ವಿಶ್ವಾದ್ಯಂತ ಕಾಡುತ್ತಿರುವ ಸೆಮಿ ಕಂಡಕ್ಟರ್ ಕೊರತೆ ಮತ್ತು ಹೊಸ ನೀತಿಗಳ ಜಾರಿಯಿಂದ ವಾಹನಗಳ ದರದಲ್ಲಿ ಹೆಚ್ಚಳದಿಂದ ವಾಹನಗಳ ಮಾರಾಟ ಕುಸಿತವಾಗಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್ -ಎಸ್ಐಎಎಂ (Society of Indian automobile manufacturers- SIAM) ತಿಳಿಸಿದೆ.
Tech Desk: ಭಾರತದಲ್ಲಿ ಆಟೊಮೊಬೈಲ್ ವಲಯಕ್ಕೆ ಬೇಡಿಕೆ ಹೆಚ್ಚುತ್ತಿದೆಯಾದರೂ, ಅದರ ಪೂರೈಕೆಯಲ್ಲಿ ಭಾರಿ ಅಡೆತಡೆ ಎದುರಾಗುತ್ತಿದೆ. ಈ ಸಮಸ್ಯೆ ದ್ವಿಚಕ್ರ ವಾಹನ ವಲಯವನ್ನೂ ಬಾಧಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ವಾಹನಗಳು ಡೀಲರ್ಗಳನ್ನು ಹಾಗೂ ಗ್ರಾಹಕರನ್ನು ತಲುಪುವಲ್ಲಿ ವಿಫಲವಾಗಿವೆ. ಇದೊಂದೇ ತಿಂಗಳಲ್ಲಿ ಫ್ಯಾಕ್ಟರಿಯಿಂದ ವಿತರಣೆಯಾಗಿರುವ ವಾಹನಗಳ ಪ್ರಮಾಣ ಶೇ.23ರಷ್ಟು ಕಡಿಮೆಯಾಗಿದೆ.
ಇದಕ್ಕೆ ಪೂರೈಕೆ-ಸರಣಿಯ ಸವಾಲುಗಳು, ವಿಶ್ವಾದ್ಯಂತ ಕಾಡುತ್ತಿರುವ ಸೆಮಿ ಕಂಡಕ್ಟರ್ ಕೊರತೆ ಮತ್ತು ಹೊಸ ನೀತಿಗಳ ಜಾರಿಯಿಂದ ವಾಹನಗಳ ದರದಲ್ಲಿ ಹೆಚ್ಚಳದಂತಹ ಅಂಶಗಳು ಕಾರಣವಾಗಿವೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್ -ಎಸ್ಐಎಎಂ (Society of Indian automobile manufacturers- SIAM) ತಿಳಿಸಿದೆ.
ಫೆಬ್ರವರಿ ತಿಂಗಳಲ್ಲಿ ದೇಶೀಯ ಪ್ರಯಾಣಿಕ ವಾಹನಗಳಾದ ದ್ವಿಚಕ್ರ (Two wheeler) ಹಾಗೂ ತ್ರಿಚಕ್ರ (Three wheeler) ವಾಹನಗಳ ಸಗಟು ಮಾರಾಟ 13 ಕ್ಕೆ ಇಳಿಕೆಯಾಗಿದೆ. 2021ರ ಫೆಬ್ರವರಿಯಲ್ಲಿ ಇದು 17,35,909 ರಷ್ಟಿತ್ತು. ಪ್ರಯಾಣಿಕರ ಕಾರುಗಳು ಕಳೆದ ತಿಂಗಳು 1,33,572 ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ತಿಂಗಳಲ್ಲಿ 1,55,128 ರಷ್ಟಿತ್ತು. ಈ ಅವಧಿಯಲ್ಲಿ 1,20,122 ವಾಹನಗಳು ಶೋರೂಂಗಳಿಂದ ಡೆಲಿವರಿಯಾಗಿವೆ.
undefined
ಇದನ್ನೂ ಓದಿ: Bike Thief 60 ಸೆಕೆಂಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕಳ್ಳತನ, ಕರಾಮತ್ತು ನೋಡಿ ಪೊಲೀಸರೆ ದಂಗು!
ಕಳೆದ ವರ್ಷ ಇದೇ ಅವಧಿಯಲ್ಲಿ 1,14,350 ವಾಹನಗಳು ರವಾನೆಯಾಗಿದ್ದವು. ವ್ಯಾನ್ಗಳು (Vans) ಮಾರಾಟ ಕೂಡ 9,290ಕ್ಕೆ ಇಳಿಕೆಯಾಗಿವೆ. 2021ರ ಫೆಬ್ರವರಿಯಲ್ಲಿ ಇದು 11,902ರಷ್ಟಿತ್ತು. 2022ರ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ (Royal Enfield) 52,135 ವಾಹನಗಳನ್ನು ಮಾರಾಟ ಮಾಡಿದೆ. ಇದು ಶೇ.20ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 65,114 ವಾಹನಗಳು ಮಾರಾಟವಾಗಿದ್ದವು.
ಹೀರೋ ಮೋಟೋ ಕಾರ್ಪ್ (Hero MotoCorp) ಫೆಬ್ರವರಿ ತಿಂಗಳಲ್ಲಿ ರಫ್ತು ಸೇರಿದಂತೆ 3,58,254 ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಫೆಬ್ರವರಿ 2021 ರಲ್ಲಿ 5,05,467 ವಾಹನಗಳನ್ನು ಮಾರಾಟ ಮಾಡಿತ್ತು. ರಫ್ತು (export) ಪ್ರಮಾಣ ಕೂಡ ಹಿಂದಿನ ವರ್ಷ 26,792ಗಳಷ್ಟಿತ್ತು. ಈ ವರ್ಷ ಅದು 21,034ಕ್ಕೆ ಕುಸಿದಿದೆ. ಒಟ್ಟಾರೆ ಇದು ಶೇ.14ರಷ್ಟು ಕುಸಿತ ಕಂಡಿದೆ.
ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle and scooter India) ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ 4,11,622 ವಾಹನಗಳಿಗೆ ಹೋಲಿಸಿದರೆ,ಫೆಬ್ರವರಿ 2022 ರಲ್ಲಿ 2,85,677-ಯೂನಿಟ್ ದೇಶೀಯ ಮಾರಾಟ ದಾಖಲಿಸಿದೆ. ಒಟ್ಟಾರೆ, ಶೇ. 31ರಷ್ಟು ಕುಸಿತವನ್ನು ವರದಿ ಮಾಡಿದೆ,
ಇದನ್ನೂ ಓದಿ: Electric Vehilce ಭಾರತದಲ್ಲಿ 4 ಹೊಸ ಇವಿ ಉತ್ಪಾದನಾ ಘಟಕ ಸ್ಥಾಪಿಸಲಿದೆ ಹೀರೋ ಎಲೆಕ್ಟ್ರಿಕ್!
ಟಿವಿಎಸ್ ಮೋಟಾರ್ ಕಂಪನಿ (TVS Motor company) ಫೆಬ್ರವರಿ 2022 ರಲ್ಲಿ ಒಟ್ಟು 2,81,714 ಸಗಟು ಮಾರಾಟದೊಂದಿಗೆ ಶೇ.5 ರಷ್ಟು ಕುಸಿತವನ್ನು ವಾಹನಗಳಿಗೆ ದಾಖಲಿಸಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 2,97,747 ವಾಹನಗಳನ್ನು ಮಾರಾಟ ಮಾಡಿತ್ತು.
ಸುಜುಕಿ ಮೋಟಾರ್ಸೈಕಲ್ ಇಂಡಿಯಾ (Suzuki Motorcycle India) ಫೆಬ್ರವರಿ 2022 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 58,603 ವಾಹನಗಳನ್ನು ಮಾರಾಟ ಮಾಡಿದೆ, ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ. 3.3 ಕುಸಿತವಾಗಿದೆ. ಪ್ರಸ್ತುತ ಸನ್ನಿವೇಶದ ಹೊರತಾಗಿಯೂ ಕಂಪನಿಯು ದೇಶೀಯ (Domestic) ಮತ್ತು ಅಂತರಾಷ್ಟ್ರೀಯ (International) ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನು ಸುಧಾರಿಸುವ ನಿರೀಕ್ಷೆಯಲ್ಲಿದೆ.
ಏಥರ್ ಎನರ್ಜಿ (Ather Energy) 2022ರ ಫೆಬ್ರವರಿಯಲ್ಲಿ 2,042 ಸ್ಕೂಟರ್ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ, ಇದು ಫೆಬ್ರವರಿ 2021 ರ ವರ್ಷದಿಂದ ವರ್ಷಕ್ಕೆ ಶೇ.140ರಷ್ಟು ಬೆಳವಣಿಗೆಯಾಗಿದೆ. ಆದರೆ, ಬೇಡಿಕೆ ಮತ್ತು ಪೂರೈಕೆಯಲ್ಲಿ ಬಹುದೊಡ್ಡ ಅಂತರವಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.