
ನವದೆಹಲಿ: 2022-23ನೇ ಸಾಲಿನಲ್ಲಿ ಭಾರತವು ದೇಶೀಯವಾಗಿಯೇ 1ಲಕ್ಷ ಕೋಟಿ ರು.ಗೂ ಹೆಚ್ಚಿನ ಮೌಲ್ಯದ ರಕ್ಷಣಾ ಉತ್ಪನ್ನಗಳ ಉತ್ಪಾದನೆ ಮಾಡುವ ಮೂಲಕ ಹೊಸ ಸಾಧನೆ ಮಾಡಿದೆ. 2021-22ನೇ ಸಾಲಿನಲ್ಲಿ ರಕ್ಷಣಾ ಸಲಕರಣೆಗಳ ಉತ್ಪಾದನಾ ಮೌಲ್ಯ 95 ಸಾವಿರ ಕೋಟಿ ರು. ತಲುಪಿತ್ತು. ಒಂದೇ ವರ್ಷದಲ್ಲಿ ತನ್ನ ಸಾಧನೆ ಉತ್ತಮಪಡಿಸಿಕೊಂಡಿರುವ ದೇಶ, ಈಗ 1 ಲಕ್ಷ ಕೋಟಿ ರು. ಮೀರಿದೆ.
ನರೇಂದ್ರ ಮೋದಿ (Narendra Modi) ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ವಿದೇಶಿ ರಫ್ತು ತಗ್ಗಿಸಿ ‘ಮೇಕ್ ಇನ್ ಇಂಡಿಯಾ’ಗೆ ಒತ್ತು ನೀಡಿತ್ತು. ಹೀಗಾಗಿ ಅಂದಿನಿಂದ ಭಾರತದ ಕಂಪನಿಗಳಿಗೇ ಹೆಚ್ಚು ಪ್ರಮಾಣದಲ್ಲಿ ಶಸ್ತ್ರಾಸ್ತ್ರ (Weapons) ಹಾಗೂ ಇತರ ರಕ್ಷಣಾ ಸಲಕರಣೆಗಳ ಉತ್ಪಾದನೆಯ ಅವಕಾಶ ಲಭಿಸಿತ್ತು. ಅದರ ಫಲ ಈಗ ಗೋಚರಿಸತೊಡಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರಕ್ಷಣಾ ಇಲಾಖೆ (Defense Ministry), ‘ಈಗಿನ ಮಟ್ಟಿಗೆ 1,06,800 ರು. ಮೌಲ್ಯದ ರಕ್ಷಣಾ ಸಲಕರಣೆ ಉತ್ಪನ್ನ ಆದ ಮಾಹಿತಿ ಇದೆ. ಹಲವು ಖಾಸಗಿ ಕಂಪನಿಗಳು ಇನ್ನೂ ದತ್ತಾಂಶ ಕೊಡುವುದು ಬಾಕಿ ಇದ್ದು, ಅಂಕಿ-ಅಂಶ ಬಂದ ನಂತರ ಮೌಲ್ಯ ಇನ್ನೂ ಹೆಚ್ಚಲಿದೆ’ ಎಂದಿದೆ.
ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?
ಈಗ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಸ್ಟಾರ್ಟಪ್‌ಗಳು (Startups) ರಕ್ಷಣಾ ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಮತ್ತು ಮಿಲಿಟರಿ ಹಾರ್ಡ್‌ವೇರ್ ಉತ್ಪಾದನೆಗೆ ಹೆಚ್ಚೆಚ್ಚು ಮುಂದೆ ಬರುತ್ತಿವೆ. ಕಳೆದ 7 ವರ್ಷದಲ್ಲಿ ರಕ್ಷಣಾ ಲೈಸೆನ್ಸ್ ಜಾರಿ ಮಾಡುವ ಪ್ರಮಾಣ ಶೇ.200ರಷ್ಟು ಹೆಚ್ಚಿದೆ. ಈವರೆಗೂ ಭಾರತ ವಿದೇಶಗಳ ಮೇಲೆಯೇ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಅವಲಂಬಿತವಾಗಿದೆ ಹಾಗೂ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶಗಳಲ್ಲಿ ಒಂದಾಗಿದೆ. ಮುಂದಿನ 5 ವರ್ಷದಲ್ಲಿ 130 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಭಾರತ ಉದ್ದೇಶಿಸಿದೆ. ಆದರೆ ಇನ್ನು ಮುಂದೆ ರಪ್ತು ತಗ್ಗಿಸುವ ಉದ್ದೇಶ ಇರಿಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಮೇಕ್ ಇನ್ ಇಂಡಿಯಾ ಹೆಸರಲ್ಲಿ ಕಡಿಮೆ ಗುಣಮಟ್ಟದ ಯುದ್ಧ ವಿಮಾನ ಖರೀದಿ? ದೇಶೀಯ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಚರ್ಚೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.