Budget 2022 LIVE: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು? ಹೀಗಿದೆ ನಿರ್ಮಲಾ, ಮೋದಿ ಲೆಕ್ಕಾಚಾರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ನಾಲ್ಕನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ.ಈ ವರ್ಷ 39.45 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ರಿಲೀಫ್ ಸಿಕ್ಕಿದ್ದು, ಐಟಿ ದಾಳಿ ವೇಳೆ ಸಿಕ್ಕಾಕೊಳ್ಳೋರ ಹೃದಯ ಬಡಿತ ಹೆಚ್ಚಿದೆ. ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಸಹಕಾರಿ ಸಂಘಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೂ ಹೊಸ ನೀತಿ ಜಾರಿಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳನ್ನು ಪರಿಚಯಿಸಿದ್ದು, ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ ಜೊತೆಗೆ ಸಾವಯವ ಕೃಷಿಗೂ ಆದ್ಯತೆ ನೀಡಲಾಗಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತಾರಾಖಾಂಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಪಂಚ ರಾಜ್ಯಗಳಿಗೆ ಬಜೆಟ್‌ನಲ್ಲಿ ಮಣೆ ಹಾಕಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ನಿರ್ಮಲಾ, ಮೋದಿ ಲೆಕ್ಕಾಚಾರದ ಕ್ಷಣ ಕ್ಷಣದ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6:50 PM

Union Budget 2022: ಕ್ರೀಡೆಗೆ ಸಿಕ್ಕಿದ್ದಿಷ್ಟು

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್(Nirmala Sitharaman), ಮಂಗಳವಾರ(ಫೆ.01)ದಂದು 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget) ಮಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೂ (Sports Sector) ತನ್ನ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಿದೆ. 2021-22ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ಹಣವನ್ನು ನೀಡಲಾಗಿದೆ. ಇದರ ಹೊರತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕ್ರೀಡೆ ಎನ್ನುವ ಶಬ್ದವನ್ನು ಬಳಸಿಲ್ಲ, ಇದರ ಬದಲಾಗಿ ಗೇಮಿಂಗ್ ಎನ್ನುವ ಪದ ಬಳಕೆ ಮಾಡಿದ್ದಾರೆ. 

ಕ್ರೀಡೆಗೂ ಹೆಚ್ಚು ಅನುದಾನ ಮೀಸಲಿಟ್ಟ ನಿರ್ಮಲಾ ಸೀತರಾಮನ್

5:55 PM

Union Budget 2022 ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಜೊತೆ ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!

ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಲ್ಲಿ ಮಾನಸಿಕ ಆರೋಗ್ಯ(mental health) ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ(Coronavirus) ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ(Union Budget 2022) ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್(NIMHANS) ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. 

5:40 PM

Union Budget 2022: 2023ನೇ ಆರ್ಥಿಕ ಸಾಲಿಗೆ ದಾಖಲೆಯ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಣೆ

ಕಳೆದ ವರ್ಷ ಕೋವಿಡ್‌ ಕಾರಣದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಬೃಹತ್ ಬಂಡವಾಳ ವೆಚ್ಚವನ್ನು(Capital Expenditure) ಘೋಷಿಸಿತ್ತು. ಇಂದು (ಫೆ.1) ಮಂಡಿಸಿದ 2022ನೇ ಸಾಲಿನ ಬಜೆಟ್ ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ ಘೋಷಿಸಿದೆ.

5:38 PM

Union Budget 2022: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು?

ಕೊರೋನಾ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಹೇಗಿತ್ತು? 

"

5:36 PM

Union Budget 2022: ಆರ್ಥಿಕತೆಗೆ ಬೂಸ್ಟರ್ ಕೊಡುವ ಬಜೆಟ್: ಸಿಎಂ ಬೊಮ್ಮಾಯಿ

 2 ವರ್ಷ ಕೋವಿಡ್‌ನಿಂದ ಆರ್ಥಿಕತೆ ಹಿಂಜರಿತವಾಗಿತ್ತು. ಈ ಬಾರಿ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಉದ್ದೇಶವನ್ನಿಟ್ಟುಕೊಂಡು, ಬಜೆಟ್ ಮಂಡಿಸಲಾಗಿದೆ. ಇದೊಂದು ಆರ್ಥಿಕತೆಯನ್ನು ಉತ್ತೇಜಿಸುವ ಬಜೆಟ್ ಇದಾಗಿದೆ. ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು. 

"

5:13 PM

ಬಜೆಟ್ ‌ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ: ಸಿದ್ದರಾಮಯ್ಯ

ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡಿಸಿದ್ದಾರೆ. ನಾನು ಬಜೆಟ್ ಮೇಲೆ ಬಹಳ ನಿರೀಕ್ಷೆ ಇರಲಿಲ್ಲ. ರೈತರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು.ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ರು.ಆದರೆ ಅವರ ನಿರೀಕ್ಷೆ ಈಡೇರಿಲ್ಲ. ಕಳೆದ ವರ್ಷ ಸುಮಾರು 34 ಲಕ್ಷ ಕೋಟಿ ರೂ ಬಜೆಟ್ ಮಂಡಿಸಿದ್ರು.ಈ ವರ್ಷ 39.45ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ 4 ಲಕ್ಷದ 61ಸಾವಿರ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ವರ್ಷದ 11ಲಕ್ಷ 87ಸಾವಿರದ 180ಕೋಟಿ ರೂ ಸಾಲ ಮಾಡಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಮೇಲೆ ಇದ್ದ ಸಾಲ 135ಲಕ್ಷ 87ಸಾವಿರ ಕೋಟಿ ರೂ. ಮಹಮೋಹನ್ ಸಿಂಗ್ ಕಾಲದಲ್ಲಿ ಇದ್ದಂತ ಸಾಲ 53ಲಕ್ಷ 11ಸಾವಿರ ಕೋಟಿ. 8ವರ್ಷದ ಅವಧಿಯಲ್ಲಿ‌ ಬಿಜೆಪಿ 93ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ.9,40,651ಕೋಟಿ ವರ್ಷಕ್ಕೆ ಬಡ್ಡಿ ಆಗುತ್ತೆ. ಬಜೆಟ್ ‌ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ.

ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ.

5:08 PM

Budget ಭಾಷಣದಲ್ಲಿ ನಿರ್ಮಲಾ ಶಾಂತಿ ಪರ್ವವನ್ನು ಮೆನ್ಷನ್ ಮಾಡಿದ್ದೇಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್(Union Budget) 2022-23 ಅನ್ನು ಮಂಡಿಸುತ್ತಿರುವಾಗ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಅಧ್ಯಾಯಗಳಲ್ಲಿ 12ನೆಯದಾದ ಶಾಂತಿಪರ್ವ(Book of Peace)ದಲ್ಲಿ ಬರುವ ಪದ್ಯವೊಂದನ್ನು ಪ್ರಸ್ತಾಪಿಸಿದರು. ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ  ಮಹಾಭಾರತವನ್ನು ಉಲ್ಲೇಖಿಸಿ, ಶಾಂತಿ ಪರ್ವದ ಪದ್ಯವೊಂದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳಿದರು. 

ನಿರ್ಮಲಾ ಹೇಳಿದ ಶ್ಲೋಕದ ಅರ್ಥವೇನು?

4:50 PM

ಗೇಮಿಂಗ್ ಮತ್ತು ಅನಿಮೇಷನ್‌ಗೆ ಒತ್ತು, ಗಂಗೆಯ ದಡದಲ್ಲಿ ಕೃಷಿ

ಈ ಬಜೆಟ್‌ನಿಂದ ಮುಂದಿನ 25 ವರ್ಷಗಳ ಕಾಲ ಭಾರತಕ್ಕೆ ಅಡಿಪಾಯ ಸಿಗಲಿದೆ ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಪ್ರಗತಿ ನಿರೀಕ್ಷಿಸಲಾಗಿದೆ.ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.9.2ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ರೈಲ್ವೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆಗಳನ್ನು ಮಾಡಲಾಗಿದೆ.

ಗಂಗೆಯ ದಡದಲ್ಲಿ ಕೃಷಿ, Union Budget 2022ರ 10 ದೊಡ್ಡ ವಿಚಾರಗಳು!

4:47 PM

Union Budget 2022: 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ

ಕೇಂದ್ರ ಹಣಕಾಸು ಸಚಿವಾಲಯದ ಬಿಡುಗಡೆಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಮತ್ತು ಫಿನ್‌ಟೆಕ್ (Fintech) ಆವಿಷ್ಕಾರಗಳು ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆದಿವೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಗ್ರಾಹಕ ಸ್ನೇಹಿ ರೀತಿಯಲ್ಲಿ ದೇಶದ ಮೂಲೆ ಮೂಲೆಗಳನ್ನು ತಲುಪಲು ಸರ್ಕಾರವು ನಿರಂತರವಾಗಿ ಅವುಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು. 

 ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್!

4:45 PM

Budget 2022: ಬಜೆಟನಲ್ಲಿ ಇ-ಪಾಸ್‌ಪೋರ್ಟ್ ಘೋಷಣೆ

 ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದ್ದು ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. ಬಜೆಟ್‌ನಲ್ಲಿ ಗಮನ ಸೆಳೆದ ವಿಚಾರಗಳಲ್ಲಿ ಇ-ಪಾಸ್‌ಪೋರ್ಟ್‌ (E-Passport) ಕೂಡ ಒಂದು. ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದಾರೆ. 

ಇ-ಪಾಸ್‌ಪೋರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

4:43 PM

ನಿರ್ಮಲಾ ಬಜೆಟ್‌ಗೆ ಬೇಷ್ ಎಂದ ಪ್ರಧಾನಿ ಮೋದಿ

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಕೇಂದ್ರ ಬಜೆಟ್(Union Budget 2022) ಮಂಡಿಸಿದ್ದಾರೆ. ಬಜೆಟ್ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಷೇರು ಸೂಚ್ಯಂಕ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಬಜೆಟ್ ಕುರಿತು ಭಾಷಣ ಮಾಡಿದ್ದಾರೆ. ಈ ಬಜೆಟ್ ಅತ್ಯುತ್ತಮ ಬಜೆಟ್ ಆಗಿದ್ದು, ಮುಂದಿನ 100 ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟು ಮಂಡನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!

4:28 PM

Union Budget 2022 ಅಭಿವೃದ್ಧಿಗೆ ಮತ್ತಷ್ಟು ವೇಗ

ಕೇಂದ್ರ ಬಜೆಟ್(Union Budget 2022) ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರ್ಥಿಕ ತಜ್ಞರು ಒಟ್ಟಾರೆ ಉತ್ತಮ ಬಜೆಟ್ ಎಂದಿದ್ದರೆ, ರಾಹುಲ್ ಗಾಂಧಿ(Rahul Gandhi) ಸೇರಿದಂತೆ ವಿಪಕ್ಷ ಶೂನ್ಯ ಬಜೆಟ್ ಎಂದಿದೆ. ತಜ್ಞರ ಪ್ರಕಾರ ಭಾರತದಲ್ಲಿ ಮೂಲಸೌಕರ್ಯ(infrastructure) ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಲ್ಲಿ ಹೆದ್ದಾರಿ ಅಭಿವೃದ್ದಿ(Highway) ಕೂಡ ಸೇರಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರ 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಿಸಲು ಮುಂದಾಗಿದೆ.

20,000 ಕೋಟಿ ರೂ ವೆಚ್ಚದಲ್ಲಿ 25,000 ಕಿ.ಮೀ ಹೆದ್ದಾರಿ ವಿಸ್ತರಣೆ!

3:52 PM

ಉದ್ಯೋಗ ಸೃಷ್ಟಿಗೆ ಒತ್ತು, ಹೇಳಿದ್ದಷ್ಟು ಕೊಡಲಿಲ್ಲ ಎಂದ ಕಾಂಗ್ರೆಸ್

ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ   60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಇಂದು ತಾವು ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿಯೂ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. 2014 ರಿಂದಲೂ ಯುವಕರು ಮತ್ತು ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮುಂದಿರುವ ಗುರಿಯಾಗಿದೆ. ಬಡತನದಿಂದ ಮೇಲೆತ್ತಲು ಈ ಉದ್ಯೋಗಗಳು ಅನುಕೂಲವಾಗಲಿದೆ ಎಂದಿದ್ದಾರೆ. 

 Aatmanirbhar Bharatನಡಿ 16 ಲಕ್ಷ ಉದ್ಯೋಗ, 5 ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

3:49 PM

Union Budget 2022: ನಾರಿಗೆ ಶಕ್ತಿ ತುಂಬಿದ ಬಜೆಟ್

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ತಮ್ಮ ನಾಲ್ಕನೇ ಬಜೆಟ್ ಭಾಷಣದಲ್ಲಿ ಕೆಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಆ ಮೂಲಕ ಈ ಬಾರಿಯ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯರ  ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸೋ ಜೊತೆಗೆ ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಿದೆ ಕೂಡ. 

ಮಹಿಳಾ ಸಬಲೀಕರಣಕ್ಕೆ ಯಾವೆಲ್ಲ ಕಾರ್ಯಕ್ರಮಗಳು ಘೋಷಣೆಯಾಗಿವೆ?

3:25 PM

ಮನೆ ಮನೆಗೂ ನೀರು ನೀಡಲು ಜಲ ಯೋಜನೆ

ನರೇಂದ್ರ ಮೋದಿ (Narendra Modi)ನೇತೃತ್ವದ ಸರ್ಕಾರದ ಪ್ರಮುಖ ಭರವಸೆಗಳಲ್ಲಿ ದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವುದು ಪ್ರಮುಖವಾಗಿತ್ತು. ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  (central government) ಈವರೆಗೂ ದೊಡ್ಡ ಮಟ್ಟದ ಶ್ರಮವಹಿಸಿದ್ದು, ಕೇಂದ್ರ ಬಜೆಟ್ ನಲ್ಲಿ "ಹರ್ ಘರ್, ನಳ್ ಸೇ ಜಲ್" (ಪ್ರತಿ ಮನೆಗೂ, ನಲ್ಲಿಯಿಂದ ನೀರು) ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಹೇಳಿದ್ದಾರೆ.

ಮನೆ ಮನೆಗೂ ನೀರು ನೀಡಲು ಜಲ ಯೋಜನೆ

3:22 PM

25 ಸಂಸದರಿಗೆ, ರಾಜ್ಯದ ಸಿಎಂಗೆ ಅಭಿನಂದಿಸ್ತೇನೆ: ಡಿಕೆಶಿ

ರಾಜ್ಯಕ್ಕೆ ಯೋಜನೆಗಳ ಸುರಿಮಳೆ ಬಜೆಟ್ ಕೊಡಿಸಿದ್ದಾರೆ. ಇದು ಕೇಂದ್ರ ಬಜೆಟ್ ಅಲ್ಲ ಇದು ಕೋವಿಡ್ ಬಜೆಟ್. ಕರ್ನಾಟಕಕ್ಕೆ ಕೊಡುಗೆ ಶೂನ್ಯ.. ಬಜೆಟ್‌ನಲ್ಲಿ ಕರ್ನಾಟಕದ ಹೆಸರೇ ಇಲ್ಲ. ವರ್ಷ ಎರಡು ಕೋಟಿ ಉದ್ಯೋಗ ಕೊಡ್ತೇವೆ ಎಂದವರು ಈಗ 60 ಲಕ್ಷ ಉದ್ಯೋಗದ ಮಾತಾಡಿದ್ದಾರೆ. ದೇಶದ ಯುವಕರಿಗೆ ಅನ್ಯಾಯ ಮಾಡಿದ್ದಾರೆ..

- ಕೇಂದ್ರ ಬಜೆಟ್ ಬಗ್ಗೆ ಡಿಕೆಶಿ ವ್ಯಂಗ್ಯ

3:18 PM

ಇದು ದೂರದೃಷ್ಟಿ ಇರುವ ಬಜೆಟ್: ನಳೀನ್ ಕುಮಾರ್ ಕಟೀಲ್

ಇದು ದೂರದೃಷ್ಟಿ ಇರುವ ಬಜೆಟ್. ಜಗತ್ತು ಸಂಕಷ್ಟದಲ್ಲಿದ್ದಾಗಲೂ ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಆಟಲ್ ಕನಸಿಗೆ ಆದ್ಯತೆ ಕೊಟ್ಟವರು ಮೋದಿ. ರಾಷ್ಟ್ರದಲ್ಲಿ 25 ಸಾವಿರ ಕಿಲೋಮೀಟರ್ ಹೆದ್ದಾರೆ ಘೋಷಣೆಯಾಗಿದೆ. ಒಂದೇ ಭಾರತ್ ಯೋಜನೆಯ ಮೂಲಕ 400 ಹೊಎ ರೈಲುಗಳಿಗೆ ಆದ್ಯತೆ. ಆಟಲ್ ಕನಸು ನದಿ ಜೋಡಣೆಗೆ ಮೋದಿಯಿಂದ ನನಸು.

- ನಳೀನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಸಂಸದ

3:15 PM

Education Budget 2022: ಶಿಕ್ಷಣಕ್ಕೆ ಸಿಕ್ಕಿದ್ದು ಮಹತ್ವದ ಕೊಡುಗೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

ಕೇಂದ್ರ ಬಜೆಟ್ 2022ರ (Union Budget 2022) ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದಾರೆ. ಆತ್ಮನಿರ್ಭರ್‌ಗೆ ಹೆಚ್ಚು ಒತ್ತು ನೀಡಿದ್ದು, 25 ವರ್ಷಗಳ ಬ್ಲೂಪ್ರಿಂಟ್  ತಯಾರು ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಆಂತರಿಕವಾಗಿ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ.

ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

3:12 PM

Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ

ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟ್‌ (Union Budget 2022) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಇಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ ಬಜೆಟ್ ನೀಡಿದ್ದಾರೆ. ಬಜೆಟ್‌ನ ಗಾತ್ರ, ಯಾರ್ಯಾರಿಗೆ ಏನೇನು ಸಿಕ್ಕಿದೆ..? ಬಜೆಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ. 

"

3:06 PM

Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ತೆರಿಗೆದಾರರು ನಿರಾಶೆಗೊಂಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಜೆಟ್‌ನಲ್ಲಿ ಏನು ದುಬಾರಿಯಾಗಿದೆ ಮತ್ತು ಯಾವ ವಸ್ತುಗಳಿಗೆ ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಜನರಲ್ಲಿತ್ತು. ಬಜೆಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿವೆ.

3:00 PM

ಹಳ್ಳಿಯ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ. ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದ್ದು, ಇದು ಅತಿ ವೇಗದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದೆ. ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. 

ಹಳ್ಳಿಯ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ

2:14 PM

Union Budget 2022 : ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಸರ್ಕಾರದ ಒಪ್ಪಿಗೆ

ಕೃಷಿ ಕಾಯ್ದೆಗಳ ವಿರುದ್ಧವಾಗಿ ವರ್ಷಗಳ ಕಾಲ ನಡೆದ ರೈತ ಹೋರಾಟದಿಂದ ಕುಂದಿದ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central government) ಕೆಲ ಪ್ರಮುಖ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ. 2021-22 ರ ರಾಬಿ ಋತುವಿನಲ್ಲಿ ಸರ್ಕಾರದ ಬೃಹತ್ ಗೋಧಿ (wheat) ಸಂಗ್ರಹಣೆ ಮತ್ತು 2021-22 ರ ಖಾರಿಫ್ ಋತುವಿನಲ್ಲಿ ಭತ್ತದ (paddy) ಅಂದಾಜು ಸಂಗ್ರಹಣೆಯು 1208 ಮೆಟ್ರಿಕ್ ಟನ್ ಆಗಲಿದ್ದು, 1.63 ಲಕ್ಷ ರೈತರಿಂದ ಸರ್ಕಾರ ಗೋಧಿ ಹಾಗೂ ಭತ್ತದ ಖರೀದಿ ಮಾಡಲಿದೆ. ಅದರೊಂದಿಗೆ ಕೆನ್-ಬೆಟ್ವಾ ಲಿಂಕ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಮೊತ್ತದ ಹಣವನ್ನು ಮೀಸಲಿಟ್ಟಿದೆ. ಕೆನ್-ಬೆಟ್ವಾದೊಂದಿಗೆ ಕಾವೇರಿ ಸೇರಿದಂತೆ ದಕ್ಷಿಣದ ನದಿಗಳ ಜೋಡಿಣೆಯ ಪ್ರಸ್ತಾಪಕ್ಕೆ ಕರ್ನಾಟಕದ ರಾಜಕಾರಣಿಗಳು ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2:12 PM

Union Budget 2022 ಸೊರಗಿರುವ ಆಟೋ ಕ್ಷೇತ್ರಕ್ಕೆ ನಿರಾಸೆ, ಬ್ಯಾಟರಿ ಸ್ವ್ಯಾಪ್ ನೀತಿಗೆ ತೃಪ್ತಿ!

ಕೇಂದ್ರದ ಬಜೆಟ್(Union Budget 2022) ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್(Automobile Sector) ಕ್ಷೇತ್ರಕ್ಕೆ ನಿರಾಸೆಯಾಗಿದೆ. ಕೊರೋನಾ, ಲಾಕ್‌ಡೌನ್, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ಸೊರಗಿ ಹೋಗಿದ್ದ ಭಾರತದ ಆಟೋ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೆಲ ಕೊಡುಗೆ ನಿರೀಕ್ಷಿಸಿತ್ತು. ಆದರೆ ಎಲೆಕ್ಟ್ರಿಕ್ ವಾಹನ(Electric Vehicle) ಸಂಬಂಧ ಕೆಲ ಘೋಷಣೆ ಹೊರತು ಪಡಿಸಿ ಇನ್ನುಳಿದ ವಿಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಈ  ಮೂಲಕ ಆಟೋ ಕ್ಷೇತ್ರದ ನಿರೀಕ್ಷೆ ತಕ್ಕ ಬಜೆಟ್ ಇರಲಿಲ್ಲ ಅನ್ನೋದು ಸತ್ಯ.

Union Budget 2022 ಸೊರಗಿರುವ ಆಟೋ ಕ್ಷೇತ್ರಕ್ಕೆ ನಿರಾಸೆ, ಬ್ಯಾಟರಿ ಸ್ವ್ಯಾಪ್ ನೀತಿಗೆ ತೃಪ್ತಿ!

2:01 PM

ಡಿಜಿಟಲ್ ಕಲಿಕೆ, ಕೌಶಲ್ಯ, ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್: ಅಶ್ವತ್ಥನಾರಾಯಣ ಸಂತಸ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ. ಈ ಉಪಕ್ರಮಗಳು ಅತ್ಯಂತ ಸಮಯೋಚಿತ ಮತ್ತು ಅರ್ಥಪೂರ್ಣವಾಗಿವೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ `ಒಂದು ತರಗತಿ, ಒಂದು ಟಿವಿ ಚಾನೆಲ್’ ಘೋಷಣೆಯಡಿ 200 ಟಿವಿ ವಾಹಿನಿಗಳಿಗೆ ಅವಕಾಶ ನೀಡಿರುವುದು ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ಕ್ರಮವಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ವಿಶ್ವ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಹುದು. ಇದು ಎನ್ಇಪಿ ಆಶಯಗಳಿಗೆ ತಕ್ಕಂತಿದೆ.

ಜತೆಗೆ, ಕೌಶಲ್ಯಗಳ ಪೂರೈಕೆ ಮತ್ತು ಅವುಗಳ ಸಮರ್ಪಕ ಜಾರಿಗೆ ದೇಶ್ ಇ-ಪೋರ್ಟಲ್ ಸ್ಥಾಪನೆ, ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ, ಎವಿಜಿಸಿ ಕಾರ್ಯಪಡೆ ಸ್ಥಾಪನೆ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗೆ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹವಾಗಿದೆ. ಇದಲ್ಲದೆ, ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಕ್ರಿಪ್ಟೋಕರೆನ್ಸಿ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿರುವುದಲ್ಲದೆ, ಡೀಪ್ ಟೆಕ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆಗಳನ್ನು ಘೋಷಿಸಿರುವುದರಿಂದ ಜನರ ಜೀವನ ಗುಣಮಟ್ಟ ಸುಧಾರಿಸುತ್ತದೆ. ಇದಕ್ಕೆ ಪೂರಕವಾಗಿ `ಸುಗಮ ಜೀವನ’ (ಈಸ್ ಆಫ್ ಲಿವಿಂಗ್) ಸಂಸ್ಕೃತಿಯನ್ನು ರೂಪಿಸಲು ಹೆಜ್ಜೆ ಇಡಲಾಗಿದೆ.

1:56 PM

ಯಾವುದೇ ಅಸಾಧ್ಯವೋ ಅದು ಸಾಧ್ಯ ಮಾಡುವುದೇ ಮೋದಿ ಸರ್ಕಾರದ ಆಶಯ: ತೇಜಸ್ವಿ ಸೂರ್ಯ

ಇದು ದೂರ ದೃಷ್ಟಿಯುಳ್ಳ ಬಜೆಟ್. ಬಿಜೆಪಿ ಇದನ್ನು ಸ್ವಾಗತಿಸುತ್ತದೆ. ಮೂಲ ಸೌಕರ್ಯ, ಹೈವೇಗಳು, 400 ರೈಲು ಯೋಜನೆಗಳು ಘೋಷಣೆಯಾಗಿವೆ. ಇದರಿಂದ ಕೋಟ್ಯಂತರ ಉದ್ಯೋಗಗಳು ಸಿಗಲಿವೆ. ಕ್ರಿಪ್ಟೋ ಕರೆನ್ಸಿ ವಿಚಾರಕ್ಕೆ ಈ ಬಜೆಟ್‌ನಲ್ಲಿ ಸ್ಪಷ್ಟತೆ ಸಿಕ್ಕಿದೆ. ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಸಹಕಾರಿ ಸಂಘಗಳ ಮೇಲೆ ಇದ್ದ ಸರ್‌ಚಾರ್ಜ್ ಇಳಿಸಿದೆ. ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಿದೆ. ರೈತರು, ಗ್ರಾಮೀಣ ಭಾಗ, ಸ್ಟಾಟ್೯ ಅಪ್ ಸೇರಿ ಎಲ್ಲಾ ವಿಭಾಗಳಿಗೂ ಬಜೆಟ್ ಸ್ಪರ್ಶ ಸಿಕ್ಕಿದೆ. ಮೋದಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಒಂದು ಸ್ಕೀಂ ಅಂತಾ ಘೋಷಣೆ ಮಾಡಲ್ಲ. ಆದರೆ ಮೂಲಸೌರ್ಯ ಹೆಸರಲ್ಲಿ ಎಲ್ಲಾ ರಾಜ್ಯಗಳ ಯೋಜನೆಗಳಿಗೆ ಹಣ ಸಿಗುತ್ತೆ. ಕ್ರಿಪ್ಟೋ ಕರೆನ್ಸಿ ಕಾನೂನು ಬಾಹಿರ ಅಂತ ಕೇಂದ್ರ ಸರ್ಕಾರ ಹೇಳಿಲ್ಲ. ಬದಲಿಗೆ RBI ತರುವ ಕ್ರಿಪ್ಟೋ ಕರೆನ್ಸಿ ಮೂಲಕ ಡಿಜಿಟಲ್ ಹಣ ಹೂಡಿಕೆ ಮಾಡಬಹುದು. ನದಿ ಜೋಡಣೆ ವಿಚಾರವಾಗಿ ಹೇಳುವುದಾದರೆ ಯಾವುದೇ ಅಸಾಧ್ಯವೋ ಅದು ಸಾಧ್ಯ ಮಾಡುವುದೇ ಮೋದಿ ಸರ್ಕಾರದ ಆಶಯ.
- ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಸಂಸದ

1:50 PM

ದೇಶದ ಮೂಲೆಯ ಹಳ್ಳಿಯೊಂದ ಮನೆಗೂ ಇಂಟರ್ನೆಟ್ ಸೇವೆ ಒದಗಿಸಲು ಸರಕಾರ ಬದ್ಧ

5G ಸೇವೆ  ಪ್ರಸ್ತುತ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. 2022-23 ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗವುದು ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ತಿಳಿಸಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು ಎಂದು ಸೀತಾರಾಮನ್‌ ತಿಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ 4Gಗಿಂತ ನೂರು ಪಟ್ಟು ವೇಗದ ಇಂಟರ್‌ನೆಟ್‌  ಶೀಘ್ರದಲ್ಲೇ ಲಭ್ಯವಾಗಲಿದೆ.

1:47 PM

ಬಡವರಿಗೆ, ಯುವಕರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಬರೀ ಶೂನ್ಯ: ರಾಹುಲ್ ಗಾಂಧಿ

ಮಧ್ಯಮ ವರ್ಗದವರಿಗೆ, ನೌಕರರಿಗೆ, ಬಡವರಿಗೆ, ಯುವಕರಿಗೆ, ರೈತರಿಗೆ, ಮಧ್ಯಮ ವರ್ಗದ ಜನರಿಗೆ, ದೀನ ದಲಿತರಿಗೆ ಈ ಬಜೆಟ್‌ನಿಂದ ಸಿಕ್ಕಿದ್ದು ಬರೀ ಶೂನ್ಯ. ಇದು ಮೋದಿ ಸರಕಾರದ ಶೂನ್ಯ ಬಜೆಟ್: ರಾಹುಲ್ ಗಾಂಧಿ
 
M0di G0vernment’s Zer0 Sum Budget!

Nothing for
- Salaried class
- Middle class
- The poor & deprived
- Youth
- Farmers
- MSMEs

— Rahul Gandhi (@RahulGandhi)

1:44 PM

Union Budget 2022: ತೆರಿಗಾದರರಿಗೆ, ಅದರಲ್ಲಿಯೂ ಸರಕಾರಿ ನೌಕರರಿಗೆ ಸಿಕ್ಕಿದ್ದೇನು?

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು 10% ರಿಂದ 14% ಕ್ಕೆ ಹೆಚ್ಚಿಸಲಾಗುವುದು ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ತರಲು ಸಹಾಯ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ಕಡಿತಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹೇಗೆ ಲಾಭವಾಗಲಿದೆ ಸರಕಾರಿ ನೌಕರರಿಗೆ?

1:42 PM

ಉಪ್ಪು, ಉಳಿ, ಖಾರವಿಲ್ಲದ ಬಜೆಟ್: ಡಿ.ಕೆ.ಸುರೇಶ್

ಬಜೆಟ್ ಕುರಿತು ಸಂಸದ ಡಿ ಕೆ ಸುರೇಶ್ ನವದೆಹಲಿಯಲ್ಲಿ ನೀಡಿದ ಹೇಳಿಕೆ ಇದು..

ಇದು ಬಜೆಟ್ ಅಲ್ಲ. ಬದಲಿಗೆ ಸಂಸದರನ್ನು ಕುರಿಸಿಕೊಂಡು ಒಂದು ರಿಪೋರ್ಟ್ ಹೇಳಿದಂತೆ ಇದೆ. ಇದು ಭರವಸೆ ಮೂಡಿಸದ ಬಜೆಟ್. ಇದರಲ್ಲಿ ಉಪ್ಪು,ಹುಳಿ, ಖಾರ ಏನೂ ಇಲ್ಲ. ಕೋವಿಡ್‌ನಿಂದ ಜನರು ತೊಂದರಗೆ ಒಳಗಾಗಿದ್ದರು. ಆದರೆ ಬಡವರಿಗೆ, ಮಧ್ಯಮ ವರ್ಗಕ್ಕೆ ಏನೂ ಮಾಡಿಲ್ಲ. ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ಕೊಡ್ತಾರಂತೆ! ಈ ಬಜೆಟ್ ಚರ್ಚೆ ಮಾಡಲೂ ಕೂಡ ಏನೂ ಇಲ್ಲ. ನಿರುದ್ಯೋಗವನ್ನು ಪಿಎಂ ಒಪ್ಪಿಕೊಂಡಂತೆ ಆಗಿದೆ. ಇದರಲ್ಲಿ ಬರೀ ಸುಳ್ಳು ಭರವಸೆಗಳ ಬಜೆಟ್. ಹಣ ಇಡದೆ ಬರೀ ದಿಕ್ಸೂಚಿ ತೋರಿಸಿದ್ದಾರೆ. 39  ಲಕ್ಷ ಕೋಟೆ ಬಜೆಟ್ ಅಂತಾರೆ, ಆದರೆ ತೆರಿಗೆಗಳಿಂದ 24 ಲಕ್ಷ ಕೋಟಿ ಬರುತ್ತೆ. ಪುನಾ ಭಾರತೀಯರನ್ನು ಸಾಲಗಾರರನ್ನಾಗಿ ಮಾಡಿದೆ. ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆ, ರೈಲು ಯೋಜನೆಗಳಿಗೆ ಹಣ ಸಿಕ್ಕಿಲ್ಲ. ಮಹದಾಯಿ ವಿಚಾರವಾಗಿ ಚರ್ಚೆಯಾಗಿಲ್ಲ.
 
1:36 PM

ನಾಗರಿಕರು ಕಚೇರಿಗಳಿಗೆ ಅಲೆದಾಡುವುದರಿಂದ ಮುಕ್ತಿ: ಆರಗ ಜ್ಞಾನೇಂದ್ರ

ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಇ-ಪಾಸ್ ಪೋರ್ಟ್ ನೀಡುವ ಮಾನ್ಯ ಪ್ರಧಾನಿ ಶ್ರೀ @narendramodi ಸರ್ಕಾರದ ನಿರ್ಧಾರದಿಂದ, ನಾಗರಿಕರು ಕಚೇರಿಗಳಿಗೆ ಅಲೆದಾಡದೆ ಸುಲಭವಾಗಿ ಪಾಸ್ ಪೋರ್ಟ್ ಸೇವೆ ಪಡೆಯಲು ಸಾಧ್ಯವಾಗಲಿದೆ. ತಂತ್ರಜ್ಞಾನದ ಸದ್ಬಳಕೆಗೆ ಇದು ಮಾದರಿ.

1:34 PM

Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ಗೃಹ!

ದೇಶದ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ(Union Budget 2022) ಕೈಗೆಟುಕುವ ದರದಲ್ಲಿ ಮನೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಬರೋಬ್ಬರಿ 48,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಪ್ರಧಾನ ಮಂತ್ರಿ ಅವಾಸ್( PMAY) ಯೋಜನೆಯಡಿ 80 ಲಕ್ಷ ಮನೆ(House) ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.

1:20 PM

ಡಿಜಿಟಲ್ ಆಸ್ತಿಗೆ ತೆರಿಗೆ ಘೋಷಿಸಿದ ನಿರ್ಮಲ ಸೀತರಾಮನ್

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ.‌ ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದೆ.  ಪ್ರಸ್ತುತ ಡಿಜಿಟಲ್‌ ಕರೆನ್ಸಿ ಹಾಗೈ ಡಿಜಿಟಲ್‌ ಸ್ವತ್ತುಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಬೆನ್ನಲ್ಲೇ 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (Rserve Bank Of India) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೇ ಯಾವುದೇ  ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ

ಏನಿದು ಲೆಕ್ಕಚಾರ?

1:13 PM

ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ: ಪ್ರಜ್ವಲ್ ರೇವಣ್ಣ

ಬಹಳ ನಿರಾಸಾದಾಯಕ ಬಜೆಟ್. ಬಜಟ್ ಮೇಲೆ ನಂಬಿಕೆಯೇ ಹೋಗಿದೆ. 25 ಜನ ಬಿಜೆಪಿ ಎಂಪಿಗಳು ಕರ್ನಾಟಕದಿಂದ ಇದ್ದಾರೆ, ಏನು ತಂದರು ರಾಜ್ಯಕ್ಕೆ? ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ಫೇಲ್ ಬಜೆಟ್. ಬಹಳಷ್ಟು ನಿರೀಕ್ಷೆಗಳು ಇದ್ದವು. ಕಾವೇರಿ- ಮೇಕೆದಾಟು ವಿಚಾರಕ್ಕೆ ಬಜೆಟ್‌ನಲ್ಲಿ ನಿರೀಕ್ಷೆ ಮಾಡಲಾಗಿತ್ತು.

ನದಿ ಜೋಡಣೆ ವಿಚಾರ: ಆದರೆ ಬಜೆಟ್ ನಲ್ಲಿ ರಾಜ್ಯಗಳ ಸಹಮತ ಇದ್ದರೇ ಮಾತ್ರ ಜೋಡೆ ಎಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ? ಇದು ಕಳಪೆ ಬಜೆಟ್. ಕರ್ನಾಟಕ ಕ್ಕೆ ಏನೂ ಕೊಟ್ಟಿಲ್ಲ. 
ಡಿಜಿಟಲ್ ಕರೆನ್ಸಿ ವಿಚಾರ: ಯಾವುದಕ್ಕೆ ಏನು? ಎಷ್ಟು ತೆರಿಗೆ ಹಾಕಿದ್ದಾರೆ ಅನ್ನೋದು ಸರಿಯಾಗಿ ಮಾಹಿತಿ ಕೊಟ್ಟಿಲ್ಲ

- ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ

1:11 PM

ಕೇಂದ್ರ ಬಜೆಟ್ 2022-23: ಬಿಎಸ್‌ವೈ ಹೇಳಿದ್ದೇನು?

ಭಾರತ ಸರ್ಕಾರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ 2022-23 ಸಾಲಿನ ಆಯವ್ಯಯವು ಕೋವಿಡ್-19 ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ. ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತರ್ಹ ವಿಷಯ.

ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, 2023 ರ ವರ್ಷವನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯ” ವರ್ಷವೆಂದು ಘೋಷಣೆ ಮಾಡಿದ್ದು ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ.

1:04 PM

ನಿರ್ಮಲಾ ಒಪ್ಪಿಸಿದ ಲೆಕ್ಕ ಹೇಗಿತ್ತು? ಆರ್ಥಿಕ ತಜ್ಞರು ಏನಂತಾರೆ?

ನಿರ್ಮಲಾ ಜನಪ್ರಿಯ ಬಜೆಟ್ ಮಂಡಿಸಿಲ್ಲ. ಆದರೆ, ಜನಪರ ಬಜೆಟ್ ಇದು ಎನ್ನುತ್ತಾರೆ ಆರ್ಥಿಕ ತಜ್ಞರು. ಶ್ರೀ ಸಾಮಾನ್ಯನಿಗೂ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಸಿಗಲಿಲ್ಲ ಎಂಬ ನೋವು. 80ಸಿ ಅಡಿಯಲ್ಲಾದರೂ ತೆರಿಗೆ ಉಳಿಸಿ ಹೆಚ್ಚುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ಸಿಕ್ಕಿದ್ದು ಏನೂ ಇಲ್ಲ. ವೀಕ್ಷಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್.
 
12:52 PM

ಬಿಜೆಪಿ ಕಚೇರಿಯಲ್ಲಿ ಕಾರಜೋಳ, ಸಿಸಿ ಪಾಟೀಲ್ ಜಂಟಿ ಸುದ್ದಿಗೋಷ್ಠಿ

ನದಿ ಜೋಡಣೆ ಇದು ಐತಿಹಾಸಿಕ ಯೋಜನೆ. ಇತಿಹಾಸ ಪುಟದಲ್ಲಿ ಇರಲಿದೆ. ರೈತರ ಬದುಕನ್ನು ಹಸನಾಗಿಸುವ ಯೋಜನೆ ಇದು.ಈ ಯೋಜನೆ ತಂದಿರೋದಕ್ಕೆ ಪ್ರಧಾನಿ ಮೋದಿಗೆ ಕೃತಜ್ಞತೆ. ಎರಡು ಲಕ್ಷ ಅಂಗನವಾಡಿ ಮೇಲ್ದರ್ಜೆಗೆ. ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು. ಎಸ್‌ಟಿ ಎಸ್‌ಸಿ ಬಡ ರೈತರಿಗೆ ನೀರಾವರಿ ಸೌಲಭ್ಯ. ಇಡಿ ಕುಟುಂಬಕ್ಕೆ ಉದ್ಯೋಗ ಸೃಷ್ಟಿ. 400 ಹೊಸ ರೈಲು ಮಾರ್ಗ. ಅದರಲ್ಲಿ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ. 80 ಲಕ್ಷ ಮನೆ ನಿರ್ಮಾಣಕ್ಕೆ ರೂಪುರೇಷೆ: ಕಾರಜೋಳ

ಮುಂದಿನ 25 ವರ್ಷದ ಯೋಜನೆ ದೃಷ್ಟಿಯಲ್ಲಿ ಇರಿಸಿಕೊಂಡು ಬಜೇಟ್ ಮಾಡಿದ್ದಾರೆ. ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ. ಐವತ್ತು ವರ್ಷಗಳ ತನಕ ಬಡ್ಡಿ ರಹಿತ ಸಾಲ ಕೊಡುವ ಕೇಂದ್ರದ ಘೋಷಣೆ ಸ್ವಾಗತವೆಂದ ಸಿಸಿ ಪಾಟೀಲ್. 

12:48 PM

ಜನಪ್ರಿಯ ಬಜೆಟ್ ಇದಲ್ಲ, ಜನಪರ ಬಜೆಟ್ ಇದು

ಶ್ರೀಸಾಮಾನ್ಯನ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಇಲ್ಲ. 34 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ನಿರ್ಮಲಾ ಸೀತರಾಮನ್. ಆದರೆ, ದೇಶದ ಆರ್ಥಿಕ ಸುಧಾರಣೆಗೆ ಬೇಕಾಗುವ ಟಾನಿಕ್ ಒದಗಿಸುವಂತೆ ಮಂಡನೆಯಾದ ಬಜೆಟ್. 

12:43 PM

ಯಾವುದಿನ್ನು ಏರಿಕೆ? ಯಾವ ವಸ್ತುಗಳ ಬೆಲೆ ಇಳಿಕೆ?

ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ. ಮೊಬೈಲ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ. ವೈದ್ಯಕೀಯ ಉಪಕರಣಗಳು, ಔಷಧಗಳ ಅಬಕಾರಿ ಸುಂಕ ಇಳಿಕೆ. ಗುಜರಿ ಸ್ಟೀಲ್‌ಗೆ ಇನ್ನೂ ಒಂದು ಸುಂಕ ವಿನಾಯಿತಿ. ತೈಲ ಬೆಲೆ ಮತ್ತಷ್ಟು ಏರುವ ನಿರೀಕ್ಷೆ. ಅನ್‌ಬ್ಲೆಂಡಂಡ್ ತೈಲದ ಮೇಲೆ 2 ರೂ. ಸುಂಕ ಹೆಚ್ಚಳ. ಅನೇಕ ಅಂದಾಜುಗಳ ಹುಸಿಗೊಳಿಸುವಂತೆ ವಿಭಿನ್ನ ಬಜೆಟ್ ಮಂಡಿಸಿದ ಕೇಂದ್ರ ಸರಕಾರ. 

12:38 AM

ರಾಜ್ಯ ಕೇಂದ್ರಿತ ಬಜೆಟ್ ಘೋಷಿಸಿದ ಕೇಂದ್ರ ಸರಕಾರ

ಆರ್ಥಿಕತೆಗೆ ಟಾನಿಕ್ ನೀಡುವ ಬಜೆಟ್. ಜನಪ್ರಿಯ ಘೋಷಣೆಗಳಿಲ್ಲ. ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿರುವ ಪಂಜ ರಾಜ್ಯಗಳಿಗೆ ಸಿಕ್ಕಿದ್ದು ಏನೂ ಇಲ್ಲ. ಎಲ್ಲರಿಗೂ ಒಂದೇ ಯೋಜನೆ. ಮುಂದಿನ 25 ವರ್ಷಗಳಲ್ಲಿ ದೇಶವನ್ನು ಯಾವ ರೀತಿ ಕಟ್ಟಬೇಕು ಎಂಬ ನೀಲಿ ನಕ್ಷೆಯನ್ನು ಇಟ್ಟುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್. 

12:32 PM

ಬಜೆಟ್ ಮಂಡನೆ ಅಂತ್ಯ

ಕಚ್ಚಾ ವಜ್ರದ ಮೇಲಿನ ಆಮದು ಸುಂಕ ಶೇ.5 ಇಳಿಕೆ.  ಎಲೆಕ್ಷನ್ ಮರೆತು ದೂರದೃಷ್ಟಿಯ ಬಜೆಟ್ ಮಂಡಿದಿಸಿ ವಿತ್ತ ಸಚಿವೆ. ಆದಾಯ ತೆರಿಗೆಯಲ್ಲಿ ಇಲ್ಲ ಬದಲಾವಣೆ. ಪಂಚರಾಜ್ಯಗಳಿಗೆ ಪಂಚಾಮೃತ ಸಿಕ್ಕಲಿಲ್ಲ. 

12:26 PM

ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ಹೇಗೆ?

*ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ 30% ತೆರಿಗೆ ವಿಧಿಸಲಾಗುತ್ತದೆ.
* ಅಂತಹ ಆಸ್ತಿಯ ವರ್ಗಾವಣೆಯಿಂದ ಉಂಟಾಗುವ ನಷ್ಟವನ್ನು ಯಾವುದೇ ಇತರೆ ಆದಾಯದ ವಿರುದ್ಧ ಹೊಂದಿಸಲಾಗುವುದಿಲ್ಲ.
* ಅಂತಹ ಸ್ವತ್ತುಗಳ ಉಡುಗೊರೆಯನ್ನು ಸ್ವೀಕರಿಸುವವರ ಕೈಯಿಂದ ತೆರಿಗೆ ವಿಧಿಸಲಾಗುತ್ತದೆ.

12:22 PM

ಐಟಿ ದಾಳಿ ವೇಳೆ ಸಿಕ್ಕಾಕೊಳ್ಳೋರಿಗೆ ಬಿಗ್ ಶಾಕ್

ಐಟಿ ದಾಳಿ ವೇಳೆ ಸಿಕ್ಕಾಕೊಳ್ಳೋರಿಗೆ ಬಿಗ್ ಶಾಕ್. ದಾಳಿ ವೇಳೆ ಸಿಕ್ಕ ಸಂಪತ್ತಿಗೆ ತೆರಿಗೆ ಕಟ್ಟೋದು ಅನಿವಾರ್ಯ. ಐಟಿ ದಾಳಿ ವೇಳೆಡ ಸೀಜ್ ಮಾಡಲಾದ ಆಸ್ತಿಯನ್ನು ನಷ್ಟವೆಂದು ಪರಿಗಣಿಸುವಂತಿಲ್ಲ.
ಜಿಎಸ್‌ಟಿ ಸಂಗ್ರಹದಲ್ಲಿ ಹಳೆಯ ದಾಖಲೆಗಳು ಬ್ರೇಕ್. ಈ ಜನವರಿಯಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹ. ಜನವರಿ ಒಂದೇ ತಿಂಗಳಲ್ಲಿ 1.40 ಲಕ್ಷ ಕೋಟಿ ತೆರಿಗೆ ಸಂಗ್ರಹದ ದಾಖಲೆಗೆ. ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಜಾರಿ. 

The gross GST collections for the month of January 2022 are Rs 1,40,986 crores which is the highest since the inception of GST: Finance Minister Nirmala Sitharaman pic.twitter.com/s5P7030KEw

— ANI (@ANI)

12:18 AM

ಕ್ರಿಪ್ಟೋ ಕರೆನ್ಸಿಗೆ ತೆರಿಗೆ ಘೋಷಣೆ

ಡಿಜಿಟಲ್ ಆಸ್ತಿ ಮೇಲೆ ಶೇ. 30ರಷ್ಟು ತೆರಿಗೆ.ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೇಲೆ ತೆರಿಗೆ!
ಯಾವುದೇ ವರ್ಚುವಲ್‌ ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.ಕ್ರಿಪ್ಟೋ ಕರೆನ್ಸಿ ವರ್ಗಾವಣೆಗೆ ಶೇ.1ರಷ್ಟು ಡಿಡಿಎಸ್ ಕಡಿತ. ಘೋಷಿಸದ ಆಸ್ತಿ ಸಿಕ್ಕರೆ ದೊಡ್ಡ ಮೊತ್ತದ ದಂಡ. ಕಪ್ಪು ಹಣ ಹೊಂದಿದವರಿಗೆ ಮತ್ತಷ್ಟು ಕಾಡಲಿದೆ ಐಟಿ ದಾಳಿಯ ಭಯ.

12:17 PM

ಮುಂದಿನ ವರ್ಷದವರೆಗೂ ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯ್ತಿ

ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ, 2023ರ ಮಾರ್ಚ್‌ವರೆಗೂ ತೆರಿಗೆ ವಿನಾಯ್ತಿ. ಟ್ಯಾಕ್ಸ್ ಪೇಯರ್ಸ್ ಮತ್ತು ಡಿಪಾರ್ಟ್‌ಮೆಂಟ್ ನಡುವೆ ಇರುವ ವ್ಯಾಜ್ಯ ಇತ್ಯರ್ಥಕ್ಕೆ ಅಗತ್ಯ ನೆರವು. 

Both Centre and States govt employees' tax deduction limit to be increased from 10% to 14% to help the social security benefits of state govt employees and bring them at par with the Central govt employees: FM Nirmala Sitharaman pic.twitter.com/qPUvX2JZzd

— ANI (@ANI)

12:14 PM

ಆದಾಯ ತೆರಿಗೆ ಸಲ್ಲಿಸಲು ಹೊಸ ನೀತಿ ಜಾರಿ

* ಸಹಕಾರ ಸಂಘಗಳ ತೆರಿಗೆ ಶೇ. 18ರಿಂದ ಶೇ. 15ಕ್ಕೆ ಇಳಿಕೆ
* ಸಹಕಾರಿ ಸಂಘಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ
* ಐಟಿ ರಿಟರ್ನ್ಸ್ ಸಲ್ಲಿಕೆಗೂ ಹೊಸ ನೀತಿ ಜಾರಿ
* ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ
* ಪೋಷಕರು ಬದುಕಿರುವಾಗಲೇ ವಿಮೆ ಹಣ ಪಡೆಯುವ ಅವಕಾಶ
* ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ರಿಲೀಫ್

12:13 AM

Tax Deduction ಬಗ್ಗೆ ಚಕಾರ ಎತ್ತಲೇ ಇಲ್ಲ ನಿರ್ಮಲಾ

ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ. ಕೇಂದ್ರ, ರಾಜ್ಯ ಸರಕಾರ ನೌಕರರಿಗೆ ತೆರಿಗೆ ವಿನಾಯಿತಿ. ಕೇಂದ್ರ-ರಾಜ್ಯ ಸರಕಾರದ ನೌಕರರಿಗೆ ಏಕ ರೂಪದ ತೆರಿಗೆ. 

To provide an opportunity to correct an error, taxpayers can now file an updated return within 2 years from the relevant assessment year: FM Nirmala Sitharaman pic.twitter.com/E73lNaXpGT

— ANI (@ANI)

12:10 PM

200 ಶೈಕ್ಷಣಿಕ ಟಿವಿ ಚಾನೆಲ್

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಮರುಆಯೋಜಿಸಲಾಗೋದು. ಯುವಜನರ ಕೌಶಲಾಭಿವೃದ್ಧಿಗೆ ಡಿಜಿಟಲ್ ದೇಶ್ ಇ-ಪೋರ್ಟಲ್ ಪ್ರಾರಂಭಿಸಲಾಗೋದು. ತಮ್ಮ ಕೌಶಲ್ಯಕ್ಕೆ ಸರಿಹೊಂದೋ ಉದ್ಯೋಗ ಪಡೆಯಲು ಇದು ನೆರವು ನೀಡಲಿದೆ. ಕೋವಿಡ್-19 ಕಾರಣದಿಂದ ಗ್ರಾಮೀಣ ಭಾಗದ ಅದ್ರಲ್ಲೂ ಬುಡಕಟ್ಟು ಜನಾಂಗದ ಮಕ್ಕಳು ಎರಡು ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಥ ಮಕ್ಕಳಿಗಾಗಿ 'ಒಂದು ವರ್ಗ ಒಂದು ಟಿವಿ ಚಾನೆಲ್' ಅಡಿಯಲ್ಲಿ ಟಿವಿ ಚಾನೆಲ್ ಗಳನ್ನು 12ರಿಂದ 200 ಕ್ಕೆ ಹೆಚ್ಚಿಸಲಾಗೋದು. 1-12ತರಗತಿಗಳ ತನಕದ ಮಕ್ಕಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಸಪ್ಲಿಮೆಂಟರಿ ಶಿಕ್ಷಣ ನೀಡಲಾಗೋದು. ISTE ಮಾನದಂಡಗಳಿಗೆ ಅನುಗುಣವಾಗಿ ವಿಶ್ವ ದರ್ಜೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲಾಗೋದು.

12:10 PM

ಎವಿಜಿಸಿ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶ

ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯವು ಯುವಕರಿಗೆ ಉದ್ಯೋಗವನ್ನು ಒದಗಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆ ಮತ್ತು ಜಾಗತಿಕ ಬೇಡಿಕೆಗಾಗಿ ನಮ್ಮ ದೇಶೀಯ ಸಾಮರ್ಥ್ಯವನ್ನು ನಿರ್ಮಿಸಲು ಎಲ್ಲಾ ಪಾಲುದಾರರೊಂದಿಗೆ AVGC ಪ್ರಚಾರ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು. ಪಾವತಿ ವಿಳಂಬವನ್ನು ಕಡಿಮೆ ಮಾಡಲು, ಆನ್‌ಲೈನ್ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಮತ್ತು ಎಲ್ಲಾ ಕೇಂದ್ರ ಸಚಿವಾಲಯಗಳು ಇದನ್ನು ಬಳಸುತ್ತವೆ. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕ ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ರೈತ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲಾಗುವುದು.

12:09 PM

ಸಹಕಾರ ಸಂಘಗಳಿಗೆ ಟ್ಯಾಕ್ಸ್ ರಿಲೀಫ್

ತೆರಿಗೆದಾರರಿಗೆ ಧನ್ಯವಾದ ಸಲ್ಲಿಸಿದ ನಿರ್ಮಲಾ. ಮಹಾಭಾರತದ ಶಾಂತಿ ಪರ್ವ ಅಧ್ಯಾಯದಲ್ಲಿ ಹೇಳಿದ ಕೋಟ್‌ನೊಂದಿಗೆ ತೆರಿಗೆದಾರರು ಕಾಯುತ್ತಿದ್ದ ಸುದ್ದಿ ನೀಡಿದ ವಿತ್ತ ಸಚಿವೆ. ಅಭಿವೃದ್ಧಿ ಪಡಿಸಿದ ರಿಟರ್ನ್ಸ್ ಫೈಲ್ ವ್ಯವಸ್ಥೆ ಜಾರಿ. ನೇರ ತರಿಗೆ ಪ್ರಸ್ತಾಪಿಸಿದ ನಿರ್ಮಲಾ. ಆದಾಯ ತೆರಿಗೆ ತಪ್ಪು ಸರಿ ಪಿಡಿಸಿಕೊಳ್ಳಲು ಅವಕಾಶ. ವಾಲಂಟರಿ ಕಂಪ್ಲೆಂಟ್ ಸಲ್ಲಿಸಲು ಅವಕಾಶ. 2 ವರ್ಷದೊಳಗೆ ದಂಡ ರಹಿತಿ ಟ್ಯಾಕ್ಸ್ ಕಟ್ಟಲು ಅನುವು. 

12:04 PM

ಹೆಚ್ಚುವರಿ ಸಾಲ ನೀಡಲು ಒತ್ತು

ರಾಜ್ಯ ಸರಕಾರಗಳಿಗೆ ಹೆಚ್ಚುವರಿ ಸಾಲ ಸೌಲಭ್ಯ. 1 ಲಕ್ಷ ಕೋಟಿ ರೂ. ಸಾಲ ಕೇಂದ್ರದಿಂದ ನೀಡಿಕೆ. ಬಡ್ಡಿ ರಹಿತ ಸಾಲದಿಂದ ಅನೇಕ ಹೊಸ ಯೋಜನೆಗಳಿಗೆ ಆದ್ಯತೆ. 

12:03 PM

RBI ಬಿಡುಗಡೆ ಮಾಡಲಿದೆ ಡಿಜಿಟಲ್ ಕರೆನ್ಸ್

2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (RBI) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ

Digital rupee to be issued using blockchain and other technologies; to be issued by RBI starting 2022-23. This will give a big boost to the economy: FM Nirmala Sitharaman pic.twitter.com/tUdj2DoZCR

— ANI (@ANI)

12:01 PM

ಕೆನ್ ಬೆಟ್ವಾ ಲಿಂಕ್ ಯೋಜನೆ

ಅಂದಾಜು 44,605 ಕೋಟಿ ವೆಚ್ಚದಲ್ಲಿ ಕೆನ್ ಬೆಟ್ವಾ ಲಿಂಕ್ ಮಾಡುವ ಯೋಜನೆಯ ಅನುಷ್ಠಾನ. 9.0 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್. 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ. ಇದಕ್ಕಾಗಿ ಬಜೆಟ್ ನಲ್ಲಿ 1400 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

Implementation of Ken Betwa Linking project at est. cost of Rs. 44,605 Cr. to be taken up with irrigation benefits to 9.0 lakh hectare farmland, drinking water to 62 lakh people, 103 MW hydropower. 27 MW solar power generation

Rs 1400 crores allocated in 2022-23: FM pic.twitter.com/GMb7tqunjS

— ANI (@ANI)

12:01 PM

ಭಾರತದ ಡಿಜಿಟಲ್ ಕರೆನ್ಸಿ ಪರಿಚಯ

ಡಿಜಟಲ್ ಕರೆನ್ಸಿಗೆ ಒತ್ತು. ರಿಸರ್ವ್ ಬ್ಯಾಂಕ್ ಇಂಡಿಯಾದಲ್ಲಿ ಈ ಹಣ ಬಿಡುಗಡೆ. ಉದ್ಯೋಗ ಹೂಡಿಕೆಗೆ ಕೇಂದ್ರ ಸರಕಾರದಿಂದ ಬಂಡವಾಳ ಹೂಡಿಕೆ. 

11:57 AM

ಇಸಿಜಿಎಲ್ ಸೇವೆ ವಿಸ್ತರಣೆ

*ಸಣ್ಣ ಹಾಗೂ ಮಧ್ಯಮ ವಲಯದ ಆತಿಥ್ಯ ಸೇವೆಗಳು ಕೋವಿಡ್-19 ಕಾರಣದಿಂದ ಸಂಕಷ್ಟಕ್ಕೆ ಸಿಲುಕಿವೆ. ಈ ಉದ್ಯಮಗಳು ಚೇತರಿಕೆ ಕಂಡು ಮತ್ತೆ ಹಳಿಗೆ ಮರಳಲು ಸರ್ಕಾರ ಇಸಿಜಿಎಲ್ ಸೇವೆಯನ್ನು(ECGL service) 2023ರ ಮಾರ್ಚ್ ತನಕ  ವಿಸ್ತರಣೆ ಮಾಡಲು ನಿರ್ಧರಿಸಿದೆ. ಇದರಡಿಯಲ್ಲಿ ನೀಡೋ ಮೊತ್ತದಲ್ಲಿ ಕೂಡ ಹೆಚ್ಚಳ ಮಾಡಲಾಗಿದ್ದು,  50,000ರೂ. ವಿತರಿಸಲು ಸರ್ಕಾರ ನಿರ್ಧರಿಸಿದೆ.

11:56 AM

SC, ST ರೈತರಿಗೆ ಆರ್ಥಿಕ ನೆರವು

* ಪಿಪಿಪಿ ಮಾದರಿಯಲ್ಲಿ ರೈಲ್ವೆ ಅಭಿವೃದ್ಧಿ
* ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲಾಗುವುದು
* 15 ಲಕ್ಷ ಹೊಸ ಉದ್ಯೋಗ ಸೃಷ್ಟಿ
* ಸರ್ಕಾರಕ್ಕೆ ಆನ್‌ಲೈನ್ ಇ-ಬಿಲ್ ವ್ಯವಸ್ಥೆ

11:55 AM

ದೇಸಿ ನಿರ್ಮಿತ ರಕ್ಷಣಾ ಶಸ್ತ್ತ್ರಾಸ್ತ್ರ ಖರೀದಿಗೆ ಒತ್ತು

ರಕ್ಷಣಾ ಸಂಶೋಧನೆಗೆ ಆದ್ಯತೆ

68% of the capital procurement budget for Defence to be earmarked for domestic industry to promote Aatmanirbharta and reduce dependence on imports of defence equipment. This is up from the 58% last fiscal: FM Nirmala Sitharaman pic.twitter.com/pQJm3ymlQE

— ANI (@ANI)

11:53 AM

ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಮತ್ತು PM ಡೆವಲಪ್‌ಮೆಂಟ್ ಇನಿಶಿಯೇಟಿವ್‌ ಯೋಜನೆ ಆರಂಭ

ಈಶಾನ್ಯ ಭಾಗದ ಅಭಿವೃದ್ಧಿಗೆ ಹೊಸ ಯೋಜನೆ ಆರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದನ್ನು PM ಡೆವಲಪ್‌ಮೆಂಟ್ ಇನಿಶಿಯೇಟಿವ್ ಎಂದು ಹೆಸರಿಸಲಾಗಿದೆ. ಅದೇ ಸಮಯದಲ್ಲಿ, ಉತ್ತರ ಗಡಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಗಾಗಿ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

11:52 AM

ECLGS ಅನ್ನು ಮಾರ್ಚ್ 2023 ರವರೆಗೆ ವಿಸ್ತರಣೆ

ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವರು ಘೋಷಿಸಿದರು. ಈ ಯೋಜನೆಯಡಿಯಲ್ಲಿ, ಖಾತರಿ ಕವರ್ ಅನ್ನು 50 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಒಟ್ಟು ಕವರ್ ಈಗ 5 ಲಕ್ಷ ಕೋಟಿಗಳಾಗಿರುತ್ತದೆ.
ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು

11:52 AM

ನಬಾರ್ಡ್ ಮೂಲಕ ಕೃಷಿಗೆ ಸಂಬಂಧಿಸಿದ ಸ್ಟಾರ್ಟಪ್‌ಗಳಿಗೆ ಸಹಾಯ

ನಬಾರ್ಡ್ ಮೂಲಕ ಕೃಷಿ ಕ್ಷೇತ್ರದ ಗ್ರಾಮೀಣ ಮತ್ತು ಕೃಷಿ ಸ್ಟಾರ್ಟಪ್‌ಗಳಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಈ ಸ್ಟಾರ್ಟಪ್‌ಗಳು ಎಫ್‌ಪಿಒಗಳನ್ನು ಬೆಂಬಲಿಸುತ್ತವೆ ಮತ್ತು ರೈತರಿಗೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತವೆ.

11:51 AM

2022ರಲ್ಲೇ 5G ತರಾಂಗಾಂತರ ಹರಾಜು!

2022ರಲ್ಲಿ 5G ತರಾಂಗಾಂತರ ಹರಾಜಿನ ಮೂಲಕ 2022-23 ರ ಹೊತ್ತಿಗೆ 5G ಸೇವೆ ಆರಂಭ. 5G ಸಂಬಂಧಿತ ವಸ್ತುಗಳ ಉತ್ಪಾದನೆಗೆ ಹಾಗೂ ಮೂಲ ಸೌಕರ್ಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್ ನೀಡುವ ಗುರಿಯೊಂದಿಗೆ ಆಪ್ಟಿಕಲ್‌ ಫೈಬರ್‌ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್, ಇಂಟರ್‌ ನೆಟ್‌ ಸೇವೆ ನೀಡಲಾಗುವುದು.

11:51 AM

ರಕ್ಷಣಾ ಇಲಾಖೆಯಲ್ಲೂ ಆತ್ಮ ನಿರ್ಭರಕ್ಕೆ ಒತ್ತು

ರಕ್ಷಣಾ ಸಾಮಾಗ್ರಿ ಖರೀದಿಯಲ್ಲಿ ಶೇ.68 ಸ್ಥಳೀಯ ಖರೀದಿಗೆ ಆದ್ಯತೆ, ದೇಶೀಯ ಸಂಶೋಧನೆಗೆ ಒತ್ತು. ರಕ್ಷಣಾ ಇಲಾಕೆಯ ಅನುದಾನದಲ್ಲಿ ಶೇ.25ರಷ್ಟು ಸಂಶೋಧನೆಗೆ ಮೀಸಲು. ಶಸ್ತ್ರಾಸ್ತ್ರಗಳ ಆಮದು ಕಡಿತಕ್ಕೆ ಸಕಲ ತಯಾರಿ. ತಂತ್ರಜ್ಞಾನ ಆಧುನೀಕರಣಕ್ಕೆ ಸಹಕಾರ.

11:49 AM

ಸಾವಯವ ಕೃಷಿಗೆ ಪ್ರೋತ್ಸಾಹ

ಉದ್ಯಮ, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್‌ಗಳ ಪೋರ್ಟಲ್‌ಗಳು ಪರಸ್ಪರ ಸಂಬಂಧ ಹೊಂದಿದ್ದು, ಇದು ಅವರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಈ ಪೋರ್ಟಲ್‌ಗಳು G-C, B-C & B-B ಸೇವೆಯನ್ನು ಒದಗಿಸುತ್ತವೆ. ಇದು ಸಾಲ ಸೌಲಭ್ಯ, ಹೆಚ್ಚುತ್ತಿರುವ ಉದ್ಯಮಶೀಲತೆಯ ಅವಕಾಶಗಳನ್ನು ಒಳಗೊಂಡಿರುತ್ತದೆ.

11:48 AM

75 ಜಿಲ್ಲೆಗಳಲ್ಲಿ ಇ-ಬ್ಯಾಂಕಿಂಗ್ ಘಟಕಗಳ ಸ್ಥಾಪನೆ

ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಯೋಜನೆ ಬಿಡುಗಡೆ, ಹರ್ ಘರ್ ನಲ್ ಯೋಜನೆ 5.5 ಕೋಟಿ ಜನರಿಗೆ ನಲ್ಲಿ ಸೌಲಭ್ಯವನ್ನು ಒದಗಿಸುತ್ತದೆ. ರೈತ ಡ್ರೋನ್‌ಗಳನ್ನು ಬಳಸಲಾಗುವುದು. ಇದರೊಂದಿಗೆ ಬೆಳೆ ಮೌಲ್ಯಮಾಪನ, ಭೂ ದಾಖಲೆ, ಕ್ರಿಮಿನಾಶಕ ಸಿಂಪಡಣೆ ಕಾರ್ಯ ನಡೆಯಲಿದೆ.ಅಂಚೆ ಕಚೇರಿಗಳನ್ನು ಬ್ಯಾಂಕ್‌ಗಳೊಂದಿಗೆ ಜೋಡಿಸಲಾಗುವುದು, ಇ-ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದು. ಚಿಪ್-ಇ ಪಾಸ್‌ಪೋರ್ಟ್‌ಗಳನ್ನು ಮಾಡಲಾಗುವುದು. ಭೂ ದಾಖಲೆಗಳ ಡಿಜಿಟಲೀಕರಣ ನಡೆಯಲಿದೆ.75 ಜಿಲ್ಲೆಗಳಲ್ಲಿ ಇ-ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲಾಗುವುದು.

11:47 AM

ಬ್ಯಾಟರಿಗಳು ಹಾಗೂ ಇಂಧನ

ಬ್ಯಾಟರಿಗಳು ಹಾಗೂ ಇಂಧನದ ವಿಚಾರಗಳಲ್ಲಿ ಹಿಂದಿನ ಬಜೆಟ್ ಭಾಷಣಗಳಲ್ಲಿ ಹೆಚ್ಚಿನ ಕ್ರಮದ ಸೂಚನೆ ನೀಡಲಾಗಿತ್ತು. ಬ್ಯಾಟರಿ ವಿನಿಮಯ ನೀತಿ, ಇಂಟರ್‌  ಆಪರೇಬಿಲಿಟಿ ಮಾನದಂಡಗಳನ್ನು ಸರ್ಕಾರ ಈಗಾಗಲೇ ಪ್ರಕಟಿಸಿದೆ. ಇವಿನ್ನೂ ಆರಂಭಿಕ ಹಂತದಲ್ಲಿದೆ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆ.

11:47 AM

ಮೇಕ್ ಇನ್ ಇಂಡಿಯಾ ಅಡಿಯಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ

ರೈತರಿಗೆ ಡಿಜಿಟಲ್ ಸೇವೆ ನೀಡಲು ಆದ್ಯತೆ. ನೀರಾವರಿ-ಕುಡಿಯುವ ನೀರಿನ ಸೌಲಭ್ಯ ಹೆಚ್ಚಳಕ್ಕೆ ಒತ್ತು. 2023 ರ ವರ್ಷವನ್ನು ಒರಟಾದ ಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. 5 ನದಿಗಳನ್ನು ಪರಸ್ಪರ ಜೋಡಿಸಲಾಗುವುದು. ಸಾವಯವ ಕೃಷಿಗೆ ಸರ್ಕಾರದ ಒತ್ತು. ಏರ್ ಇಂಡಿಯಾ ಬಂಡವಾಳ ಹೂಡಿಕೆ ಪೂರ್ಣಗೊಳ್ಳಲಿದೆ. ಶುದ್ಧ ಇಂಧನ ನಮ್ಮ ಆದ್ಯತೆಯಾಗಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

11:46 AM

ಪರ್ವತ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ 'ಪರ್ವತಮಾಲ'

*ಮುಂದಿನ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರ ಶೇ.9.2.
*ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ  ಮೂಲಸೌಕರ್ಯ ಬಲವರ್ಧನೆ, ಲಸಿಕಾ ಕಾರ್ಯಕ್ರಮವನ್ನು ವೇಗವಾಗಿ ಅನುಷ್ಠಾನಗೊಳಿಸಲಾಗೋದು.
*ಪಿಎಂ ಗತಿಶಕ್ತಿ ಆರ್ಥಿಕತೆಯನ್ನು ಬಲವರ್ಧನೆಗೆ ನೆರವು ನೀಡಲಿದೆ. ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
*2022-23ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿ.ಮೀ. ವಿಸ್ತರಿಸಲಾಗೋದು. 
*ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪರ್ವತ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ 'ಪರ್ವತಮಾಲ'.

11:46 AM

5ಜಿ ಮೊಬೈಲ್ ಸರ್ವಿಸ್ ಸೇವೆ ಆರಂಭಕ್ಕೆ ನೆರವು

5ಜಿ ಇಂಟರ್ನೆಟ್ ನೀಡಿಕೆಯಿಂದ ಉತ್ಪಾದನೆಯ ಹೆಚ್ಚಳ ನಿರೀಕ್ಷೆ. 2022ರಲ್ಲಿ 5ಜಿ ತರಂಗಾಂತರ ಹರಾಜು. ಎಲ್ಲಾ ಹಳ್ಳಿಗಳಲ್ಲೂ ಸೂಕ್ತ ಇಂಟರ್ನೆಟ್ ಸಂಪರ್ಕ ಒದಗಿಸಲು ಸರಕಾರ ಬದ್ಧ. ಭಾರತ್ ನೆಟ್ ಯೋಜನೆಯಡಿ ಪ್ರತೀ ಹಳ್ಳಿಯ, ಪ್ರತೀ ಮನೆಗೂ ಇಂಟರ್ನೆಟ್ ಸೌಲಭ್ಯ, ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೇವೆ. 

11:44 AM

ಕೇಂದ್ರ ಸಚಿವಾಲಯಗಳಲ್ಲಿ ಪೇಪರ್ ಬಳಕೆಗೆ ಬ್ರೇಕ್

ಎಲ್ಲ ಕಾಂಟ್ರಾಕ್ಟ್ ದಾಖಲೆಗಳು ಮತ್ತು ಕ್ಲೈಮ್ ಗಳನ್ನು ಆನ್‌ಲೈನ್‌ನಲ್ಲಿ ಇನ್ನು ಸಬ್ ಮಿಟ್ ಆಗಬೇಕು. ಆ ಮೂಲಕ ಪೇಪರ್ ಬಳಕೆಗೆ ಕಡಿವಾಣ ಹಾಕಲಿದೆ. ಬಿಲ್ ಮುಂಡಿಸಿದ 10 ದಿನಗಳಲ್ಲಿಯೇ ಗುತ್ತಿಗೆದಾರರಿಗೆ ಶೇ75ರಷ್ಟು ಹಣ ಪಾವತಿ. ಇನ್ಳೂರೆನ್ಸ್ ರೆಗ್ಯುಲರೇಟರ್‌ನಿಂದ ಶೂರಿಟಿ ಬಾಂಡ್ ವಿತರಣಗೆ ಸೂಕ್ತ ವ್ಯವಸ್ಥೆ, 

11:41 AM

8 ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜೀಟಲೀಕರಣಕ್ಕೆ ಆದ್ಯತೆ

75ನೇ ಸ್ವಾತಂತ್ರ್ಯೋತ್ಸವ ಬೆನಲ್ಲೇ 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕಿಂಗ್‌ ಯುನಿಟ್ಸ್‌ ಆರಂಭ ಮಾಡುವ ಮೂಲಕ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪ್ರೋತ್ಸಾಹ . ಜತೆಗೆ 1.4ಲಕ್ಷ ಪೋಸ್ಟ್‌ ಆಫಿಸ್‌ಗಳ ಸ್ವರೂಪ ಬದಲಿಸಿ ಎಟಿಎಂ, ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ ನೀಡಲಾಗುವುದು. ಪೋಸ್ಟ್‌ ಆಫೀಸ್‌ಗಳಿಗೆ ಬ್ಯಾಂಕ್‌ ಸ್ವರೂಪ ನೀಡುವ ಮೂಲಕ ಹಣ ವರ್ಗಾಯಿಸುವ ಸೇವೆ ನೀಡಲಾಗುವುದು.

11:40 AM

ಗೋಧಿ ಸೇರಿದಂತೆ ರಾಬಿ ಬೆಳೆಗಳ ಖರೀದಿ ಹೆಚ್ಚಳ

ಹಣ್ಣು ಮತ್ತು ತರಕಾರಿ ಉತ್ಪಾದನೆ ಉತ್ತೇಜನಕ್ಕೆ ನೀತಿ ರೂಪಿಸಲಾಗುವುದು. ಖಾದ್ಯ ತೈಲಗಳ ಬೆಲೆ ಏರಿಕೆ ನಡುವೆ ಎಣ್ಣೆ ಬೀಜಗಳ ಉತ್ಪಾದನೆಯನ್ನು ಉತ್ತೇಜಿಸುವುದಾಗಿ ಘೋಷಣೆ. ಗೋಧಿ ಸೇರಿ ರಾಬಿ ಬೆಳೆಗಳ ಖರೀದಿಯನ್ನೂ ಸರ್ಕಾರ ಹೆಚ್ಚಿಸಲಿದೆ. ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಪ್ರವಾಸೋದ್ಯಮ, ಹೋಟೆಲ್‌ಗಳು ಸೇರಿದಂತೆ ಆತಿಥ್ಯ ಕ್ಷೇತ್ರಕ್ಕೆ ECLGS ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೂ ಸಾಲ ಖಾತರಿ ಯೋಜನೆಯನ್ನು ವಿಸ್ತರಣೆ. 

11:39 AM

ಅಂಚೆ ಕಚೇರಿ ಮೂಲಕ ಕೋರ್ ಬ್ಯಾಂಕಿಂಗ್‌ಗೆ ಅವಕಾಶ

ರೈತರಿಗೆ ಇದರಿಂದ ಸಹಕಾರಿಯಾಗಲಿದೆ. ಮೂಲಸೌಕರ್ಯಕ್ಕೆ ಬಜೆಟ್‌ನಲ್ಲಿ ಭರಪೂರ ಕೊಡುಗೆ. ಜನರ ಜೀವನ ಗುಣಮಟ್ಟಕ್ಕಾಗಿ ಕಾರ್ಯಕ್ರಮ . 112 ಜಿಲ್ಲೆಗಳಲ್ಲಿ ಆರೋಗ್ಯ, ಪೌಷ್ಟಿಕಾಂಶ, ಸೇರಿದಂತೆ ಜೀವನ ಗುಣಮಟ್ಟಕ್ಕೆ ಆದ್ಯತೆ
ಇ ಪಾಸ್ ಪೋರ್ಟ್‌ಗೆ ಬಜೆಟ್ ನಲ್ಲಿ ತೀರ್ಮಾನ. ಡಿಜಿಟಲ್ ಪೇಮೆಂಟ್, ಡಿಜಿಟಲ್ ಬ್ಯಾಂಕಿಂಗ್ ಗೆ ಹೆಚ್ಚಿನ ಒತ್ತು.

11:38 AM

ಜಿಡಿಪಿ ಶೇ.9.2ರ ದರದಲ್ಲಿ ಅಭಿವೃದ್ಧಿ

ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದವು 9.2% ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ. IMF ಮತ್ತು ವಿಶ್ವಬ್ಯಾಂಕ್‌ನಂತಹ ಅಂತರಾಷ್ಟ್ರೀಯ ಏಜೆನ್ಸಿಗಳು ಭಾರತದ GDP ಬೆಳವಣಿಗೆಯ ದರವು ವಿಶ್ವದಲ್ಲೇ ಅತ್ಯಂತ ವೇಗವಾಗಿರುತ್ತದೆ ಎಂದು ಅಂದಾಜಿಸಿದೆ.

11:38 AM

ಇ-ಪಾಸ್ಪೋರ್ಟ್ಸ್‌ಗೆ ಆಧುನಿಕತೆಯ ಸ್ಪರ್ಶ

ವಿದೇಶ ಪ್ರಯಾಣ ಸರಳೀಕರಣಗೊಳಿಸಲು ಇ-ಪಾಸ್ಪೋರ್ಟ್ ಸರಳೀಕರಣ, ನಗರ ಅಭಿವೃದ್ಧಿಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಒತ್ತು. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಳ. ಲೈಸೆನ್ಸ್ ರಾಜ್ ಕಿತ್ತು ಹಾಕಲು ಕ್ರಮ, ಅನಾವಶ್ಯಕ ಕಾನೂನುಗಳ ರದ್ದು. 

11:35 AM

2022-23ರಲ್ಲಿ 80 ಲಕ್ಷ ಮನೆಗಳ ನಿರ್ಮಾಣ

 2022-23ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಅವರಿಗಾಗಿ 48 ಸಾವಿರ ಕೋಟಿ ನಿಧಿ ಇಡಲಾಗಿದೆ. ಈ ಮನೆಗಳ ಮೂಲ ಸೌಕರ್ಯಕ್ಕೆ ಸಕಲ ಸಹಕಾರ. 

11:34 AM

9.05 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆ ಯೋಜನೆ ಕೆನ್‌- ಬೇಟ್ವಾ ಅಡಿಯಲ್ಲಿ  44,605 ಕೋಟಿ ರೂ. ವೆಚ್ಚದಲ್ಲಿ 9.05 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. 65 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

11:34 AM

ಡಿಜಿಟಲ್ ಬ್ಯಾಂಕಿಂಗ್‌ ಉತ್ತೇಜನ

ಡಿಜಟಲ್ ಬ್ಯಾಂಕಿಂಗ್‌ಗೆ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ಸ್. ಪೋಸ್ಟ ಆಫೀಸ್‌ಗಳಿಗೆ ಬ್ಯಾಂಕಿಂಗ್ ಸ್ವರೂಪ, ಎಟಿಎಂ ರೀತಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಒದಗಿಸಲು ನಿರ್ಧಾರ, 1.4 ಪೋಸ್ಟ್ ಆಫೀಸ್‌ಗಳ ಸ್ವರೂಪ ಬದಲು. 

11:32 AM

ಮನೆ ನಿರ್ಮಾಣದ ದಾಖಲೆ ಸರಳೀಕರಣ

ರಾಜ್ಯ ಸರಕಾರಗಳೊಂದಿಗೆ ದಾಖಲೀಕರಣ ಸರಳೀಕರಣಕ್ಕೆ ಒತ್ತು. 2023ರೊಳಗೆ 18 ಲಕ್ಷ ಮನೆ ನಿರ್ಮಿಸುವ ಗುರಿ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಪಿಎಂ ಗತಿ ಶಕ್ತಿ ಯೋಜನೆಯ ವಿಸ್ತರಣೆ. ಪಿಎಂ ಆವಾಜ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಎಲ್ಲರ ಮನೆಗೂ ದೂರದರ್ಶನದ ಸಂಪರ್ಕ. ಆ ಮೂಲಕ ಮಕ್ಕಳು ಶಿಕ್ಷಣ ಪಡೆಯಲು ಅನುಕೂರವಾಗುವಂತೆ ನೆರವು. 2 ವರ್ಷಗಳಲ್ಲಿ 8.7 ಕೋಟಿ ಮನೆಗಳಿಗೆ ನೀರು ಪೂರೈಸುವ ಗುರು. 

11:28 AM

ಸಾವಯವ ಕೃಷಿಗೆ ಉತ್ತೇಜನ ನೀಡಲಿದೆ

ರಾಜ್ಯ ಸರ್ಕಾರಗಳು ತಮ್ಮ ಪಠ್ಯಕ್ರ ಮದಲ್ಲಿ ರೂಪಿಸುವ ಕೋರ್ಸ್ ಅನ್ನು ಸೇರಿಸಲು ಪ್ರೋತ್ಸಾಹಿಸಲಾಗುವುದು. ಗಂಗಾ ಕಾರಿಡಾರ್ ಸುತ್ತಮುತ್ತ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು. ಅದೇ ಸಮಯದಲ್ಲಿ, ಸಣ್ಣ ಕೈಗಾರಿಕೆಗಳಿಗೆ (MSME) ಕ್ರೆಡಿಟ್ ಗ್ಯಾರಂಟಿ ಯೋಜನೆಯಿಂದ ಸಹಾಯವನ್ನು ನೀಡಲಾಗುತ್ತದೆ.

11:28 AM

MSPನಲ್ಲಿ ರೈತರಿಂದ ದಾಖಲೆಗಳನ್ನು ಖರೀದಿ

MSP ನಲ್ಲಿ ರೈತರಿಂದ ದಾಖಲೆಗಳನ್ನು ಖರೀದಿಸಲಾಗುತ್ತದೆ
ರೈತರಿಗೆ ಎಂಎಸ್‌ಪಿ ದರದಲ್ಲಿ ರೈತರಿಂದ ದಾಖಲೆಯ ಖರೀದಿ ಮಾಡಲಾಗುವುದು. ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸಲು. ಹೆದ್ದಾರಿ ವಿಸ್ತರಣೆಗೆ 20 ಸಾವಿರ ಕೋಟಿ ರೂ. ಮೊತ್ತದ 8 ಹೊಸ ರೋಪ್ ವೇಗಳನ್ನು ನಿರ್ಮಿಸಲಾಗುವುದು. 100 ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು.

11:28 AM

ಬೆಂಗಳೂರಿಗೆ ತಂತ್ರಜ್ಞಾನ ನೆರವು

ಟೆಕ್ ಹಬ್ ಎಂದೇ ಖ್ಯಾತವಾದ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ. ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಆದ್ಯತೆ. ಮಹಿಳೆಯರಿಗಾಗಿ ನಾರಿ ಶಕ್ತಿ, ಸಶಕ್ಷಮ ಅಂಗನವಾಡಿ ಯೋಜನೆ. ಅಂಗನವಾಡಿಗಳ ಮೂಲ ಸೌಕರ್ಯ ವೃದ್ದಿ, ಮಕ್ಕಳ ಅಭಿವೃದ್ಧಿಗೆ ಸಕಲ ರೀತಿಯ ನೆರವು. ಕೊರೋನಾ ಕಾಲದಲ್ಲಿ ಹದಗೆಟ್ಟ ಮಾನಸಿಕ ಆರೋಗ್ಯಕ್ಕೆ ಒತ್ತು, 

11:25 AM

ಪಿಎಂ ಇ-ವಿದ್ಯಾ 200 ಟಿವಿ ಚಾನೆಲ್‌ಗಳಲ್ಲಿ ವಿಸ್ತರಣೆ

ಆನ್‌ಲೈನ್ ಶಿಕ್ಷಣ ಮತ್ತಷ್ಟು ಸರಳೀಕರಣಗೊಳಿಸಲು ಸಕಲ ಸಿದ್ಥತೆ. ಪಿಎಂ ಇ-ವಿದ್ಯಾ ಯೋಜನೆಯ ವಿಸ್ತರಣೆ. ಡಿಜಿಟಲ್ ಶಿಕ್ಷಕರನ್ನು ಬಳಸಿಕೊಂಡು, ತಂತ್ರಜ್ಞಾನ ಬಳಕೆಯಿಂದ, ಡಿಜಿಟಲ್ ಟೂಲ್ಸ್ ಬಳಕೆಯಿಂದ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಲು ಅಗತ್ಯ ಕ್ರಮ, ಸರಕಾರಿ ಶಾಲಾ ಮಕ್ಕಳಿಗೆ ಓನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮ, ಸರಕಾರಿ ಶಾಲಾ ಮಕ್ಕಳಿಗೆ ಆಯಾ ರಾಜ್ಯಗಳ ಭಾಷೆಯಲ್ಲಿ ಅರ್ಥವಾಗುವಂತೆ ಶಿಕ್ಷಣ ನೀಡಲು ಅಗತ್ಯ ಕ್ರಮ. 

11:23 AM

ಸಣ್ಣ ಉದ್ಯಮಗಳಿಗೆ ತುರ್ತು ಸಾಲ

ನಿರೀಕ್ಷೆಯಿಂತ ಮಧ್ಯಮ ವರ್ಗದ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ಅಗತ್ಯ ಆರ್ಥಿಕ ನೆರವು. ಆ ಮೂಲಕ ಅವುಗಳನ್ನು ಸಶಕ್ತಗೊಳಿಸಲು, ದೇಶ ಆರ್ಥಿಕ ನೆರವು ನೀಡಲು ಸಕಲ ರೀತಿಯಲ್ಲಿಯೂ ಸರಕಾರದಿಂದ ಸಹಾಯದಿಂದ. ಮಾರ್ಚ್‌ವರೆಗು ಕ್ರೆಡಿಟ್ ಗ್ಯಾರಂಟಿ ಸ್ಕೀಂ ವಿಸ್ತರಣೆ, ಕೌಶಾಲ್ಯಭಿವೃದ್ಧಿಗೆ ಆನ್‌ಲೈನ್ ತರಬೇತಿ. 

11:21 AM

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, 25,000 ಕಿ.ಮೀ ರಸ್ತೆ ನಿರ್ಮಾಣ

ಬಜೆಟ್ ಭಾಷಣದ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 25,000 ಕಿಮೀ ರಸ್ತೆ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದರು. ‘ಪಿಎಂ ಗತಿಶಕ್ತಿ’ಯಲ್ಲಿ ರಸ್ತೆ ಸಾರಿಗೆಗೂ ಒತ್ತು ನೀಡಲಾಗಿದೆ. ರೈತರಿಗೆ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ ಮಾಡಲಾಗುವುದು. 4 ಸ್ಥಳಗಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.

11:21 AM

ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು

ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳನ್ನು ಸಿದ್ಧಪಡಿಸಲಾಗುವುದು ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. ಇದರೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ 100 PM ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು.

11:20 AM

5 ನದಿ ಜೋಡಣೆಗೆ ಚಿಂತನೆ

ರೈತರು ತಮಗೆ ಅನುಕೂಲವಾಗುವಂತ ಹಣ್ಣು, ತರಕಾರಿ ಬೆಳೆಯಲು ಅನಕೂಲು ಮಾಡಿಕೊಡಲಾಗುವುದು. ಮಧ್ಯಮ ಕೈಗಾರಿಕೆಗಳಿಗೆ ಸಕಲ ಅನುವು, ಹೈಡ್ರೋ ಮತ್ತು ಸೋಲಾರ್ ಪವರ್‌ಗೆ 4300 ಕೋಟಿ ರೂ. ಅನುದಾನ. ಗಂಗಾನದಿಯ ತೀರದಲ್ಲಿ ಆರ್ಗಾನಿಕ್ ಫಾರ್ಮಿಂಗ್‌ಗೆ ಹೆಚ್ಚಿನ ಆದ್ಯತೆ. ಗೋದಾವರಿ-ಕೃಷ್ಣಾ ಸೇರಿ ಐದು ನದಿಗಳ ಜೋಡಣೆಗೆ ಆದ್ಯತೆ. 

11:19 AM

ಪಿಎಂ ಗತಿಶಕ್ತಿಗೆ ಒತ್ತು

ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದು ಆರ್ಥಿಕ ಬದಲಾವಣೆಯ ಸಾಧನವಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ.

11:18 AM

ಬಜೆಟ್‌ನಲ್ಲಿ 25 ವರ್ಷಗಳ ನೀಲ ನಕ್ಷೆ

ಸರ್ಕಾರದ ಆಶಯಗಳನ್ನು ಬಜೆಟ್‌ನಲ್ಲಿ ಬಿಂಬಿಸಲಾಗಿದೆ. ಮುಂದಿನ 25 ವರ್ಷಗಳ ನೀಲನಕ್ಷೆಯನ್ನು ಈ ಬಜೆಟ್‌ನಲ್ಲಿ ಸಿದ್ಧಪಡಿಸಲಾಗಿದೆ. ನಾವು LIC ಯ IPO ನೊಂದಿಗೆ ಶೀಘ್ರದಲ್ಲೇ ಬರಲಿದ್ದೇವೆ. ಈ ಬಜೆಟ್ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

11:16 AM

ದೇಸಿಯವಾಗಿ ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ

ರಸ್ತೆ ನಿರ್ಮಾಣಗಳಿಗಿಂತ ರೋಪ್ ವೇ ನಿರ್ಮಾಣ ಸುಲಭ. ಜನ ಹಾಗೂ ಗೂಡ್ಸ್ ಸಾಗಣೆಗೆ ರೋಪ್ ವೇ ಬಳಕೆ. 400 ಹೆಚ್ಚುವರಿ ರೈಲ್ವೆ ಆರಂಭ. ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು. ಆ ಮೂಲಕ ತೈಲ ಆಮದು ಕಡಿತಗೊಳಿಸಿ, ಭಾರತದಲ್ಲಿಯೇ ತೈಲ ತಯಾರಿಕೆಗೆ ಒತ್ತು. ಕೃಷಿ ವಿಶ್ವವಿದ್ಯಾಲಯದಲ್ಲಿ ಆಧುನಿಕ ಕೃಷಿ, ಆರ್ಗಾನಿಕ್ ಕೃಷಿ ಒತ್ತು ನೀಡುವಂಥ ಪಠ್ಯ ಹಾಗೂ ಸಂಶೋದನೆಗೆ ಅತ್ಯಗತ್ಯ ನೆರವು. 

11:14 AM

ಪಿಎಂ ಗತಿ ಶಕ್ತಿ ಮೂಲ ಸೌಕರ್ಯ ಯೋಜನೆ

ಮೂಲ ಸೌಕರ್ಯಕ್ಕೆ ತಂತ್ರಜ್ಞಾನದ ಬಳಕೆ, ರೈಲ್ವೆ ಸಂಪರ್ಕ ಸಾಧಿಸಲು ಹೆಚ್ಚಿನ ಒತ್ತು. ಒನ್ ಸ್ಟೇಷನ್ ಒನ್ ಕಾನ್ಸೆಪ್ಟ್ ನಿಂದ ಲೋಕಲ್ ಬ್ಯುಸಿನೆಸ್ ಸಪ್ಲೈ ವೃದ್ಧಿಗೆ ಒತ್ತು. ಜಾಗತಿಕ ತಂತ್ರಜ್ಞಾನ ಬಳಸಿ, 100 ಕಾರ್ಗೋ ರೈಲು ಯೋಜನೆಗೆ ಒತ್ತು. ಬಹು ಸಂಪರ್ಕ ಸೌಕರ್ಯಕ್ಕೆ ಒತ್ತು. ಭಾರತೀಯ ಪರಿಸ್ಥಿತಿಗೆ ತಕ್ಕಂತೆ ರೈಲ್ವೆ ಅಭಿವೃದ್ಧಿ. ಸಾಕಷ್ಟು ಹೊಸ ಸೇವೆಗಳು ಜಾರಿ. ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತೀಯ ರೈಲಿನ ಅಭಿೃದ್ಧಿ. ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ಮೊದಲ ಆದ್ಯತೆ. 

11:09 AM

ಪಿಎಂ ಗತಿ ಶಕ್ತಿ ಯೋಜನೆಗೆ ಆದ್ಯತೆ

ಮೇಕ್ ಇನ್ ಇಂಡಿಯಾಗೆ ಒತ್ತು. 6 ದಶಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ. ಏರಿ ಇಂಡಿಯಾ ವರ್ಗಾವಣೆ ಮುಕ್ತಾಯ. ಪಿಎಂ ಗತಿ ಶಕ್ತಿ ಯೋಜನೆಗೆ ಆದ್ಯತೆ. ಸಂಪರ್ಕ ವ್ಯವಸ್ಥೆ ಸುಧಾರಿಸಿ, ಮೂಲ ಸೌಕರ್ಯ ಹೆಚ್ಚಿಸುವ ಯೋಜನೆ. ತಂತ್ರಜ್ಞಾನ ಬಳಸಿ, ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು. 

11:05 AM

ಶೇ.9.2 ಪ್ರಗತಿ ನಿರೀಕ್ಷೆ

ಭಾರತ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಶಕ್ತವಾಗಿದೆ. ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಒತ್ತು. ಕೋವಿಡ್ ಸಂತ್ರಸ್ತರಿಗೆ ಸಕಲ ನೆರವು ನೀಡುವ ಭರವಸೆ ನೀಡಿದ ನಿರ್ಮಲಾ. ಈ ಬಜೆಟ್ ನಲ್ಲಿ ಭಾರತದ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಸಕಲ ಒತ್ತು. ಆತ್ಮ ನಿರ್ಭರ ಭಾರತಕ್ಕೆ ಒತ್ತು ನೀಡಿ, 50 ಲಕ್ಷ ಉದ್ಯೋಗ ಸೃಷ್ಟಿ. 

11:03 AM

ಬಜೆಟ್ ಮಂಡಿಸಲು ಆರಂಭಿಸಿದ ನಿರ್ಮಲಾ

ಕೊರೋನಾದಿಂದ ಕುಸಿದ ಆರ್ಥಿಕತೆ ಉತ್ತೇಜನ ನೀಡಲು ಒತ್ತು ನೀಡುವುದಾಗಿ ಆರಂಭದಲ್ಲಿಯೇ ಸುಳಿವು ನೀಡಿದ ನಿರ್ಮಲಾ. ಲಸಿಕೆ ಹಾಗೂ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಕ್ಕೆ ಒತ್ತು. ಕಠಿಣ ಪರಿಸ್ಥಿತಿಯನ್ನು ಎದುರಿಸಲು ದೇಶ ಸಿದ್ಧವಾಗಿದೆ ಎಂದ ವಿತ್ತ ಸಚಿವೆ. 

10:53 AM

ವೈರಾಲಜಿ ಕಡೆ ಹೆಚ್ಚಿನ ಒತ್ತು ಕೊಡಬೇಕಿದೆ: ಸಚಿವ ಸುಧಾಕರ್

ನಾವು ಹಲವು ನಿರೀಕ್ಷೆ ಇಟ್ಟುಕೊಂಡಿದ್ದೇವೆ.ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಒತ್ತು ನೀಡಿದ್ದರು.ಎಲ್ಲ ಬೆಳವಣಿಗೆಗೆ ಒತ್ತು ನೀಡ್ತಾರೆ
ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ಸಿಗಲಿದೆ. ಮಹಿಳೆ, ಯುವಜನತೆಗೂ ಒಳ್ಳೆಯ ಅಯವ್ಯಯ ಸಿಗಲಿದೆ.
ಪ್ರಧಾನಿ ಆಶಯಗಳಿಗೆ ಅನುಗುಣವಾಗಿ ಅಯವ್ಯಯ ಇರಲಿದೆ. 850 ಕೋಟಿ ರಾಜ್ಯಕ್ಕೆ ಬಿಡುಗಡೆ ಮಾಡಿದ್ದರು.
ವಿಶೇಷವಾಗಿ ಟೆಸ್ಟಿಂಗ್ ಗೆ ನೆರವು ಕೊಡಬೇಕಿದೆ. NHM ಯೋಜನೆಯಡಿ‌ ಹಣಕಾಸು ನೆರವನ್ನು ಶೇ.15 ರಿಂದ 20 ಪರ್ಸೆಂಟ್ ಹೆಚ್ಚು ಮಾಡಬೇಕು.

10:35 AM

Union Budget 2022: ರೈಲ್ವೇಗೆ ಭಾರೀ ಉಡುಗೊರೆ? ವಂದೇ ಭಾರತ್‌ ಜೊತೆ ಅನೇಕ ಘೋಷಣೆ ಸಾಧ್ಯತೆ

ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಮಂಡನೆಯ ದಿನ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2022 ಅನ್ನು ಮಂಡಿಸಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿ ಜನರ ಗಮನ 2022ರ ರೈಲು ಬಜೆಟ್‌ ಮೇಲೂ ಇರುತ್ತದೆ. ಈ ರೈಲು ಬಜೆಟ್‌ನಲ್ಲಿ ಹಲವು ಹೊಸ ಆರಂಭಗಳನ್ನು ನಿರೀಕ್ಷಿಸಲಾಗಿದೆ.

ಏನೇನು  ಸಿಗಬಹುದು?

10:33 AM

ನನಗೆ ಕೇಂದ್ರ ಬಜೆಟ್ ಮೇಲೆ ನಂಬಿಕೆ‌ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಕರ್ನಾಟಕಕ್ಕೆ ಕೇಂದ್ರ ಮಲತಾಯಿ ಧೋರಣೆ‌ ತೋರುತ್ತಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ.
ಸಾಕಷ್ಟು ನೀರಾವರಿ ಯೋಜನೆಗಳನ್ನು ನೆನೆಗುದಿಗೆ ಬಿದ್ದಿದೆ. ಈ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಬೇಕಿದೆ.
ಮೇಕೆದಾಟು, ಮಹದಾಯಿ, ಭದ್ರ ಮೇಲ್ದಂಡೆ ಯೋಜನೆ ಸೇರಿ ಅನೇಕ ಯೋಜನೆಗಳನ್ನ ಮಾಡಬೇಕಿದೆ.
ಕೇಂದ್ರ ಬಜೆಟ್ ಬಗ್ಗೆ ರಾಜ್ಯದ ಜನತೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರೈಲ್ವೆ ಯೋಜನೆ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಹೊತ್ತು ಕೊಡಬೇಕಿದೆ.
ಈ ಬಗ್ಗೆ ಹಲವು ವರ್ಷಗಳಿಂದ  ನಮ್ಮ ಬೇಡಿಕೆ ಇದು. ಆದ್ರೆ ಕೇಂದ್ರ ಸರ್ಕಾರ ನಡವಳಿಕೆ ಬಗ್ಗೆ ನನಗೆ ಈಗಲೂ ನಂಬಿಕೆ ಇಲ್ಲ.

10:25 AM

ಬಜೆಟ್ 2022 ಕ್ಯಾಬಿನೆಟ್ ಸಭೆಗೆ ಆಗಮಿಸುತ್ತಿದ್ದಾರೆ ಸಚಿವರು

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಗೃಹ ಸಚಿವ ಅಮಿತ್ ಶಾ ಸೇರಿ ಇತರೆ ಸಚಿವರು ಕ್ಯಾಬಿನೆಟ್ ಮೀಟಿಂಗ್‌ಗೆ ಆಗಮನ

Delhi: Defence Minister Rajnath Singh, Union Home Minister Amit Shah, Railways, Communications and IT Minister Ashwini Vaishnaw, Parliamentary Affairs Minister Pralhad Joshi, and others arrive at the Parliament for the union cabinet meeting ahead of the presenting of the pic.twitter.com/GtUEvt7gmo

— ANI (@ANI)

10:15 AM

ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಮೇಲೆ ರಾಜ್ಯಕ್ಕಿದೆ ಹೆಚ್ಚಿನ ನಿರೀಕ್ಷೆ

ಇದು ಕೋವಿಡ್ ನೆರಳಿನಲ್ಲಿ 3 ಬಜೆಟ್..
ಒಂದು ಒಳ್ಳೆಯ ಮುನ್ಸೂಚನೆಯುಳ್ಳ ಬಜೆಟ್ ಆಗುತ್ತೆ ಎಂಬ ಭರವಸೆ ಇದೆ..
ಆರ್ಥಿಕ‌ ಬೆಳವಣಿಗೆಗಳಿಗೆ ಪೂರಕವಾಗುವ ಬಜೆಟ್ ಆಗುವ ನಿರೀಕ್ಷೆ ಇದೆ ಎಂದ ಸಿಎಂ
ನ್ಯಾಷನಲ್ ಹೈವೇ, ಇತರ ರೈಲು ಪ್ರಾಜೆಕ್ಟ್, ಉದ್ಯಮಿಗಳಿಗೆ ಹೆಚ್ಚು ಒತ್ತು ಕೊಡುವುದು, ಕ್ರೀಡಾ ಅಭಿವೃದ್ಧಿ ಸೇರಿದಂತೆ ಹೆಚ್ಚಿನ ಅನುದಾನ ಕೊಡುವಂತದ್ದು  ಹಾಗೂ ಯೋಜನೆ ಗಳು ಬರುವ ನಿರೀಕ್ಷೆ ಇದೆ
ಇನ್ನೂಂದು ಗಂಟೆಗೆ ಎಲ್ಲ ಗೊತ್ತಾಗುತ್ತೆ..
ರಾಜ್ಯದಿಂದ ಆರಿಸಿ ಹೋಗಿರುವುದರಿಂದ ನಿರ್ಮಾಲ ಸೀತಾರಾಮನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ..
ಈ ಬಜೆಟ್ ಎಕಾನಮಿ ಪಿಕ್ ಅಪ್ ಆಗುವ ಲಕ್ಷಣ ಕಾಣ್ತಿದೆ.
ಮೂಲಭೂತ ಸೌಕರ್ಯಕ್ಕೂ ಪೂರಕವಾದ ಬಜೆಟ್ ಆಗಿರುತ್ತೆ..

10:06 AM

ನವ ಭಾರತ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಒತ್ತು, ಉದ್ಯೋಗ ಸೃಷ್ಟಿಗೆ ಆದ್ಯತೆ

ಕೊರೋನಾ ಗಲಾಟೆ ಮಧ್ಯೆಯೇ ಮತ್ತೊಂದು ಬಜೆಟ್ ಮಂಡಿಸುತ್ತಿದ್ದಾರೆ ನಿರ್ಮಲಾ. ಸಹಜವಾಗಿ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಎಲ್ಲಾ ಕ್ಷೇತ್ರಗಳು ಉತ್ತೇಜನಕ್ಕೆ ಏನು ಸಿಗಬಹುದು ಟಾನಿಕ್? ಕರ್ನಾಟಕಕ್ಕೆ ಸಿಗುತ್ತಾ ಆದ್ಯತೆ. 

9:59 AM

ಕೊರೋನಾ ಅಲೆ ಮಧ್ಯೆ ಮೂರನೇ ಅತೀ ದೊಡ್ಡ ಬಜೆಟ್ ಮಂಡನೆ

ಬಜೆಟ್ ಮಂಡಿಸಲು ರಾಷ್ಟ್ರಪತಿ ಒಪ್ಪಿಗೆ ಪಡೆದ ನಿರ್ಮಲಾ ಸೀತರಾಮನ್, ಸಂಸತ್ತಿಗೆ ಬಜೆಟ್ ಪ್ರತಿಗಳ ಆಗಮನ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ವಿತ್ತ ಸಚಿವೆ. ಬಜೆಟ್ ಮಂಡನೆಗೆ ಕ್ಷಣಗಣನೆ.

Delhi | A truck loaded with budget copies arrives at Parliament, ahead of the presentation of pic.twitter.com/3jqaoW5yBw

— ANI (@ANI)

9:54 AM

ಬಜೆಟ್ 2022 ಮಂಡಿಸೋ ಮುನ್ನ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ ಸೀತರಾಮನ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ವಿತ್ತ ರಾಜ್ಯ ಸಚಿವ ಡಾ.ಭಾಗವತ್ ಕಿಶನ್‌ರಾವ್ ಕರಡ್, ಪಂಕಜ್ ಜೌಧರಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರನ್ನು ಬಜೆಟ್ ಮಂಡನೆಗೂ ಮುನ್ನ ಭೇಟಿಯಾದರು.

Union Finance Minister Nirmala Sitharaman along with Ministers of State for Finance, Dr Bhagwat Kishanrao Karad, Shri Pankaj Chaudhary, and senior officials of the Ministry of Finance, called on President Ram Nath Kovind before presenting the Union Budget 2022-23. pic.twitter.com/7JNZt3rOPj

— ANI (@ANI)

6:51 PM IST:

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್(Nirmala Sitharaman), ಮಂಗಳವಾರ(ಫೆ.01)ದಂದು 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget) ಮಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೂ (Sports Sector) ತನ್ನ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಿದೆ. 2021-22ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ಹಣವನ್ನು ನೀಡಲಾಗಿದೆ. ಇದರ ಹೊರತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕ್ರೀಡೆ ಎನ್ನುವ ಶಬ್ದವನ್ನು ಬಳಸಿಲ್ಲ, ಇದರ ಬದಲಾಗಿ ಗೇಮಿಂಗ್ ಎನ್ನುವ ಪದ ಬಳಕೆ ಮಾಡಿದ್ದಾರೆ. 

ಕ್ರೀಡೆಗೂ ಹೆಚ್ಚು ಅನುದಾನ ಮೀಸಲಿಟ್ಟ ನಿರ್ಮಲಾ ಸೀತರಾಮನ್

5:55 PM IST:

ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಲ್ಲಿ ಮಾನಸಿಕ ಆರೋಗ್ಯ(mental health) ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ(Coronavirus) ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ(Union Budget 2022) ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್(NIMHANS) ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. 

Union Budget 2022 ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಜೊತೆ ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!

5:40 PM IST:

ಕಳೆದ ವರ್ಷ ಕೋವಿಡ್‌ ಕಾರಣದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಬೃಹತ್ ಬಂಡವಾಳ ವೆಚ್ಚವನ್ನು(Capital Expenditure) ಘೋಷಿಸಿತ್ತು. ಇಂದು (ಫೆ.1) ಮಂಡಿಸಿದ 2022ನೇ ಸಾಲಿನ ಬಜೆಟ್ ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ ಘೋಷಿಸಿದೆ.

Union Budget 2022: 2023ನೇ ಆರ್ಥಿಕ ಸಾಲಿಗೆ ದಾಖಲೆಯ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಣೆ

5:38 PM IST:

ಕೊರೋನಾ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಹೇಗಿತ್ತು? 

"

5:36 PM IST:

 2 ವರ್ಷ ಕೋವಿಡ್‌ನಿಂದ ಆರ್ಥಿಕತೆ ಹಿಂಜರಿತವಾಗಿತ್ತು. ಈ ಬಾರಿ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಉದ್ದೇಶವನ್ನಿಟ್ಟುಕೊಂಡು, ಬಜೆಟ್ ಮಂಡಿಸಲಾಗಿದೆ. ಇದೊಂದು ಆರ್ಥಿಕತೆಯನ್ನು ಉತ್ತೇಜಿಸುವ ಬಜೆಟ್ ಇದಾಗಿದೆ. ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು. 

"

5:13 PM IST:

ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡಿಸಿದ್ದಾರೆ. ನಾನು ಬಜೆಟ್ ಮೇಲೆ ಬಹಳ ನಿರೀಕ್ಷೆ ಇರಲಿಲ್ಲ. ರೈತರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು.ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ರು.ಆದರೆ ಅವರ ನಿರೀಕ್ಷೆ ಈಡೇರಿಲ್ಲ. ಕಳೆದ ವರ್ಷ ಸುಮಾರು 34 ಲಕ್ಷ ಕೋಟಿ ರೂ ಬಜೆಟ್ ಮಂಡಿಸಿದ್ರು.ಈ ವರ್ಷ 39.45ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ 4 ಲಕ್ಷದ 61ಸಾವಿರ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ವರ್ಷದ 11ಲಕ್ಷ 87ಸಾವಿರದ 180ಕೋಟಿ ರೂ ಸಾಲ ಮಾಡಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಮೇಲೆ ಇದ್ದ ಸಾಲ 135ಲಕ್ಷ 87ಸಾವಿರ ಕೋಟಿ ರೂ. ಮಹಮೋಹನ್ ಸಿಂಗ್ ಕಾಲದಲ್ಲಿ ಇದ್ದಂತ ಸಾಲ 53ಲಕ್ಷ 11ಸಾವಿರ ಕೋಟಿ. 8ವರ್ಷದ ಅವಧಿಯಲ್ಲಿ‌ ಬಿಜೆಪಿ 93ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ.9,40,651ಕೋಟಿ ವರ್ಷಕ್ಕೆ ಬಡ್ಡಿ ಆಗುತ್ತೆ. ಬಜೆಟ್ ‌ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ.

ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ.

5:08 PM IST:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್(Union Budget) 2022-23 ಅನ್ನು ಮಂಡಿಸುತ್ತಿರುವಾಗ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಅಧ್ಯಾಯಗಳಲ್ಲಿ 12ನೆಯದಾದ ಶಾಂತಿಪರ್ವ(Book of Peace)ದಲ್ಲಿ ಬರುವ ಪದ್ಯವೊಂದನ್ನು ಪ್ರಸ್ತಾಪಿಸಿದರು. ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ  ಮಹಾಭಾರತವನ್ನು ಉಲ್ಲೇಖಿಸಿ, ಶಾಂತಿ ಪರ್ವದ ಪದ್ಯವೊಂದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳಿದರು. 

ನಿರ್ಮಲಾ ಹೇಳಿದ ಶ್ಲೋಕದ ಅರ್ಥವೇನು?

4:50 PM IST:

ಈ ಬಜೆಟ್‌ನಿಂದ ಮುಂದಿನ 25 ವರ್ಷಗಳ ಕಾಲ ಭಾರತಕ್ಕೆ ಅಡಿಪಾಯ ಸಿಗಲಿದೆ ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಪ್ರಗತಿ ನಿರೀಕ್ಷಿಸಲಾಗಿದೆ.ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.9.2ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ರೈಲ್ವೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆಗಳನ್ನು ಮಾಡಲಾಗಿದೆ.

ಗಂಗೆಯ ದಡದಲ್ಲಿ ಕೃಷಿ, Union Budget 2022ರ 10 ದೊಡ್ಡ ವಿಚಾರಗಳು!

4:49 PM IST:

ಕೇಂದ್ರ ಹಣಕಾಸು ಸಚಿವಾಲಯದ ಬಿಡುಗಡೆಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಮತ್ತು ಫಿನ್‌ಟೆಕ್ (Fintech) ಆವಿಷ್ಕಾರಗಳು ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆದಿವೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಗ್ರಾಹಕ ಸ್ನೇಹಿ ರೀತಿಯಲ್ಲಿ ದೇಶದ ಮೂಲೆ ಮೂಲೆಗಳನ್ನು ತಲುಪಲು ಸರ್ಕಾರವು ನಿರಂತರವಾಗಿ ಅವುಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು. 

 ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್!

4:45 PM IST:

 ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದ್ದು ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. ಬಜೆಟ್‌ನಲ್ಲಿ ಗಮನ ಸೆಳೆದ ವಿಚಾರಗಳಲ್ಲಿ ಇ-ಪಾಸ್‌ಪೋರ್ಟ್‌ (E-Passport) ಕೂಡ ಒಂದು. ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದಾರೆ. 

ಇ-ಪಾಸ್‌ಪೋರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

4:43 PM IST:

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಕೇಂದ್ರ ಬಜೆಟ್(Union Budget 2022) ಮಂಡಿಸಿದ್ದಾರೆ. ಬಜೆಟ್ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಷೇರು ಸೂಚ್ಯಂಕ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಬಜೆಟ್ ಕುರಿತು ಭಾಷಣ ಮಾಡಿದ್ದಾರೆ. ಈ ಬಜೆಟ್ ಅತ್ಯುತ್ತಮ ಬಜೆಟ್ ಆಗಿದ್ದು, ಮುಂದಿನ 100 ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟು ಮಂಡನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!

4:28 PM IST:

ಕೇಂದ್ರ ಬಜೆಟ್(Union Budget 2022) ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರ್ಥಿಕ ತಜ್ಞರು ಒಟ್ಟಾರೆ ಉತ್ತಮ ಬಜೆಟ್ ಎಂದಿದ್ದರೆ, ರಾಹುಲ್ ಗಾಂಧಿ(Rahul Gandhi) ಸೇರಿದಂತೆ ವಿಪಕ್ಷ ಶೂನ್ಯ ಬಜೆಟ್ ಎಂದಿದೆ. ತಜ್ಞರ ಪ್ರಕಾರ ಭಾರತದಲ್ಲಿ ಮೂಲಸೌಕರ್ಯ(infrastructure) ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಲ್ಲಿ ಹೆದ್ದಾರಿ ಅಭಿವೃದ್ದಿ(Highway) ಕೂಡ ಸೇರಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರ 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಿಸಲು ಮುಂದಾಗಿದೆ.

20,000 ಕೋಟಿ ರೂ ವೆಚ್ಚದಲ್ಲಿ 25,000 ಕಿ.ಮೀ ಹೆದ್ದಾರಿ ವಿಸ್ತರಣೆ!

3:53 PM IST:

ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ   60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಇಂದು ತಾವು ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿಯೂ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. 2014 ರಿಂದಲೂ ಯುವಕರು ಮತ್ತು ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮುಂದಿರುವ ಗುರಿಯಾಗಿದೆ. ಬಡತನದಿಂದ ಮೇಲೆತ್ತಲು ಈ ಉದ್ಯೋಗಗಳು ಅನುಕೂಲವಾಗಲಿದೆ ಎಂದಿದ್ದಾರೆ. 

 Aatmanirbhar Bharatನಡಿ 16 ಲಕ್ಷ ಉದ್ಯೋಗ, 5 ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

3:49 PM IST:

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ತಮ್ಮ ನಾಲ್ಕನೇ ಬಜೆಟ್ ಭಾಷಣದಲ್ಲಿ ಕೆಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಆ ಮೂಲಕ ಈ ಬಾರಿಯ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯರ  ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸೋ ಜೊತೆಗೆ ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಿದೆ ಕೂಡ. 

ಮಹಿಳಾ ಸಬಲೀಕರಣಕ್ಕೆ ಯಾವೆಲ್ಲ ಕಾರ್ಯಕ್ರಮಗಳು ಘೋಷಣೆಯಾಗಿವೆ?

3:26 PM IST:

ನರೇಂದ್ರ ಮೋದಿ (Narendra Modi)ನೇತೃತ್ವದ ಸರ್ಕಾರದ ಪ್ರಮುಖ ಭರವಸೆಗಳಲ್ಲಿ ದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವುದು ಪ್ರಮುಖವಾಗಿತ್ತು. ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  (central government) ಈವರೆಗೂ ದೊಡ್ಡ ಮಟ್ಟದ ಶ್ರಮವಹಿಸಿದ್ದು, ಕೇಂದ್ರ ಬಜೆಟ್ ನಲ್ಲಿ "ಹರ್ ಘರ್, ನಳ್ ಸೇ ಜಲ್" (ಪ್ರತಿ ಮನೆಗೂ, ನಲ್ಲಿಯಿಂದ ನೀರು) ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಹೇಳಿದ್ದಾರೆ.

ಮನೆ ಮನೆಗೂ ನೀರು ನೀಡಲು ಜಲ ಯೋಜನೆ

3:22 PM IST:

ರಾಜ್ಯಕ್ಕೆ ಯೋಜನೆಗಳ ಸುರಿಮಳೆ ಬಜೆಟ್ ಕೊಡಿಸಿದ್ದಾರೆ. ಇದು ಕೇಂದ್ರ ಬಜೆಟ್ ಅಲ್ಲ ಇದು ಕೋವಿಡ್ ಬಜೆಟ್. ಕರ್ನಾಟಕಕ್ಕೆ ಕೊಡುಗೆ ಶೂನ್ಯ.. ಬಜೆಟ್‌ನಲ್ಲಿ ಕರ್ನಾಟಕದ ಹೆಸರೇ ಇಲ್ಲ. ವರ್ಷ ಎರಡು ಕೋಟಿ ಉದ್ಯೋಗ ಕೊಡ್ತೇವೆ ಎಂದವರು ಈಗ 60 ಲಕ್ಷ ಉದ್ಯೋಗದ ಮಾತಾಡಿದ್ದಾರೆ. ದೇಶದ ಯುವಕರಿಗೆ ಅನ್ಯಾಯ ಮಾಡಿದ್ದಾರೆ..

- ಕೇಂದ್ರ ಬಜೆಟ್ ಬಗ್ಗೆ ಡಿಕೆಶಿ ವ್ಯಂಗ್ಯ

3:19 PM IST:

ಇದು ದೂರದೃಷ್ಟಿ ಇರುವ ಬಜೆಟ್. ಜಗತ್ತು ಸಂಕಷ್ಟದಲ್ಲಿದ್ದಾಗಲೂ ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಆಟಲ್ ಕನಸಿಗೆ ಆದ್ಯತೆ ಕೊಟ್ಟವರು ಮೋದಿ. ರಾಷ್ಟ್ರದಲ್ಲಿ 25 ಸಾವಿರ ಕಿಲೋಮೀಟರ್ ಹೆದ್ದಾರೆ ಘೋಷಣೆಯಾಗಿದೆ. ಒಂದೇ ಭಾರತ್ ಯೋಜನೆಯ ಮೂಲಕ 400 ಹೊಎ ರೈಲುಗಳಿಗೆ ಆದ್ಯತೆ. ಆಟಲ್ ಕನಸು ನದಿ ಜೋಡಣೆಗೆ ಮೋದಿಯಿಂದ ನನಸು.

- ನಳೀನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಸಂಸದ

5:42 PM IST: ಕೇಂದ್ರ ಬಜೆಟ್ 2022ರ (Union Budget 2022) ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದಾರೆ. ಆತ್ಮನಿರ್ಭರ್‌ಗೆ ಹೆಚ್ಚು ಒತ್ತು ನೀಡಿದ್ದು, 25 ವರ್ಷಗಳ ಬ್ಲೂಪ್ರಿಂಟ್  ತಯಾರು ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಆಂತರಿಕವಾಗಿ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ.

ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

3:12 PM IST:

ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟ್‌ (Union Budget 2022) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಇಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ ಬಜೆಟ್ ನೀಡಿದ್ದಾರೆ. ಬಜೆಟ್‌ನ ಗಾತ್ರ, ಯಾರ್ಯಾರಿಗೆ ಏನೇನು ಸಿಕ್ಕಿದೆ..? ಬಜೆಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ. 

"

3:06 PM IST:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ತೆರಿಗೆದಾರರು ನಿರಾಶೆಗೊಂಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಜೆಟ್‌ನಲ್ಲಿ ಏನು ದುಬಾರಿಯಾಗಿದೆ ಮತ್ತು ಯಾವ ವಸ್ತುಗಳಿಗೆ ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಜನರಲ್ಲಿತ್ತು. ಬಜೆಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿವೆ.

Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

3:00 PM IST:

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ. ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದ್ದು, ಇದು ಅತಿ ವೇಗದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದೆ. ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. 

ಹಳ್ಳಿಯ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ

2:15 PM IST:

ಕೃಷಿ ಕಾಯ್ದೆಗಳ ವಿರುದ್ಧವಾಗಿ ವರ್ಷಗಳ ಕಾಲ ನಡೆದ ರೈತ ಹೋರಾಟದಿಂದ ಕುಂದಿದ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central government) ಕೆಲ ಪ್ರಮುಖ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ. 2021-22 ರ ರಾಬಿ ಋತುವಿನಲ್ಲಿ ಸರ್ಕಾರದ ಬೃಹತ್ ಗೋಧಿ (wheat) ಸಂಗ್ರಹಣೆ ಮತ್ತು 2021-22 ರ ಖಾರಿಫ್ ಋತುವಿನಲ್ಲಿ ಭತ್ತದ (paddy) ಅಂದಾಜು ಸಂಗ್ರಹಣೆಯು 1208 ಮೆಟ್ರಿಕ್ ಟನ್ ಆಗಲಿದ್ದು, 1.63 ಲಕ್ಷ ರೈತರಿಂದ ಸರ್ಕಾರ ಗೋಧಿ ಹಾಗೂ ಭತ್ತದ ಖರೀದಿ ಮಾಡಲಿದೆ. ಅದರೊಂದಿಗೆ ಕೆನ್-ಬೆಟ್ವಾ ಲಿಂಕ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಮೊತ್ತದ ಹಣವನ್ನು ಮೀಸಲಿಟ್ಟಿದೆ. ಕೆನ್-ಬೆಟ್ವಾದೊಂದಿಗೆ ಕಾವೇರಿ ಸೇರಿದಂತೆ ದಕ್ಷಿಣದ ನದಿಗಳ ಜೋಡಿಣೆಯ ಪ್ರಸ್ತಾಪಕ್ಕೆ ಕರ್ನಾಟಕದ ರಾಜಕಾರಣಿಗಳು ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2:12 PM IST: ಕೇಂದ್ರದ ಬಜೆಟ್(Union Budget 2022) ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್(Automobile Sector) ಕ್ಷೇತ್ರಕ್ಕೆ ನಿರಾಸೆಯಾಗಿದೆ. ಕೊರೋನಾ, ಲಾಕ್‌ಡೌನ್, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ಸೊರಗಿ ಹೋಗಿದ್ದ ಭಾರತದ ಆಟೋ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೆಲ ಕೊಡುಗೆ ನಿರೀಕ್ಷಿಸಿತ್ತು. ಆದರೆ ಎಲೆಕ್ಟ್ರಿಕ್ ವಾಹನ(Electric Vehicle) ಸಂಬಂಧ ಕೆಲ ಘೋಷಣೆ ಹೊರತು ಪಡಿಸಿ ಇನ್ನುಳಿದ ವಿಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಈ  ಮೂಲಕ ಆಟೋ ಕ್ಷೇತ್ರದ ನಿರೀಕ್ಷೆ ತಕ್ಕ ಬಜೆಟ್ ಇರಲಿಲ್ಲ ಅನ್ನೋದು ಸತ್ಯ.

Union Budget 2022 ಸೊರಗಿರುವ ಆಟೋ ಕ್ಷೇತ್ರಕ್ಕೆ ನಿರಾಸೆ, ಬ್ಯಾಟರಿ ಸ್ವ್ಯಾಪ್ ನೀತಿಗೆ ತೃಪ್ತಿ!

2:01 PM IST:

ಡಿಜಿಟಲ್ ಕಲಿಕೆ, ಕೌಶಲ್ಯ, ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್: ಅಶ್ವತ್ಥನಾರಾಯಣ ಸಂತಸ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ. ಈ ಉಪಕ್ರಮಗಳು ಅತ್ಯಂತ ಸಮಯೋಚಿತ ಮತ್ತು ಅರ್ಥಪೂರ್ಣವಾಗಿವೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ `ಒಂದು ತರಗತಿ, ಒಂದು ಟಿವಿ ಚಾನೆಲ್’ ಘೋಷಣೆಯಡಿ 200 ಟಿವಿ ವಾಹಿನಿಗಳಿಗೆ ಅವಕಾಶ ನೀಡಿರುವುದು ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ಕ್ರಮವಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ವಿಶ್ವ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಹುದು. ಇದು ಎನ್ಇಪಿ ಆಶಯಗಳಿಗೆ ತಕ್ಕಂತಿದೆ.

ಜತೆಗೆ, ಕೌಶಲ್ಯಗಳ ಪೂರೈಕೆ ಮತ್ತು ಅವುಗಳ ಸಮರ್ಪಕ ಜಾರಿಗೆ ದೇಶ್ ಇ-ಪೋರ್ಟಲ್ ಸ್ಥಾಪನೆ, ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ, ಎವಿಜಿಸಿ ಕಾರ್ಯಪಡೆ ಸ್ಥಾಪನೆ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗೆ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹವಾಗಿದೆ. ಇದಲ್ಲದೆ, ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಕ್ರಿಪ್ಟೋಕರೆನ್ಸಿ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿರುವುದಲ್ಲದೆ, ಡೀಪ್ ಟೆಕ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆಗಳನ್ನು ಘೋಷಿಸಿರುವುದರಿಂದ ಜನರ ಜೀವನ ಗುಣಮಟ್ಟ ಸುಧಾರಿಸುತ್ತದೆ. ಇದಕ್ಕೆ ಪೂರಕವಾಗಿ `ಸುಗಮ ಜೀವನ’ (ಈಸ್ ಆಫ್ ಲಿವಿಂಗ್) ಸಂಸ್ಕೃತಿಯನ್ನು ರೂಪಿಸಲು ಹೆಜ್ಜೆ ಇಡಲಾಗಿದೆ.

1:56 PM IST:

ಇದು ದೂರ ದೃಷ್ಟಿಯುಳ್ಳ ಬಜೆಟ್. ಬಿಜೆಪಿ ಇದನ್ನು ಸ್ವಾಗತಿಸುತ್ತದೆ. ಮೂಲ ಸೌಕರ್ಯ, ಹೈವೇಗಳು, 400 ರೈಲು ಯೋಜನೆಗಳು ಘೋಷಣೆಯಾಗಿವೆ. ಇದರಿಂದ ಕೋಟ್ಯಂತರ ಉದ್ಯೋಗಗಳು ಸಿಗಲಿವೆ. ಕ್ರಿಪ್ಟೋ ಕರೆನ್ಸಿ ವಿಚಾರಕ್ಕೆ ಈ ಬಜೆಟ್‌ನಲ್ಲಿ ಸ್ಪಷ್ಟತೆ ಸಿಕ್ಕಿದೆ. ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಸಹಕಾರಿ ಸಂಘಗಳ ಮೇಲೆ ಇದ್ದ ಸರ್‌ಚಾರ್ಜ್ ಇಳಿಸಿದೆ. ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಿದೆ. ರೈತರು, ಗ್ರಾಮೀಣ ಭಾಗ, ಸ್ಟಾಟ್೯ ಅಪ್ ಸೇರಿ ಎಲ್ಲಾ ವಿಭಾಗಳಿಗೂ ಬಜೆಟ್ ಸ್ಪರ್ಶ ಸಿಕ್ಕಿದೆ. ಮೋದಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಒಂದು ಸ್ಕೀಂ ಅಂತಾ ಘೋಷಣೆ ಮಾಡಲ್ಲ. ಆದರೆ ಮೂಲಸೌರ್ಯ ಹೆಸರಲ್ಲಿ ಎಲ್ಲಾ ರಾಜ್ಯಗಳ ಯೋಜನೆಗಳಿಗೆ ಹಣ ಸಿಗುತ್ತೆ. ಕ್ರಿಪ್ಟೋ ಕರೆನ್ಸಿ ಕಾನೂನು ಬಾಹಿರ ಅಂತ ಕೇಂದ್ರ ಸರ್ಕಾರ ಹೇಳಿಲ್ಲ. ಬದಲಿಗೆ RBI ತರುವ ಕ್ರಿಪ್ಟೋ ಕರೆನ್ಸಿ ಮೂಲಕ ಡಿಜಿಟಲ್ ಹಣ ಹೂಡಿಕೆ ಮಾಡಬಹುದು. ನದಿ ಜೋಡಣೆ ವಿಚಾರವಾಗಿ ಹೇಳುವುದಾದರೆ ಯಾವುದೇ ಅಸಾಧ್ಯವೋ ಅದು ಸಾಧ್ಯ ಮಾಡುವುದೇ ಮೋದಿ ಸರ್ಕಾರದ ಆಶಯ.
- ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಸಂಸದ

1:51 PM IST:

5G ಸೇವೆ  ಪ್ರಸ್ತುತ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. 2022-23 ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗವುದು ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ತಿಳಿಸಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು ಎಂದು ಸೀತಾರಾಮನ್‌ ತಿಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ 4Gಗಿಂತ ನೂರು ಪಟ್ಟು ವೇಗದ ಇಂಟರ್‌ನೆಟ್‌  ಶೀಘ್ರದಲ್ಲೇ ಲಭ್ಯವಾಗಲಿದೆ.

ದೇಶದ ಮೂಲೆಯ ಹಳ್ಳಿಯೊಂದ ಮನೆಗೂ ಇಂಟರ್ನೆಟ್ ಸೇವೆ ಒದಗಿಸಲು ಸರಕಾರ ಬದ್ಧ

1:47 PM IST:

ಮಧ್ಯಮ ವರ್ಗದವರಿಗೆ, ನೌಕರರಿಗೆ, ಬಡವರಿಗೆ, ಯುವಕರಿಗೆ, ರೈತರಿಗೆ, ಮಧ್ಯಮ ವರ್ಗದ ಜನರಿಗೆ, ದೀನ ದಲಿತರಿಗೆ ಈ ಬಜೆಟ್‌ನಿಂದ ಸಿಕ್ಕಿದ್ದು ಬರೀ ಶೂನ್ಯ. ಇದು ಮೋದಿ ಸರಕಾರದ ಶೂನ್ಯ ಬಜೆಟ್: ರಾಹುಲ್ ಗಾಂಧಿ
 
M0di G0vernment’s Zer0 Sum Budget!

Nothing for
- Salaried class
- Middle class
- The poor & deprived
- Youth
- Farmers
- MSMEs

— Rahul Gandhi (@RahulGandhi)

1:44 PM IST:

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು 10% ರಿಂದ 14% ಕ್ಕೆ ಹೆಚ್ಚಿಸಲಾಗುವುದು ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ತರಲು ಸಹಾಯ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ಕಡಿತಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹೇಗೆ ಲಾಭವಾಗಲಿದೆ ಸರಕಾರಿ ನೌಕರರಿಗೆ?

1:42 PM IST:

ಬಜೆಟ್ ಕುರಿತು ಸಂಸದ ಡಿ ಕೆ ಸುರೇಶ್ ನವದೆಹಲಿಯಲ್ಲಿ ನೀಡಿದ ಹೇಳಿಕೆ ಇದು..

ಇದು ಬಜೆಟ್ ಅಲ್ಲ. ಬದಲಿಗೆ ಸಂಸದರನ್ನು ಕುರಿಸಿಕೊಂಡು ಒಂದು ರಿಪೋರ್ಟ್ ಹೇಳಿದಂತೆ ಇದೆ. ಇದು ಭರವಸೆ ಮೂಡಿಸದ ಬಜೆಟ್. ಇದರಲ್ಲಿ ಉಪ್ಪು,ಹುಳಿ, ಖಾರ ಏನೂ ಇಲ್ಲ. ಕೋವಿಡ್‌ನಿಂದ ಜನರು ತೊಂದರಗೆ ಒಳಗಾಗಿದ್ದರು. ಆದರೆ ಬಡವರಿಗೆ, ಮಧ್ಯಮ ವರ್ಗಕ್ಕೆ ಏನೂ ಮಾಡಿಲ್ಲ. ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ಕೊಡ್ತಾರಂತೆ! ಈ ಬಜೆಟ್ ಚರ್ಚೆ ಮಾಡಲೂ ಕೂಡ ಏನೂ ಇಲ್ಲ. ನಿರುದ್ಯೋಗವನ್ನು ಪಿಎಂ ಒಪ್ಪಿಕೊಂಡಂತೆ ಆಗಿದೆ. ಇದರಲ್ಲಿ ಬರೀ ಸುಳ್ಳು ಭರವಸೆಗಳ ಬಜೆಟ್. ಹಣ ಇಡದೆ ಬರೀ ದಿಕ್ಸೂಚಿ ತೋರಿಸಿದ್ದಾರೆ. 39  ಲಕ್ಷ ಕೋಟೆ ಬಜೆಟ್ ಅಂತಾರೆ, ಆದರೆ ತೆರಿಗೆಗಳಿಂದ 24 ಲಕ್ಷ ಕೋಟಿ ಬರುತ್ತೆ. ಪುನಾ ಭಾರತೀಯರನ್ನು ಸಾಲಗಾರರನ್ನಾಗಿ ಮಾಡಿದೆ. ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆ, ರೈಲು ಯೋಜನೆಗಳಿಗೆ ಹಣ ಸಿಕ್ಕಿಲ್ಲ. ಮಹದಾಯಿ ವಿಚಾರವಾಗಿ ಚರ್ಚೆಯಾಗಿಲ್ಲ.
 
1:36 PM IST:

ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಇ-ಪಾಸ್ ಪೋರ್ಟ್ ನೀಡುವ ಮಾನ್ಯ ಪ್ರಧಾನಿ ಶ್ರೀ @narendramodi ಸರ್ಕಾರದ ನಿರ್ಧಾರದಿಂದ, ನಾಗರಿಕರು ಕಚೇರಿಗಳಿಗೆ ಅಲೆದಾಡದೆ ಸುಲಭವಾಗಿ ಪಾಸ್ ಪೋರ್ಟ್ ಸೇವೆ ಪಡೆಯಲು ಸಾಧ್ಯವಾಗಲಿದೆ. ತಂತ್ರಜ್ಞಾನದ ಸದ್ಬಳಕೆಗೆ ಇದು ಮಾದರಿ.

1:35 PM IST:

ದೇಶದ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ(Union Budget 2022) ಕೈಗೆಟುಕುವ ದರದಲ್ಲಿ ಮನೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಬರೋಬ್ಬರಿ 48,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಪ್ರಧಾನ ಮಂತ್ರಿ ಅವಾಸ್( PMAY) ಯೋಜನೆಯಡಿ 80 ಲಕ್ಷ ಮನೆ(House) ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.

Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ಗೃಹ!

1:20 PM IST:

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ.‌ ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದೆ.  ಪ್ರಸ್ತುತ ಡಿಜಿಟಲ್‌ ಕರೆನ್ಸಿ ಹಾಗೈ ಡಿಜಿಟಲ್‌ ಸ್ವತ್ತುಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಬೆನ್ನಲ್ಲೇ 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (Rserve Bank Of India) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೇ ಯಾವುದೇ  ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ

ಏನಿದು ಲೆಕ್ಕಚಾರ?

1:13 PM IST:

ಬಹಳ ನಿರಾಸಾದಾಯಕ ಬಜೆಟ್. ಬಜಟ್ ಮೇಲೆ ನಂಬಿಕೆಯೇ ಹೋಗಿದೆ. 25 ಜನ ಬಿಜೆಪಿ ಎಂಪಿಗಳು ಕರ್ನಾಟಕದಿಂದ ಇದ್ದಾರೆ, ಏನು ತಂದರು ರಾಜ್ಯಕ್ಕೆ? ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ಫೇಲ್ ಬಜೆಟ್. ಬಹಳಷ್ಟು ನಿರೀಕ್ಷೆಗಳು ಇದ್ದವು. ಕಾವೇರಿ- ಮೇಕೆದಾಟು ವಿಚಾರಕ್ಕೆ ಬಜೆಟ್‌ನಲ್ಲಿ ನಿರೀಕ್ಷೆ ಮಾಡಲಾಗಿತ್ತು.

ನದಿ ಜೋಡಣೆ ವಿಚಾರ: ಆದರೆ ಬಜೆಟ್ ನಲ್ಲಿ ರಾಜ್ಯಗಳ ಸಹಮತ ಇದ್ದರೇ ಮಾತ್ರ ಜೋಡೆ ಎಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ? ಇದು ಕಳಪೆ ಬಜೆಟ್. ಕರ್ನಾಟಕ ಕ್ಕೆ ಏನೂ ಕೊಟ್ಟಿಲ್ಲ. 
ಡಿಜಿಟಲ್ ಕರೆನ್ಸಿ ವಿಚಾರ: ಯಾವುದಕ್ಕೆ ಏನು? ಎಷ್ಟು ತೆರಿಗೆ ಹಾಕಿದ್ದಾರೆ ಅನ್ನೋದು ಸರಿಯಾಗಿ ಮಾಹಿತಿ ಕೊಟ್ಟಿಲ್ಲ

- ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ

1:11 PM IST:

ಭಾರತ ಸರ್ಕಾರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ 2022-23 ಸಾಲಿನ ಆಯವ್ಯಯವು ಕೋವಿಡ್-19 ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ. ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತರ್ಹ ವಿಷಯ.

ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, 2023 ರ ವರ್ಷವನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯ” ವರ್ಷವೆಂದು ಘೋಷಣೆ ಮಾಡಿದ್ದು ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ.

1:15 PM IST:

ನಿರ್ಮಲಾ ಜನಪ್ರಿಯ ಬಜೆಟ್ ಮಂಡಿಸಿಲ್ಲ. ಆದರೆ, ಜನಪರ ಬಜೆಟ್ ಇದು ಎನ್ನುತ್ತಾರೆ ಆರ್ಥಿಕ ತಜ್ಞರು. ಶ್ರೀ ಸಾಮಾನ್ಯನಿಗೂ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಸಿಗಲಿಲ್ಲ ಎಂಬ ನೋವು. 80ಸಿ ಅಡಿಯಲ್ಲಾದರೂ ತೆರಿಗೆ ಉಳಿಸಿ ಹೆಚ್ಚುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ಸಿಕ್ಕಿದ್ದು ಏನೂ ಇಲ್ಲ. ವೀಕ್ಷಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್.
 
12:52 PM IST:

ನದಿ ಜೋಡಣೆ ಇದು ಐತಿಹಾಸಿಕ ಯೋಜನೆ. ಇತಿಹಾಸ ಪುಟದಲ್ಲಿ ಇರಲಿದೆ. ರೈತರ ಬದುಕನ್ನು ಹಸನಾಗಿಸುವ ಯೋಜನೆ ಇದು.ಈ ಯೋಜನೆ ತಂದಿರೋದಕ್ಕೆ ಪ್ರಧಾನಿ ಮೋದಿಗೆ ಕೃತಜ್ಞತೆ. ಎರಡು ಲಕ್ಷ ಅಂಗನವಾಡಿ ಮೇಲ್ದರ್ಜೆಗೆ. ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು. ಎಸ್‌ಟಿ ಎಸ್‌ಸಿ ಬಡ ರೈತರಿಗೆ ನೀರಾವರಿ ಸೌಲಭ್ಯ. ಇಡಿ ಕುಟುಂಬಕ್ಕೆ ಉದ್ಯೋಗ ಸೃಷ್ಟಿ. 400 ಹೊಸ ರೈಲು ಮಾರ್ಗ. ಅದರಲ್ಲಿ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ. 80 ಲಕ್ಷ ಮನೆ ನಿರ್ಮಾಣಕ್ಕೆ ರೂಪುರೇಷೆ: ಕಾರಜೋಳ

ಮುಂದಿನ 25 ವರ್ಷದ ಯೋಜನೆ ದೃಷ್ಟಿಯಲ್ಲಿ ಇರಿಸಿಕೊಂಡು ಬಜೇಟ್ ಮಾಡಿದ್ದಾರೆ. ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ. ಐವತ್ತು ವರ್ಷಗಳ ತನಕ ಬಡ್ಡಿ ರಹಿತ ಸಾಲ ಕೊಡುವ ಕೇಂದ್ರದ ಘೋಷಣೆ ಸ್ವಾಗತವೆಂದ ಸಿಸಿ ಪಾಟೀಲ್. 

12:48 PM IST:

ಶ್ರೀಸಾಮಾನ್ಯನ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಇಲ್ಲ. 34 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ನಿರ್ಮಲಾ ಸೀತರಾಮನ್. ಆದರೆ, ದೇಶದ ಆರ್ಥಿಕ ಸುಧಾರಣೆಗೆ ಬೇಕಾಗುವ ಟಾನಿಕ್ ಒದಗಿಸುವಂತೆ ಮಂಡನೆಯಾದ ಬಜೆಟ್. 

12:44 PM IST:

ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ. ಮೊಬೈಲ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ. ವೈದ್ಯಕೀಯ ಉಪಕರಣಗಳು, ಔಷಧಗಳ ಅಬಕಾರಿ ಸುಂಕ ಇಳಿಕೆ. ಗುಜರಿ ಸ್ಟೀಲ್‌ಗೆ ಇನ್ನೂ ಒಂದು ಸುಂಕ ವಿನಾಯಿತಿ. ತೈಲ ಬೆಲೆ ಮತ್ತಷ್ಟು ಏರುವ ನಿರೀಕ್ಷೆ. ಅನ್‌ಬ್ಲೆಂಡಂಡ್ ತೈಲದ ಮೇಲೆ 2 ರೂ. ಸುಂಕ ಹೆಚ್ಚಳ. ಅನೇಕ ಅಂದಾಜುಗಳ ಹುಸಿಗೊಳಿಸುವಂತೆ ವಿಭಿನ್ನ ಬಜೆಟ್ ಮಂಡಿಸಿದ ಕೇಂದ್ರ ಸರಕಾರ. 

12:38 PM IST:

ಆರ್ಥಿಕತೆಗೆ ಟಾನಿಕ್ ನೀಡುವ ಬಜೆಟ್. ಜನಪ್ರಿಯ ಘೋಷಣೆಗಳಿಲ್ಲ. ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿರುವ ಪಂಜ ರಾಜ್ಯಗಳಿಗೆ ಸಿಕ್ಕಿದ್ದು ಏನೂ ಇಲ್ಲ. ಎಲ್ಲರಿಗೂ ಒಂದೇ ಯೋಜನೆ. ಮುಂದಿನ 25 ವರ್ಷಗಳಲ್ಲಿ ದೇಶವನ್ನು ಯಾವ ರೀತಿ ಕಟ್ಟಬೇಕು ಎಂಬ ನೀಲಿ ನಕ್ಷೆಯನ್ನು ಇಟ್ಟುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್. 

12:33 PM IST:

ಕಚ್ಚಾ ವಜ್ರದ ಮೇಲಿನ ಆಮದು ಸುಂಕ ಶೇ.5 ಇಳಿಕೆ.  ಎಲೆಕ್ಷನ್ ಮರೆತು ದೂರದೃಷ್ಟಿಯ ಬಜೆಟ್ ಮಂಡಿದಿಸಿ ವಿತ್ತ ಸಚಿವೆ. ಆದಾಯ ತೆರಿಗೆಯಲ್ಲಿ ಇಲ್ಲ ಬದಲಾವಣೆ. ಪಂಚರಾಜ್ಯಗಳಿಗೆ ಪಂಚಾಮೃತ ಸಿಕ್ಕಲಿಲ್ಲ. 

12:26 PM IST:

*ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ 30% ತೆರಿಗೆ ವಿಧಿಸಲಾಗುತ್ತದೆ.
* ಅಂತಹ ಆಸ್ತಿಯ ವರ್ಗಾವಣೆಯಿಂದ ಉಂಟಾಗುವ ನಷ್ಟವನ್ನು ಯಾವುದೇ ಇತರೆ ಆದಾಯದ ವಿರುದ್ಧ ಹೊಂದಿಸಲಾಗುವುದಿಲ್ಲ.
* ಅಂತಹ ಸ್ವತ್ತುಗಳ ಉಡುಗೊರೆಯನ್ನು ಸ್ವೀಕರಿಸುವವರ ಕೈಯಿಂದ ತೆರಿಗೆ ವಿಧಿಸಲಾಗುತ್ತದೆ.

12:24 PM IST:

ಐಟಿ ದಾಳಿ ವೇಳೆ ಸಿಕ್ಕಾಕೊಳ್ಳೋರಿಗೆ ಬಿಗ್ ಶಾಕ್. ದಾಳಿ ವೇಳೆ ಸಿಕ್ಕ ಸಂಪತ್ತಿಗೆ ತೆರಿಗೆ ಕಟ್ಟೋದು ಅನಿವಾರ್ಯ. ಐಟಿ ದಾಳಿ ವೇಳೆಡ ಸೀಜ್ ಮಾಡಲಾದ ಆಸ್ತಿಯನ್ನು ನಷ್ಟವೆಂದು ಪರಿಗಣಿಸುವಂತಿಲ್ಲ.
ಜಿಎಸ್‌ಟಿ ಸಂಗ್ರಹದಲ್ಲಿ ಹಳೆಯ ದಾಖಲೆಗಳು ಬ್ರೇಕ್. ಈ ಜನವರಿಯಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹ. ಜನವರಿ ಒಂದೇ ತಿಂಗಳಲ್ಲಿ 1.40 ಲಕ್ಷ ಕೋಟಿ ತೆರಿಗೆ ಸಂಗ್ರಹದ ದಾಖಲೆಗೆ. ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಜಾರಿ. 

The gross GST collections for the month of January 2022 are Rs 1,40,986 crores which is the highest since the inception of GST: Finance Minister Nirmala Sitharaman pic.twitter.com/s5P7030KEw

— ANI (@ANI)

12:20 PM IST:

ಡಿಜಿಟಲ್ ಆಸ್ತಿ ಮೇಲೆ ಶೇ. 30ರಷ್ಟು ತೆರಿಗೆ.ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೇಲೆ ತೆರಿಗೆ!
ಯಾವುದೇ ವರ್ಚುವಲ್‌ ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.ಕ್ರಿಪ್ಟೋ ಕರೆನ್ಸಿ ವರ್ಗಾವಣೆಗೆ ಶೇ.1ರಷ್ಟು ಡಿಡಿಎಸ್ ಕಡಿತ. ಘೋಷಿಸದ ಆಸ್ತಿ ಸಿಕ್ಕರೆ ದೊಡ್ಡ ಮೊತ್ತದ ದಂಡ. ಕಪ್ಪು ಹಣ ಹೊಂದಿದವರಿಗೆ ಮತ್ತಷ್ಟು ಕಾಡಲಿದೆ ಐಟಿ ದಾಳಿಯ ಭಯ.

12:17 PM IST:

ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ, 2023ರ ಮಾರ್ಚ್‌ವರೆಗೂ ತೆರಿಗೆ ವಿನಾಯ್ತಿ. ಟ್ಯಾಕ್ಸ್ ಪೇಯರ್ಸ್ ಮತ್ತು ಡಿಪಾರ್ಟ್‌ಮೆಂಟ್ ನಡುವೆ ಇರುವ ವ್ಯಾಜ್ಯ ಇತ್ಯರ್ಥಕ್ಕೆ ಅಗತ್ಯ ನೆರವು. 

Both Centre and States govt employees' tax deduction limit to be increased from 10% to 14% to help the social security benefits of state govt employees and bring them at par with the Central govt employees: FM Nirmala Sitharaman pic.twitter.com/qPUvX2JZzd

— ANI (@ANI)

12:15 PM IST:

* ಸಹಕಾರ ಸಂಘಗಳ ತೆರಿಗೆ ಶೇ. 18ರಿಂದ ಶೇ. 15ಕ್ಕೆ ಇಳಿಕೆ
* ಸಹಕಾರಿ ಸಂಘಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ
* ಐಟಿ ರಿಟರ್ನ್ಸ್ ಸಲ್ಲಿಕೆಗೂ ಹೊಸ ನೀತಿ ಜಾರಿ
* ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ
* ಪೋಷಕರು ಬದುಕಿರುವಾಗಲೇ ವಿಮೆ ಹಣ ಪಡೆಯುವ ಅವಕಾಶ
* ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ರಿಲೀಫ್

3:27 PM IST:

ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ. ಕೇಂದ್ರ, ರಾಜ್ಯ ಸರಕಾರ ನೌಕರರಿಗೆ ತೆರಿಗೆ ವಿನಾಯಿತಿ. ಕೇಂದ್ರ-ರಾಜ್ಯ ಸರಕಾರದ ನೌಕರರಿಗೆ ಏಕ ರೂಪದ ತೆರಿಗೆ. 

To provide an opportunity to correct an error, taxpayers can now file an updated return within 2 years from the relevant assessment year: FM Nirmala Sitharaman pic.twitter.com/E73lNaXpGT

— ANI (@ANI)

12:10 PM IST:

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಮರುಆಯೋಜಿಸಲಾಗೋದು. ಯುವಜನರ ಕೌಶಲಾಭಿವೃದ್ಧಿಗೆ ಡಿಜಿಟಲ್ ದೇಶ್ ಇ-ಪೋರ್ಟಲ್ ಪ್ರಾರಂಭಿಸಲಾಗೋದು. ತಮ್ಮ ಕೌಶಲ್ಯಕ್ಕೆ ಸರಿಹೊಂದೋ ಉದ್ಯೋಗ ಪಡೆಯಲು ಇದು ನೆರವು ನೀಡಲಿದೆ. ಕೋವಿಡ್-19 ಕಾರಣದಿಂದ ಗ್ರಾಮೀಣ ಭಾಗದ ಅದ್ರಲ್ಲೂ ಬುಡಕಟ್ಟು ಜನಾಂಗದ ಮಕ್ಕಳು ಎರಡು ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಥ ಮಕ್ಕಳಿಗಾಗಿ 'ಒಂದು ವರ್ಗ ಒಂದು ಟಿವಿ ಚಾನೆಲ್' ಅಡಿಯಲ್ಲಿ ಟಿವಿ ಚಾನೆಲ್ ಗಳನ್ನು 12ರಿಂದ 200 ಕ್ಕೆ ಹೆಚ್ಚಿಸಲಾಗೋದು. 1-12ತರಗತಿಗಳ ತನಕದ ಮಕ್ಕಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಸಪ್ಲಿಮೆಂಟರಿ ಶಿಕ್ಷಣ ನೀಡಲಾಗೋದು. ISTE ಮಾನದಂಡಗಳಿಗೆ ಅನುಗುಣವಾಗಿ ವಿಶ್ವ ದರ್ಜೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲಾಗೋದು.

12:10 PM IST:

ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯವು ಯುವಕರಿಗೆ ಉದ್ಯೋಗವನ್ನು ಒದಗಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆ ಮತ್ತು ಜಾಗತಿಕ ಬೇಡಿಕೆಗಾಗಿ ನಮ್ಮ ದೇಶೀಯ ಸಾಮರ್ಥ್ಯವನ್ನು ನಿರ್ಮಿಸಲು ಎಲ್ಲಾ ಪಾಲುದಾರರೊಂದಿಗೆ AVGC ಪ್ರಚಾರ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು. ಪಾವತಿ ವಿಳಂಬವನ್ನು ಕಡಿಮೆ ಮಾಡಲು, ಆನ್‌ಲೈನ್ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಮತ್ತು ಎಲ್ಲಾ ಕೇಂದ್ರ ಸಚಿವಾಲಯಗಳು ಇದನ್ನು ಬಳಸುತ್ತವೆ. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕ ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ರೈತ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲಾಗುವುದು.

12:09 PM IST:

ತೆರಿಗೆದಾರರಿಗೆ ಧನ್ಯವಾದ ಸಲ್ಲಿಸಿದ ನಿರ್ಮಲಾ. ಮಹಾಭಾರತದ ಶಾಂತಿ ಪರ್ವ ಅಧ್ಯಾಯದಲ್ಲಿ ಹೇಳಿದ ಕೋಟ್‌ನೊಂದಿಗೆ ತೆರಿಗೆದಾರರು ಕಾಯುತ್ತಿದ್ದ ಸುದ್ದಿ ನೀಡಿದ ವಿತ್ತ ಸಚಿವೆ. ಅಭಿವೃದ್ಧಿ ಪಡಿಸಿದ ರಿಟರ್ನ್ಸ್ ಫೈಲ್ ವ್ಯವಸ್ಥೆ ಜಾರಿ. ನೇರ ತರಿಗೆ ಪ್ರಸ್ತಾಪಿಸಿದ ನಿರ್ಮಲಾ. ಆದಾಯ ತೆರಿಗೆ ತಪ್ಪು ಸರಿ ಪಿಡಿಸಿಕೊಳ್ಳಲು ಅವಕಾಶ. ವಾಲಂಟರಿ ಕಂಪ್ಲೆಂಟ್ ಸಲ್ಲಿಸಲು ಅವಕಾಶ. 2 ವರ್ಷದೊಳಗೆ ದಂಡ ರಹಿತಿ ಟ್ಯಾಕ್ಸ್ ಕಟ್ಟಲು ಅನುವು. 

12:04 PM IST:

ರಾಜ್ಯ ಸರಕಾರಗಳಿಗೆ ಹೆಚ್ಚುವರಿ ಸಾಲ ಸೌಲಭ್ಯ. 1 ಲಕ್ಷ ಕೋಟಿ ರೂ. ಸಾಲ ಕೇಂದ್ರದಿಂದ ನೀಡಿಕೆ. ಬಡ್ಡಿ ರಹಿತ ಸಾಲದಿಂದ ಅನೇಕ ಹೊಸ ಯೋಜನೆಗಳಿಗೆ ಆದ್ಯತೆ. 

12:03 PM IST:

2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (RBI) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ

Digital rupee to be issued using blockchain and other technologies; to be issued by RBI starting 2022-23. This will give a big boost to the economy: FM Nirmala Sitharaman pic.twitter.com/tUdj2DoZCR

— ANI (@ANI)

12:02 PM IST:

ಅಂದಾಜು 44,605 ಕೋಟಿ ವೆಚ್ಚದಲ್ಲಿ ಕೆನ್ ಬೆಟ್ವಾ ಲಿಂಕ್ ಮಾಡುವ ಯೋಜನೆಯ ಅನುಷ್ಠಾನ. 9.0 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್. 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ. ಇದಕ್ಕಾಗಿ ಬಜೆಟ್ ನಲ್ಲಿ 1400 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

Implementation of Ken Betwa Linking project at est. cost of Rs. 44,605 Cr. to be taken up with irrigation benefits to 9.0 lakh hectare farmland, drinking water to 62 lakh people, 103 MW hydropower. 27 MW solar power generation

Rs 1400 crores allocated in 2022-23: FM pic.twitter.com/GMb7tqunjS

— ANI (@ANI)

12:01 PM IST:

ಡಿಜಟಲ್ ಕರೆನ್ಸಿಗೆ ಒತ್ತು. ರಿಸರ್ವ್ ಬ್ಯಾಂಕ್ ಇಂಡಿಯಾದಲ್ಲಿ ಈ ಹಣ ಬಿಡುಗಡೆ. ಉದ್ಯೋಗ ಹೂಡಿಕೆಗೆ ಕೇಂದ್ರ ಸರಕಾರದಿಂದ ಬಂಡವಾಳ ಹೂಡಿಕೆ. 

11:57 AM IST:

*ಸಣ್ಣ ಹಾಗೂ ಮಧ್ಯಮ ವಲಯದ ಆತಿಥ್ಯ ಸೇವೆಗಳು ಕೋವಿಡ್-19 ಕಾರಣದಿಂದ ಸಂಕಷ್ಟಕ್ಕೆ ಸಿಲುಕಿವೆ. ಈ ಉದ್ಯಮಗಳು ಚೇತರಿಕೆ ಕಂಡು ಮತ್ತೆ ಹಳಿಗೆ ಮರಳಲು ಸರ್ಕಾರ ಇಸಿಜಿಎಲ್ ಸೇವೆಯನ್ನು(ECGL service) 2023ರ ಮಾರ್ಚ್ ತನಕ  ವಿಸ್ತರಣೆ ಮಾಡಲು ನಿರ್ಧರಿಸಿದೆ. ಇದರಡಿಯಲ್ಲಿ ನೀಡೋ ಮೊತ್ತದಲ್ಲಿ ಕೂಡ ಹೆಚ್ಚಳ ಮಾಡಲಾಗಿದ್ದು,  50,000ರೂ. ವಿತರಿಸಲು ಸರ್ಕಾರ ನಿರ್ಧರಿಸಿದೆ.

11:56 AM IST:

* ಪಿಪಿಪಿ ಮಾದರಿಯಲ್ಲಿ ರೈಲ್ವೆ ಅಭಿವೃದ್ಧಿ
* ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲಾಗುವುದು
* 15 ಲಕ್ಷ ಹೊಸ ಉದ್ಯೋಗ ಸೃಷ್ಟಿ
* ಸರ್ಕಾರಕ್ಕೆ ಆನ್‌ಲೈನ್ ಇ-ಬಿಲ್ ವ್ಯವಸ್ಥೆ

11:55 AM IST:

ರಕ್ಷಣಾ ಸಂಶೋಧನೆಗೆ ಆದ್ಯತೆ

68% of the capital procurement budget for Defence to be earmarked for domestic industry to promote Aatmanirbharta and reduce dependence on imports of defence equipment. This is up from the 58% last fiscal: FM Nirmala Sitharaman pic.twitter.com/pQJm3ymlQE

— ANI (@ANI)

11:53 AM IST:

ಈಶಾನ್ಯ ಭಾಗದ ಅಭಿವೃದ್ಧಿಗೆ ಹೊಸ ಯೋಜನೆ ಆರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದನ್ನು PM ಡೆವಲಪ್‌ಮೆಂಟ್ ಇನಿಶಿಯೇಟಿವ್ ಎಂದು ಹೆಸರಿಸಲಾಗಿದೆ. ಅದೇ ಸಮಯದಲ್ಲಿ, ಉತ್ತರ ಗಡಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಗಾಗಿ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

11:53 AM IST:

ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವರು ಘೋಷಿಸಿದರು. ಈ ಯೋಜನೆಯಡಿಯಲ್ಲಿ, ಖಾತರಿ ಕವರ್ ಅನ್ನು 50 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಒಟ್ಟು ಕವರ್ ಈಗ 5 ಲಕ್ಷ ಕೋಟಿಗಳಾಗಿರುತ್ತದೆ.
ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು

11:52 AM IST:

ನಬಾರ್ಡ್ ಮೂಲಕ ಕೃಷಿಗೆ ಸಂಬಂಧಿಸಿದ ಸ್ಟಾರ್ಟಪ್‌ಗಳಿಗೆ ಸಹಾಯ
ನಬಾರ್ಡ್ ಮೂಲಕ ಕೃಷಿ ಕ್ಷೇತ್ರದ ಗ್ರಾಮೀಣ ಮತ್ತು ಕೃಷಿ ಸ್ಟಾರ್ಟಪ್‌ಗಳಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಈ ಸ್ಟಾರ್ಟಪ್‌ಗಳು ಎಫ್‌ಪಿಒಗಳನ್ನು ಬೆಂಬಲಿಸುತ್ತವೆ ಮತ್ತು ರೈತರಿಗೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತವೆ.

11:52 AM IST:

2022ರಲ್ಲಿ 5G ತರಾಂಗಾಂತರ ಹರಾಜಿನ ಮೂಲಕ 2022-23 ರ ಹೊತ್ತಿಗೆ 5G ಸೇವೆ ಆರಂಭ. 5G ಸಂಬಂಧಿತ ವಸ್ತುಗಳ ಉತ್ಪಾದನೆಗೆ ಹಾಗೂ ಮೂಲ ಸೌಕರ್ಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್ ನೀಡುವ ಗುರಿಯೊಂದಿಗೆ ಆಪ್ಟಿಕಲ್‌ ಫೈಬರ್‌ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್, ಇಂಟರ್‌ ನೆಟ್‌ ಸೇವೆ ನೀಡಲಾಗುವುದು.

11:51 AM IST:

ರಕ್ಷಣಾ ಸಾಮಾಗ್ರಿ ಖರೀದಿಯಲ್ಲಿ ಶೇ.68 ಸ್ಥಳೀಯ ಖರೀದಿಗೆ ಆದ್ಯತೆ, ದೇಶೀಯ ಸಂಶೋಧನೆಗೆ ಒತ್ತು. ರಕ್ಷಣಾ ಇಲಾಕೆಯ ಅನುದಾನದಲ್ಲಿ ಶೇ.25ರಷ್ಟು ಸಂಶೋಧನೆಗೆ ಮೀಸಲು. ಶಸ್ತ್ರಾಸ್ತ್ರಗಳ ಆಮದು ಕಡಿತಕ್ಕೆ ಸಕಲ ತಯಾರಿ. ತಂತ್ರಜ್ಞಾನ ಆಧುನೀಕರಣಕ್ಕೆ ಸಹಕಾರ.

11:49 AM IST:

ಉದ್ಯಮ, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್‌ಗಳ ಪೋರ್ಟಲ್‌ಗಳು ಪರಸ್ಪರ ಸಂಬಂಧ ಹೊಂದಿದ್ದು, ಇದು ಅವರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಈ ಪೋರ್ಟಲ್‌ಗಳು G-C, B-C & B-B ಸೇವೆಯನ್ನು ಒದಗಿಸುತ್ತವೆ. ಇದು ಸಾಲ ಸೌಲಭ್ಯ, ಹೆಚ್ಚುತ್ತಿರುವ ಉದ್ಯಮಶೀಲತೆಯ ಅವಕಾಶಗಳನ್ನು ಒಳಗೊಂಡಿರುತ್ತದೆ.

11:48 AM IST:

ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಯೋಜನೆ ಬಿಡುಗಡೆ, ಹರ್ ಘರ್ ನಲ್ ಯೋಜನೆ 5.5 ಕೋಟಿ ಜನರಿಗೆ ನಲ್ಲಿ ಸೌಲಭ್ಯವನ್ನು ಒದಗಿಸುತ್ತದೆ. ರೈತ ಡ್ರೋನ್‌ಗಳನ್ನು ಬಳಸಲಾಗುವುದು. ಇದರೊಂದಿಗೆ ಬೆಳೆ ಮೌಲ್ಯಮಾಪನ, ಭೂ ದಾಖಲೆ, ಕ್ರಿಮಿನಾಶಕ ಸಿಂಪಡಣೆ ಕಾರ್ಯ ನಡೆಯಲಿದೆ.ಅಂಚೆ ಕಚೇರಿಗಳನ್ನು ಬ್ಯಾಂಕ್‌ಗಳೊಂದಿಗೆ ಜೋಡಿಸಲಾಗುವುದು, ಇ-ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದು. ಚಿಪ್-ಇ ಪಾಸ್‌ಪೋರ್ಟ್‌ಗಳನ್ನು ಮಾಡಲಾಗುವುದು. ಭೂ ದಾಖಲೆಗಳ ಡಿಜಿಟಲೀಕರಣ ನಡೆಯಲಿದೆ.75 ಜಿಲ್ಲೆಗಳಲ್ಲಿ ಇ-ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲಾಗುವುದು.

11:48 AM IST:

ಬ್ಯಾಟರಿಗಳು ಹಾಗೂ ಇಂಧನದ ವಿಚಾರಗಳಲ್ಲಿ ಹಿಂದಿನ ಬಜೆಟ್ ಭಾಷಣಗಳಲ್ಲಿ ಹೆಚ್ಚಿನ ಕ್ರಮದ ಸೂಚನೆ ನೀಡಲಾಗಿತ್ತು. ಬ್ಯಾಟರಿ ವಿನಿಮಯ ನೀತಿ, ಇಂಟರ್‌  ಆಪರೇಬಿಲಿಟಿ ಮಾನದಂಡಗಳನ್ನು ಸರ್ಕಾರ ಈಗಾಗಲೇ ಪ್ರಕಟಿಸಿದೆ. ಇವಿನ್ನೂ ಆರಂಭಿಕ ಹಂತದಲ್ಲಿದೆ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆ.

11:47 AM IST:

ರೈತರಿಗೆ ಡಿಜಿಟಲ್ ಸೇವೆ ನೀಡಲು ಆದ್ಯತೆ. ನೀರಾವರಿ-ಕುಡಿಯುವ ನೀರಿನ ಸೌಲಭ್ಯ ಹೆಚ್ಚಳಕ್ಕೆ ಒತ್ತು. 2023 ರ ವರ್ಷವನ್ನು ಒರಟಾದ ಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. 5 ನದಿಗಳನ್ನು ಪರಸ್ಪರ ಜೋಡಿಸಲಾಗುವುದು. ಸಾವಯವ ಕೃಷಿಗೆ ಸರ್ಕಾರದ ಒತ್ತು. ಏರ್ ಇಂಡಿಯಾ ಬಂಡವಾಳ ಹೂಡಿಕೆ ಪೂರ್ಣಗೊಳ್ಳಲಿದೆ. ಶುದ್ಧ ಇಂಧನ ನಮ್ಮ ಆದ್ಯತೆಯಾಗಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

11:46 AM IST:

*ಮುಂದಿನ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರ ಶೇ.9.2.
*ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ  ಮೂಲಸೌಕರ್ಯ ಬಲವರ್ಧನೆ, ಲಸಿಕಾ ಕಾರ್ಯಕ್ರಮವನ್ನು ವೇಗವಾಗಿ ಅನುಷ್ಠಾನಗೊಳಿಸಲಾಗೋದು.
*ಪಿಎಂ ಗತಿಶಕ್ತಿ ಆರ್ಥಿಕತೆಯನ್ನು ಬಲವರ್ಧನೆಗೆ ನೆರವು ನೀಡಲಿದೆ. ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
*2022-23ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿ.ಮೀ. ವಿಸ್ತರಿಸಲಾಗೋದು. 
*ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪರ್ವತ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ 'ಪರ್ವತಮಾಲ'.

11:46 AM IST:

5ಜಿ ಇಂಟರ್ನೆಟ್ ನೀಡಿಕೆಯಿಂದ ಉತ್ಪಾದನೆಯ ಹೆಚ್ಚಳ ನಿರೀಕ್ಷೆ. 2022ರಲ್ಲಿ 5ಜಿ ತರಂಗಾಂತರ ಹರಾಜು. ಎಲ್ಲಾ ಹಳ್ಳಿಗಳಲ್ಲೂ ಸೂಕ್ತ ಇಂಟರ್ನೆಟ್ ಸಂಪರ್ಕ ಒದಗಿಸಲು ಸರಕಾರ ಬದ್ಧ. ಭಾರತ್ ನೆಟ್ ಯೋಜನೆಯಡಿ ಪ್ರತೀ ಹಳ್ಳಿಯ, ಪ್ರತೀ ಮನೆಗೂ ಇಂಟರ್ನೆಟ್ ಸೌಲಭ್ಯ, ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೇವೆ. 

11:44 AM IST:

ಎಲ್ಲ ಕಾಂಟ್ರಾಕ್ಟ್ ದಾಖಲೆಗಳು ಮತ್ತು ಕ್ಲೈಮ್ ಗಳನ್ನು ಆನ್‌ಲೈನ್‌ನಲ್ಲಿ ಇನ್ನು ಸಬ್ ಮಿಟ್ ಆಗಬೇಕು. ಆ ಮೂಲಕ ಪೇಪರ್ ಬಳಕೆಗೆ ಕಡಿವಾಣ ಹಾಕಲಿದೆ. ಬಿಲ್ ಮುಂಡಿಸಿದ 10 ದಿನಗಳಲ್ಲಿಯೇ ಗುತ್ತಿಗೆದಾರರಿಗೆ ಶೇ75ರಷ್ಟು ಹಣ ಪಾವತಿ. ಇನ್ಳೂರೆನ್ಸ್ ರೆಗ್ಯುಲರೇಟರ್‌ನಿಂದ ಶೂರಿಟಿ ಬಾಂಡ್ ವಿತರಣಗೆ ಸೂಕ್ತ ವ್ಯವಸ್ಥೆ, 

11:42 AM IST:

75ನೇ ಸ್ವಾತಂತ್ರ್ಯೋತ್ಸವ ಬೆನಲ್ಲೇ 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕಿಂಗ್‌ ಯುನಿಟ್ಸ್‌ ಆರಂಭ ಮಾಡುವ ಮೂಲಕ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪ್ರೋತ್ಸಾಹ . ಜತೆಗೆ 1.4ಲಕ್ಷ ಪೋಸ್ಟ್‌ ಆಫಿಸ್‌ಗಳ ಸ್ವರೂಪ ಬದಲಿಸಿ ಎಟಿಎಂ, ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ ನೀಡಲಾಗುವುದು. ಪೋಸ್ಟ್‌ ಆಫೀಸ್‌ಗಳಿಗೆ ಬ್ಯಾಂಕ್‌ ಸ್ವರೂಪ ನೀಡುವ ಮೂಲಕ ಹಣ ವರ್ಗಾಯಿಸುವ ಸೇವೆ ನೀಡಲಾಗುವುದು.

11:40 AM IST:

ಹಣ್ಣು ಮತ್ತು ತರಕಾರಿ ಉತ್ಪಾದನೆ ಉತ್ತೇಜನಕ್ಕೆ ನೀತಿ ರೂಪಿಸಲಾಗುವುದು. ಖಾದ್ಯ ತೈಲಗಳ ಬೆಲೆ ಏರಿಕೆ ನಡುವೆ ಎಣ್ಣೆ ಬೀಜಗಳ ಉತ್ಪಾದನೆಯನ್ನು ಉತ್ತೇಜಿಸುವುದಾಗಿ ಘೋಷಣೆ. ಗೋಧಿ ಸೇರಿ ರಾಬಿ ಬೆಳೆಗಳ ಖರೀದಿಯನ್ನೂ ಸರ್ಕಾರ ಹೆಚ್ಚಿಸಲಿದೆ. ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಪ್ರವಾಸೋದ್ಯಮ, ಹೋಟೆಲ್‌ಗಳು ಸೇರಿದಂತೆ ಆತಿಥ್ಯ ಕ್ಷೇತ್ರಕ್ಕೆ ECLGS ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೂ ಸಾಲ ಖಾತರಿ ಯೋಜನೆಯನ್ನು ವಿಸ್ತರಣೆ. 

11:39 AM IST:

ರೈತರಿಗೆ ಇದರಿಂದ ಸಹಕಾರಿಯಾಗಲಿದೆ. ಮೂಲಸೌಕರ್ಯಕ್ಕೆ ಬಜೆಟ್‌ನಲ್ಲಿ ಭರಪೂರ ಕೊಡುಗೆ. ಜನರ ಜೀವನ ಗುಣಮಟ್ಟಕ್ಕಾಗಿ ಕಾರ್ಯಕ್ರಮ . 112 ಜಿಲ್ಲೆಗಳಲ್ಲಿ ಆರೋಗ್ಯ, ಪೌಷ್ಟಿಕಾಂಶ, ಸೇರಿದಂತೆ ಜೀವನ ಗುಣಮಟ್ಟಕ್ಕೆ ಆದ್ಯತೆ
ಇ ಪಾಸ್ ಪೋರ್ಟ್‌ಗೆ ಬಜೆಟ್ ನಲ್ಲಿ ತೀರ್ಮಾನ. ಡಿಜಿಟಲ್ ಪೇಮೆಂಟ್, ಡಿಜಿಟಲ್ ಬ್ಯಾಂಕಿಂಗ್ ಗೆ ಹೆಚ್ಚಿನ ಒತ್ತು.

11:38 AM IST:

ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದವು 9.2% ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ. IMF ಮತ್ತು ವಿಶ್ವಬ್ಯಾಂಕ್‌ನಂತಹ ಅಂತರಾಷ್ಟ್ರೀಯ ಏಜೆನ್ಸಿಗಳು ಭಾರತದ GDP ಬೆಳವಣಿಗೆಯ ದರವು ವಿಶ್ವದಲ್ಲೇ ಅತ್ಯಂತ ವೇಗವಾಗಿರುತ್ತದೆ ಎಂದು ಅಂದಾಜಿಸಿದೆ.

11:38 AM IST:

ವಿದೇಶ ಪ್ರಯಾಣ ಸರಳೀಕರಣಗೊಳಿಸಲು ಇ-ಪಾಸ್ಪೋರ್ಟ್ ಸರಳೀಕರಣ, ನಗರ ಅಭಿವೃದ್ಧಿಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಒತ್ತು. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಳ. ಲೈಸೆನ್ಸ್ ರಾಜ್ ಕಿತ್ತು ಹಾಕಲು ಕ್ರಮ, ಅನಾವಶ್ಯಕ ಕಾನೂನುಗಳ ರದ್ದು. 

11:35 AM IST:

 2022-23ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಅವರಿಗಾಗಿ 48 ಸಾವಿರ ಕೋಟಿ ನಿಧಿ ಇಡಲಾಗಿದೆ. ಈ ಮನೆಗಳ ಮೂಲ ಸೌಕರ್ಯಕ್ಕೆ ಸಕಲ ಸಹಕಾರ. 

11:34 AM IST:

ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆ ಯೋಜನೆ ಕೆನ್‌- ಬೇಟ್ವಾ ಅಡಿಯಲ್ಲಿ  44,605 ಕೋಟಿ ರೂ. ವೆಚ್ಚದಲ್ಲಿ 9.05 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. 65 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

11:34 AM IST:

ಡಿಜಟಲ್ ಬ್ಯಾಂಕಿಂಗ್‌ಗೆ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ಸ್. ಪೋಸ್ಟ ಆಫೀಸ್‌ಗಳಿಗೆ ಬ್ಯಾಂಕಿಂಗ್ ಸ್ವರೂಪ, ಎಟಿಎಂ ರೀತಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಒದಗಿಸಲು ನಿರ್ಧಾರ, 1.4 ಪೋಸ್ಟ್ ಆಫೀಸ್‌ಗಳ ಸ್ವರೂಪ ಬದಲು. 

11:32 AM IST:

ರಾಜ್ಯ ಸರಕಾರಗಳೊಂದಿಗೆ ದಾಖಲೀಕರಣ ಸರಳೀಕರಣಕ್ಕೆ ಒತ್ತು. 2023ರೊಳಗೆ 18 ಲಕ್ಷ ಮನೆ ನಿರ್ಮಿಸುವ ಗುರಿ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಪಿಎಂ ಗತಿ ಶಕ್ತಿ ಯೋಜನೆಯ ವಿಸ್ತರಣೆ. ಪಿಎಂ ಆವಾಜ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಎಲ್ಲರ ಮನೆಗೂ ದೂರದರ್ಶನದ ಸಂಪರ್ಕ. ಆ ಮೂಲಕ ಮಕ್ಕಳು ಶಿಕ್ಷಣ ಪಡೆಯಲು ಅನುಕೂರವಾಗುವಂತೆ ನೆರವು. 2 ವರ್ಷಗಳಲ್ಲಿ 8.7 ಕೋಟಿ ಮನೆಗಳಿಗೆ ನೀರು ಪೂರೈಸುವ ಗುರು. 

11:29 AM IST:

ರಾಜ್ಯ ಸರ್ಕಾರಗಳು ತಮ್ಮ ಪಠ್ಯಕ್ರ ಮದಲ್ಲಿ ರೂಪಿಸುವ ಕೋರ್ಸ್ ಅನ್ನು ಸೇರಿಸಲು ಪ್ರೋತ್ಸಾಹಿಸಲಾಗುವುದು. ಗಂಗಾ ಕಾರಿಡಾರ್ ಸುತ್ತಮುತ್ತ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು. ಅದೇ ಸಮಯದಲ್ಲಿ, ಸಣ್ಣ ಕೈಗಾರಿಕೆಗಳಿಗೆ (MSME) ಕ್ರೆಡಿಟ್ ಗ್ಯಾರಂಟಿ ಯೋಜನೆಯಿಂದ ಸಹಾಯವನ್ನು ನೀಡಲಾಗುತ್ತದೆ.

11:28 AM IST:

MSP ನಲ್ಲಿ ರೈತರಿಂದ ದಾಖಲೆಗಳನ್ನು ಖರೀದಿಸಲಾಗುತ್ತದೆ
ರೈತರಿಗೆ ಎಂಎಸ್‌ಪಿ ದರದಲ್ಲಿ ರೈತರಿಂದ ದಾಖಲೆಯ ಖರೀದಿ ಮಾಡಲಾಗುವುದು. ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸಲು. ಹೆದ್ದಾರಿ ವಿಸ್ತರಣೆಗೆ 20 ಸಾವಿರ ಕೋಟಿ ರೂ. ಮೊತ್ತದ 8 ಹೊಸ ರೋಪ್ ವೇಗಳನ್ನು ನಿರ್ಮಿಸಲಾಗುವುದು. 100 ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು.

11:28 AM IST:

ಟೆಕ್ ಹಬ್ ಎಂದೇ ಖ್ಯಾತವಾದ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ. ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಆದ್ಯತೆ. ಮಹಿಳೆಯರಿಗಾಗಿ ನಾರಿ ಶಕ್ತಿ, ಸಶಕ್ಷಮ ಅಂಗನವಾಡಿ ಯೋಜನೆ. ಅಂಗನವಾಡಿಗಳ ಮೂಲ ಸೌಕರ್ಯ ವೃದ್ದಿ, ಮಕ್ಕಳ ಅಭಿವೃದ್ಧಿಗೆ ಸಕಲ ರೀತಿಯ ನೆರವು. ಕೊರೋನಾ ಕಾಲದಲ್ಲಿ ಹದಗೆಟ್ಟ ಮಾನಸಿಕ ಆರೋಗ್ಯಕ್ಕೆ ಒತ್ತು, 

11:26 AM IST:

ಆನ್‌ಲೈನ್ ಶಿಕ್ಷಣ ಮತ್ತಷ್ಟು ಸರಳೀಕರಣಗೊಳಿಸಲು ಸಕಲ ಸಿದ್ಥತೆ. ಪಿಎಂ ಇ-ವಿದ್ಯಾ ಯೋಜನೆಯ ವಿಸ್ತರಣೆ. ಡಿಜಿಟಲ್ ಶಿಕ್ಷಕರನ್ನು ಬಳಸಿಕೊಂಡು, ತಂತ್ರಜ್ಞಾನ ಬಳಕೆಯಿಂದ, ಡಿಜಿಟಲ್ ಟೂಲ್ಸ್ ಬಳಕೆಯಿಂದ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಲು ಅಗತ್ಯ ಕ್ರಮ, ಸರಕಾರಿ ಶಾಲಾ ಮಕ್ಕಳಿಗೆ ಓನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮ, ಸರಕಾರಿ ಶಾಲಾ ಮಕ್ಕಳಿಗೆ ಆಯಾ ರಾಜ್ಯಗಳ ಭಾಷೆಯಲ್ಲಿ ಅರ್ಥವಾಗುವಂತೆ ಶಿಕ್ಷಣ ನೀಡಲು ಅಗತ್ಯ ಕ್ರಮ. 

11:23 AM IST:

ನಿರೀಕ್ಷೆಯಿಂತ ಮಧ್ಯಮ ವರ್ಗದ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ಅಗತ್ಯ ಆರ್ಥಿಕ ನೆರವು. ಆ ಮೂಲಕ ಅವುಗಳನ್ನು ಸಶಕ್ತಗೊಳಿಸಲು, ದೇಶ ಆರ್ಥಿಕ ನೆರವು ನೀಡಲು ಸಕಲ ರೀತಿಯಲ್ಲಿಯೂ ಸರಕಾರದಿಂದ ಸಹಾಯದಿಂದ. ಮಾರ್ಚ್‌ವರೆಗು ಕ್ರೆಡಿಟ್ ಗ್ಯಾರಂಟಿ ಸ್ಕೀಂ ವಿಸ್ತರಣೆ, ಕೌಶಾಲ್ಯಭಿವೃದ್ಧಿಗೆ ಆನ್‌ಲೈನ್ ತರಬೇತಿ. 

11:21 AM IST:

ಬಜೆಟ್ ಭಾಷಣದ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 25,000 ಕಿಮೀ ರಸ್ತೆ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದರು. ‘ಪಿಎಂ ಗತಿಶಕ್ತಿ’ಯಲ್ಲಿ ರಸ್ತೆ ಸಾರಿಗೆಗೂ ಒತ್ತು ನೀಡಲಾಗಿದೆ. ರೈತರಿಗೆ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ ಮಾಡಲಾಗುವುದು. 4 ಸ್ಥಳಗಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.

11:21 AM IST:

ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳನ್ನು ಸಿದ್ಧಪಡಿಸಲಾಗುವುದು ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. ಇದರೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ 100 PM ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು.

11:21 AM IST:

ರೈತರು ತಮಗೆ ಅನುಕೂಲವಾಗುವಂತ ಹಣ್ಣು, ತರಕಾರಿ ಬೆಳೆಯಲು ಅನಕೂಲು ಮಾಡಿಕೊಡಲಾಗುವುದು. ಮಧ್ಯಮ ಕೈಗಾರಿಕೆಗಳಿಗೆ ಸಕಲ ಅನುವು, ಹೈಡ್ರೋ ಮತ್ತು ಸೋಲಾರ್ ಪವರ್‌ಗೆ 4300 ಕೋಟಿ ರೂ. ಅನುದಾನ. ಗಂಗಾನದಿಯ ತೀರದಲ್ಲಿ ಆರ್ಗಾನಿಕ್ ಫಾರ್ಮಿಂಗ್‌ಗೆ ಹೆಚ್ಚಿನ ಆದ್ಯತೆ. ಗೋದಾವರಿ-ಕೃಷ್ಣಾ ಸೇರಿ ಐದು ನದಿಗಳ ಜೋಡಣೆಗೆ ಆದ್ಯತೆ. 

11:19 AM IST:

ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದು ಆರ್ಥಿಕ ಬದಲಾವಣೆಯ ಸಾಧನವಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ.

11:18 AM IST:

ಸರ್ಕಾರದ ಆಶಯಗಳನ್ನು ಬಜೆಟ್‌ನಲ್ಲಿ ಬಿಂಬಿಸಲಾಗಿದೆ. ಮುಂದಿನ 25 ವರ್ಷಗಳ ನೀಲನಕ್ಷೆಯನ್ನು ಈ ಬಜೆಟ್‌ನಲ್ಲಿ ಸಿದ್ಧಪಡಿಸಲಾಗಿದೆ. ನಾವು LIC ಯ IPO ನೊಂದಿಗೆ ಶೀಘ್ರದಲ್ಲೇ ಬರಲಿದ್ದೇವೆ. ಈ ಬಜೆಟ್ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

11:17 AM IST:

ದೇಸಿಯವಾಗಿ ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ  ಆದ್ಯತೆ
ರಸ್ತೆ ನಿರ್ಮಾಣಗಳಿಗಿಂತ ರೋಪ್ ವೇ ನಿರ್ಮಾಣ ಸುಲಭ. ಜನ ಹಾಗೂ ಗೂಡ್ಸ್ ಸಾಗಣೆಗೆ ರೋಪ್ ವೇ ಬಳಕೆ. 400 ಹೆಚ್ಚುವರಿ ರೈಲ್ವೆ ಆರಂಭ. ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು. ಆ ಮೂಲಕ ತೈಲ ಆಮದು ಕಡಿತಗೊಳಿಸಿ, ಭಾರತದಲ್ಲಿಯೇ ತೈಲ ತಯಾರಿಕೆಗೆ ಒತ್ತು. ಕೃಷಿ ವಿಶ್ವವಿದ್ಯಾಲಯದಲ್ಲಿ ಆಧುನಿಕ ಕೃಷಿ, ಆರ್ಗಾನಿಕ್ ಕೃಷಿ ಒತ್ತು ನೀಡುವಂಥ ಪಠ್ಯ ಹಾಗೂ ಸಂಶೋದನೆಗೆ ಅತ್ಯಗತ್ಯ ನೆರವು. 

11:15 AM IST:

ಮೂಲ ಸೌಕರ್ಯಕ್ಕೆ ತಂತ್ರಜ್ಞಾನದ ಬಳಕೆ, ರೈಲ್ವೆ ಸಂಪರ್ಕ ಸಾಧಿಸಲು ಹೆಚ್ಚಿನ ಒತ್ತು. ಒನ್ ಸ್ಟೇಷನ್ ಒನ್ ಕಾನ್ಸೆಪ್ಟ್ ನಿಂದ ಲೋಕಲ್ ಬ್ಯುಸಿನೆಸ್ ಸಪ್ಲೈ ವೃದ್ಧಿಗೆ ಒತ್ತು. ಜಾಗತಿಕ ತಂತ್ರಜ್ಞಾನ ಬಳಸಿ, 100 ಕಾರ್ಗೋ ರೈಲು ಯೋಜನೆಗೆ ಒತ್ತು. ಬಹು ಸಂಪರ್ಕ ಸೌಕರ್ಯಕ್ಕೆ ಒತ್ತು. ಭಾರತೀಯ ಪರಿಸ್ಥಿತಿಗೆ ತಕ್ಕಂತೆ ರೈಲ್ವೆ ಅಭಿವೃದ್ಧಿ. ಸಾಕಷ್ಟು ಹೊಸ ಸೇವೆಗಳು ಜಾರಿ. ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತೀಯ ರೈಲಿನ ಅಭಿೃದ್ಧಿ. ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ಮೊದಲ ಆದ್ಯತೆ. 

11:10 AM IST:

ಮೇಕ್ ಇನ್ ಇಂಡಿಯಾಗೆ ಒತ್ತು. 6 ದಶಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ. ಏರಿ ಇಂಡಿಯಾ ವರ್ಗಾವಣೆ ಮುಕ್ತಾಯ. ಪಿಎಂ ಗತಿ ಶಕ್ತಿ ಯೋಜನೆಗೆ ಆದ್ಯತೆ. ಸಂಪರ್ಕ ವ್ಯವಸ್ಥೆ ಸುಧಾರಿಸಿ, ಮೂಲ ಸೌಕರ್ಯ ಹೆಚ್ಚಿಸುವ ಯೋಜನೆ. ತಂತ್ರಜ್ಞಾನ ಬಳಸಿ, ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು. 

11:07 AM IST:

ಭಾರತ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಶಕ್ತವಾಗಿದೆ. ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಒತ್ತು. ಕೋವಿಡ್ ಸಂತ್ರಸ್ತರಿಗೆ ಸಕಲ ನೆರವು ನೀಡುವ ಭರವಸೆ ನೀಡಿದ ನಿರ್ಮಲಾ. ಈ ಬಜೆಟ್ ನಲ್ಲಿ ಭಾರತದ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಸಕಲ ಒತ್ತು. ಆತ್ಮ ನಿರ್ಭರ ಭಾರತಕ್ಕೆ ಒತ್ತು ನೀಡಿ, 50 ಲಕ್ಷ ಉದ್ಯೋಗ ಸೃಷ್ಟಿ. 

11:03 AM IST:

ಕೊರೋನಾದಿಂದ ಕುಸಿದ ಆರ್ಥಿಕತೆ ಉತ್ತೇಜನ ನೀಡಲು ಒತ್ತು ನೀಡುವುದಾಗಿ ಆರಂಭದಲ್ಲಿಯೇ ಸುಳಿವು ನೀಡಿದ ನಿರ್ಮಲಾ. ಲಸಿಕೆ ಹಾಗೂ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಕ್ಕೆ ಒತ್ತು. ಕಠಿಣ ಪರಿಸ್ಥಿತಿಯನ್ನು ಎದುರಿಸಲು ದೇಶ ಸಿದ್ಧವಾಗಿದೆ ಎಂದ ವಿತ್ತ ಸಚಿವೆ. 

10:58 AM IST:

ವೈರಾಲಜಿ ಕಡೆ ಹೆಚ್ಚಿನ ಒತ್ತು ಕೊಡಬೇಕಿದೆ: ಸಚಿವ ಸುಧಾಕರ್

ನಾವು ಹಲವು ನಿರೀಕ್ಷೆ ಇಟ್ಟುಕೊಂಡಿದ್ದೇವೆ.ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಒತ್ತು ನೀಡಿದ್ದರು.ಎಲ್ಲ ಬೆಳವಣಿಗೆಗೆ ಒತ್ತು ನೀಡ್ತಾರೆ
ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ಸಿಗಲಿದೆ. ಮಹಿಳೆ, ಯುವಜನತೆಗೂ ಒಳ್ಳೆಯ ಅಯವ್ಯಯ ಸಿಗಲಿದೆ.
ಪ್ರಧಾನಿ ಆಶಯಗಳಿಗೆ ಅನುಗುಣವಾಗಿ ಅಯವ್ಯಯ ಇರಲಿದೆ. 850 ಕೋಟಿ ರಾಜ್ಯಕ್ಕೆ ಬಿಡುಗಡೆ ಮಾಡಿದ್ದರು.
ವಿಶೇಷವಾಗಿ ಟೆಸ್ಟಿಂಗ್ ಗೆ ನೆರವು ಕೊಡಬೇಕಿದೆ. NHM ಯೋಜನೆಯಡಿ‌ ಹಣಕಾಸು ನೆರವನ್ನು ಶೇ.15 ರಿಂದ 20 ಪರ್ಸೆಂಟ್ ಹೆಚ್ಚು ಮಾಡಬೇಕು.

10:44 AM IST:

ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಮಂಡನೆಯ ದಿನ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2022 ಅನ್ನು ಮಂಡಿಸಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿ ಜನರ ಗಮನ 2022ರ ರೈಲು ಬಜೆಟ್‌ ಮೇಲೂ ಇರುತ್ತದೆ. ಈ ರೈಲು ಬಜೆಟ್‌ನಲ್ಲಿ ಹಲವು ಹೊಸ ಆರಂಭಗಳನ್ನು ನಿರೀಕ್ಷಿಸಲಾಗಿದೆ.

ಏನೇನು  ಸಿಗಬಹುದು?

10:33 AM IST:

ನನಗೆ ಕೇಂದ್ರ ಬಜೆಟ್ ಮೇಲೆ ನಂಬಿಕೆ‌ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಕರ್ನಾಟಕಕ್ಕೆ ಕೇಂದ್ರ ಮಲತಾಯಿ ಧೋರಣೆ‌ ತೋರುತ್ತಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ.
ಸಾಕಷ್ಟು ನೀರಾವರಿ ಯೋಜನೆಗಳನ್ನು ನೆನೆಗುದಿಗೆ ಬಿದ್ದಿದೆ. ಈ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಬೇಕಿದೆ.
ಮೇಕೆದಾಟು, ಮಹದಾಯಿ, ಭದ್ರ ಮೇಲ್ದಂಡೆ ಯೋಜನೆ ಸೇರಿ ಅನೇಕ ಯೋಜನೆಗಳನ್ನ ಮಾಡಬೇಕಿದೆ.
ಕೇಂದ್ರ ಬಜೆಟ್ ಬಗ್ಗೆ ರಾಜ್ಯದ ಜನತೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರೈಲ್ವೆ ಯೋಜನೆ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಹೊತ್ತು ಕೊಡಬೇಕಿದೆ.
ಈ ಬಗ್ಗೆ ಹಲವು ವರ್ಷಗಳಿಂದ  ನಮ್ಮ ಬೇಡಿಕೆ ಇದು. ಆದ್ರೆ ಕೇಂದ್ರ ಸರ್ಕಾರ ನಡವಳಿಕೆ ಬಗ್ಗೆ ನನಗೆ ಈಗಲೂ ನಂಬಿಕೆ ಇಲ್ಲ.

10:26 AM IST:

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಗೃಹ ಸಚಿವ ಅಮಿತ್ ಶಾ ಸೇರಿ ಇತರೆ ಸಚಿವರು ಕ್ಯಾಬಿನೆಟ್ ಮೀಟಿಂಗ್‌ಗೆ ಆಗಮನ

Delhi: Defence Minister Rajnath Singh, Union Home Minister Amit Shah, Railways, Communications and IT Minister Ashwini Vaishnaw, Parliamentary Affairs Minister Pralhad Joshi, and others arrive at the Parliament for the union cabinet meeting ahead of the presenting of the pic.twitter.com/GtUEvt7gmo

— ANI (@ANI)

10:22 AM IST:

ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಮೇಲೆ ರಾಜ್ಯಕ್ಕಿದೆ ಹೆಚ್ಚಿನ ನಿರೀಕ್ಷೆ

ಇದು ಕೋವಿಡ್ ನೆರಳಿನಲ್ಲಿ 3 ಬಜೆಟ್..
ಒಂದು ಒಳ್ಳೆಯ ಮುನ್ಸೂಚನೆಯುಳ್ಳ ಬಜೆಟ್ ಆಗುತ್ತೆ ಎಂಬ ಭರವಸೆ ಇದೆ..
ಆರ್ಥಿಕ‌ ಬೆಳವಣಿಗೆಗಳಿಗೆ ಪೂರಕವಾಗುವ ಬಜೆಟ್ ಆಗುವ ನಿರೀಕ್ಷೆ ಇದೆ ಎಂದ ಸಿಎಂ
ನ್ಯಾಷನಲ್ ಹೈವೇ, ಇತರ ರೈಲು ಪ್ರಾಜೆಕ್ಟ್, ಉದ್ಯಮಿಗಳಿಗೆ ಹೆಚ್ಚು ಒತ್ತು ಕೊಡುವುದು, ಕ್ರೀಡಾ ಅಭಿವೃದ್ಧಿ ಸೇರಿದಂತೆ ಹೆಚ್ಚಿನ ಅನುದಾನ ಕೊಡುವಂತದ್ದು  ಹಾಗೂ ಯೋಜನೆ ಗಳು ಬರುವ ನಿರೀಕ್ಷೆ ಇದೆ
ಇನ್ನೂಂದು ಗಂಟೆಗೆ ಎಲ್ಲ ಗೊತ್ತಾಗುತ್ತೆ..
ರಾಜ್ಯದಿಂದ ಆರಿಸಿ ಹೋಗಿರುವುದರಿಂದ ನಿರ್ಮಾಲ ಸೀತಾರಾಮನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ..
ಈ ಬಜೆಟ್ ಎಕಾನಮಿ ಪಿಕ್ ಅಪ್ ಆಗುವ ಲಕ್ಷಣ ಕಾಣ್ತಿದೆ.
ಮೂಲಭೂತ ಸೌಕರ್ಯಕ್ಕೂ ಪೂರಕವಾದ ಬಜೆಟ್ ಆಗಿರುತ್ತೆ..

10:06 AM IST:

ಕೊರೋನಾ ಗಲಾಟೆ ಮಧ್ಯೆಯೇ ಮತ್ತೊಂದು ಬಜೆಟ್ ಮಂಡಿಸುತ್ತಿದ್ದಾರೆ ನಿರ್ಮಲಾ. ಸಹಜವಾಗಿ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಎಲ್ಲಾ ಕ್ಷೇತ್ರಗಳು ಉತ್ತೇಜನಕ್ಕೆ ಏನು ಸಿಗಬಹುದು ಟಾನಿಕ್? ಕರ್ನಾಟಕಕ್ಕೆ ಸಿಗುತ್ತಾ ಆದ್ಯತೆ. 

10:00 AM IST:

ಬಜೆಟ್ ಮಂಡಿಸಲು ರಾಷ್ಟ್ರಪತಿ ಒಪ್ಪಿಗೆ ಪಡೆದ ನಿರ್ಮಲಾ ಸೀತರಾಮನ್, ಸಂಸತ್ತಿಗೆ ಬಜೆಟ್ ಪ್ರತಿಗಳ ಆಗಮನ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ವಿತ್ತ ಸಚಿವೆ. ಬಜೆಟ್ ಮಂಡನೆಗೆ ಕ್ಷಣಗಣನೆ.

Delhi | A truck loaded with budget copies arrives at Parliament, ahead of the presentation of pic.twitter.com/3jqaoW5yBw

— ANI (@ANI)

9:54 AM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ವಿತ್ತ ರಾಜ್ಯ ಸಚಿವ ಡಾ.ಭಾಗವತ್ ಕಿಶನ್‌ರಾವ್ ಕರಡ್, ಪಂಕಜ್ ಜೌಧರಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರನ್ನು ಬಜೆಟ್ ಮಂಡನೆಗೂ ಮುನ್ನ ಭೇಟಿಯಾದರು.

Union Finance Minister Nirmala Sitharaman along with Ministers of State for Finance, Dr Bhagwat Kishanrao Karad, Shri Pankaj Chaudhary, and senior officials of the Ministry of Finance, called on President Ram Nath Kovind before presenting the Union Budget 2022-23. pic.twitter.com/7JNZt3rOPj

— ANI (@ANI)

9:37 AM IST:

ಗ್ರಾಮೀಣ ಪ್ರದೇಶಗಳಿಗೆ ವಾಪಸಾದ ವಲಸೆ ಕಾರ್ಮಿಕರಿಗೆ 2020-21ನೇ (Labour Migration) ಸಾಲಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಉದ್ಯೋಗ ಖಾತರಿ ಒದಗಿಸುವಲ್ಲಿ ಕರ್ನಾಟಕ ರಾಜ್ಯ (Karnataka) ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಕೇಂದ್ರದ ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ. ಕೊರೋನಾ ಸೋಂಕಿನ ಭೀತಿಯಿಂದ ಲಕ್ಷಾಂತರ ಜನ ವಲಸಿಗರು ತವರು ಜಿಲ್ಲೆಗಳಿಗೆ ವಾಪಸಾದರು. 

ಬಜೆಟ್‌ನಲ್ಲಿ ಉದ್ಯೋಗದ ಹೆಚ್ಚಳದ ನಿರೀಕ್ಷೆ

9:35 AM IST:

ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಕಾರ್ಖಾನೆಗಳು ಕಂಗಾಲಾಗಿವೆ. ಪೀಣ್ಯ ಇಂಡಸ್ಟ್ರಿಯಲ್ಲಿ ಸುಮಾರು 1 ಸಾವಿರ ಇಂಡಸ್ಟ್ರಿಗಳು ಬಂದ್ ಆಗಿವೆ. ಕಚ್ಚಾ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.  'ಶೇ. 40- 75 ರಷ್ಟು ರಾ ಮಟಿರಿಯಲ್ಸ್ ಬೆಲೆ ಏರಿಕೆಯಾಗಿದೆ. ಇದೇ ರೀತಿ ಮುಂದುವರೆದರೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ದಯವಿಟ್ಟು ಬೆಲೆ ಇಳಿಕೆ ಮಾಡಿ' ಎಂದು ಇಂಡಸ್ಟ್ರೀಸ್ ಅಸೋಸಿಯೇಷನ್ ಮನವಿ ಮಾಡಿದೆ. 

"

9:15 AM IST:

ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಾಂಡ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಫೆಬ್ರವರಿ 10ರಿಂದ ನಡೆಯಲಿದ್ದು, ಒಟ್ಟು ಹತ್ತು ಹಂತಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿ ಇರೋದ್ರಿಂದ ಈ ಪಂಚ ರಾಜ್ಯಗಳಿಗೆ ಯಾವ ರೀತಿ ವಿಶೇಷ ಪ್ಯಾಕೇಜ್ ಘೋಷಿಸಲಾಗುತ್ತದೆ ಎಂಬ ಕುತೂಹಲವಿದೆ. 

9:11 AM IST:

ಕಳೆದ ಎರಡು ವರ್ಷಗಳಿಂದ ಪೇಪರ್‌ಲೆಸ್ ಬಜೆಟ್ ಆಗಿದ್ದು, ಬಾಹೀ ಖಾತಾ ಅನ್ನೋ ಲೆಕ್ಕದ ಪುಸ್ತಕದ ರೂಪದ ಟ್ಯಾಬ್ ತಲಾಗುತ್ತಿದೆಯೇ ಹೊರತು, ಸೂಟ್‌ಕೇಸಿಗೆ ಗುಡ್ ಬೈ ಹೇಳಲಾಗಿದೆ. ವಿತ್ತ ಸಚಿವಾಲಯ ಬಿಟ್ಟ ನಿರ್ಮಲಾ ಸಂಸತ್ತಿನತ್ತ ತೆರಳುತ್ತಿರುವುದ  ಹೀಗೆ

Delhi: Union Finance Minister Nirmala Sitharaman leaves from the Ministry of Finance.

She will present and read out the at the Parliament through a tab, instead of the traditional 'bahi khata'. pic.twitter.com/pMlPpIHy4G

— ANI (@ANI)

8:55 AM IST:

ಬಹುನಿರೀಕ್ಷಿತ ಕೇಂದ್ರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಭಾರತದಲ್ಲಿ ಮೊದಲ ಬಜೆಟ್‌ ಮಂಡನೆ ಆರಂಭವಾಗಿದ್ದು ಯಾವಾಗ? ಮತ್ತು ಅದರ ಸ್ವರೂಪ ಹೇಗಿತ್ತು? ಈಗ ಆಯವ್ಯಯ ಮಂಡನೆಯಲ್ಲಿ ಆಗಿರುವ ಬದಲಾವಣೆಗಳೇನು? ಭಾರತದ ಇತಿಹಾಸದಲ್ಲಿ ಯಾವೆಲ್ಲಾ ಪ್ರಮುಖ ನಾಯಕರು ಬಜೆಟ್‌ ಮಂಡಿಸಿದ್ದಾರೆ? ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.

ಭಾರತದ ಬಜೆಟ್ ಹಲವು ಪ್ರಥಮಗಳು

8:26 AM IST:

ಸೋಮವಾರ ಆರ್ಥಿಕ ಸಮೀಕ್ಷೆ (Economic Survey) ಮಂಡಿಸಲಾಗಿದೆ. ಇದರಲ್ಲಿ ಕೊರೋನಾ ಹೊಡೆತದ ನಡುವೆಯೂ ದೇಶದ ಆರ್ಥಿಕತೆ ಪುಟಿದೇಳಲಿದೆ. ಹಲವು ವಲಯಗಳು ಆರ್ಥಿಕ ಚೇತರಿಕೆಗೆ ಇಂಬು ನೀಡಲಿವೆ ಎಂದು ಸಮೀಕ್ಷೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದ್ದಾರೆ.

ಈ ಬಜೆಟ್ ಆರ್ಥಿಕತೆಗೆ ಕೊಡುತ್ತಾ ಟಾನಿಕ್?

8:00 AM IST:

 ಕೋವಿಡ್‌ ಸಾಂಕ್ರಾಮಿಕದ (Covid 19) ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ, ಉದ್ಯೋಗ ಸೃಷ್ಟಿಯಂಥ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಡುವ ನಿರೀಕ್ಷೆಯ ಕೇಂದ್ರ ಬಜೆಟ್‌ ಮಂಗಳವಾರ ಬೆಳಗ್ಗೆ ಮಂಡನೆಯಾಗಲಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

9:00 PM IST:

ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್ ಹೇಳಿದ್ದೇನು? 

ಇಲ್ಲಿ ಕ್ಲಿಕ್ಕಿಸಿ

8:59 PM IST:

*DICGC ಕಾಯ್ದೆ ಅಡಿಯಲ್ಲಿ ಬ್ಯಾಂಕ್ ಠೇವಣಿದಾರರಿಗೆ 5ಲಕ್ಷ ರೂ. ವಿಮೆ ಕವರೇಜ್ ಸೌಲಭ್ಯ
*ದಿವಾಳಿ ಅಥವಾ ಆರ್ ಬಿಐ ನಿಷೇಧಕ್ಕೊಳಪಟ್ಟ ಬ್ಯಾಂಕಿನ ಗ್ರಾಹಕರಿಗೆ 5ಲಕ್ಷ ರೂ. ಪಡೆಯಲು ಅವಕಾಶ
*DICGC ಕಾಯ್ದೆಗೆ 2021ರಲ್ಲಿ ಸಂಸತ್ತಿನ ಅನುಮೋದನೆ

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

8:58 PM IST:

ಸ್ಟಾರ್ಟ್ ಅಪ್‌ಗಳಿಗೆ ಬೆಂಗಳೂರು ಪ್ರಶಸ್ತಿ ಸ್ಥಳವೆಂದೇ ಭಾವಿಸಲಾಗಿತ್ತು. ಸರಕಾರವೂ ಅಗತ್ಯ ಸೌಕರ್ಯಗಳನ್ನು ಪೂರೈಸುತ್ತಿತ್ತು. ಆದರೆ, ಈ ಸ್ಥಾನವನ್ನು ದಿಲ್ಲಿ ಆಕ್ರಿಮಿಸಿಕೊಂಡಿದೆ ಎಂದು ಆರ್ಥಿಕ ಸರ್ವೆಯಲ್ಲಿ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ. 

ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

8:56 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿರುವ ಆರ್ಥಿಕ ಸಮೀಕ್ಷೆ ಹೇಗಿದೆ. 

ಇಲ್ಲಿ ಕ್ಲಿಕ್ಕಿಸ್