ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಬಿಡುಗಡೆ; ಆಕರ್ಷಕ ವಿನ್ಯಾಸ ಹಾಗೂ ಬೆಲೆ!

By Suvarna News  |  First Published Jan 18, 2021, 3:28 PM IST

ಭಾರತದಲ್ಲಿ ಹೊಂಡಾ ಸ್ಕೂಟರ್ ಮಾಡಿರುವ ಮೋಡಿ ಅಷ್ಟಿಟ್ಟಲ್ಲ. ಸ್ಕೂಟರ್ ವಿಭಾಗದಲ್ಲಿ ಭಾರತೀಯರು ಹೊಂಡಾ ಮೇಲೆ ನಂಬಿಕೆ. ಇದೀಗ ಹೊಂಡಾ ತನ್ನ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಜ.18): ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸುಧಾರಿತ,  ಸಂಪೂರ್ಣ ಹೊಸ ರೂಪದ ಹಾಗೂ ಅತ್ಯಾಧನಿಕ ತಂತ್ರಜ್ಞಾನದ  ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್(Grazia Sports Edition) ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಇತಿಹಾಸ ಸೃಷ್ಟಿಸಿದ ಹೊಂಡಾ ಆ್ಯಕ್ಟಿವಾ ಸ್ಕೂಟರ್!.

Tap to resize

Latest Videos

undefined

ಉತ್ಸಾಹದಾಯಕ ಗುಣ ವಿಶೇಷತೆ 
ಚೇತೋಹಾರಿಯಾದ ಬಣ್ಣ ಮತ್ತು ಗ್ರಾಫಿಕ್ಸ್‍ಗಳು ಸೇರಿದಂತೆ ಒಟ್ಟಾರೆ ನೈಪುಣ್ಯತೆ ನೋಟದ ಗ್ರಾಜಿಯಾ, ರಸ್ತೆ ಮೇಲೆ ಸಾಗುವಾಗ ತನ್ನ ಅಸ್ತಿತ್ವವನ್ನು ಸಮರ್ಥವಾಗಿ ಬಿಂಬಿಸಿ ಇತರರ ಗಮನ ಸೆಳೆಯಲಿದೆ.  ಎಡ್ಜಿ ಹೆಡ್‍ಲ್ಯಾಂಪ್ ಮತ್ತು ಪೊಸಿಷನ್ ಲ್ಯಾಂಪ್‍ಗಳು, ಮುಂಭಾಗದಲ್ಲಿ ಆಕರ್ಷಕ ನೋಟ ಮತ್ತು ತಂತ್ರಜ್ಞಾನದ ಸಮ ಪ್ರಮಾಣದ ವಿನ್ಯಾಸ ಒದಗಿಸುತ್ತವೆ.   ಹೊಸ ರೇಸಿಂಗ್ ಸ್ಟ್ರೈಪ್ಸ್ ಮತ್ತು ಕೆಂಪು- ಕಪ್ಪು ಬಣ್ಣದ ರಿಯರ್ ಸಸ್ಪೆನ್ಶನ್ ಹೊಂದಿರುವ ಗ್ರಾಜಿಯಾ, ತನ್ನ ಯುವ ಗ್ರಾಹಕರಿಗೆ   ತಾರುಣ್ಯಭರಿತದ ಅನುಭವ ನೀಡಲಿದೆ. ಗ್ರಾಜಿಯಾದ ಹೊಸ ಲಾಂಛನವು ಅದರ ಉತ್ಸಾಹಭರಿತ ಮತ್ತು ಆಕರ್ಷಕ ನೋಟವು ಎದ್ದು ಕಾಣುವಂತೆ ಮಾಡುತ್ತದೆ. ಮುಂಭಾಗದ ಬಣ್ಣದ ಕಮಾನು ಮತ್ತು ಹಿಂಭಾಗದಲ್ಲಿನ ಸುರಕ್ಷತೆಯ ಹಿಡಿಕೆಯು (ಗ್ರ್ಯಾಬ್ ರೇಲ್) ಗ್ರಾಜಿಯಾದ ಆಕರ್ಷಕ ನೋಟವನ್ನು ಹೆಚ್ಚಿಸಿವೆ.

ಅಸಾಧಾರಣ ಸಾಮಥ್ರ್ಯ
ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಾವೀನ್ಯತೆಗಳಿಂದಾಗಿ, ಗ್ರಾಜಿಯಾ,  ಸವಾರರಲ್ಲಿ ಹೊಸ ಹುರುಪು ಮೂಡಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ. ಬಿಎಸ್6 ಮಾನದಂಡದ 125ಸಿಸಿ ಪಿಜಿಎಂ-ಎಫ್‍ಐ ಎಚ್‍ಇಟಿ (ಹೋಂಡಾ ಇಕೊ ಟೆಕ್ನಾಲಜಿ)  ಎಂಜಿನ್‍ಗೆ ಹೆಚ್ಚಿಸಿದ ಸ್ಮಾರ್ಟ್ ಪವರ (ಇಎಸ್‍ಪಿ) ಉತ್ತೇಜನ ನೀಡಲಿದೆ.  ಸ್ಮಾರ್ಟ್ ಸೌಲಭ್ಯಗಳಾದ  ಐಡಲಿಂಗ್ ಸ್ಟಾಪ್ ಸಿಸ್ಟಮ್ ಮತ್ತು ಸೈಡ್ ಸ್ಯಾಂಡ್ ಇಂಡಿಕೇಟರ್ ವಿತ್ ಎಂಜಿನ್ ಕಟ್ ಆಫ್- ಇದಕ್ಕೆ ಹೊಸ ಮೌಲ್ಯ ಸೇರ್ಪಡೆ ಮಾಡಿವೆ.

ಸವಾರರಿಗೆ  ಬೆರಗುಗೊಳಿಸುವ ಆರಾಮ ಒದಗಿಸಲು ಸೌಲಭ್ಯಗಳಾದ ಇಂಟೆಗ್ರೇಟೆಡ್ ಪಾಸ್ ಸ್ವಿಚ್,, ಇಂಧನ ಭರ್ತಿಯ ಬಾಹ್ಯ ಮುಚ್ಚಳ ಮತ್ತು ಗ್ಲೋವ್ ಬಾಕ್ಸ್‍ನ ಮರು ವಿನ್ಯಾಸ. ಹೆಚ್ಚಿಸಿದ ಗ್ರೌಂಡ್ ಕ್ಲಿಯರೆನ್ಸ್ (+16ಎಂಎಂ) ಒಳಗೊಂಡಿರುವ ಟೆಲಿಸ್ಕೋಪಿಕ್ ಸಸ್ಪೆನ್ಶನ್, ಒರಟು ರಸ್ತೆಗಳಲ್ಲಿಯೂ ಆರಾಮವಾಗಿ ಸವಾರಿ ಮಾಡಲು ನೆರವಾಗಲಿವೆÉ. ಹೊಸ ಸ್ಪ್ಲಿಟ್ ಎಲ್‍ಇಡಿ ಪೊಸಿಷನ್ ಲ್ಯಾಂಪ್, ಚಿಸೆಲೆಡ್ ಟೇಲ್ ಲ್ಯಾಂಪ್. ಜೆಟ್ ಇನ್‍ಸ್ಪಾಯರ್ಡ್ ರಿಯರ್ ವಿಂಕರ್ಸ್, ಸ್ಪ್ಲಿಟ್ ಗ್ರ್ಯಾಬ್ ರೇಲ್ ಮತ್ತು ಕಪ್ಪು ಮಿಶ್ರ ಲೋಹದ ಪ್ರೀಮಿಯಂ ಚಕ್ರಗಳು ಇದರ ಆಕರ್ಷಣೆ ಹೆಚ್ಚಿಸಿವೆ.  ಸಂಪೂರ್ಣ ಡಿಜಿಟಲ್ ಮೀಟರ್ ಮತ್ತು ಬಹು ಬಗೆಯಲ್ಲಿ ಕಾರ್ಯನಿರ್ವಹಿಸಲಿರುವ ಸ್ವಿಚ್- ಗ್ರಾಜಿಯಾ ಸ್ಪೋಟ್ರ್ಸ್  ಆವೃತ್ತಿಯನ್ನು  ಬೆರಗುಗೊಳಿಸುವ ಅಸಾಧಾರಣ ಸಾಮಥ್ರ್ಯದ ಸ್ಕೂಟರ್ ಆಗಿ ರೂಪಿಸಿವೆ.

ಬೆಲೆ ಮತ್ತು ಬಣ್ಣ
ಹೊಸ ಗ್ರಾಜಿಯಾ ಸ್ಪೋಟ್ರ್ಸ್ ಆವೃತ್ತಿಯು ಎರಡು ಬಣ್ಣಗಳಾದ ಪರ್ಲ್ ನೈಟ್‍ಸ್ಟಾರ್ ಬ್ಲ್ಯಾಕ್ ಮತ್ತು ಸ್ಪೋಟ್ರ್ಸ್ ರೆಡ್ ಕಲರ್‌ನಲ್ಲಿ  ದೊರೆಯಲಿದೆ.  ಆಕರ್ಷಕ ಬೆಲೆ ರೂ 82,564 ಗಳಿಗೆ (ಎಕ್ಸ್ ಶೋ ರೂಂ) ದೊರೆಯಲಿದೆ. ದೇಶದಾದ್ಯಂತ ಇರುವ ಹೋಂಡಾ ದ್ವಿಚಕ್ರ ವಾಹನ ಡೀಲರ್‍ಶಿಪ್‍ಗಳಲ್ಲಿ  ಗ್ರಾಜಿಯಾ ಸ್ಪೋಟ್ರ್ಸ್ ಆವೃತ್ತಿಯು ದೊರೆಯಲಿದೆ.

ಹಿಂದಿನ 20 ವರ್ಷಗಳಲ್ಲಿ ಸ್ಕೂಟರ್ ಮಾರುಕಟ್ಟೆಯನ್ನು ಮರು ಸೃಷ್ಟಿಸಿರುವ ಹೋಂಡಾ, ಕಾಲದ ಜತೆಗೆ ಬೆಳೆಯುತ್ತಲೇ ಬಂದಿದೆ. ಪ್ರೀಮಿಯಂ ಸ್ಕೂಟರ್ ವಲಯದಲ್ಲಿ ಹೆಚ್ಚು ಸಂಭ್ರಮ ಸೇರ್ಪಡೆಗೊಳಿಸಲು, ಈ ವಿಭಾಗದಲ್ಲಿನ ಅತ್ಯಂತ ಸುಧಾರಿತ ಸ್ಕೂಟರ್ ಆಗಿರುವ ಗ್ರಾಜಿಯಾದ ಹೊಸ ಸ್ಪೋಟ್ರ್ಸ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಲು ನಮಗೆ ತುಂಬ ಸಂತಸವಾಗುತ್ತಿದೆ ಎಂದು  ಹೊಂಡಾ ಸ್ಕೂಟರ್ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಹೇಳಿದರು

ಹೋಂಡಾ ಗ್ರಾಜಿಯಾ ಸುಧಾರಿತ 125ಸಿಸಿ ಅರ್ಬನ್ ಸ್ಕೂಟರ್ ಆಗಿದೆ. ತಮ್ಮ ಹುರುಪಿನ ಮತ್ತು ಮೋಜಿನ ವ್ಯಕ್ತಿತ್ವವನ್ನು ಪ್ರತಿಫಲಿಸುವ ರೀತಿಯಲ್ಲಿ ಪರಿಣಾಮ ಬೀರಲು ಆದ್ಯತೆ ನೀಡುವ ಸವಾರರ ಅಗತ್ಯಗಳನ್ನು ಈಡೇರಿಸುವ ಬಗೆಯಲ್ಲಿ ಇದನ್ನು ತಯಾರಿಸಲಾಗಿದೆ.  ಸಂಪೂರ್ಣ ಹೊಸದಾದ ಗ್ರಾಜಿಯಾ ಸ್ಪೋಟ್ರ್ಸ್ ಆವೃತ್ತಿಯು ನಿಜವಾಗಿಯೂ ಸವಾರರನ್ನು ಹೆಚ್ಚು ಉತ್ಸಾಹಭರಿತರನ್ನಾಗಿಸಲಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್‍ಗಳನ್ನು ಪುನರಾರಂಭಿಸುತ್ತಿರುವ ಸದ್ಯದ ಸಂದರ್ಭದಲ್ಲಿ ಗ್ರಾಜಿಯಾ ಸ್ಪೋಟ್ರ್ಸ್ ಆವೃತ್ತಿಯು, ತಮ್ಮ ಸಂಚಾರಕ್ಕೆ ದ್ವಿಚಕ್ರ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುವವರ ಹೊಸ ಆಯ್ಕೆ ಆಗಿರಲಿದೆ ಎಂದು  ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದರು.

click me!