Budget 2022: ಬಜೆಟ್‌ನಲ್ಲಿ ಇ-ಪಾಸ್‌ಪೋರ್ಟ್ ಘೋಷಣೆ: ಹಾಗಂದ್ರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

By Suvarna News  |  First Published Feb 1, 2022, 4:01 PM IST

ಇ-ಪಾಸ್‌ಪೋರ್ಟ್‌ಗಳು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಳಂತೆಯೇ ಅದೇ ಉದ್ದೇಶವನ್ನು ಪೂರೈಸುತ್ತವೆ ಆದರೆ ಎಂಬೆಡೆಡ್ ಚಿಪ್‌ಗಳು ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ
 


ನವದೆಹಲಿ (ಫೆ. 01):  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಕೇಂದ್ರ ಬಜೆಟನ್ನು (Union Budget 2022) ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ ಜನಪ್ರಿಯ ಬಜೆಟ್ ಅಲ್ಲದಿದ್ದರೂ ಜನಪರ ಬಜೆಟ್‌ ಎಂದು ಹೇಳಲಾಗುತ್ತಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದ್ದು ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. ಬಜೆಟ್‌ನಲ್ಲಿ ಗಮನ ಸೆಳೆದ ವಿಚಾರಗಳಲ್ಲಿ ಇ-ಪಾಸ್‌ಪೋರ್ಟ್‌ (E-Passport) ಕೂಡ ಒಂದು. ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದಾರೆ. 

"ನಾಗರಿಕರ ಅನುಕೂಲಕ್ಕಾಗಿ 2022-23 ರಲ್ಲಿ ಇ-ಪಾಸ್‌ಪೋರ್ಟ್‌ಗಳ ವಿತರಣೆಯನ್ನು ಹೊರತರಲಾಗುವುದು" ಎಂದು ಸೀತಾರಾಮನ್ ಇಂದು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಇದಕ್ಕೂ ಮೊದಲು, ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಅವರು ಟ್ವಿಟರ್‌ನಲ್ಲಿ ಭಾರತವು ಶೀಘ್ರದಲ್ಲೇ ಸುರಕ್ಷಿತ ಬಯೋಮೆಟ್ರಿಕ್ ಡೇಟಾದೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಪಡೆಯಲಿದೆ ಎಂದು ಘೋಷಿಸಿದ್ದರು. ಇ-ಪಾಸ್‌ಪೋರ್ಟ್‌ಗಳು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಎಂದು ಅವರು ಉಲ್ಲೇಖಿಸಿದ್ದರು. 

Tap to resize

Latest Videos

undefined

ಇದನ್ನೂ ಓದಿ: Tech Budget 2022: ಶೀಘ್ರದಲ್ಲೇ 5G, ಇ-ಪಾಸ್‌ಪೋರ್ಟ್ ಸೇವೆ: ಭಾರತದ‌ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್!

ಇ-ಪಾಸ್‌ಪೋರ್ಟ್‌ಗಳು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಳಂತೆಯೇ ಅದೇ ಉದ್ದೇಶವನ್ನು ಪೂರೈಸುತ್ತವೆ ಆದರೆ ಎಂಬೆಡೆಡ್ ಚಿಪ್‌ಗಳು ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಇ-ಪಾಸ್‌ಪೋರ್ಟ್‌ಗಳು ಮೈಕ್ರೋಚಿಪ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳಲ್ಲಿ ಭದ್ರತಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಭಾರತವು ಪ್ರಸ್ತುತ ಬಳಕೆದಾರರಿಗೆ ಮುದ್ರಿತ ಪಾಸ್‌ಪೋರ್ಟ್‌ಗಳನ್ನು ಮಾತ್ರ ನೀಡುತ್ತದೆ, ಆದರೆ ಇ-ಪಾಸ್‌ಪೋರ್ಟ್‌ಗಳು ಯುಎಸ್, ಯುಕೆ ಮತ್ತು ಜರ್ಮನಿ ಸೇರಿದಂತೆ ಇತರ ದೇಶಗಳಲ್ಲಿ ಲಭ್ಯವಿದೆ.

ಇ ಪಾಸ್ ಪೊರ್ಟ್‌ನ ಪಾಸವರ್ಡ್ ಸುರಕ್ಷಿತ ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುತ್ತದೆ ಎಂದು ಭಟ್ಟಾಚಾರ್ಯ ಈ ಹಿಂದೆ ಬಹಿರಂಗಪಡಿಸಿದ್ದರು.  ಇದು ಜಾಗತಿಕವಾಗಿ ಇಮ್ಮಿಗ್ರೇಶನ್ ಪೋಸ್ಟ್‌ಗಳ ಮೂಲಕ ಸುಗಮವಾಗಿ ಸಾಗಲು ಅನುವು ಮಾಡಿಕೊಡುತ್ತವೆ ಅಲ್ಲದೇ ಇ-ಪಾಸ್‌ಪೋರ್ಟ್ ICAO ಮಾರ್ಗಸೂಚಿ ಅನುಸರಿಸುತ್ತವೆ ಎಂದು ತಿಳಿಸಿದ್ದರು.  ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ಇದನ್ನು ತಯಾರಿಸಲಾಗುವುದು. 

ಮೈಕ್ರೋಚಿಪ್‌ಗಳಿಗೆ ಸಂಬಂಧಿಸಿದಂತೆ ಭಾರತವು 'ಇಂಡಿಯಾ ಸೆಕ್ಯುರಿಟಿ ಪ್ರೆಸ್' ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಜೈಶಂಕರ್ ತಿಳಿಸಿದ್ದರು. "ನಾವು ಆದ್ಯತೆಯ ಮೇಲೆ ಇ-ಪಾಸ್‌ಪೋರ್ಟ್‌ಗಳ ತಯಾರಿಕೆಯನ್ನು ಮುಂದುವರಿಸಲಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಹೊಸ ಪಾಸ್‌ಪೋರ್ಟ್ ಬುಕ್‌ಲೆಟ್ ಅನ್ನು ಹೊರತರಬಹುದು" ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Budget 2022: ಶೀಘ್ರದಲ್ಲೇ ಭಾರತದಲ್ಲಿ 5G ಸೇವೆ: ಈ ವರ್ಷವೇ ತರಂಗಾಂತರ ಹಂಚಿಕೆ ಮಾಡಲಿರುವ ಕೇಂದ್ರ!

ಇ-ಪಾಸ್‌ಪೋರ್ಟ್ ಎಂದರೇನು?: ಇ-ಪಾಸ್‌ಪೋರ್ಟ್ ಸಾಂಪ್ರದಾಯಿಕ ಪಾಸ್‌ಪೋರ್ಟ್‌ನಂತೆಯೇ ಅದೇ ಕಾರ್ಯಗಳನ್ನು ಹೊಂದಿರುತ್ತದೆ ಆದರೆ ಇದು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.  ಇ-ಪಾಸ್‌ಪೋರ್ಟ್ ಎಲೆಕ್ಟ್ರಾನಿಕ್ ಚಿಪ್ಪನ್ನು ಒಳಗೊಂಡಿರುತ್ತದೆ ಅದು ಮುದ್ರಿತ ಪಾಸ್‌ಪೋರ್ಟ್‌ನಂತೆಯೇ ಮಾಹಿತಿಯನ್ನು ಹೊಂದಿರುತ್ತದೆ.

ಮೈಕ್ರೋಚಿಪ್ ಪಾಸ್‌ಪೋರ್ಟ್ ಹೊಂದಿರುವವರ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಇ-ಪಾಸ್‌ಪೋರ್ಟ್ ಪ್ರಯಾಣಿಕರಿಗೆ ಅತ್ಯಂತ ಉಪಯುಕ್ತವಾಗಿದ್ದು ಇದು ಇಮ್ಮಿಗ್ರೇಶನ್ ಕೌಂಟರ್‌ನ ಮುಂದೆ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವನ್ನು ನಿವಾರಿಸುತ್ತದೆ. ಇ-ಪಾಸ್‌ಪೋರ್ಟ್ ಅನ್ನು ಇಮಿಗ್ರೇಷನ್ ಕೌಂಟರ್‌ನಲ್ಲಿ ಭೌತಿಕ ಪರಿಶೀಲನೆಗೆ ಬದಲಾಗಿ ಕೆಲವೇ ಕೆಲವು ನಿಮಿಷಗಳಲ್ಲಿ ಸ್ಕ್ಯಾನ್ ಮಾಡಬಹುದು. 

ಇದು ನಕಲಿ ಪಾಸ್‌ಪೋರ್ಟ್ ವ್ಯವಹಾರವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಅಲ್ಲದೇ ಸ್ಕ್ಯಾಮರ್‌ಗಳು ಮೈಕ್ರೋಚಿಪ್‌ನಲ್ಲಿ ದಾಖಲಾದ ಡೇಟಾವನ್ನು ಕದಿಯಂತೆ ತಡೆಹಿಡಿಯುತ್ತದೆ. ಈಗಾಗಲೇ ಬಯೋಮೆಟ್ರಿಕ್ ಇ-ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಹೊಂದಿರುವ US, UK ಮತ್ತು ಜರ್ಮನಿ ಸೇರಿದಂತೆ 120 ದೇಶಗಳಲ್ಲಿ ಇ-ಪಾಸ್‌ಪೋರ್ಟ್‌ನ ಪರಿಕಲ್ಪನೆಯನ್ನು ಈಗಾಗಲೇ ಪರಿಚಯಿಸಲಾಗಿದೆ.


ಇ-ಪಾಸ್‌ಪೋರ್ಟ್‌ನ ವೈಶಿಷ್ಟ್ಯಗಳು: ಇ-ಪಾಸ್ಪೋರ್ಟ್, ಪಾಸ್ಪೋರ್ಟ್ ಹೊಂದಿರುವವರ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಚಿಪ್ಪನ್ನು ಹೊಂದಿರುತ್ತದೆ. ಪಾಸ್‌ಪೋರ್ಟ್‌ನ ಹಿಂಭಾಗದಲ್ಲಿ ಇರಿಸಲಾಗುವ ಚಿಪ್ 64 ಕಿಲೋಬೈಟ್‌ಗಳ (Kb) ಸಂಗ್ರಹಣಾ ಸ್ಥಳ ಮತ್ತು ಎಂಬೆಡೆಡ್ ಆಯತಾಕಾರದ ಆಂಟೆನಾದೊಂದಿಗೆ ಬರುತ್ತದೆ. ಚಿಪ್ ಆರಂಭದಲ್ಲಿ 30 ಅಂತರರಾಷ್ಟ್ರೀಯ ಪ್ರವಾಸಗಳ ಡೇಟಾವನ್ನು ಹೊಂದಿರುತ್ತದೆ. ಆದಾಗ್ಯೂ, ನಂತರದ ಹಂತದಲ್ಲಿ, ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಡೇಟಾದೊಂದಿಗೆ ಪಾಸ್‌ಪೋರ್ಟ್ ಹೊಂದಿರುವವರ ಚಿತ್ರವನ್ನು ಚಿಪ್ ಸಂಗ್ರಹಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಯಾರಾದರೂ ಚಿಪ್ಪನ್ನು ಟ್ಯಾಂಪರ್ ಮಾಡಲು ಪ್ರಯತ್ನಿಸಿದರೆ, ಅದು ಪಾಸ್‌ಪೋರ್ಟ್ ದೃಢೀಕರಣದ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ವರದಿಗಳು ತಿಳಿಸಿವೆ.

click me!