ಬೆಂಗಳೂರು(ಮಾ.14): TVS ಮೋಟಾರ್ ಕಂಪನಿಯ ಫ್ಯಾಕ್ಟರಿ ರೇಸಿಂಗ್ ತಂಡವಾದ ಟಿವಿಎಸ್ ರೇಸಿಂಗ್, ಮಹಿಳಾ ಮತ್ತು ರೂಕಿ ವಿಭಾಗದ TVS ಒನ್ ಮೇಕ್ ಚಾಂಪಿಯನ್‌ಶಿಪ್‌ನ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಮಹಿಳಾ ರೇಸರ್‌ಗಳನ್ನು ಆಹ್ವಾನಿಸಿದೆ. ಆಯ್ಕೆ ಸುತ್ತು ಮಾರ್ಚ್ 20 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಮಹಿಳಾ ವಿಭಾಗದಲ್ಲಿ ಭಾಗವಹಿಸಲು ಅಪೇಕ್ಷಿಸುವ ರೈಡರ್‌ಗಳು ರೇಸ್- ಸ್ಪೆಕ್ TVS ಅಪಾಚೆ ಆರ್‌ಟಿಆರ್, ಟಿವಿಎಸ್ 200 4V ಮತ್ತು TVS ಅಪಾಚೆ RR 200 ನಲ್ಲಿ ರೂಕಿ ವಿಭಾಗದಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತಾರೆ. ಭಾರತದಲ್ಲಿ ಯುವ ಮೋಟಾರ್‌ಸ್ಪೋರ್ಟ್ ಪ್ರತಿಭೆಗಳನ್ನು ಪೋಷಿಸಲು ರೂಕಿ ವರ್ಗವು ಅನಿವಾರ್ಯ ವೇದಿಕೆಯಾಗಿದೆ ಮತ್ತು ಇದು 11 ರಿಂದ 18 ವರ್ಷ ವಯಸ್ಸಿನ ಯುವ ಸವಾರರಿಗೆ ಮುಕ್ತವಾಗಿದೆ.
undefined
ಪ್ರತಿ ವಿಭಾಗದಿಂದ ಅಗ್ರ ಇಪ್ಪತ್ತು ರೈಡರ್‌ಗಳನ್ನು ಪ್ರತಿ ನಗರದಿಂದ ಅವರ ಅತ್ಯುತ್ತಮ ಲ್ಯಾಪ್ ಸಮಯ, ದೈಹಿಕ ಸಾಮರ್ಥ್ಯ ಮತ್ತು ರೇಸಿಂಗ್ ಸಾಮರ್ಥ್ಯಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೇ 2022 ರಲ್ಲಿ ಚೆನ್ನೆನಲ್ಲಿರುವ ಮದ್ರಾಸ್ ಮೋಟಾರ್ ರೇಸ್ ಟ್ರ‍್ಯಾಕ್‌ನಲ್ಲಿ ಅಂತಿಮ ಸುತ್ತಿನ ಆಯ್ಕೆ ನಡೆಯಲಿದೆ. ಬೆಂಗಳೂರು ಆಯ್ಕೆ ಸುತ್ತನ್ನು ಅರುವಾನಿ ಗ್ರಿಡ್‌ನಲ್ಲಿ ನಡೆಸಲಾಗುತ್ತದೆ.
TVS bike launch ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ TVS ರೇಡಿಯೋನ್ ಹೊಸ ಡ್ಯುಯೆಲ್ ಟೋನ್ ಬಣ್ಣದಲ್ಲಿ ಬಿಡುಗಡೆ!
ಆಯ್ಕೆಯಾದ ರೇಸರ್‌ಗಳು ಚಾಂಪಿಯನ್‌ಶಿಪ್‌ಗಾಗಿ ರೇಸ್- ಟ್ಯೂನ್ ಮಾಡಲಾದ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಟಿವಿಎಸ್ ಅಪಾಚೆ ಆರ್‌ಆರ್ 200ರ ಐದು ಸುತ್ತುಗಳಲ್ಲಿ ಸ್ಪರ್ಧಿಸುತ್ತಾರೆ. ಚೆನ್ನೈನಲ್ಲಿ ಅಂತಿಮ ಆಯ್ಕೆ ಸುತ್ತಿನ ನಂತರ, ರೇಸರ್‌ಗಳು ರಾಷ್ಟ್ರೀಯ ಚಾಂಪಿಯನ್ ರೈಡರ್‌ಗಳ ಆಶ್ರಯದಲ್ಲಿ ನಿರ್ದಿಷ್ಟ ತರಬೇತಿಯನ್ನು ಪಡೆಯುತ್ತಾರೆ. 2022 ರ ಭಾರತೀಯ ರಾಷ್ಟ್ರೀಯ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್ (ಐಎನ್‌ಎಂಆರ್‌ಸಿ) ಪ್ರಾರಂಭವಾಗುವ ಮೊದಲು ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಅವರ ರೇಸಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಟಿವಿಎಸ್ ರೇಸಿಂಗ್ ನೆರವಾಗಲಿದೆ.
ಟಿವಿಎಸ್ ಒನ್-ಮೇಕ್ ಚಾಂಪಿಯನ್‌ಶಿಪ್ ಮಹಿಳೆಯರ ವಿಭಾಗ: ಆಯ್ಕೆ ಮಾನದಂಡ
• ಭಾಗವಹಿಸುವವರು ಮಾನ್ಯವಾದ ದ್ವಿಚಕ್ರ ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು
• 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾಗವಹಿಸುವವರು ಯಾವುದೇ ರೇಸಿಂಗ್ ತರಬೇತಿ ಶಾಲೆಯಿಂದ ಪಡೆದ ಲೆವೆಲ್1 ಎಫ್‌ಎಂಎಸ್‌ಸಿಐ ಪ್ರಮಾಣೀಕೃತ ತರಬೇತಿಯನ್ನು ಹೊಂದಿರಬೇಕು. ಆಯ್ಕೆ ಸ್ಥಳದಲ್ಲಿ ಅವರ ರಕ್ಷಕರೊಂದಿಗೆ ಇರಬೇಕು
TVS iQube Review: ಐಕ್ಯೂಬ್ ಎಂಬ ಸುತ್ತೂರು ಸುಂದರಿ: 75 km ಸುತ್ತಾಡಿಸಲಿಕ್ಕೆ ಸ್ಕೂಟರ್ ಸನ್ನದ್ಧ!
ಟಿವಿಎಸ್ ಒನ್-ಮೇಕ್ ಚಾಂಪಿಯನ್‌ಶಿಪ್ ರೂಕಿ ವರ್ಗ: ಆಯ್ಕೆ ಮಾನದಂಡ
• ಭಾಗವಹಿಸುವವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು (ಜನವರಿ 2005 ರಂದು ಅಥವಾ ನಂತರ ಜನಿಸಿದವರು). ಯಾವುದೇ ರೇಸಿಂಗ್ ತರಬೇತಿ ಶಾಲೆಯಿಂದ ಪಡೆದ ಹಂತ1 ಎಫ್‌ಎಂಎಸ್‌ಸಿಐ ಪ್ರಮಾಣೀಕೃತ ತರಬೇತಿ ಕಡ್ಡಾಯವಾಗಿದೆ
ಡ್ಯುಯಲ್ ಟೋನ್‌ನಲ್ಲಿ ಟಿವಿಎಸ್ ರೇಡಿಯೋನ್ ಬೈಕ್
ಥೀಮ್ ಕ್ಲಾಸಿಕ್ ಮೋಟಾರ್ ಸೈಕ್ಲಿಂಗ್ ಥೀಮ್‌ನಿಂದ ಪ್ರೇರಿತವಾಗಿ ಡ್ಯುಯಲ್ ಟೋನ್ ಬಣ್ಣಗಳಲ್ಲಿ ‘ಟಿವಿಎಸ್ ರೇಡಿಯೋನ್’ ಬೈಕ್‌ಗಳನ್ನು ಟಿವಿಎಸ್ ಮೋಟಾರ್ ಇಂಡಿಯಾ ಬಿಡುಗಡೆ ಮಾಡಿದೆ. ‘ಕೆಂಪು ಹಾಗೂ ಕಪ್ಪು’ ಮತ್ತು ‘ನೀಲಿ ಹಾಗು ಕಪ್ಪು’ ಬಣ್ಣಗಳಲ್ಲಿ ಈ ಬೈಕ್‌ಗಳು ಮಾರುಕಟ್ಟೆಗೆ ಬಂದಿವೆ. 2018ರಲ್ಲಿ ಈ ಬೈಕ್‌ನ ಮೊದಲ ಆವೃತ್ತಿ ಬಿಡುಗಡೆ ಆಗಿತ್ತು. ಇದೀಗ ಗ್ರಾಹಕರ ಬೇಡಿಕೆಯಂತೆ ಡ್ಯುಯಲ್ ಟೋನ್ ಆವೃತ್ತಿ ಬಿಡುಗಡೆಯಾಗುತ್ತಿದೆ ಎಂದು ಕಂಪನಿ ತಿಳಿಸಿದೆ.