ಕರ್ನಾಟಕದಲ್ಲಿ ಅಮೆರಿಕದಿಂದ 25,000 ಕೋಟಿ ಬಂಡವಾಳ ನಿರೀಕ್ಷೆ: ಎಂಬಿಪಾ

By Kannadaprabha News  |  First Published Oct 13, 2023, 8:36 AM IST

12 ದಿನಗಳ ಅಮೆರಿಕಾ ಪ್ರವಾಸದ ವೇಳೆ 30ಕ್ಕೂ ಹೆಚ್ಚಿನ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. 36 ಸಭೆಗಳು, 27 ಒನ್‌ ಟು ಒನ್‌ ಸಭೆ, 9 ಸಂವಾದಗಳನ್ನು ನಡೆಸಲಾಗಿದೆ. ಎಲೆಕ್ಟ್ರಾನಿಕ್ಸ್‌, ಸೆಮಿಕಂಡಕ್ಟರ್‌, ಏರೋಸ್ಪೇಸ್‌, ಡಿಫೆನ್ಸ್, ಎಲೆಕ್ಟ್ರಿಕ್‌ ವಾಹನ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. ಅದರ ಫಲವಾಗಿ ರಾಜ್ಯದಲ್ಲಿ 25 ಸಾವಿರ ಕೋಟಿ ರು.ನಷ್ಟು (3 ಶತಕೋಟಿ ಡಾಲರ್‌) ಬಂಡವಾಳ ಹೂಡಿಕೆಯ ಭರವಸೆ ದೊರೆತಿದೆ ಎಂದ ಎಂ.ಬಿ. ಪಾಟೀಲ್‌ 


ಬೆಂಗಳೂರು(ಅ.13):  ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸೆಳೆಯಲು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ನೇತೃತ್ವದ ತಂಡ ನಡೆಸಿದ ಅಮೆರಿಕಾ ಪ್ರವಾಸದಿಂದಾಗಿ ರಾಜ್ಯದಲ್ಲಿ 25 ಸಾವಿರ ಕೋಟಿ ರು.ಗಳಷ್ಟು ಬಂಡವಾಳ ಹೂಡಿಕೆ ಮಾಡುವ ಕುರಿತು ವಿವಿಧ ಸಂಸ್ಥೆಗಳು ಆಸಕ್ತಿ ತೋರಿವೆ.

ಸುದ್ದಿಗೋಷ್ಠಿಯಲ್ಲಿ ಅಮೆರಿಕಾ ಪ್ರವಾಸದ ಕುರಿತು ಮಾಹಿತಿ ನೀಡಿದ ಎಂ.ಬಿ. ಪಾಟೀಲ್‌, 12 ದಿನಗಳ ಅಮೆರಿಕಾ ಪ್ರವಾಸದ ವೇಳೆ 30ಕ್ಕೂ ಹೆಚ್ಚಿನ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. 36 ಸಭೆಗಳು, 27 ಒನ್‌ ಟು ಒನ್‌ ಸಭೆ, 9 ಸಂವಾದಗಳನ್ನು ನಡೆಸಲಾಗಿದೆ. ಎಲೆಕ್ಟ್ರಾನಿಕ್ಸ್‌, ಸೆಮಿಕಂಡಕ್ಟರ್‌, ಏರೋಸ್ಪೇಸ್‌, ಡಿಫೆನ್ಸ್, ಎಲೆಕ್ಟ್ರಿಕ್‌ ವಾಹನ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. ಅದರ ಫಲವಾಗಿ ರಾಜ್ಯದಲ್ಲಿ 25 ಸಾವಿರ ಕೋಟಿ ರು.ನಷ್ಟು (3 ಶತಕೋಟಿ ಡಾಲರ್‌) ಬಂಡವಾಳ ಹೂಡಿಕೆಯ ಭರವಸೆ ದೊರೆತಿದೆ ಎಂದರು.

Tap to resize

Latest Videos

ರಿಲಯನ್ಸ್ ಮಂಡಳಿಗೆ ಅನಂತ್ ಅಂಬಾನಿ ನೇಮಕಕ್ಕೆ ಹಿನ್ನಡೆ; ವೋಟ್ ಮಾಡದಂತೆ ಹೂಡಿಕೆದಾರರಿಗೆ ಐಐಎಎಸ್ ಸಲಹೆ

ಸಭೆಯಲ್ಲಿ ರಾಜ್ಯದಲ್ಲಿನ ಕೈಗಾರಿಕಾ ನೀತಿ, ಭೂಮಿಯ ಲಭ್ಯತೆ, ಮೂಲಸೌಕರ್ಯ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ವಿವರಿಸಲಾಗಿದೆ. ಪ್ರಮುಖವಾಗಿ ಬೃಹತ್‌ ಕೈಗಾರಿಕಾ ಇಲಾಖೆ ಅಡಿಯಲ್ಲಿ 9 ಬೇರೆ ಬೇರೆ ವಿಭಾಗಗಳಿಗೆ ತಲಾ ಒಂದು ವಿಷನ್‌ ಗ್ರೂಪ್‌ ರಚಿಸಲಾಗಿದ್ದು, ಅವುಗಳ ಕಾರ್ಯದ ಬಗ್ಗೆಯೂ ತಿಳಿಸಲಾಗಿದೆ. ಹಾಗೆಯೇ, ಐಟಿ-ಬಿಟಿ, ಏರೋಸ್ಪೇಸ್‌, ರಫ್ತು ಉದ್ಯಮ, ಕೈಗಾರಿಕಾ ಉತ್ಪಾದನೆ ಸೇರಿದಂತೆ ದೇಶದಲ್ಲಿ ರಾಜ್ಯ ಯಾವ ಸ್ಥಾನದಲ್ಲಿದೆ ಎಂಬುದನ್ನೂ ತಿಳಿಸಲಾಗಿದೆ. ಅದರಿಂದಾಗಿ ರಾಜ್ಯದ ಶಕ್ತಿಯ ಬಗ್ಗೆ ಅವರೆಲ್ಲರಿಗೂ ಅರಿವು ಮೂಡಿದ್ದು, ಬಂಡವಾಳ ಹೂಡಿಕೆಗೆ ಮನಸ್ಸು ಮಾಡಿದ್ದಾರೆ ಎಂದರು.

ಸೆಮಿಕಂಡಕ್ಟರ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಪ್ಲೈಡ್‌ ಮೆಟೀರಿಯಲ್ಸ್‌ ಸಂಸ್ಥೆಯು ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ವಿಸ್ತರಣೆ, ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ ಸಂಸ್ಥೆ, ಅಡ್ವಾನ್ಸ್ಡ್‌ಮೈಕ್ರೋ ಡಿವೈಸೆಸ್‌ ಸೇರಿದಂತೆ ಇನ್ನಿತರ ಸಂಸ್ಥೆಗಳು ಬಂಡವಾಳ ಹೂಡಿಕೆಗೆ ಒಲವು ತೋರಿವೆ. ಅದರ ಜತೆಗೆ ಸಂಶೋಧನಾ ವಿಶ್ವವಿದ್ಯಾಲಯ ಸ್ಥಾಪನೆ, ಡಚ್‌ ಆರೋಗ್ಯ ನಗರ ಸ್ಥಾಪನೆ ಕುರಿತಂತೆಯೂ ಚರ್ಚೆಗಳು ನಡೆದಿದ್ದು, ಅವೆಲ್ಲವುಗಳ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

ಬಂಡವಾಳ ಹೂಡಕೆ ಮಾಡಲು ಮನಸ್ಸು ಮಾಡಿರುವ ಸಂಸ್ಥೆಗಳೊಂದಿಗೆ ಬೃಹತ್‌ ಕೈಗಾರಿಕಾ ಇಲಾಖೆ ಹಾಗೂ ಐಟಿ-ಬಿಟಿ ಇಲಾಖೆ ಹಿರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಲಿದ್ದಾರೆ. ಅಂದಾಜಿನಂತೆ 2024-25ನೇ ಸಾಲಿನ ಮೊದಲ ತ್ರೈಮಾಸಿಕದ ವೇಳೆ ಬಂಡವಾಳ ಹೂಡಿಕೆ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ವಿವರಿಸಿದರು.

TCS ವರ್ಕ್ ಫ್ರಮ್ ಹೋಮ್ ಅಂತ್ಯ, ವಾರದಲ್ಲಿ 5 ದಿನ ಕಚೇರಿಗೆ ಮರಳಲು ಸೂಚಿಸಿದ ಹಿಂದಿದೆ 1 ಕಾರಣ!

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

ಪ್ರಾದೇಶಿಕ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ

ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಬಂಡವಾಳ ಆಕರ್ಷಿಸಲು ಹೊಸ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಅಮೆರಿಕಾಕ್ಕೆ ಭೇಟಿ ನೀಡಿ ಅಲ್ಲಿನ ಸಂಸ್ಥೆಗಳಿಗೆ ರಾಜ್ಯದ ಶಕ್ತಿ, ಮಾನವ ಸಂಪನ್ಮೂಲ, ನೀತಿಗಳ ಬಗ್ಗೆ ವಿವರ ನೀಡಲಾಗಿದೆ. ಸಭೆ ನಡೆಸಿದ ಸಂದರ್ಭದಲ್ಲಿ ಹಲವು ಸಂಸ್ಥೆಗಳು ಮಾನವ ಸಂಪನ್ಮೂಲದ ಕೌಶಲ್ಯದ ಬಗ್ಗೆ ಪ್ರಶ್ನಿಸಿದರು. ಹೀಗಾಗಿ ಕೌಶಲ್ಯಾಭಿವೃದ್ಧಿಗಾಗಿ ಪ್ರಾದೇಶಿಕವಾರು ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಅದರ ಜತೆಗೆ, ಬಂಡವಾಳ ಹೂಡಿಕೆ ಮಾಡುವವರಿಗೆ ಅನುಕೂಲವಾಗುವಂತೆ ಒಂದೊಂದು ಜಿಲ್ಲೆಯನ್ನು ಒಂದೊಂದು ಕ್ಷೇತ್ರದ ಬಂಡವಾಳ ಹೂಡಿಕೆಗೆ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

click me!