7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?

By Suvarna News  |  First Published Dec 25, 2020, 4:18 PM IST

ರಾಯಲ್ ಎನ್‌ಫೀಲ್ಡ್ ತನ್ನ ಮಿಟಿಯರ್ 350 ಮೋಟಾರ್‌ಸೈಕಲ್ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಕಂಪನಿ ನವೆಂಬರ್ ತಿಂಗಳಲ್ಲಿ ಒಟ್ಟು 7000 ಮಿಟಿಯರ್  ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಜೊತೆಗೆ ಕಂಪನಿ ಎವರ್‌ಗ್ರೀನ್ ಬೈಕ್ , ಕ್ಲಾಸಿಕ್ 350 ತನ್ನ ಎಂದಿನ ನಾಗಾಲೋಟವನ್ನು ಮುಂದುವರಿಸಿದೆ.


ಭಾರತದ ರಸ್ತೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ‘ಕಿಂಗ್’ನಂಥೆ ರಾರಾಜಿಸುತ್ತಿದೆ. ಹೋಂಡಾ, ಜಾವಾದಂಥ ಬೈಕ್‌ಗಳಿಂದ ತೀವ್ರ ಪೈಪೋಟಿ ಎದುರಾಗಿದ್ದರೂ ರಾಯಲ್ ಎನ್‌ಫೀಲ್ಡ್ ತನ್ನ ಸ್ಥಾನವನ್ನು  ಬಿಟ್ಟುಕೊಟ್ಟಿಲ್ಲ. ಇದಕ್ಕೆ ರಾಯಲ್ ಎನ್‌ಫೀಲ್ಡ್ ಮಿಟಿಯರ್ 350 ಕ್ರೂಸರ್ ಮಾರಾಟವೇ ಸಾಕ್ಷಿಯಾಗಿದೆ.

ನವೆಂಬರ್ 6ರಂದು ರಾಯಲ್ ಎನ್‌ಫೀಲ್ಡ್ ಮಿಟಿಯರ್ 350 ಬಿಡುಗಡೆಯಾಯಿತು ಮತ್ತು ಬಿಡುಗಡೆಯಾದ ಎರಡು ವಾರದಲ್ಲೇ 8000 ಬುಕ್ಕಿಂಗ್ ಪಡೆದುಕೊಂಡು ದಾಖಲೆ ನಿರ್ಮಿಸಿದೆ. ಒಟ್ಟಾರೆಯಾಗಿ ನವೆಂಬರ್ ತಿಂಗಳಲ್ಲಿ ಕಂಪನಿ 7,031 ಮಿಟಿಯರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಇದರೊಂದಿಗೆ ಮಿಟಿಯರ್, ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಮೈಟಾರ್‌ಸೈಕಲ್‌ಗಳ ಪೈಕಿ ಎರಡನೇ ಅತಿ ಹೆಚ್ಚು ಮಾರಾಟ ಕಾಣುತ್ತಿರುವ ದ್ವಿಚಕ್ರವಾಹನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮೊದಲನೆಯ ಸ್ಥಾನದಲ್ಲಿ ಖಂಡಿತವಾಗಿಯೂ ಎವರ್‌ಗ್ರೀನ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಇದೆ.

Tap to resize

Latest Videos

undefined

5000 ರೂ. ಕೊಟ್ಟು ಹೊಸ ಏಪ್ರಿಲಿಯಾ ಎಸ್ಆರ್‌ಎಕ್ಸ್ ಬುಕ್ ಮಾಡಿ

ಇದೇ ವೇಳೆ ರಾಯಲ್‌ಎನ್‌ಫೀಲ್ಡ್ 350 ಕ್ಲಾಸಿಕ್ ದರ್ಬಾರ್ ಮುಂದುವರಿದಿದ್ದು, ನವೆಂಬರ್‌ನಲ್ಲಿ ಕಂಪನಿ ಒಟ್ಟು 39,931 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೈಕ್‌ಗಳನ್ನು ಮಾರಾಟದಲ್ಲಿ ಹಿಂದಿಕ್ಕಿ ಮುಂದುವರಿದಿದೆ.  ಕಂಪನಿ 6,513 ಬುಲೆಟ್ 350 ಮಾರಾಟ ಮಾಡಿದರೆ, ಒಟ್ಟಾರೆಯಾಗಿ ರಾಯಲ್ ಎನ್‌ಫೀಲ್ಡ್  63,782 ಬೈಕ್‌ಗಳನ್ನು ವಿಕ್ರಯ ಮಾಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಶೇ.6 ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿ ಒಟ್ಟು 60, 411 ಬೈಕ್‌ಗಳನ್ನು ಮಾರಾಟ ಮಾಡಿತ್ತು.

ಸಂಪೂರ್ಣವಾಗಿ ವಿಶಿಷ್ಟ ವಿನ್ಯಾಸವನ್ನುಹೊಂದಿರುವ ಮಿಟಿಯರ್ 350, ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್ನೋವಾ ಎಂಬ ಮೂರು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಎಂಟ್ರಿಲೇವಲ್ ಫೈರ್‌ಬಾಲ್ ಮಿಟಿಯರ್ ಬೆಲೆ 1.76   ಲಕ್ಷ ರೂ. ಇದ್ದರೆ ಸ್ಟೆಲ್ಲಾರ್ ಮತ್ತು ಸೂಪರ್ನೋವಾ ಕ್ರಮವಾಗಿ 1.81 ಲಕ್ಷ ತಮತ್ 1.90 ಲಕ್ಷ ರೂಪಾಯಿ ಬೆಲೆ ಹೊಂದಿವೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಮಿಟಿಯರ್ 350 ಬೈಕ್‌ಗೆ ಹೊಸದಾಗಿ ವಿನ್ಯಾಸ ಮಾಡಲಾದ 394 ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಬಳಸಿದೆ. ಇದು ಏರ್ ಕೋಲ್ಡ್ ಎಂಜಿನ್ ಆಗಿದ್ದು, ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಆಧರಿತವಾಗಿದೆ. ಈ ಪೈಕ್ 6,100 ಆರ್‌ಪಿಎಂನಲ್ಲಿ 20.2 ಬಿಎಚ್‌ಪಿ ಶಕ್ತಿನಲ್ಲಿ ಉತ್ಪಾದಿಸಿದರೆ, 4000 ಆರ್‌ಪಿಎಂನಲ್ಲಿ ಈ ಎಂಜಿನ್ 27 ಎನ್ ಎಂ ಟಾರ್ಕ್ ಶಕ್ತಿಯನ್ನು ಹೊರಹಾಕುತ್ತದೆ. ಎಂಜಿನ್ ಕೂಲಿಂಗ್ ಸಿಸ್ಟಮ್ ಸುಧಾರಿಸುವ ನಿಟ್ಟಿನಲ್ಲಿ ಕಂಪನಿ, 2 ವಾಲ್ವ್‌ಗಳಿರುವ ಆಯಿಲ್ ಸರ್ಕಿಟ್‌ನಲ್ಲಿ ಬೈಕ್ ಮೇಕರ್ ಅಳವಡಿಸಲಾಗಿದೆ. ಇದರಿಂದಾಗಿ ಎಂಜಿನ್ ಕೂಲಿಂಗ್‌ ಹೆಚ್ಚು ಪ್ರಭಾವಶಾಲಿಯಾಗಿದೆ.

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಈ ಬೈಕ್‌ಗೆ 130 ಎಂಎಂ ಟ್ರಾವೆಲ್ ‌ನೊಂದಿಗಿನ 41 ಎಂಎಂ ಟೆಲೆಸ್ಕಾಪಿಕ್ ಫೋರ್ಕ್ ಸಾಂಪ್ರದಾಯಿಕ ಟ್ವಿನ್ ಶಾಕ್‌ಆಬ್ಸರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಪ್ರಿಲೋಡ್ 6 ಸ್ಟೆಪ್ ಅಡ್ಜಸ್ಟಮೆಂಟ್ ವ್ಯವಸ್ಥೆ ಇದೆ. ಬೈಕ್‌ನ ಫ್ರಂಟ್ ವ್ಹೀಲ್‌ಗೆ 300 ಎಂಎಂ ಡಿಸ್ಕ್ ಮತ್ತು ಹಿಂದಿನ ಚಕ್ರಕ್ಕೆ 270 ಎಂಎಂ ಡಿಸ್ಕ್ ಬ್ರೇಕ್ ಇದೆ.

ರಾಯಲ್ ಎನ್‌ಫೀಲ್ಡ್ ಮಿಟಿಯರ್ 350 ಏರ್‌ಕೋಲ್ಡ್ ಎಂಜಿನ್ ಆಗಿದ್ದು, 15 ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಒಳಗೊಂಡಿದೆ. ಮಿಡಿಯರ್ ಅಂದಾಜು ಲೀಟರ್‌ಗೆ 41.88 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಒಟ್ಟು 628.2 ಕಿ.ಮೀ. ರೈಡಿಂಗ್ ವ್ಯಾಪ್ತಿಯನ್ನು ಹೊಂದಿದೆ. 5 ಸ್ಪೀಡ್ ಗಿಯರ್‌ಗಳಿವೆ. 183 ಕೆಜಿ ಭಾರವಿದ್ದು, 2170 ಮಿಮಿ ಉದ್ದ ಮತ್ತು 810 ಎಂಎಂ ಅಗಲವಿದೆ. ವ್ಹೀಲ್  ಬೇಸ್ 1400 ಎಂಎಂ ಇದ್ದು, ಸೀಟ್ ಹೈಟ್ 765 ಎಂಎಂ ಇದೆ. ಫ್ರಂಟ್ ಮತ್ತು ರಿಯರ್ ಚಕ್ರಗಳಿಗೆ ಡಿಸ್ಕ್  ಬ್ರೇಕ್ ಸಿಸ್ಟಮ್ ಇದೆ. ಹೆಡ್‌ಲೈಟ್ ಹಾಲೋಜೆನ್ ಇದ್ದರೆ ಟೇಲ್ ಲೈಟ್ ಎಲ್ಇಡಿ ಇದೆ.  ಟ್ವಿನ್ ಡೌನ್‌ಟ್ಯೂಬ್ ಸ್ಪೈನ್ ಫ್ರೇಮ್ ಚಾಸ್ಸಿ ಮೇಲೆ ಈ ಬೈಕ್ ಬಿಲ್ಡ್ ಮಾಡಲಾಗಿದೆ. ಇನ್ನು ಟ್ಯಾಕೋಮೀಟರ್, ಗಿಯರ್ ಇಂಡಿಕೇಟರ್, ಫ್ಯೂಯೆಲ್ ವಾರ್ನಿಂಗ್ ಇಂಡಿಕೇಟರ್, ಲೋ ಆಯಿಲ್ ಮತ್ತು ಲೋಬ್ಯಾಟರಿ ಇಂಡಿಕೇಟರ್, ಹಿಂಬದಿ ಸೀಟು, ಎಂಜಿನ್ ಕಿಲ್ ಸ್ವಿಚ್‌, ಕ್ಲಾಕ್, ಟ್ರಿಪ್‌ಮೀಟರ್, ಟ್ರಿಪ್‌ಮೀಟರ್ ಟೈಪ್ ಮ್ತತು ಪಾಸ್‌ಲೈಟ್‌ನಂಥ ಅನೇಕ ಫೀಚರ್‌ಗಳನ್ನು ಈ ಬೈಕ್ ಹೊಂದಿದೆ.

Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!

click me!