ಕುಂಭಮೇಳದಲ್ಲಿ 100ಕ್ಕೆ 1000, ಈ ಕೆಲಸ 2 ನಿಮಿಷದಲ್ಲಿ ಮಾಡಬೇಕು; ಸೂಪರ್ ಐಡಿಯಾದಿಂದ ದಿನಕ್ಕೆ ₹8,000 ಸಂಪಾದನೆ

Published : Jan 28, 2025, 08:07 PM IST
ಕುಂಭಮೇಳದಲ್ಲಿ 100ಕ್ಕೆ 1000, ಈ ಕೆಲಸ 2 ನಿಮಿಷದಲ್ಲಿ ಮಾಡಬೇಕು; ಸೂಪರ್ ಐಡಿಯಾದಿಂದ ದಿನಕ್ಕೆ ₹8,000 ಸಂಪಾದನೆ

ಸಾರಾಂಶ

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಗೊರಖ್‌ಪುರದ ಯುವಕ ಮುಕೇಶ್ ಮೌರ್ಯ ವಿಶಿಷ್ಟ ಐಡಿಯಾದಿಂದ ದಿನಕ್ಕೆ 8,000 ರೂ.ಗೂ ಹೆಚ್ಚು ಸಂಪಾದಿಸುತ್ತಿದ್ದಾರೆ. 

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅದ್ಧೂರಿಯಾಗಿ ಮಹಾಕುಂಭ ಮೇಳವನ್ನು ಆಯೋಜನೆ ಮಾಡಲಾಗಿದೆ. ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಲು ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಕೋಟ್ಯಂತರ ಭಕ್ತರ ಆಗಮನದಿಂದ ಪ್ರಯಾಗ್‌ರಾಜ್ ವ್ಯಾಪಾರ ಕೇಂದ್ರವಾಗಿ ಬದಲಾಗಿದೆ. ಟೀ ಮಾರಾಟದಿಂದ ಹಿಡಿದು ಅನೇಕರು ಇಲ್ಲಿ ವ್ಯಾಪಾರ ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಮಹಾಕುಂಭ ಮೇಳದಿಂದ ಎಷ್ಟೋ ಜನರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇದರ ಜೊತೆಯಲ್ಲಿ ಮಹಾಕುಂಭ ಮೇಳಕ್ಕೆ ಆಗಮಿಸಿರುವ ನಾಗಾ ಸಾಧುಗಳು, ವ್ಯಾಪಾರಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

ಮಹಾಕುಂಭ ಮೇಳದಿಂದ ಜನರು ವಿವಿಧ ರೀತಿಗಳಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಚಹಾ-ಕಾಫಿ, ಕುಡಿಯುವ ನೀರು, ತಿಂಡಿ, ಉಣ್ಣೆ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಈ ಎಲ್ಲಾ ವ್ಯಾಪಾರಗಳ ನಡುವೆ ಗೊರಖ್‌ಪುರ ಮೂಲದ ಯುವಕನೋರ್ವ ಸೂಪರ್ ಐಡಿಯಾದಿಂದ ದಿನಕ್ಕೆ 8,000 ರೂ.ಗಳಿಗಿಂದಲೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾನೆ. ಆ ಯುವಕ ಮಾಡಿದ ಸೂಪರ್ ಐಡಿಯಾ ಏನು ಎಂಬುದನ್ನು ನೋಡೋಣ ಬನ್ನಿ.

ಉತ್ತರ ಪ್ರದೇಶದ ಗೊರಖ್‌ಪುರ ನಿವಾಸಿಯಾಗಿರುವ ಮುಕೇಶ್ ಮೌರ್ಯ ಮಹಾಕುಂಭ ಮೇಳದಲ್ಲಿ ಪ್ರತಿದಿನ 8 ಸಾವಿರ ರೂ.ಗೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಮುಕೇಶ್ ಮೌರ್ಯ ಕುಂಭಮೇಳದಲ್ಲಿ ಕಬ್ಬಿಣದ ರಾಡ್ ಸೆಟಪ್ ಮಾಡಿದ್ದಾರೆ. ಈ ರಾಡ್‌ ಹಿಡಿದು 2 ನಿಮಿಷ ಜೋತು ಬೀಳುವ ವ್ಯಕ್ತಿಗೆ 1,000 ರೂಪಾಯಿ ನೀಡಲಾಗುತ್ತದೆ. ಆದ್ರೆ ಇದನ್ನು ಟ್ರೈ ಮಾಡಲು ಜನರು ಮೊದಲಿಗೆ 100 ರೂಪಾಯಿ ಪಾವತಿಸಬೇಕೆಂಬ ಕಂಡಿಷನ್ ಹಾಕಲಾಗಿದೆ. 

ಇದನ್ನೂ ಓದಿ: ಓ ದೇವ್ರೇ ಇಂಥ ಮಕ್ಕಳನ್ನು ಯಾರಿಗೂ ಕೊಡಬೇಡ;  ಕುಂಭಮೇಳದಲ್ಲಿ ವೃದ್ಧ ಪೋಷಕರನ್ನು ಬಿಟ್ಟು ಹೋದ ಪಾಪಿ ಮಕ್ಕಳು

ಮುಕೇಶ್ ಮೌರ್ಯ ಹೇಳುವ ಪ್ರಕಾರ, ದಿನಕ್ಕೆ ಸುಮಾರು 80 ಜನರು ಈ ಆಟವನ್ನು ಟ್ರೈ ಮಾಡುತ್ತಿದ್ದಾರೆ. ಆದರೆ ಕೇವಲ ಇಬ್ಬರು ಅಥವಾ ಮೂವರು ಮಾತ್ರ ಈ ಆಟವನ್ನು ಗೆಲ್ಲುತ್ತಾರೆ. ಇದರಂದಾಗಿ ದಿನಕ್ಕೆ 8,000 ರೂ. ಹಣ ಬರುತ್ತಿದೆ ಎಂದು ಹೇಳಿದ್ದಾರೆ.

ಮಹಾಕುಂಭ ಮೇಳ
ಜ.29ರ ಮೌನಿ ಅಮಾವಾಸ್ಯೆಯಂದು 10 ಕೋಟಿ ಜನ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಯಾತ್ರಿಕರ ಸುರಕ್ಷತೆ, ಜನದಟ್ಟನೆ ಮತ್ತು ಸಂಚಾರ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ತಿಳಿಸಿದೆ. ನಂತರ ಫೆ.3ರಂದು ಬಸಂತ ಪಂಚಮಿ, ಫೆ.12ರಂದು ಮಾಘಿ ಪೂರ್ಣಿಮಾ ಹಾಗೂ ಫೆ.26ರ ಶಿವರಾತ್ರಿಯಂದೂ ಶಾಹಿ ಸ್ನಾನಗಳು ನಡೆಯಲಿವೆ.

ಇದನ್ನೂ ಓದಿ: ಮೌನಿ ಅಮಾವಾಸ್ಯೆಗೆ ಸಿದ್ಧವಾದ ಉತ್ತರ ಪ್ರದೇಶ ಸರ್ಕಾರ; ಹೇಗಿದೆ ತಯಾರಿ?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!