ಸದ್ದಿಲ್ಲದೇ TVS ಎಕ್ಸ್ಎಲ್ 100 ವಿನ್ನರ್ ಎಡಿಷನ್ ಬಿಡುಗಡೆ

By Suvarna News  |  First Published Jan 21, 2021, 3:33 PM IST

ಗ್ರಾಮೀಣ ಮತ್ತು ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ ಭಾರೀ ಜನಪ್ರಿಯವಾಗಿರುವ ಟಿವಿಎಸ್‌ ಮೊಪೆಡ್ ಎಕ್ಸ್‌ಎಲ್ 100 ವಿಶೇಷ ಎಡಿಷನ್ ಆಗಿರುವ ವಿನ್ನರ್ ಎಡಿಷನ್ ಅನ್ನು ಕಂಪನಿಯಾವುದೇ ಸದ್ದು ಗದ್ದಲ ಇಲ್ಲದೇ ಬಿಡುಗಡೆ ಮಾಡಿದೆ. ಈ ಮೊಪೆಡ್‌ನ  ಬೆಲೆ ಹಿಂದಿನ ವರ್ಷನ್‌ಗಿಂತ 9000 ರೂಪಾಯಿ ತುಟ್ಟಿಯಾಗಿದೆ.


ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿರುವ ಟಿವಿಎಸ್ ಯಾವುದೇ ಸದ್ದಿಲ್ಲದೇ ತನ್ನ ಮೊಪೆಡ್ ಸ್ಪೆಷಲ್ ಎಡಿಷನ್ ಆಗಿರುವ ಎಕ್ಸ್‌ಎಲ್ 100 ವಿನ್ನರ್ ಎಡಿಷನ್ ಬಿಡುಗಡೆ ಮಾಡಿದೆ.

ಈ ಟಿವಿಎಸ್ ಎಕ್ಸ್‌ಎಲ್ 100 ಸ್ಪೆಷಲ್ ಎಡಿಷನ್‌ನ ಎಕ್ಸ್ ಶೋರೂಮ್ ಬೆಲೆ 49,599 ರೂಪಾಯಿ  ನಿಗದಿಪಡಿಸಲಾಗಿದೆ. ಅಂದರೆ, ಈ ಮೊದಲಿನ ಬೇಸ್ ವರ್ಷನ್‌ಗೆ ಹೋಲಿಸಿದರೆ 9 ಸಾವಿರ ರೂಪಾಯಿಯಷ್ಟು ಹೆಚ್ಚಳವಾದಂತಾಗಿದೆ. ಅಂದ ಹಾಗೇ ಸದ್ಯ ದೇಶದಲ್ಲಿ ಚಾಲ್ತಿಯಲ್ಲಿರುವ ಮತ್ತು ಪ್ರಖ್ಯಾತ ಏಕೈಕ ಮೊಪೆಡ್ ಎಂಬ ಕೀರ್ತಿ ಈ ಟಿವಿಎಸ್‌ನ ಎಕ್ಸ್ ಎಲ್ 100ನದ್ದಾಗಿದೆ. ಕಳೆದ 40 ವರ್ಷಗಳಿಂದಲೂ ಈ ಮೊಪೆಡ್ ತನ್ನ ಬೇಡಿಕೆಯನ್ನು ಕಾಯ್ದುಕೊಂಡು ಬಂದಿದೆ. ಬಿಎಸ್ 6 ಎಮಿಷನ್ ನಿಯಮಗಳ ಕೂಡ ಈ ಮೊಪೆಡ್‍ ಅನ್ನು ತಡೆಯಲು ಸಾಧ್ಯವಾಗಿಲ್ಲ.

Latest Videos

undefined

ಮಹೀಂದ್ರಾ ವಾಹನ ಖರೀದಿಸಲಿದ್ದೀರಾ? ಈಗಲೇ ಖರೀದಿಸಿ, ಬಂಪರ್‌ ಆಫರ್‌ಗಳಿವೆ!

ಟಿವಿಎಸ್ ಕಂಪನಿಯು ತನ್ನ ಈ ಎಕ್ಸ್‌ಎಲ್ 100 ಮೊಪೆಡ್‌ಗೆ ಇಟಿಎಫ್ಐ ಸಿಸ್ಟಮ್ ಅಳವಡಿಸಿಕೊಂಡಿದೆ. ಈ ಟಿವಿಎಸ್ ಎಕ್ಸ್ ಎಲ್ 100 ವಿನ್ನರ್ ಎಡಿಷನ್, ಭಾರತದ ಎಲ್ಲ ಟಿವಿಎಸ್ ಡೀಲರ್‌ಗಳಲ್ಲಿ ದೊರೆಯಲಿದೆ. ಬ್ಲೂ ಪೇಂಟ್ ಸೇರಿದಂತೆ ಹಲವು ಸೌಂದರ್ಯೀಕರಣದ ಅಪ್‌ಡೇಟ್‌ಗಳನ್ನು ಈ ಮೊಪೆಡ್‌ಗೆ ಮಾಡಲಾಗಿದೆ. ಈ ವಿನ್ನರ್ ಎಡಿಷನ್ ಮೊಪೆಡ್ ಹೆವಿಡ್ಯೂಟಿ ಐ ಟಚ್ ಸ್ಟಾರ್ಟ್ ವೆರಿಯೆಂಟ್ ಆಧರಿತವಾಗಿದೆ. ಇದು ಹೊಸ ಗ್ರಾಫಿಕ್ಸ್ ಒಳಗೊಂಡಿದ್ದು, 1,600 ರೂ. ವೆಚ್ಚದಾಯಕವೂ ಆಗಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ಬದಲಾವಣೆಗಳನ್ನು ಈ ವಿನ್ನರ್ ಎಡಿಷನ್‌ನಲ್ಲಿ ಮಾಡಲಾಗಿದೆ.

ವಿನ್ನರ್ ಎಡಿಷನ್ ಕೂಡ 99.7 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಇದು ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, 4.3 ಹಾರ್ಸ್ ಪವರ್ ಉತ್ಪಾದಿಸಿತ್ತದೆ. ಮತ್ತು 6.5ಎನ್ ಎಂ ಟಾರ್ಕ್ ಕೂಡ ಉತ್ಪಾದಿಸುತ್ತದೆ. ಈ ಸ್ಕೂಟರ್ ಸಿಂಗಲ್ ಗಿಯರ್ ಹೊಂದಿದ್ದು, ಕಂಪನಿ ಹೇಳುವ ಪ್ರಕಾರ ಇದು ಪ್ರತಿ ಲೀಟರ್ 80 ಕಿ.ಮೀ ಮೈಲೇಜ್ ನೀಡುತ್ತದೆ.
ಈ ಮೊಪೆಡ್‌ನ ಇನ್ನೊಂದು ವಿಶೇಷ ಎಂದರೆ, ಮೊಬೈಲ್ ಚಾರ್ಜಿಂಗ್‌ಗೆ ಅನುಕೂಲವಾಗುವಂತೆ ಕಂಪನಿ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ನೀಡದೆ. ಈ ವಿನ್ನರ್ ಎಡಿಷನ್‌ ಸೀಟು ಕೂಡ ಚೆನ್ನಾಗಿದೆ. ಆದರೆ, ಇದನ್ನು ನೀವು ಈ ಮೊದಲಿನ ವೆರಿಯೆಂಟ್‌ನಲ್ಲೂ ನೋಡಿರುತ್ತೀರಿ. ಅದೇ ರೀತಿ, ಈ ಹಿಂದಿನ ರೀತಿಯಲ್ಲಿ ಈ ಹೊಸ ಮೊಪೆಡ್‌ನಲ್ಲೂ ಹಿಂದಿನ ಸೀಟನ್ನು ತೆಗೆದು ನಿಮ್ಮ ಕೆಲಸಕ್ಕೆ ಅನುಕೂಲವಾಗುವಂತೆ ಬದಲಿಸಿಕೊಳ್ಳಬಹುದು.

ಟಿವಿಎಸ್‌ನ ಎಕ್ಸ್‌ಎಲ್ 100 ವಿನ್ನರ್ ಎಡಿಷನ್‌ಗೆ ಲೋಹದ ಫ್ಲೋರ್‌ಬೋರ್ಡ್ ಅನ್ನು ಒದಗಿಸಲಾಗಿದೆ. ಹೀಟ್ ಶೀಲ್ಡ್ ಸೇರಿದಂತೆ ಕ್ರೋಮ್ ಮತ್ತು ಮಿರರ್‌ಗಳನ್ನು ನೀಡಲಾಗಿದೆ. ಹೆವಿಡ್ಯೂಟ್ ಮಾಡೆಲ್‌ನಲ್ಲಿ ಅಂತರ್ಗತ ಎಂಜಿನ್ ಕಿಲ್ಸ್ ಸ್ವಿಚ್ ಮತ್ತು ಸ್ಟ್ರಾರ್ಟರ್ ಕೂಡ ಇದೆ.

15 ವರ್ಷಗಳ ಹಳೆಯ ವಾಹನಗಳು ಗುಜರಿಗೆ ಪಕ್ಕಾ?

ಇನ್ನು ಮೊಪೆಡ್‌ ಫ್ರಂಟ್ ಮತ್ತು ಹಿಂಬದಿಯ ಚಕ್ರಗಳಲ್ಲಿ 110 ಎಂಎಂ ಡ್ರಮ್ ಬ್ರೇಕ್ಸ್ ನೀಡಲಾಗಿದೆ. ಒಟ್ಟು 89 ಕೆಜಿ ತೂಕವಿರುವ ಈ ವಿನ್ನರ್ ಎಡಿಷನ್ 130 ಕೆ.ಜಿವರೆಗೂ ಹೊತ್ತೊಯ್ಯಬಲ್ಲದು. ಕಂಪನಿ ಈ ಮೊಪೆಡ್‌ಗೆ ಎಲ್ಇಡಿ ಡಿಆರ್‌ಎಲ್ ಒದಗಿಸಿದೆ.

ಕಂಪನಿಯು ಎಕ್ಸ್‌ಎಲ್ 100ನಲ್ಲಿ ಒಟ್ಟು ಆರು ವೆರಿಯೆಂಟ್ ಆಯ್ಕೆಗಳನ್ನು ಹ್ರಾಕರಿಗೆ ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಬಳಕೆದಾರರಿಗೆ ಈ ವೆರಿಯೆಂಟ್‌ಗಳು ಹೆಚ್ಚು ಉಪಯೋಗಕಾರಿಯಾಗಿವೆ.

ಐಕಾನಿಕ್ ಕಾರ್ ಮಾರುತಿ 800 ಬಗ್ಗೆ ನಿಮಗೆಷ್ಟು ಗೊತ್ತು?

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಎಕ್ಸ್ಎಲ್ ಮೊಪೆಡ್, ಸಣ್ಣ ರೈತರಿಗೆ, ವ್ಯಾಪಾರಸ್ಥರಿಗೆ ಬಹಳ ನೆರವನ್ನು ಒದಗಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಈ ಮೊಪೆಡ್‌ಗೆ ಮೊದಲ ಆದ್ಯತೆ ನೀಡುತ್ತಾರೆ. ತಳಮಟ್ಟದ ಜನರ ಬದುಕಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಟಿವಿಎಸ್ ಈ ಎಕ್ಸ್ಎಲ್ ಮೊಪೆಡ್ ಹೆಚ್ಚು ನೆರವು ಒದಗಿಸುತ್ತಿದೆ.

click me!