ಬೈಕ್, ಸ್ಕೂಟರ್ ಬೆಲೆ ಏರಿಕೆ ಕುರಿತು ಹೀರೋ ಮೋಟೋಕಾರ್ಪ್ ಹೇಳುವುದೇನು?

Published : Dec 19, 2020, 09:35 PM IST
ಬೈಕ್, ಸ್ಕೂಟರ್ ಬೆಲೆ ಏರಿಕೆ ಕುರಿತು ಹೀರೋ ಮೋಟೋಕಾರ್ಪ್ ಹೇಳುವುದೇನು?

ಸಾರಾಂಶ

ಕಳೆದ ಕೆಲ ದಿನಗಳಿಂದ ಭಾರತದ ಆಟೋಮೊಬೈಲ್ ಕಂಪನಿಗಳು ತಮ್ಮ ತಮ್ಮ ವಾಹನಗಳ ಬೆಲೆ ಏರಿಕೆ ಮಾಹಿತಿಗಳು ಹೊರಬೀಳುತ್ತಿದೆ. ಇನ್ನೂ ಹೀರೋ ಮೋಟೋಕಾರ್ಪ್ ವಾಹನ ಬೆಲೆ ಏರಿಕೆ ಮಾಹಿತಿಗಳು ಹರಿದಾಡಿತ್ತು. ಇದೀಗ ಹೀರೋ ಬೆಲೆ ಏರಿಕೆ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ನವದೆಹಲಿ(ಡಿ.19): ಭಾರತದ ಬಹುತೇಕ ಆಟೋಮೊಬೈಲ್ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದೆ. ಇದೀಗ ಹೀರೋ ಮೋಟೋಕಾರ್ಪ್ ಬೆಲೆ ಏರಿಕೆ ಕುರಿತು ಅಧೀಕೃತ ಪ್ರಕಟಣೆ ಹೊರಡಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ, ವಾಹನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೀರೋ ಹೇಳಿದೆ.

ಕರ್ನಾಟಕ ಪೊಲೀಸ್ ಇಲಾಖೆಗೆ ನೂತನ ಹೀರೋ ಗ್ಲಾಮರ್ ಬೈಕ್.

ಉಕ್ಕು, ಅಲ್ಯುಮಿನಿಯಂ, ಪ್ಲಾಸ್ಟಿಕ್‍ಗಳು ಹಾಗೂ ಅಮೂಲ್ಯ ಲೋಹಗಳು ಸೇರಿದಂತೆ ವಿವಿಧ ವಸ್ತು/ಸಾಮಗ್ರಿಗಳ ಬೆಲೆಗಳು ಏರುತ್ತಲೇ ಬಂದಿವೆ. ಲೀಪ್ 2 ಯೋಜನೆ ಅಡಿ ಈಗಾಗಲೇ ನಾವು ಉಳಿತಾಯ ಕಾರ್ಯಕ್ರಮವನ್ನು ಚುರುಕುಗೊಳಿಸಿದ್ದು, ಗ್ರಾಹಕರ ಮೇಲಾಗುವ ಹೊರೆ ಕಡಿಮೆ ಮಾಡಲು ಮತ್ತು ನಮ್ಮ ಲಾಭದ ಪಾಲನ್ನು ರಕ್ಷಿಸಿಕೊಳ್ಳಲು ಬೆಲೆ ಏರಿಕೆಯ ವ್ಯತಿರಿಕ್ತ ಪ್ರಭಾವವನ್ನು ಶಮನಗೊಳಿಸುವುದನ್ನು ಮುಂದುವರಿಸುತ್ತೇವೆ ಎಂದು ಹೀರೋ ಹೇಳಿದೆ.

ಸಾಮಗ್ರಿಗಳ ಬೆಲೆ ಏರಿಕೆಯ ಪರಿಣಾಮವನ್ನು ಭಾಗಶಃ ತುಂಬಲು, ಜನವರಿ 1, 2021 ರಿಂದ ನಾವು ನಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ. ಬೆಲೆ ಏರಿಕೆಯು ವಿವಿಧ ಮಾಡಲ್‍ಗಳಲ್ಲಿ ಬೇರೆ ಬೇರೆಯಾಗಿದ್ದು, ಕಾಲಕ್ರಮೇಣ ನಮ್ಮ ನಿಖರವಾದ ಬೆಲೆ ಏರಿಕೆಯ ಬಗ್ಗೆ ಮಾಹಿತಿ ಒದಗಿಸುತ್ತೇವೆ ಎಂದು ಹೀರೋ ಹೇಳಿದೆ.

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್