಿ. ಅಂದ ಹಾಗೇ ಕಾಂಫೈರ್ ಅಶ್ವಿನ್ ಅವರ ಮೊದಲ ಸ್ಟಾರ್ಟ್ಅಪ್ ಅಲ್ಲ, ಇದಕ್ಕೂ ಮುನ್ನ ಅವರು ಇನ್ನೊಂದು ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದರು. 2019ರಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಶ್ವಿನ್ ಕೆಲವರೊಂದಿಗೆ ಸೇರಿ ಹೆಲಿಯಾ (Helia) ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಇದು ಕೂಡ ಟೆಕ್  ಸ್ಟಾರ್ಟ್ ಅಪ್ ಆಗಿದ್ದು, ಕಂಪನಿಗಳ ಭದ್ರತಾ ತಂಡಗಳಿಗೆ ಸಾಫ್ಟ್ ವೇರ್ ಪೂರೈಕೆ ಮಾಡುತ್ತಿತ್ತು. ಈ ಸಾಫ್ಟವೇರ್ ಸಹಾಯದಿಂದ ಕ್ಯಾಮರ್ ದ ಮೂಲಕ ಸಂಸ್ಥೆಯ ಕಾರ್ಯನಿರ್ವಹಣೆ ಮೇಲೆ ನಿಗಾವಿಡಲು ಸಾಧ್ಯವಾಗುತ್ತಿತ್ತು. 2020ರಲ್ಲಿ ಹೆಲಿಯಾವನ್ನು ಇನ್ನೊಂದು ಕಂಪನಿ ಸ್ಕೇಲ್ ಎಐ(Scale AI )ಖರೀದಿಸಿತು. 

Forbes Most Powerful Women list: ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡ ನಿರ್ಮಲಾ ಸೀತಾರಾಮನ್

ಫೋಬ್ಸ್ '30 ಅಂಡರ್ 30' ಪಟ್ಟಿಯಲ್ಲಿ ತಮ್ಮ ಹೆಸರಿರೋ ಬಗ್ಗೆ ಪ್ರತಿಕ್ರಿಯಿಸಿರೋ  ಅಶ್ವಿನ್   '30 ಅಂಡರ್ 30 ಪಟ್ಟಿಯಲ್ಲಿರೋ ಬಹುತೇಕ ಹೆಸರುಗಳನ್ನು ಭವಿಷ್ಯದಲ್ಲಿ ಅವರು ಮಾಡಬಹುದಾದ ಸಾಧನೆಗಳನ್ನು ಅಂದಾಜಿಸಿ ಆಯ್ಕೆ ಮಾಡಲಾಗಿರುತ್ತದೆ.ಹೀಗಾಗಿ ಅವರು ಭವಿಷ್ಯದಲ್ಲಿ ನಮ್ಮಿಂದ ವಿಶಿಷ್ಟವಾದ ಸಾಧನೆಗಳನ್ನು ನಿರೀಕ್ಷಿಸಿರುತ್ತಾರೆ. ಈ ಸಂದರ್ಭದಲ್ಲಿ ನನಗೊಂದು ಮಾತು ನೆಪಾಗುತ್ತದೆ. ಯಾರಿಗೆ ಜಾಸ್ತಿ ನೀಡಲಾಗುತ್ತದೋ ಅವರಿಂದ ಹೆಚ್ಚು ನಿರೀಕ್ಷಿಸಲಾಗುತ್ತದೆ. ಹೀಗಾಗಿ ಈಗ ನಾನು ಮಾಡಬೇಕಾದ ಕೆಲಸಗಳು ಬಹಳಷ್ಟಿವೆ' ಎಂದು ಹೇಳಿದ್ದಾರೆ. 

ಅಶ್ವಿನ್ ಎಲ್ಲಿಯವರು?
ಅಶ್ವಿನ್ ಶ್ರೀನಿವಾಸ್ ಅವರು ಹುಟ್ಟಿ ಬೆಳೆದದ್ದು ಕೇರಳದ ಕೊಚ್ಚಿಯಲ್ಲಿ(Kochi).ಇಲ್ಲಿನ ಚಾಯ್ಸ್ ಸ್ಕೂಲ್ ನಲ್ಲಿ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು ಆ ಬಳಿಕ ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.  ಅಮೆರಿಕದ ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಹಾಗೂ ಸ್ನಾತಕೊತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಇವರ ತಂದೆ-ತಾಯಿ ಪ್ರಸ್ತುತ ಕೊಚ್ಚಿಯಲ್ಲೇ ನೆಲೆಸಿದ್ದಾರೆ. ಅಶ್ವಿನ್ ಅವರ ತಂದೆ ಶ್ರೀನಿವಾಸನ್ ಕೃಷ್ಣನ್ ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ. ಅವರ ತಾಯಿ ಪ್ರೀತಿ ಶ್ರೀನಿವಾಸನ್ ಕೊಚ್ಚಿಯ ಸೇಂಟ್ ತೆರೇಸಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 

Tokenization:ಗಡುವು ವಿಸ್ತರಣೆ ಕೋರಿ RBIಗೆ ಆನ್ಲೈನ್ ವರ್ತಕರ ಮನವಿ

ಕ್ಯಾಂಫೈರ್  ಕುರಿತು ಒಂದಿಷ್ಟು ಮಾಹಿತಿ
ಕಾಂಫೈರ್ ಕಂಪನಿಗಳಿಗೆ ಕಮ್ಯೂನಿಟಿ ಸೃಷ್ಟಿಸಿಕೊಳ್ಳಲು, ನಿರ್ವಹಿಸಲು ಹಾಗೂ ಬೆಳೆಸಲು ನೆರವು ನೀಡುತ್ತದೆ. ಸಂಸ್ಥೆಯ ಕಮ್ಯೂನಿಟಿ ಬಿಲ್ಡಿಂಗ್ ಫ್ಲ್ಯಾಟ್ ಫಾರ್ಮ್ ಗ್ರಾಹಕರಿಗೆ ಸಂಬಂಧಪಟ್ಟ ಕಮ್ಯೂನಿಟಿಗೆ ಮೆಸೇಜ್ ಗಳನ್ನು ಕಳುಹಿಸಲು ಅವಕಾಶ ಕಲ್ಪಿಸೋ ಜೊತೆ ಎಲ್ಲ ಸದಸ್ಯರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿಡಲು ನೆರವು ನೀಡುತ್ತದೆ. ಸ್ಟಾರ್ಟ್ಅಪ್ ಮುಂದಿರೋ ಸವಾಲುಗಳ ಬಗ್ಗೆ ಮಾತನಾಡಿರೋ ಅಶ್ವಿನ್ 'ಕೊರೋನಾ ಕಾಣಿಸಿಕೊಂಡ ಬಳಿಕ ಯಾವುದೇ ಒಂದು ಕಮ್ಯೂನಿಟಿಯ ಭಾಗವಾಗಿರೋ ಜನರನ್ನು ಅರ್ಥ ಮಾಡಿಕೊಳ್ಳೋದು ಕಂಪನಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!