Union Budget 2022 ಅಭಿವೃದ್ಧಿಗೆ ಮತ್ತಷ್ಟು ವೇಗ 20,000 ಕೋಟಿ ರೂ ವೆಚ್ಚದಲ್ಲಿ 25,000 ಕಿ.ಮೀ ಹೆದ್ದಾರಿ ವಿಸ್ತರಣೆ!

By Suvarna News  |  First Published Feb 1, 2022, 4:01 PM IST
  • ಹೆದ್ದಾರಿ ವಿಸ್ತರಣೆಗೆ ಮೆಘಾ ಹೂಡಿಕೆ, 25,000 ಕಿ.ಮೀ ರಸ್ತೆ ವಿಸ್ತರಣೆ
  • ಹೆದ್ದಾರಿಗಾಗಿ 20,000 ಕೋಟಿ ರೂಪಾಯಿ ಮೀಸಲಿಟ್ಟ ಕೇಂದ್ರ ಬಜೆಟ್
  • ಹೆದ್ದಾರಿ ನಿರ್ಮಾಣದ ವೇಗ ಹೆಚ್ಚಿಸಿದ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ

ನವದೆಹಲಿ(ಫೆ.01):  ಕೇಂದ್ರ ಬಜೆಟ್(Union Budget 2022) ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರ್ಥಿಕ ತಜ್ಞರು ಒಟ್ಟಾರೆ ಉತ್ತಮ ಬಜೆಟ್ ಎಂದಿದ್ದರೆ, ರಾಹುಲ್ ಗಾಂಧಿ(Rahul Gandhi) ಸೇರಿದಂತೆ ವಿಪಕ್ಷ ಶೂನ್ಯ ಬಜೆಟ್ ಎಂದಿದೆ. ತಜ್ಞರ ಪ್ರಕಾರ ಭಾರತದಲ್ಲಿ ಮೂಲಸೌಕರ್ಯ(infrastructure) ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಲ್ಲಿ ಹೆದ್ದಾರಿ ಅಭಿವೃದ್ದಿ(Highway) ಕೂಡ ಸೇರಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರ 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಿಸಲು ಮುಂದಾಗಿದೆ.

2022-23ರಲ್ಲಿ 20,000 ಕೋಟಿ ರೂಪಾಯಿ ವೆಚ್ಚದಲ್ಲಿ 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala sitharaman) ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದೇಶದಲ್ಲಿನ ಸಾರಿಗೆ ಸಂಪರ್ಕ ಜಾಲ ವೃದ್ಧಿಸಲು, ಸರಕು, ಸಂಚಾರ ಸುಗಮವಾಗಿಸಲು ಅತ್ಯುತ್ತಮ ದರ್ಜೆಯ ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.

Tap to resize

Latest Videos

undefined

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!

ಬಹು ಮಾದರಿ ಸಂಪರ್ಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕ ಸಂಪನ್ಮೂಲ ಕ್ರೂಢಿಕರಿಸುವ ಮೂಲಕ ವಿಶೇಷ ರೂಪದಲ್ಲಿ ಹಣಕಾಸು ಒದಗಿಸಲಾಗುವುದು ಎಂದು ನಿರ್ಮಾಲ ಸೀತಾರಾಮನ್ ಹೇಳಿದ್ದಾರೆ. 2020-21ರಲ್ಲಿ 13,327 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ. ಇನ್ನು 2019-20ರಲ್ಲಿ 10,237 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ  2021-22ರ ಸೆಪ್ಟೆಂಬರ್ ತಿಂಗಳಲ್ಲಿ 3,824 ಕಿಲೋಮೀಟರ್ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. 2019-20ಕ್ಕೆ ಹೋಲಿಸಿದರೆ ಪ್ರತಿ ದಿನ ರಸ್ತೆ ನಿರ್ಮಾಣ ಶೇಕಡಾ 36.5 ಹೆಚ್ಚಾಗಿದೆ. 2019-20ರಲ್ಲಿ ಪ್ರತಿ ದಿನ ಸರಾಸರಿ 28 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ.

ಗತಿ ಶಕ್ತಿ ಯೋಜನೆಯನ್ನು ಇದೀಗ ರಸ್ತೆ, ರೈಲ್ವೇ, ಬಂದರು, ವಿಮಾನ ನಿಲ್ದಾಣ, ಸಮೂಹ ಸಾರಿಗೆ, ಜಲಮಾರ್ಗ, ಲಾಜಿಸ್ಟಿಕ್ ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಕ್ಷೇತ್ರಕ್ಕೆ ವಿಸ್ತರಿಸಲಾಗಿದೆ. ಪ್ರಧಾನ ನಂತ್ರಿ ಗತಿ ಶಕ್ತಿ ಯೋಜನೆ ಮೂಲಕ ಮುಂದಿನ 25 ವರ್ಷದ ಮೂಲ ಸೌಕರ್ಯ ಮಾರ್ಗೂಸೂಚಿ ರೂಪಿಸಲು 2021ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಗತಿ ಶಕ್ತಿ ಮಾಸ್ಟರ್ ಪ್ಲಾನ್‌ಗೆ ಚಾಲನೆ ನೀಡಿದ್ದರು.

Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ

ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಲಾಜಿಸ್ಟಿಕ್‌ಗೆ ಒತ್ತು ನೀಡಲಾಗಿದೆ.  ಲಾಜಿಸ್ಟಿಕ್ ವಲಯದಲ್ಲಿ ಭಾರತದ ರಸ್ತೆ ಸಾರಿಗೆ ಶೇಕಡಾ 60 ರಷ್ಟು ಪಾಲು ಹೊಂದಿದೆ. ಇನ್ನು ರೈಲ್ವೇ ಶೇಕಡಾ 30 ಹಾಗೂ ಇನ್ನುಳಿದ 10 ವಿಮಾನ ಹಾಗೂ ಜಲಮಾರ್ಗದ ಮೂಲಕ ನಡೆಯುತ್ತಿದೆ. ಈ ವಿಚಾರ ಗಮನಿಸಿದರೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಹೆದ್ದಾರಿ ವಿಸ್ತರಣೆಗೆ  ನೀಡಲಾಗಿದೆ. 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಣೆಯಿಂದ ದೇಶದ ಮೂಲೆ ಮೂಲೆಯಲ್ಲಿರುವ ಪ್ರದೇಶಗಳನ್ನು ಉತ್ಪಾದನ ಕೇಂದ್ರಗಳೊಂದಿಗೆ ಬೆಸೆಯುತ್ತದೆ. ಇನ್ನು ಗತಿ ಶಕ್ತಿ ಯೋಜನೆಯಡಿ 100 ಕಾರ್ಗೋ ಟರ್ಮಿನಲ್ ಅಭಿವೃದ್ಧಿಪಡಿಸಲಾಗತ್ತದೆ. ಇದರಿಂದ ಲಾಜಿಸ್ಟಿಕ್ ಸಂಪರ್ಕ ಮತ್ತಷ್ಟು ಪರಿಣಾಮಕಾರಿಯಾಗಲಿದೆ. 

ಒಂದು ನಿಲ್ದಾಣ ಹಾಗೂ ಒಂದು ಯೋಜನೆ ಪರಿಕಲ್ಪನೆ, ಸ್ಥಳೀಯ ಉತ್ಪನ್ನ, ಪೂರೈಕೆ ಸೇರಿದಂತೆ ಹಲವು ಉಪಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರ ಜೊತೆಗೆ ಮಲ್ಟಿ ಮಾಡೆಲ್ ಯೋಜನೆ ಮೂಲಕ ಲಾಜಿಸ್ಟಿಕ್ ಪಾರ್ಕ್, ಸಂಪರ್ಕಕ್ಕೆ ವಿಷೇಷ ಅದ್ಯತೆ ನೀಡಲಾಗಿದೆ. 

Union Budget 2022 ಆಟೋ ಕ್ಷೇತ್ರಕ್ಕೆ ಬ್ಯಾಟರಿ ಸ್ವ್ಯಾಪ್ ನೀತಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ಮತ್ತಷ್ಟು ಅಗ್ಗ!

ಕೇಂದ್ರ ಬಜೆಟ್ ಹೈಲೈಟ್ಸ್ :
ದೇಶದ ಮೂಲ ಮೂಲೆಯಲ್ಲಿ ಮೂಲ ಸೌಕರ್ಯ ಅಭಿವದ್ಧಿಗೆ ಯೋಜನೆ
ತೆರಿಗೆ ಅಡಿಯಲ್ಲಿ ಕ್ರಿಪ್ಟೋ ಕರೆನ್ಸಿ ವ್ಯವಹಾರ
ರಿಸರ್ವ್ ಬ್ಯಾಂಕ್‌ನಿಂದ  ಡಿಜಿಟಲ್ ಕರೆನ್ಸಿ
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ರೈತರ ಕಲ್ಯಾಣಕ್ಕಾಗಿ ಯೋಜನೆ
ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ

 

click me!