ಅಗ್ಗದ ಬೆಲೆಯಲ್ಲಿ ಎಬಿಎಸ್ ಇರೋ ಹೀರೋ ಗ್ಲಾಮರ್ ಬೈಕ್ ಲಾಂಚ್, ಏನಿದರ ವಿಶೇಷತೆ?

Published : Sep 12, 2026, 06:53 PM IST
Hero Glamour With ABS Launched

ಸಾರಾಂಶ

ಹೀರೋ ಗ್ಲಾಮರ್ ಬೈಕ್ ಇದೀಗ ಎಬಿಎಸ್ ಬ್ರೇಕ್ ಮೂಲಕ ಬಿಡುಗಡೆಯಾಗಿದೆ. ಇದರ ಜೊತೆಗೆ ಕೆಲ ಫೀಚರ್ ಸೇರಿಸಲಾಗಿದೆ. ಕೈಗೆಟುಕುವ ಬೆಲೆಯಲ್ಲಿ ಬೈಕ್ ಬಿಡುಗಡೆಯಾಗಿದೆ. 125ಸಿಸಿ ಬೈಕ್‌ನಲ್ಲೇ ಎಬಿಎಸ್ ಇಂಟಿಗ್ರೇಟೆಡ್ ಇದೇ ಮೊದಲು.

ಬೆಂಗಳೂರು (ಸೆ.12) ಭಾರತದಲ್ಲಿ ಹೀರೋ ಕೈಗೆಟುಕುವ ಬೆಲೆಯಲ್ಲಿ ಉತ್ತಮ ದ್ವಿಚಕ್ರ ವಾಹನ ನೀಡುವ ಮೂಲಕ ಮನೆ ಮಾತಾಗಿದೆ. ಹೀರೋ ಸ್ಪ್ಲೆಂಡರ್ ಸೇರಿದಂತೆ ಹಲವು ಬೈಕ್ ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಹೀರೋದ ಮತ್ತೊಂದು ಜನಪ್ರಿಯ ಬೈಕ್ ಗ್ಲಾಮರ್ ಇದೀಗ ಹೊಸ ಅಪ್‌ಡೇಟ್ ಜೊತೆ ಬಿಡುಗಡೆಯಾಗಿದೆ. 125 ಸಿಸಿ ಗ್ಲಾಮರ್ ಬೈಕ್ ಇದೀಗ ಎಬಿಎಸ್ ಇಂಟಿಗ್ರೇಟೆಡ್ ಫೀಚರ್ ಜೊತೆ ಲಾಂಚ್ ಆಗಿದೆ.

ಗ್ಲಾಮರ್ ಎಕ್ಸ್ 125 ಬೈಕ್ ಇದೀಗ ಇಂಟಿಗ್ರೇಟೆಡ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್ ಮೂಲಕ ಲಾಂಚ್ ಆಗಿದೆ. ಸಿಂಗಲ್ ಚಾನೆಲ್ ಎಬಿಎಸ್ ಇದಾಗಿದೆ. ಇದರಿಂದ ಬೈಕ್ ರೈಡ್ ಹಾಗೂ ಪ್ರಯಾಣದ ಸುರಕ್ಷತೆ ಹೆಚ್ಚಿದೆ. ದಿಢೀರ್ ಬ್ರೇಕ್ ಅಪ್ಲೈ ಮಾಡಿದರೂ ಸ್ಕಿಡ್ ಸಮಸ್ಯೆಗಳು ದೂರವಾಗಲಿದೆ. ಜೊತೆಗೆ ಸವಾರರ ಸುರಕ್ಷತೆಗೆ ಪ್ರಮುಖ ಆದ್ಯತೆಯಾಗಿ ಎಬಿಎಸ್ ಕೆಲಸ ನಿರ್ವಹಿಸಲಿದೆ.

ಹೊಸ ಬೈಕ್ ಬೆಲೆ

ಗ್ಲಾಮರ್ ಎಕ್ಸ್ 125 ಬೈಕ್ ಬೆಲೆ 1,01,000 (ಎಕ್ಸ್ ಶೋ ರೂಂ). ಗನ್ ಮೆಟಲ್ ಗ್ರೇ ಹಾಗೂ ಆ್ಯಕ್ಸಿಸ್ ಗ್ರೇ ಹೊಸ ಬಣ್ಣಗಳು ಹಾಗೂ ಪ್ರಮುಖ ಮೂರು ಆಕರ್ಷಕ ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ಹೊಸ ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ.ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ಹೇಳಿದೆ.

ಎಲ್‌ಇಡಿ ಲೈಟಿಂಗ್, ಗ್ಲಾಮರ್ ಸಿಗ್ನೇಚರ್ ಸ್ಟೈಲ್ ಹೊಸ ಗ್ಲಾಮರ್ ಎಕ್ಸ್ 125 ಬೈಕ್‌ನಲ್ಲಿದೆ. ಆಕರ್ಷಕ ವಿನ್ಯಾಸ, ಮಸ್ಕುಲರ್ ಬಾಡಿಯಿಂದ ಬೈಕ್ ಲುಕ್ ಹೆಚ್ಚಾಗಿದೆ. ಆ್ಯಂಬಿಯೆಂಟ್ ಲೈಟಿಂಗ್, ಅಡಾಪ್ಟಿವ್ ಮಲ್ಟಿ ಕಲರ್ ಕನ್ಸೋಲ್ ಸೇರಿದಂತೆ ಹಲವು ಆಕರ್ಷಕ ಫೀಚರ್ ನೀಡಲಾಗಿದೆ. ನ್ಯಾವಿಗೇಶನ್, ಕಾಲ್, ಮೆಸೆಜ್ ಅಲರ್ಟ್, ತಂತ್ರಜ್ಞಾನ ಆಧಾರಿತ ರೈಡಿಂಗ್, ಗೇರ್ ಶಿಪ್ಟ್ ಸೂಚನೆ, ಬ್ಲೂಟೂತ್ ಕನೆಕ್ಟಿವಿಟಿ, ಮೈಲೇಜ್ ಡಿಸ್‌ಪ್ಲೇ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

ಹೊಸ ಗ್ಲಾಮರ್ ಬೈಕ್ ಎಂಜಿನ್ ಹಾಗೂ ಪವರ್

ಗ್ಲಾಮರ್ ಎಕ್ಸ್ 125 ಬೈಕ್ 11.4 ಬಿಹೆಚ್‌ಪಿ ಪವರ್ ಹೊಂದಿದೆ. ಎಂಜಿನ್ ಅತ್ಯಂತ ಸ್ಮೂತ್ ಫೀಲ್ ನೀಡಲಿದೆ. ಹೆಚ್ಚಿನ ಸೌಂಡ್ ಇಲ್ಲದೆ ಚಲಿಸಲಿದೆ. ಇನ್ನು ಮೂರು ರೈಡ್ ಮೋಡ್ ನೀಡಲಾಗಿದೆ. ಕ್ರೂಸ್ ಕಂಟ್ರೋಲ್ ಸಿಸ್ಟಮ್‌ಗಳಿಂದ ಮೈಲೇಜ್ ಸುಧಾರಣೆ ಕಾಣಲಿದೆ. ತಂತ್ರಜ್ಞಾನದಿಂದ ಬೈಕ್ ರೈಡರ್ ಅತೀ ಸುಲಭವಾಗಿ ರೈಡಿಂಗ್ ಸಾಧ್ಯವಿದೆ, ನಗರ, ಹಳ್ಳಿ, ಲಾಂಗ್ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಅತೀ ಸುಲಭವಾಗಿ ರೈಡಿಂಗ್ ಸಾಧ್ಯವಾಗಲಿದೆ.

PREV
Read more Articles on
click me!

Recommended Stories

Royal Enfield Himalayan 440: ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 440 ಭಾರೀ ಬುಕ್ಕಿಂಗ್ ದಿಢೀರ್ ಸ್ಥಗಿತ! ಕಾರಣವೇನು?
ಬೆಂಗಳೂರು ಮೂಲದ ಕಂಪನಿಯಿಂದ ಹೊಸ ಸಾಹಸ, ಬೈಕ್ ಪ್ರಿಯರಿಗೆ ಭರ್ಜರಿ ನ್ಯೂಸ್