CPI Forecast:ಗ್ರಾಹಕ ದರ ಸೂಚ್ಯಂಕ 150 ಬೇಸಿಸ್ ಪಾಯಿಂಟ್ಸ್ ಏರಿಕೆ ಸಾಧ್ಯತೆ: ಸ್ಟ್ಯಾಂಡರ್ಡ್ ಚಾರ್ಟರಡ್ ಬ್ಯಾಂಕ್

By Suvarna News  |  First Published Dec 22, 2021, 7:18 PM IST

*GST ದರದಲ್ಲಿ ಏನೇ ಏರಿಕೆಯಾದ್ರೂ ಅದು ಸಿಪಿಐ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ
*ದರ ವಿನ್ಯಾಸದಲ್ಲಿನ ಬದಲಾವಣೆಗಳ ಬಗ್ಗೆ ಜಿಎಸ್ ಟಿ ಮಂಡಳಿ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
*ಆಹಾರ ಹಾಗೂ ತಂಪು ಪಾನೀಯಗಳ ಮೇಲಿನ GST ಹೆಚ್ಚಳವಾಗೋ ಸಾಧ್ಯತೆ
 


ನವದೆಹಲಿ (ಡಿ.22): ಭಾರತದ ಗ್ರಾಹಕ ದರ ಸೂಚ್ಯಂಕ (CPI) 150 ಬೇಸಿಸ್ ಪಾಯಿಂಟ್ ಗಳಷ್ಟು ( basis points) ಏರಿಕೆಯಾಗೋ ಮೂಲಕ ಆರ್ ಬಿಐಗೆ ಒತ್ತಡ ಸೃಷ್ಟಿಸೋ ಸಾಧ್ಯತೆಯಿದೆ ಎಂದು  ಸ್ಟ್ಯಾಂಡರ್ಡ್ ಚಾರ್ಟರಡ್ ಬ್ಯಾಂಕ್ (Standard Chartered Bank) ಅಂದಾಜಿಸಿದೆ. ಹಣಕಾಸು ಆಯೋಗದ ( finance commission) ಶಿಫಾರಸ್ಸುಗಳ ಅನ್ವಯ ಜಿಎಸ್ ಟಿ ಮಂಡಳಿ (GST council) ಅನೇಕ ಸರಕುಗಳ ದರ ಹೆಚ್ಚಿಸಲು ನಿರ್ಧರಿಸಿದ್ರೆ ಗ್ರಾಹಕ ದರ ಸೂಚ್ಯಂಕದಲ್ಲಿ ಏರಿಕೆಯಾಗೋದು ಖಚಿತ ಎಂದು ಹೇಳಿದೆ. ಅದ್ರಲ್ಲೂ ಆಹಾರ ಹಾಗೂ ತಂಪು ಪಾನೀಯಗಳ ಬೆಲೆಯಲ್ಲಿ ಹೆಚ್ಚಳವಂತೂ ನಿಶ್ಚಿತ ಎಂದು ಅಂದಾಜಿಸಿದೆ.

'ಗ್ರಾಹಕ ದರ ಸೂಚ್ಯಂಕ (CPI)100-125 ಬೇಸ್ ಪಾಯಿಂಟ್ ಗಳಷ್ಟು ಹೆಚ್ಚಳವಾಗಬಹುದೆಂದು ನಾವು ಅಂದಾಜಿಸಿದ್ದೇವೆ. ಸರಕು ಹಾಗೂ ಸೇವಾ ತೆರಿಗೆ (GST) ಒಮ್ಮೆಗೆ ಏರಿಕೆ ಕಂಡರೆ ಈ ಬೆಳವಣಿಗೆ ಘಟಿಸಲಿದೆ'ಎಂದು ಸ್ಟ್ಯಾಂಡರ್ಡ್ ಚಾರ್ಟರಡ್ ಬ್ಯಾಂಕ್  ದಕ್ಷಿಣ ಏಷ್ಯಾ ಆರ್ಥಿಕ ಸಂಶೋಧನಾ ಸಂಸ್ಥೆ(South Asia Economic Research) ಮುಖ್ಯಸ್ಥರಾದ ಅನುಭೂತಿ ಸಹೆ ತಿಳಿಸಿದ್ದಾರೆ. ' ಈ ಏರಿಕೆಯಲ್ಲಿ 40 bpsಇತ್ತೀಚೆಗೆ ಬಟ್ಟೆಗಳ ಮೇಲಿನ ಜಿಎಸ್ ಟಿಯಲ್ಲಿನ ಗಣನೀಯ ಏರಿಕೆಯಿಂದಲೇ ಉಂಟಾಗಲಿದೆ' ಎಂದು ಅವರು ತಿಳಿಸಿದ್ದಾರೆ. 

Tap to resize

Latest Videos

Tokenization:ಗಡುವು ವಿಸ್ತರಣೆ ಕೋರಿ RBIಗೆ ಆನ್ಲೈನ್ ವರ್ತಕರ ಮನವಿ

ಜಿಎಸ್ ಟಿ ದರ ವಿನ್ಯಾಸದಲ್ಲಿನ ಬದಲಾವಣೆಗಳ ಬಗ್ಗೆ ಜಿಎಸ್ ಟಿ ಮಂಡಳಿ(GST Council)ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಆದ್ರೆ  ಸ್ಟ್ಯಾಂಡರ್ಡ್ ಚಾರ್ಟರಡ್ ಬ್ಯಾಂಕ್ ಜಿಎಸ್ ಟಿ ಮಂಡಳಿ ಘೋಷಿಸೋ ದರಗಳು ಶೇ.8ರಿಂದ ಶೇ. 20 ಅಥವಾ ಶೇ.30ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಅದೇರೀತಿ ಶೇ.5ರಷ್ಟಿರೋ ಜಿಎಸ್ ಟಿ ಶೇ.18 ಹಾಗೂ ಶೇ.28ಕ್ಕೆ ಏರಿಕೆಯಾಗೋ ಸಾಧ್ಯತೆಯಿದೆ ಎಂದು ಹೇಳಿದೆ. ಇತ್ತೀಚೆಗೆ ಬಟ್ಟೆಗಳ ಮೇಲಿನ ಜಿಎಸ್ ಟಿಯನ್ನು ಶೇ.5ರಿಂದ ಶೇ.12ಕ್ಕೆ ಏರಿಕೆ ಮಾಡಲಾಗಿತ್ತು. 

ಆಹಾರ ಹಾಗೂ ತಂಪು ಪಾನೀಯಗಳ ಬೆಲೆಯಲ್ಲಿ ಹೆಚ್ಚಿನ ಹೆಚ್ಚಳವಾಗೋ ಸಾಧ್ಯತೆಯಿದೆ. ಏಕೆಂದ್ರೆ ಜಿಎಸ್ ಟಿ ದರ ಪಟ್ಟಿಯಲ್ಲಿ ಇದು ಶೇ.45ರಷ್ಟು ಮಹತ್ವ ಪಡೆದುಕೊಂಡಿದೆ. 'ಒಟ್ಟಾರೆ ಜಿ ಎಸ್ ಟಿ ದರದಲ್ಲಿ ಏನೇ ಏರಿಕೆಯಾದ್ರೂ ಅದು ಸಿಪಿಐ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಾರ್ಷಿಕ ಸಿಪಿಐ ಮೇಲೆ ಜಿ ಎಸ್ ಟಿ ಹೆಚ್ಚಳಗೊಂಡ ಸಮಯ ಹಾಗೂ ಪ್ರಮಾಣ ನಿರ್ಣಾಯಕ ಪರಿಣಾಮ ಬೀರುತ್ತವೆ' ಎಂದು ಸಹೆ ಹೇಳಿದ್ದಾರೆ. 

Import Duty On Palm Oil:ತಗ್ಗಲಿದೆ ಅಡುಗೆ ಎಣ್ಣೆ ಬೆಲೆ; ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

ಸಿಪಿಐ ಪಟ್ಟಿಯಲ್ಲಿರೋ ಅನೇಕ ಸರಕುಗಳು ಜಿ ಎಸ್ ಟಿ ವ್ಯಾಪ್ತಿಗೆ ಬರೋದಿಲ್ಲ. ಆದ್ರೂ ಕೂಡ ಉಳಿದ ಸರಕುಗಳ ಮೇಲಿನ ಜಿಎಸ್ ಟಿ ಸಿಪಿಐ ದರದ ಮೇಲೆ ಪರಿಣಾಮ ಬೀರುತ್ತದೆ. ದೇಶದಲ್ಲಿ ಸಗಟು ಹಣದುಬ್ಬರವು 30 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿರೋದು ಕಳೆದ ವಾರ ಸರ್ಕಾರ ಬಿಡುಗಡೆಗೊಳಿಸಿರೋ ಅಂಕಿಅಂಶಗಳಿಂದ ತಿಳಿದು ಬಂದಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ನವೆಂಬರ್‌ನಲ್ಲಿ ಸಗಟು ಬೆಲೆ ಶೇಕಡಾ 14.2 ರಷ್ಟು ಹೆಚ್ಚಾಗಿದೆ. ಇನ್ನು ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 5 ರ ಸಮೀಪದಲ್ಲಿತ್ತು ಎಂಬುದು ಸರ್ಕಾರ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಸಾಬೀತಾಗಿದೆ. ಇದಕ್ಕೆ ಪೂರಕವೆಂಬಂತೆ ದೇಶದಲ್ಲಿ ತರಕಾರಿ, ದಿನಸಿ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸರ್ಕಾರ ಕೂಡ ಹಣದುಬ್ಬರ ತಡೆಗೆ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 

click me!