2015ರಲ್ಲಿ ಭಾರತದಲ್ಲಿ 24.85% ಬಹುಸ್ತರದ ಬಡವರಿದ್ದರು. ಅದು 2020ರ ವೇಳೆಗೆ 14.96%ಗೆ ಇಳಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಬಡವರ ಸಂಖ್ಯೆ 9.89% ಇಳಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನವದೆಹಲಿ (ಜುಲೈ 18, 2023): 2015ರಿಂದ 2020ರ ನಡುವೆ 13.5 ಕೋಟಿ ಭಾರತೀಯರು ಬಹುಸ್ತರದ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ ಹಾಗೂ ರಾಜಸ್ಥಾನದಲ್ಲಿ ಬಡತನ ನಿರ್ಮೂಲನೆ ಅತಿಹೆಚ್ಚು ವೇಗದಿಂದ ಆಗಿದೆ.
ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಸೋಮವಾರ ‘ರಾಷ್ಟ್ರೀಯ ಬಹುಸ್ತರದ ಬಡತನ ಸೂಚ್ಯಂಕ-2023’ ವರದಿ ಬಿಡುಗಡೆ ಮಾಡಿದ್ದಾರೆ. ‘2015ರಲ್ಲಿ ಭಾರತದಲ್ಲಿ 24.85% ಬಹುಸ್ತರದ ಬಡವರಿದ್ದರು. ಅದು 2020ರ ವೇಳೆಗೆ 14.96%ಗೆ ಇಳಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಬಡವರ ಸಂಖ್ಯೆ 9.89% ಇಳಿಕೆಯಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಬಹುಸ್ತರದ ಬಡತನ ಸೂಚ್ಯಂಕ (ಎಂಪಿಐ) ಅಂದರೆ ಆರೋಗ್ಯ, ಶಿಕ್ಷಣ ಹಾಗೂ ಉತ್ತಮ ಜೀವನ ಮಟ್ಟ ಈ ಮೂರು ಸಂಗತಿಗಳಿಂದ ವಂಚಿತರಾದವರನ್ನು ಒಟ್ಟು 12 ಮಾನದಂಡಗಳಿಂದ (ಎಸ್‌ಡಿಜಿ) ಅಳೆಯುವ ವಿಧಾನವಾಗಿದೆ.
ಇದನ್ನು ಓದಿ: ಯುಎಇಗೆ ಪ್ರಧಾನಿ ಮೋದಿ ಭೇಟಿ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ, ಮೋದಿ ಫೋಟೋ
ಹಳ್ಳಿಗಳಲ್ಲೇ ಹೆಚ್ಚು ಬಡತನ ನಿರ್ಮೂಲನೆ:
ವರದಿಯ ಪ್ರಕಾರ ದೇಶದ ಗ್ರಾಮೀಣ ಭಾಗದಲ್ಲಿ ಬಡವರ ಪ್ರಮಾಣ ಅತಿ ಹೆಚ್ಚು ಇಳಿಕೆಯಾಗಿದ್ದು, ಐದು ವರ್ಷದ ಅವಧಿಯಲ್ಲಿ ದೇಶದ ಹಳ್ಳಿಗಳಲ್ಲಿ ಬಡವರ ಪ್ರಮಾಣ 32.59%ನಿಂದ 19.28%ಗೆ ಇಳಿಕೆಯಾಗಿದೆ. ನಗರ ಪ್ರದೇಶದಲ್ಲಿ ಬಡವರ ಪ್ರಮಾಣ 8.65%ನಿಂದ 5.27%ಗೆ ಇಳಿಕೆಯಾಗಿದೆ.
ದೇಶದ ಎಲ್ಲಾ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹುಸ್ತರದ ಬಡತನ ಸೂಚ್ಯಂಕವನ್ನು ಅಳೆಯಲಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ ಹಾಗೂ ರಾಜಸ್ಥಾನದಲ್ಲಿ ಬಡತನ ನಿರ್ಮೂಲನೆಯ ವೇಗ ದೇಶದ ಇತರ ರಾಜ್ಯಗಳಿಗಿಂತ ಹೆಚ್ಚಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಫ್ರಾನ್ಸ್ ವಿಶೇಷ ಗೌರವ: ರಾಣಿ ಎಲಿಜಬೆತ್‌ಗೆ ನೀಡಿದ್ದ ಮ್ಯೂಸಿಯಂನಲ್ಲಿ ಔತಣಕೂಟ; ತ್ರಿವರ್ಣ ಧ್ವಜಕ್ಕೂ ಆದ್ಯತೆ
ಬಡತನ ಇಳಿಕೆಗೆ ಕಾರಣವೇನು?
ನೈರ್ಮಲ್ಯ, ಪೌಷ್ಟಿಕಾಂಶ, ಅಡುಗೆ ಅನಿಲ, ಆರ್ಥಿಕ ಒಳಗೊಳ್ಳುವಿಕೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಮೇಲೆ ಸರ್ಕಾರ ಅತಿಹೆಚ್ಚು ಗಮನ ನೀಡಿದ್ದರಿಂದ ಇದು ಸಾಧ್ಯವಾಗಿದೆ ಎಂದು ನೀತಿ ಆಯೋಗದ ವರದಿ ಹೇಳಿದೆ.
ಮೋದಿ ಅವಧಿಯಲ್ಲಿ ಕ್ರಾಂತಿಕಾರಿ ಆರ್ಥಿಕತೆ ಸುಧಾರಣೆ: 9 ವರ್ಷದ ಆಳ್ವಿಕೆ ಬಗ್ಗೆ ಸಮೀಕ್ಷಾ ಸಂಸ್ಥೆ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತವು ಜಿಎಸ್‌ಟಿಯಂತಹ ಕ್ರಾಂತಿಕಾರಿ ಆರ್ಥಿಕ ಸುಧಾರಣಾ ಕ್ರಮಗಳಿಂದ ಈಗ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆಸ್ತಿ ನಿರ್ವಹಣೆ ಏಜೆನ್ಸಿ ಬರ್ನ್‌ಸ್ಟೀನ್ ಶ್ಲಾಘಿಸಿದೆ.
ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ 50 ಸೀಟ್ ಟಾರ್ಗೆಟ್: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?
‘ಮೋದಿ ಆಡಳಿತದ ಒಂದು ದಶಕ- ಭಾರಿ ಜಿಗಿತ’ ಎಂಬ 31 ಪುಟಗಳ ವರದಿಯನ್ನು ಬರ್ನ್‌ಸ್ಟೀನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಹಣದುಬ್ಬರ ನಿಯಂತ್ರಣ, ಆರ್ಥಿಕ ಒಳಗೊಳ್ಳುವಿಕೆ, ಡಿಜಿಟಲೀಕರಣ, ಜಿಎಸ್‌ಟಿ, ಕೋವಿಡ್ ನಿರ್ವಹಣೆ, ಕೃಷ್ಯುತ್ಪನ್ನಗಳಿಗೆ ಬೆಂಬಲ ಬೆಲೆ ಮುಂತಾದ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
‘ಕೆಲವರಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ. ಆದರೆ ಭಾರತದ ವಿಷಯದಲ್ಲಿ ಇದು ತೀವ್ರ ಪರಿಶ್ರಮದಿಂದ ಗಳಿಸಿದ ಯಶಸ್ಸಾಗಿದೆ. ಅಧಿಕಾರಕ್ಕೆ ಬಂದಾಗ ದುರ್ಬಲ ಆರ್ಥಿಕತೆಯಾಗಿದ್ದ ದೇಶವನ್ನು ಮೋದಿ ಪ್ರಬಲ ಆರ್ಥಿಕತೆಯಾಗಿ ಕಟ್ಟಿನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಇಂದು ದೇಶ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ದೇಶದಲ್ಲೀಗ ಉತ್ತಮ ನೀತಿಗಳು, ಹೂಡಿಕೆಯ ವಾತಾವರಣ, ಉತ್ಪಾದನಾ ಅವಕಾಶ, ಮೂಲಸೌಕರ್ಯಗಳು ನಿರ್ಮಾಣವಾಗಿವೆ’ ಎಂದು ವರದಿ ಹೇಳಿದೆ.
ಕಳೆದ ದಶಕದಲ್ಲಿ ಕೆಲ ವರ್ಷಗಳ ಕಾಲ ಆರ್ಥಿಕಾಭಿವೃದ್ಧಿ ದರ ಕಡಿಮೆಯಿದ್ದರೂ ಸತತ ಪ್ರಯತ್ನ ಹಾಗೂ ಸುಧಾರಣಾ ಕ್ರಮಗಳಿಂದಾಗಿ ಅದು ಈಗ ಉತ್ತಮ ಸ್ಥಿತಿಗೆ ತಲುಪಿದೆ. ಭಾರತವೀಗ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ವರದಿ ಶ್ಲಾಘಿಸಿದೆ.