ವಾಹನಗಳು ತೆರಳದ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು DRDO ಬೈಕ್ ಆ್ಯಂಬುಲೆನ್ಸ್ ಅಭಿವೃದ್ಧಿ ಪಡಿಸಿದೆ. ಅಭಿವೃದ್ಧಿ ಪಡಿಸಿದ 21 ಬೈಕ್ ಆ್ಯಂಬುಲೆನ್ಸ್‌ನ್ನು CRPFಗೆ ಹಸ್ತಾಂತರಿಸಿದೆ.
ನವದೆಹಲಿ(ಜ.18): ತುರ್ತು ಸೇವೆಗೆ ಹಲವು ಪ್ರದೇಶಗಳಲ್ಲಿ ದೊಡ್ಡ ಆ್ಯಂಬ್ಯುಲೆನ್ಸ್ ವಾಹನ ಬಳಕೆಯಾಗುವುದಿಲ್ಲ. ಕಾರಣ ಕೆಲ ಪ್ರದೇಶಗಳಿಗೆ ವಾಹನ ಸಂಚರಿಸಲು ಮಾರ್ಗಗಳೇ ಇರುವುದಿಲ್ಲ. ಅದರಲ್ಲೂ ದಾಳಿವೇಳೆ ಗಾಯಗೊಂಡವರನ್ನು ಆಸ್ಪತ್ರೆ ಸಾಗಿಸಲು, ಹಿಂಸಾಚಾರ ಪ್ರದೇಶ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ(DRDO) ಸಂಸ್ಥೆ ವಿಶೇಷ ಬೈಕ್ ಆ್ಯಂಬುಲೆನ್ಸ್ ಅಭಿವೃದ್ಧಿ ಪಡಿಸಿದೆ.
ಸರ್ಕಾರಕ್ಕೆ 51 ವಿಂಗರ್ ಆ್ಯಂಬುಲೆನ್ಸ್ ನೀಡಿದ ಟಾಟಾ ಮೋಟಾರ್ಸ್!.
undefined
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ. ಹಿಂಬದಿ ಸೀಟ್ ತೆಗೆದು, ಆರಾಮಾದಾಯಕವಾಗಿ ಕುಳಿತುಕೊಳ್ಳುವ ಬಕೆಟ್ ಸೀಟ್ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಲ್ಟ್ , ಆಕ್ಸಿಜನ್ ಸಿಲಿಂಡರ್, ತುರ್ತು ಚಿಕಿತ್ಸೆ ಕಿಟ್ ಸೇರಿದಂತೆ ಹಲವು ಸೌಲಭ್ಯಗಳು ಬೈಕ್ ಆ್ಯಂಬ್ಯುಲೆನ್ಸ್‌ನಲ್ಲಿದೆ.
DRDO hands over Motor Bike Ambulance ‘Rakshita’ to CRPFhttps://t.co/cV461UzSJ7 pic.twitter.com/cwMq796JtL
— DRDO (@DRDO_India)ಆಮ್ಲಜನಕ ಪೂರೈಕೆ ಪ್ರಮಾಣ ಸೇರಿದಂತೆ ತುರ್ತು ಸೇವೆಗಳ ಕಂಟ್ರೋಲ್ ಬೈಕ್ ಹ್ಯಾಂಡಲ್ ಮುಭಾಗ ಡಿಜಿಟಲ್ ಡಿಸ್‌ಪ್ಲೇ ಮೂಲಕ ತೋರಿಸಲಿದೆ. ಇಷ್ಟೇ ಅಲ್ಲ ರೈಡರ್ ಕಂಟ್ರೋಲ್ ಮಾಡಬಹುದಾದ ವ್ಯವಸ್ಥಗಳಿವೆ. 21 ಆ್ಯಂಬುಲೆನ್ಸ್ ಬೈಕ್ ಯೋಜನೆಗೆ 35.49 ಲಕ್ಷ ರೂಪಾಯಿ ಖರ್ಚು ಆಗಿದೆ.
ಸಿಆರ್‌ಪಿಎಫ್ ನಿಯೋಜಿಸಿದ ಸ್ಥಳಗಳಲ್ಲಿ ತುರ್ತು ಆರೋಗ್ಯ ಸೇವೆಯ ಅಗತ್ಯತೆ ಹೆಚ್ಚಾಗಿರುತ್ತದೆ. ನಕ್ಸಲರು ಸೇರಿದಂತೆ ಹಲವು ಭಯೋತ್ಪಾದನೆ ವಿರುದ್ಧ ಕಾರ್ಯಚರಣೆಗಳಿಯುವ ಸಿಆರ್‌ಪಿಎಫ್ ಯೋಧರಿಗೂ ಬೈಕ್ ಆ್ಯಂಬುಲೆನ್ಸ್ ನೆರವಾಗಲಿದೆ ಎಂದು CRPF ಚೀಫ್ ಎಪಿ ಮಹೇಶ್ವರಿ ಹೇಳಿದ್ದಾರೆ.