ಸ್ಪರ್ಧೆಗಳು ಅದಕ್ಕೆ ಬಹುಮಾನ ಸಾಮಾನ್ಯ. ಆದರೆ ಕೆಲವೊಂದು ಸ್ಪರ್ಧೆ ಹಾಗೂ ಬಹುಮಾನ ಭಾರಿ ಸದ್ದು ಮಾಡುತ್ತದೆ. ಇದೀಗ ರೆಸ್ಟೋರೆಂಟ್ ಒಂದು ಭರ್ಜರಿ ಊಟದ ಸ್ಪರ್ಧೆ ಆಯೋಜಿಸಿದೆ. ಇಲ್ಲಿ ಗೆದ್ದರೆ ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನವಾಗಿ ನೀಡಲಾಗುತ್ತಿದೆ. ನೀವು ಒಂದು ಸಲ ಟ್ರೈ ಮಾಡಬಹುದು.
ಪುಣೆ(ಜ.21): ಒಂದು ಪ್ಲೇಟ್ ಊಟ, ಒಂದು ಗಂಟೆ ಸಮಯ. ನಿಗದಿತ ಸಮಯದಲ್ಲಿ ಊಟ ಮುಗಿಸಿ ಗೆದ್ದವರಿಗೆ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ 350 ಬೈಕ್ ಬಹುಮಾನ. ಇದು ಶಿವರಾಜ್ ಹೊಟೆಲ್ ನೀಡಿರುವ ಆಫರ್. ಅಷ್ಟಕ್ಕೂ ಈ ಶಿವರಾಜ್ ಹೊಟೆಲ್ ಇರುವುದು ಪುಣೆಯಲ್ಲಿ. ಮುಂಬೈ ಪುಣೆ ಹೆದ್ದಾರಿಯಲ್ಲಿರುವ ಈ ಹೊಟೆಲ್ ಇದೀಗ ಬೈಕ್ ಹಾಗೂ ಆಹಾರ ಪ್ರಿಯರಿಗೆ ವಿಶೇಷ ಸ್ಪರ್ಧೆ ಆಯೋಜಿಸಿದೆ.
3 ಕೋಟಿ ಬೆಲೆಯ ಪೊರ್ಶೆ 911 ಟರ್ಬೋ S ಕಾರು ಸಂಪೂರ್ಣ ಉಚಿತ; ಒಂದೇ ಕಂಡೀಷನ್!
ಇದು ನಾನ್ ವೆಜ್ ಊಟದ ಸ್ಪರ್ಧೆ. 16ಕ್ಕೂ ಹೆಚ್ಚಿನ ವಿವಿದ ಖಾದ್ಯಗಳು ಜೊತೆಗೆ 4 ಕಿಲೋಗ್ರಾಂ ಮಟನ್ ಹಾಗೂ ಮೀನು ಆಹಾರ ಒಳಗೊಂಡಿದೆ. ಒಂದು ಪ್ಲೇಟ್ ಊಟ ಸವಿಯಲು 1 ಗಂಟೆ ಸಮಯ ನೀಡಲಾಗಿದೆ. ಈ ಸ್ಪರ್ಧೆಗೆ ಬುಲೆಟ್ ಥಾಲಿ ಎಂದು ಹೆಸರಿಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ 1.60 ರಿಂದ 1.70 ಲಕ್ಷ ರೂಪಾಯಿ ಬೆಲೆಯ ರಾಯಲ್ ಎನ್‌ಫೀಲ್ಡ್ ಬೈಕ್ ಸಂಪೂರ್ಣ ಉಚಿತ.
ಸತತ 3ನೇ ಬಾರಿ ಪಂಚಾಯತ್ ಚುನಾವಣೆ ಗೆದ್ದವನಿಗೆ ರಾಯಲ್ ಎನ್‌ಫೀಲ್ಡ್
ಶಿವರಾಜ್ ಹೊಟೆಲ್ ಹೊರಭಾಗದಲ್ಲಿ ಈ ಸ್ಪರ್ಧೆ ಕುರಿತು ದೊಡ್ಡ ಬ್ಯಾನರ್ ಹಾಕಲಾಗಿದೆ. ಈ ಸ್ಪರ್ಧೆ ಆಯೋಜಿಸಿದ ಬಳಿಕ ಹೊಟೆಲ್‌ನಲ್ಲಿ ಸ್ಪರ್ಧೆಗೂ ಕಿಕ್ಕಿರಿದು ಜನ ಸೇರಿದ್ದಾರೆ. ಒಂದು ಪ್ಲೇಟ್ ಊಟದ ಬೆಲೆ 2,500 ರೂಪಾಯಿ. ಪ್ರತಿ ದಿನ ಇದೀಗ 65ಕ್ಕೂ ಹೆಚ್ಚು ಪ್ಲೇಟ್ ಊಟ ಮಾರಾಟವಾಗುತ್ತಿದೆ.
ಹಲವರು 2,500 ರೂಪಾಯಿ ನೀಡಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದುವರೆಗೆ ಗೆದ್ದಿರುವುದು ಒಬ್ಬರು ಮಾತ್ರ. ಸೋಲ್ಹಾಪರುದ ಸೋಮನಾಥ್ ಪವರ್ ಸ್ಪರ್ಧೆ ಗೆದ್ದಿದ್ದಾರೆ. ಇವರಿಗೆ ಹೊಚ್ಚ ಹೊಸ ಬುಲೆಟ್ ನೀಡಲಾಗಿದೆ. ನೀವು ನಿರಾಶರಾಗಬೇಡಿ. ಹೊಟೆಲ್ ವರಾಂಡದಲ್ಲಿ ಇನ್ನೂ ನಾಲ್ಕು ಹೊಚ್ಚ ಹೊಸ ಬೈಕ್‌ಗಳು ಇದೇ ಸ್ಪರ್ಧೆ ವಿಜೇತರಿಗೆ ನೀಡಲು ನಿಲ್ಲಿಸಲಾಗಿದೆ.
ಹೀಗಾಗಿ ನೀವು ಒಂದು ಬಾರಿ ಟ್ರೈ ಮಾಡಬಹುದು. ಸೋತರೆ ನಷ್ಟವೇನು ಇಲ್ಲ, ಬರೋಬ್ಬರಿ 2,500 ರೂಪಾಯಿ ಮೌಲ್ಯದ ಊಟ ಸವಿಯುವ ಅವಕಾಶ ಸಿಗಲಿದೆ. ಗೆದ್ದರೆ 1.70 ಲಕ್ಷ ರೂಪಾಯಿ ಬೆಲೆಯ ರಾಯಲ್ ಎನ್‌ಫೀಲ್ಡ್ ಬೈಕ್ ನಿಮ್ಮದಾಗಲಿದೆ.