ಹೋಂಡಾ ಗ್ರೇಜಿಯಾ ಖರೀದಿ ಮೇಲೆ 5000 ರೂ. ಕ್ಯಾಶ್‌ಬ್ಯಾಕ್ ಆಫರ್

By Suvarna News  |  First Published Dec 28, 2020, 1:53 PM IST

ಹೋಂಡಾ ಸ್ಕೂಟರ್‌ಗಳು, ದ್ವಿಚಕ್ರವಾಹನಗಳು, ಪ್ರೀಮಿಯಂ ಬೈಕುಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಹೊಂದಿವೆ. ಗ್ರೇಜಿಯಾ 125 ಸ್ಕೂಟರ್‌ಗೂ ಒಳ್ಳೆಯ ಪ್ರತಿಕ್ರಿಯೆ ಇದೆ. ಕಂಪನಿ ಈ ಸ್ಕೂಟರ್ ಖರೀದಿ ಮೇಲೆ ಶೇ.5 ಅಂದರೆ 5000 ರೂ.ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಇದು ಆಯ್ದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಮೇಲೆ ಮಾತ್ರ ಲಭ್ಯವಿದೆ.


ಹೋಂಡಾ ದ್ವಿಚಕ್ರ ವಾಹನ ಹಾಗೂ ಸ್ಕೂಟರ್‌ಗಳನ್ನು ಇಷ್ಟ ಪಡುವ ಬಹುದೊಡ್ಡ ಗ್ರಾಹಕವರ್ಗ ದೇಶದಲ್ಲಿದೆ. ಹಾಗಾಗಿ, ತನ್ನ ಗ್ರಾಹಕರನ್ನು ಮತ್ತಷ್ಟು ಹಿಡಿದಿಟ್ಟುಕೊಳ್ಳಲು ಆಗಾಗ ಆಫರ್‌ಗಳು ಘೋಷಣೆಯಾಗುತ್ತವೆ. ಇದೀಗ ಹೋಂಡಾ ಟುವ್ಲೀಲರ್ಸ್ ಇಂಡಿಯಾ, 125 ಸಿಸಿ ಸ್ಕೂಟರ್ ಗ್ರೇಜಿಯಾ 125 ಮೇಲೆ ವಿಶೇಷ ಆಫರ್‌ ಘೋಷಿಸಿದೆ. ಈ ವಿಶೇಷ  ಆಫರ್ ಏನೆಂದರೆ, ಗ್ರಾಹಕರು ಗ್ರೇಜಿಯಾ 125 ಸ್ಕೂಟರ್ ಖರೀದಿ ಮೇಲೆ ಶೇ.5ರಷ್ಟು ಅಂದರೆ 5000 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದು. ಆದರೆ, ಇಲ್ಲೊಂದು ಷರತ್ತು ಇದೆ.

7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?

Latest Videos

undefined

ಹೋಂಡಾ ಟು ವೀಲರ್ ಇಂಡಿಯಾ ಕಂಪನಿಯ ಪಾಲುದಾರ ಬ್ಯಾಂಕಗಳ ಕ್ರೆಡಿಡ್ ಕ್ರೆಡಿಟ್ / ಡೆಬಿಟ್ ಕಾರ್ಡ್ ಇಎಂಐ ಸ್ಕೀಮ್‌ನಲ್ಲಿ ಮಾತ್ರ ಈ ಕ್ಯಾಶ್ ಬ್ಯಾಕ್ ಆಫರ್ ಇದೆ.  ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೆಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಫೆಡರಲ್ ಬ್ಯಾಂಕ್‌ಗಳು ಹೋಂಡಾ ಕಂಪನಿಯ ಪಾಲುದಾರ ಬ್ಯಾಂಕುಗಳಾಗಿವೆ. ಈ ಬ್ಯಾಂಕುಗಳ ಕ್ರೆಡಿಟ್/ಡೆಬಿಟ್ ಕಾರ್ಡ್ ಇಎಂಐ ಮೇಲೆ ಮಾತ್ರವೇ ಈ ಆಫರ್ ಸಿಗಲಿದೆ ಎಂದು ಬೈಕ್‌ವಾಲೆ ವೆಬ್‌ಸೈಟ್ ವರದಿ ಮಾಡಿದೆ.

ಹೋಂಡಾ ಕಂಪನಿ ಈಗಾಗಲೇ ತನ್ನ ಎಸ್‌ಪಿ 125, ಹಾರ್ನೆಟ್ 2.0, ಆಕ್ಟಿವಾ 6ಜಿ ಮತ್ತು ಸಿಡಿ 110 ಡ್ರೀಮ್ ಸೇರಿದಂತೆ ಬೇರೆ ಬೇರೆ ಮಾಡೆಲ್‌ಗಳ ಮೇಲೆ ಆಫರ್‌ಗಳನ್ನು ಘೋಷಿಸಿದೆ. ಇದೀಗ ಆ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಗ್ರೇಜಿಯಾ 125 ಸ್ಕೂಟರ್‌ಗೂ ವಿಸ್ತರಿಸಿದೆ.

ಗ್ರೇಜಿಯಾ 125 ಸ್ಕೂಟರ್ ಎರಡು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆಲಭ್ಯವಿದೆ. ಮೊದಲನೆಯದ್ದು- ಡ್ರಮ್ ಬ್ರೇಕ್ ವರ್ಷನ್. ಈ ಸ್ಕೂಟರ್ ಬೆಲೆ 73,915 ರೂಪಾಯಿ. ಎರಡನೆಯದ್ದು- ಡಿಸ್ಕ್‌ ಬ್ರೇಕ್ ವೆರಿಯೆಂಟ್. ಈ ಸ್ಕೂಟರ್ ಬೆಲೆ 80,981 ರೂಪಾಯಿ. ಇಲ್ಲಿ ಹೇಳಲಾಗಿರುವ ಈ ಎರಡು ವರ್ಷನ್‌ಗಳ ಸ್ಕೂಟರ್ ಬೆಲೆ ದಿಲ್ಲಿ ಎಕ್ಸ್‌ಶೋರೂಮ್ ಬೆಲೆಯಾಗಿದೆ. ಹಾಗಾಗಿ, ಬೇರೆ ಬೇರೆ ನಗಳಲ್ಲಿ ಈ ಬೆಲೆಗಳಲ್ಲಿ ವ್ಯತ್ಯಾಸವಾಗಬಹುದು ಎಂಬುದನ್ನು ಗಮನಿಸಿ.

ಇನ್ನು ಹೋಂಡಾ ಸಿವಿಕ್, ಸಿಆರ್- ವಿ ಕಾರಿನ ಉತ್ಪಾದನೆ ಇಲ್ಲ!

ಗ್ರೇಜಿಯಾ ಸ್ಕೂಟರ್ 124 ಸಿಸಿ, ಫೋರ್ ಸ್ಟ್ರೋಕ್ ಮತ್ತು ಏರ್ ಕೋಲ್ಡ್ ಎಂಜಿನ್ ಹೊಂದಿದೆ. ಇದು ಪ್ರೋಗ್ರಾಮ್ಡ್ ಫ್ಯೂಯೆಲ್ ಇಂಜೆಕ್ಷನ್, ಹೋಂಡಾ ಇಕೋ ಟೆಕ್ನಾಲಜಿ(ಎಚ್ಇಟಿ) ಹಾಗೂ ಸ್ಮೂತ್ ಮತ್ತು ಸೈಲೆಂಟ್ ಎಂಜಿನ್ ಸ್ಟಾರ್ಟ್‌ಗಾಗಿ ಎನಾಹನ್ಸಡ್ ಸ್ಮಾರ್ಟ್ ಪವರ್(ಇಎಸ್‌ಪಿ), ಅಲ್ಟರ್ನೆಟ್ ಕರೆಂಟ್ ಜನರೇಟರ್(ಎಸಿಜಿ) ತಂತ್ರಜ್ಞಾನವನ್ನು ಹೊಂದಿದೆ. ಗ್ರೇಜಿಯಾ 125 ಸಿಸಿ ಸ್ಕೂಟರ್ 6000 ಆರ್‌ಪಿಎಂನಲ್ಲಿ  8.14 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ ಮತ್ತು 5,000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಟ್ಯೂನಿಯಸ್ ವೆರಿಯಬಲ್ ಟ್ರಾನ್ಸಿಮಿಷನ್(ಸಿವಿಟಿ) ಯುನಿಟ್ ಎಂಜಿನ್‌ನೊಂದಿಗೆ ಈ ಸ್ಕೂಟರ್  ಬರುತ್ತದೆ.

ಈ ಮೊದಲೇ ಹೇಳಿದಂತೆ,  ಭಾರತದಲ್ಲಿ ಹೋಂಡಾ ದ್ವಿಚಕ್ರವಾಹನಗಳು ಮತ್ತು ಸ್ಕೂಟರ್‌ಗಳಿಗೆ ವಿಶಿಷ್ಟವಾದ ಬೇಡಿಕೆ ಇದೆ. ಆಕ್ಟಿವಾ ಸ್ಕೂಟರ್‌ ಅಂತೂ ತನ್ನ ಸೆಗ್ಮೆಂಟ್‌ನಲ್ಲಿ ಅಗ್ರಸ್ಥಾನಿಯಾಗಿದೆ. ಹಾಗೆ ನೋಡಿದರೆ, ಹೊಸ ಉತ್ಪನ್ನಗಳ ಅನಾವರಣವನ್ನು ಪರಿಗಣಿಸಿ ಹೇಳುವುದಾದರೆ, 2020 ವರ್ಷ ಕಂಪನಿಗೆ ಅಂಥ ತೀರಾ ನಿರಾಶಾದಾಯಕ ವರ್ಷವಾಗಿಲ್ಲ. ಯಾಕೆಂದರೆ, ಈ ವರ್ಷ ಕಂಪನಿ ಹೋಂಡಾ ಹೈನೆಸ್ 350 ಮತ್ತು ಹಾರ್ನೆಟ್2.0 ಎಂಬ ಎರಡು ಪ್ರೀಮಿಯಂ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಈ ವರ್ಷದ ಆರಂಭದಲ್ಲಿ ಕಂಪನಿ ಹೋಂಡಾ ಸಿಆರ್‌ಪಿಎಫ್1100ಎಲ್ ಆಫ್ರಿಕ್ ಟ್ವಿನ್ ಬಿಡುಗಡೆ ಮಾಡಿತ್ತು. ಇದಕ್ಕೆ ಅಪ್‌ಡೇಟ್ ಎಂಜಿನ್ ಮತ್ತು ಹೊಸ ಫೀಚರ್‌ಗಳನ್ನು ಸೇರಿಸಿತ್ತು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದಾಗ್ಯೂ ಈ ಮಾಡೆಲ್‌ಗಳ ಮುಂದಿನ ವರ್ಷ ಭಾರತಕ್ಕೆ ಕಾಲಿಡಬಹುದು ಎಂಬುದ  ಈ ವಲಯದ ತಜ್ಞರ ಅಭಿಪ್ರಾಯವಾಗಿದೆ.

ಜನವರಿಯಲ್ಲಿ ಟಾಟಾ ಅಲ್ಟ್ರೋಜ್ ಟರ್ಬೋ-ಪೆಟ್ರೋಲ್ ಕಾರು ಬಿಡುಗಡೆ

 

click me!