ನವದೆಹಲಿ(ಮಾ.15): ಟಿವಿಎಸ್ ಮೋಟಾರ್ ಹೊಚ್ಚ ಹೊಸ ಟಿವಿಎಸ್ ಜುಪಿಟರ್ ZX ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬ್ಲೂಟೂಥ್, ವಾಯ್ಸ್ ಅಸಿಸ್ಟ್, ಸ್ಮಾರ್ಟ್ ಎಕ್ಸೋನೆಟ್ ಆ್ಯಪ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಈ ಸ್ಕೂಟರ್ ಬೆಲೆ 80,973 ರೂಪಾಯಿ(ಎಕ್ಸ್ ಶೋ ರೂಂ). ಮತ್ತೆರಡು ಹೊಸ ಬಣ್ಣಗಳಾದ ಮ್ಯಾಟ್ ಬ್ಲಾಕ್ ಹಾಗೂ ಕಾಪರ್ ಬಣ್ಣದಲ್ಲಿ ಲಭ್ಯವಿದೆ.
ನೂತನ ಜುಪಿಟರ್ ZX 100CC ಎಂಜಿನ್ ಹೊಂದಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಜುಪಿಟರ್‌ಗೂ ನೂತನ ಸ್ಕೂಟರ್‍ಗೂ ಎಂಜಿನ್ ಪರ್ಫಾಮೆನ್ಸ್, ಮೈಲೇಜ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಇದರಲ್ಲಿರುವ ಟಿವಿಎಸ್ ಕನೆಕ್ಟ್ ಆ್ಯಪ್ ಆ್ಯಂಡ್ರಾಯ್ಡ್ ಹಾಗೂ iOS ಬೆಂಬಲಿಸಲಿದೆ.
undefined
ಕೆಲ ಬದಲಾವಣೆಗಳಲ್ಲಿ ನೂತನ ಸ್ಕೂಟರ್‌ನಲ್ಲಿ ಕಾಣಬಹುದು. ಡ್ಯುಯೆಲ್ ಟೋನ್ ಸೀಟ್ ಬಳಕೆ ಮಾಡಲಾಗಿದೆ. ವಿನ್ಯಾಸ ಮತ್ತಷ್ಟು ಆಕರ್ಷಕವಾಗಿ ಮಾಡಲಾಗಿದೆ. ಹಿಂಬದಿ ಸವಾರರಿಗೆ ಬ್ಯಾಕ್ ರೆಸ್ಟ್ ಕೂಡ ನೀಡಲಾಗಿದೆ. ಇನ್ನು LED ಹೆಡ್‌ಲ್ಯಾಂಪ್ಸ್, 2 ಲೀಟರ್ ಸಾಮರ್ಥ್ಯದ ಗ್ಲೋವ್‌ಬಾಕ್ಸ್, ಮೊಬೈಲ್ ಚಾರ್ಜರ್, 21 ಲೀಟರ್ ಸ್ಟೋರೇಜ್ ಸ್ಪೇಸ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ.
TVS bike launch ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ TVS ರೇಡಿಯೋನ್ ಹೊಸ ಡ್ಯುಯೆಲ್ ಟೋನ್ ಬಣ್ಣದಲ್ಲಿ ಬಿಡುಗಡೆ!
110 ಸಿಸಿ ಎಂಜಿನ್ ಹೊಂದಿರುವ ಟಿವಿಎಸ್ ಜುಪಿಟರ್ ZX ಸ್ಕೂಟರ್ 5.8 kW ಪವರ್ ಹಾಗೂ 8.8 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಬ್ಲೂ ಟೂತ್ ಕನೆಕ್ಟಿವಿಟಿ ವೈಶಿಷ್ಟ್ಯವನ್ನು ಮೊದಲು ಟಿವಿಎಸ್ ಜ್ಯುಪಿಟರ್ ಗ್ರಾಂಡ್ ಆವೃತ್ತಿಯೊಂದಿಗೆ 110 ಸಿಸಿ ಸ್ಕೂಟರ್ ವಿಭಾಗದಲ್ಲಿ ಪರಿಚಯಿಸಲಾಯಿತು. ಈ ವೈಶಿಷ್ಟ್ಯವನ್ನು ಹೊಸ ಟಾಪ್- ಆಫ್- ಲೈನ್ ಅವತರಣಿಕೆಯಲ್ಲಿ ಪರಿಚಯಿಸಲಾಗುತ್ತಿದೆ ಮತ್ತು ತಂತ್ರಜ್ಞಾನದ ಅರಿವುಳ್ಳ ಗ್ರಾಹಕರ ಅಗತ್ಯತೆಯನ್ನು ಪೂರೈಸಲು ಸಂಪೂರ್ಣ ಡಿಜಿಟಲ್ ಕನ್ಸೋಲ್, ವಾಯ್ಸ್ ಅಸಿಸ್ಟ್, ನ್ಯಾವಿಗೇಶನ್ ಅಸಿಸ್ಟ್ ಮತ್ತು ಎಸ್‌ಎಂಎಸ್ / ಧ್ವನಿ ಕರೆ ಎಚ್ಚರಿಕೆಗಳಂತಹ ಹೆಚ್ಚುವರಿ ಇಡೀ ವರ್ಗದಲ್ಲೇ ಅತ್ಯುತ್ತಮ ಎನಿಸಿದ ತಂತ್ರಜ್ಞಾನ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗುತ್ತಿದೆ. ಜ್ಯಾದಾ ಅನುಕೂಲಕ್ಕಾಗಿ ವಾಯ್ಸ್ ಅಸಿಸ್ಟ್ ವೈಶಿಷ್ಟ್ಯವನ್ನು ನೀಡುವ 110 ಸಿಸಿ ವಿಭಾಗದಲ್ಲಿ ಇದು ಮೊದಲ ಸ್ಕೂಟರ್ ಆಗಿರುತ್ತದೆ. ಬ್ಲೂಟೂತ್- ಚಾಲಿತ ತಂತ್ರಜ್ಞಾನವಾಗಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಪ್ಲಾಟ್‌ಫರ‍್ಮ್ಗಳಿಗೆ ಲಭ್ಯವಿರುವ ವಿಶೇಷ ಟಿವಿಎಸ್ ಕನೆಕ್ಟ್ ಮೊಬೈಲ್ ಆ್ಯಪ್‌ನೊಂದಿಗೆ ಇದನ್ನು ಜೋಡಿಸಲಾಗಿದೆ.
TVS iQube Review: ಐಕ್ಯೂಬ್ ಎಂಬ ಸುತ್ತೂರು ಸುಂದರಿ: 75 km ಸುತ್ತಾಡಿಸಲಿಕ್ಕೆ ಸ್ಕೂಟರ್ ಸನ್ನದ್ಧ!
ಸಂವಾದಾತ್ಮಕ ವಾಯ್ಸ್ ಅಸಿಸ್ಟ್ ವೈಶಿಷ್ಟ್ಯವು ಬ್ಲೂಟೂತ್ ಹೆಡ್‌ಫೋನ್‌ಗಳು, ಕನೆಕ್ಟೆಡ್ ಹೆಡ್‌ಫೋನ್‌ಗಳು ಅಥವಾ ಬ್ಲೂ ಟೂತ್ ಸುಸಜ್ಜಿತ ಹೆಲ್ಮೆಟ್‌ನಂತಹ ಸಂಪರ್ಕಿತ ಸಾಧನದ ಮೂಲಕ ಟಿವಿಎಸ್ Sಒಂಖಖಿಘಿಔಓಓಇಅಖಿಖಿಒ ಅಪ್ಲಿಕೇಶನ್‌ಗೆ ನೀಡಿದ ಧ್ವನಿ ಆಜ್ಞೆಗಳ ಮೂಲಕ ಸ್ಕೂಟರ್‌ನೊಂದಿಗೆ ಸಂವಹನ ನಡೆಸಲು ಗ್ರಾಹಕರಿಗೆ ಅನುಮತಿಸುತ್ತದೆ. ಸ್ಕೂಟರ್‌ನ ಪ್ರತಿಕ್ರಿಯೆಯು ಗ್ರಾಹಕರಿಗೆ ಸ್ಪೀಡೋ ಮೀಟರ್‌ನಲ್ಲಿ ಮತ್ತು ಹೆಡ್‌ಫೋನ್‌ಗಳ ಮೂಲಕ ಆಡಿಯೊ ಪ್ರತಿಕ್ರಿಯೆಯಾಗಿ ಕಂಡುಬರುತ್ತದೆ.
ಈ ಪ್ರಮುಖ ರೂಪಾಂತರವನ್ನು ಉಳಿದ ಟ್ರಿಮ್‌ಗಳಿಂದ ಪ್ರತ್ಯೇಕಿಸಲು ಮತ್ತು ಅಪೇಕ್ಷಣೀಯ ಅಂಶವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಸ್ಕೂಟರ್ ಇದೀಗ ಸಿಲ್ವರ್ ಓಕ್ ಬಣ್ಣದ ಒಳ ಪ್ಯಾನೆಲ್‌ಗಳೊಂದಿಗೆ ಬರುತ್ತದೆ. ಈ ಸುಧಾರಿತ ವೈಶಿಷ್ಟ್ಯಗಳ ಹೊರತಾಗಿ, ಟಿವಿಎಸ್ ಜುಪಿಟರ್ ಹೊಸ ರೂಪಾಂತರವು ಜ್ಯಾದಾ ಶೈಲಿಯೊಂದಿಗೆ ಹೊಸ ವಿನ್ಯಾಸದ ಮಾದರಿಯೊಂದಿಗೆ ಹೊಸ ಡ್ಯುಯಲ್ ಟೋನ್ ಸೀಟ್ ಅನ್ನು ಸಹ ನೀಡುತ್ತದೆ. ಹೆಚ್ಚುವರಿಯಾಗಿ, ಟಿವಿಎಸ್ ಜುಪಿಟರ್ ಸರಣಿಯಲ್ಲಿನ ಈ ರೂಪಾಂತರವು ಪಿಲಿಯನ್‌ಗೆ ಹೆಚ್ಚಿನ ಸೌಕರ್ಯ ಮತ್ತು ಅನುಕೂಲತೆಯನ್ನು ಒದಗಿಸಲು ಹಿಂಭಾಗದ ಬ್ಯಾಕ್‌ರೆಸ್ಟ್ ಅನ್ನು ಸಹ ನೀಡುತ್ತದೆ.