ವಾರಕ್ಕೆ 4 ದಿನದ ಕೆಲಸದ ನೀತಿಗೆ ಬ್ರಿಟನ್‌ನಲ್ಲಿ 200 ಕಂಪನಿಗಳ ಸಹಿ

Published : Jan 29, 2025, 11:15 AM ISTUpdated : Jan 29, 2025, 11:16 AM IST
ವಾರಕ್ಕೆ 4 ದಿನದ ಕೆಲಸದ ನೀತಿಗೆ ಬ್ರಿಟನ್‌ನಲ್ಲಿ 200 ಕಂಪನಿಗಳ ಸಹಿ

ಸಾರಾಂಶ

ಬ್ರಿಟನ್‌ನಲ್ಲಿ ಸುಮಾರು 200 ಕಂಪನಿಗಳು ವಾರಕ್ಕೆ 4 ದಿನ ಮಾತ್ರ ಕೆಲಸ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ. ಲಂಕಾ ನೌಕಾಪಡೆ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದೆ. ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧಕ್ಕೆ ಸರ್ಕಾರ ಒಲವು ತೋರಿದೆ.  ಈ ಎಲ್ಲಾ ಸುದ್ದಿಗಳ ವಿವರ ಕೆಳಗಿದೆ.

ನವದೆಹಲಿ: ಇನ್ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆ ಕೆಲಸ ಎನ್ನುವ ಹೇಳಿಕೆ ಕುರಿತು ಭಾರತದಲ್ಲಿ ಭಾರೀ ಚರ್ಚೆ ನಡೆಸುತ್ತಿರುವ ಹೊತ್ತಿನಲ್ಲೇ,  ಬ್ರಿಟನ್‌ನಲ್ಲಿಸುಮಾರು 200 ಕಂಪನಿಗಳು ವಾರಕ್ಕೆ 4 ದಿನ ಮಾತ್ರ ಕೆಲಸ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ.  ವಾರಕ್ಕೆ 4 ದಿನಗಳ ಕೆಲಸದ ಕುರಿತು ಹಿಂದಿನಿಂದಲೂ ಅಭಿಯಾನ ಆರಂಭಿಸಿದ್ದ ಹಲವು ಕಂಪನಿಗಳು ಇದೀಗ ಇಂಥ ನೀತಿ ಜಾರಿಗೆ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ 29 ಸಂಸ್ಥೆಗಳು, 24 ಟೆಕ್ ಕಂಪನಿಗಳು, ನಿರ್ವಹಣಾ ವಲಯದ 22 ಸಂಸ್ಥೆಗಳೂ ಸಹಿ ಹಾಕಿವೆ. ಈ ಕಂಪನಿಗಳಲ್ಲಿ ಅಂದಾಜು 5000 ಜನರು ಕೆಲಸ ಮಾಡುತ್ತಿದ್ದಾರೆ.

ಮೀನುಗಾರರ ಮೇಲೆ ಲಂಕಾ ದಾಳಿ: ಐವರಿಗೆ ಗಾಯ, ಭಾರತ ಗರಂ 
ನವದೆಹಲಿ: ಭಾರತ ಮತ್ತು ಶ್ರೀಲಂಕಾ ಜಲಗಡಿಯಲ್ಲಿ ಬರುವ ಡೆಲ್‌ಫ್ಟ್ ದ್ವೀಪದ ಬಳಿ ಲಂಕಾದ ನೌಕಾಪಡೆ ಸಿಬ್ಬಂದಿ ಮಂಗಳವಾರ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಐವರು ಮೀನುಗಾರರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಂಗಳವಾರ ಬೆಳಗ್ಗೆ 13 ಭಾರತೀಯ ಮೀನುಗಾರರಿದ್ದ ಹಡಗಿನ ಮೇಲೆ ಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಗಾಯಗೊಂಡವರನ್ನು ಜಾಫ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಎಂಥದ್ದೇ ಇದ್ದರೂ, ಬಲಪ್ರಯೋಗ ಸರಿಯಲ್ಲ, ಮೀನುಗಾರರ ಜೀವನದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅವರ ಬಗ್ಗೆ ಸದಾ ಮಾನವೀಯ ದೃಷ್ಟಿಕೋನದಿಂದ ವರ್ತಿಸಬೇಕು ಎನ್ನುವುದು ಭಾರತದ ನಿಲುವು ಎಂದು ಭಾರತದ ಸರ್ಕಾರ ಹೇಳಿದೆ.

ಮುಂಬೈ: ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧಕ್ಕೆ ಸರ್ಕಾರ ಒಲವು 
ಮುಂಬೈ: ಮುಂಬೈನ ಮೆಟ್ರೋಪಾಲಿಟಿನ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಯುಮಾಲಿನ್ಯ ತಗ್ಗಿಸಲು ಪೆಟ್ರೋಲ್ ಮತ್ತು ಡಿಸೇಲ್ ವಾಹನ ನಿಷೇಧಕ್ಕೆ ರಾಜ್ಯ ಸರ್ಕಾರ ಒಲವು ತೋರಿದ್ದು, 7 ಜನರ ತಂಡ ರಚಿಸಿ ವರದಿಗೆ ಸೂಚಿಸಿದೆ.  ಜ.9ರಂದು ಬಾಂಬೈ ಹೈಕೋರ್ಟ್ ಅರ್ಜಿಯೊಂದರ ವಿಚಾರಣೆ ವೇಳೆ ಮುಂಬೈ ನಗರದಲ್ಲಿ ಸಂಚಾರ ದಟ್ಟಣೆ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜನರ ಮೇಲೆ ಬೀರುತ್ತಿರುವ ಅಡ್ಡ ಪರಿಣಾಮದ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತ ಪಡಿಸಿತ್ತು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ನಿಷೇಧ ಹೇರಿ, ಸಿಎನ್‌ಜಿ ಮತ್ತು ಎಲೆಕ್ನಿಕ್ ವಾಹನಗಳಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿದೆ.

ಯಮುನೆಗೆ ಬಿಜೆಪಿ ವಿಷ ಹಾಕ್ತಿದೆ ಎಂದ ಕೇಜಿಗೆ ಆಯೋಗ ನೋಟಿಸ್‌ 
ನವದೆಹಲಿ: ಹರ್ಯಾಣ ಯಮುನಾ ನದಿಗೆ ವಿಷ ಬೆರೆಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಕೇಜಿವಾಲ್ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಬುಧವಾರ ರಾತ್ರಿ 8 ರಳಗೆ ದಾಖಲೆ ಜತೆ ಉತ್ತರಿಸಲು ಸೂಚಿಸಿದೆ. ಮಂಗಳವಾರ ಪ್ರಚಾರದ ವೇಳೆ ಹರ್ಯಾಣದ ಬಿಜೆಪಿಸರ್ಕಾರ ದೆಹಲಿಗರನ್ನು ಸಾಮೂಹಿಕವಾಗಿ ಕೊಲ್ಲಲು ಯಮುನೆಯಲ್ಲಿ ವಿಷ ಬೆರಸುತ್ತಿದೆ. ಇದನ್ನು ಶುದ್ದೀಕರಣ ಘಟಕಗಳೂ ಸಹ ಸಂಸ್ಕರಿಸಲು ಆಗುವುದಿಲ್ಲ. ಈ ಮೂಲಕ ಬಿಜೆಪಿ ಸಂಚು ರೂಪಿಸುತ್ತಿದೆ ಎಂದಿದ್ದರು. ಇದರ ಬೆನ್ನಲ್ಲೇ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತು. ಹರ್ಯಾಣ ಸರ್ಕಾರ ಮಾನನಷ್ಟ ಮೊಕದಮೆ ದಾಖಲಿಸುವುದಾಗಿ ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು