178km ಮೈಲೇಜ್, ಕೈಗೆಟುಕುವ ಬೆಲೆಯಲ್ಲಿ ಬಿಗೌಸ್ C12 ಮ್ಯಾಕ್ಸ್R ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್

Published : Sep 10, 2026, 12:57 PM IST
BGauss C12 MaxR Electric Scooter

ಸಾರಾಂಶ

ಗಣೇಶ ಹಬ್ಬಕ್ಕೆ ಕೆಲ ದಿನ ಮಾತ್ರ ಬಾಕಿ. ಇದರ ಬೆನ್ನಲ್ಲೇ ಬಿಗೌಸ್ ತನ್ನ ಬಹುನಿರೀಕ್ಷಿತ ಸಿ12 ಮ್ಯಾಕ್ಸ್ಆರ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. 178 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಈ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ (ಸೆ.10) ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಆವಿಷ್ಕಾರ, ಕ್ರಾಂತಿಯಾಗಿದೆ. ಪ್ರತಿ ದಿನ ಹೊಸ ಹೊಸ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಬಿಗೌಸ್ ತನ್ನ ಬಹುನಿರೀಕ್ಷಿತ ಸಿ12 ಮ್ಯಾಕ್ಸ್ಆರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದೆರೆ 178 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರಿಂದ ಲಾಂಗ್ ರೈಡ್ ಹಾಗೂ ಪ್ರತಿ ನಿತ್ಯದ ಬಳಕೆಗೂ ಬಿಗೌಸ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ವಿಶೇಷ ಅಂದರೆ ಕೈಗೆಟುಕುವ ಬೆಲೆಯಲ್ಲಿ ಈ ಸ್ಕೂಟರ್ ಲಭ್ಯವಿದೆ.

ಹೊಸ ಸ್ಕೂಟರ್ ಬೆಲೆ

ಬಿಗೌಸ್ ಸಿ12 ಮ್ಯಾಕ್ಸ್ಆರ್ ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ವಿಚಾರದಲ್ಲಿ ಭಾರಿ ಗಮನ ಸೆಳೆದಿದೆ. ಪದೇ ಪದೇ ಚಾರ್ಜ್ ಮಾಡುವ ಕಿರಿಕಿ ತಪ್ಪಲಿದೆ. ಗರಿಷ್ಠ ಮೈಲೇಜ್ ನೀಡಬಲ್ಲ ಈ ಸ್ಕೂಟರ್ ಬೆಲೆ 1.55 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಜಿಎಸ್‌ಟಿ ಹಾಗೂ ಚಾರ್ಜರ್ ಕಿಟ್ ಜೊತೆಗೆ ಇದರ ಬೆಲೆ 1.60 ಲಕ್ಷ ರೂಪಾಯಿ (ಎಕ್ಸ್ ಶೋರೂಂ). ಸ್ಕೂಟರ್ ಗ್ರೌಂಡ್ ಕ್ಲಿಯರೆನ್ಸ್ 160ಎಂಎಂ, 150ಕೆಜಿ ಪ್ಲೇಲೋಡ್ ಸಾಮರ್ಥ್ಯ ಹೊಂದಿದೆ. ನಾಲ್ಕು ಬಣ್ಣದಲ್ಲಿ ಸ್ಕೂಟರ್ ಲಭ್ಯವಿದೆ.

ಬ್ಯಾಟರಿ ಹಾಗೂ ಸುರಕ್ಷತೆ

12 ಇಂಚಿನ ಆಲೋಯ್ ವ್ಹೀಲ್, 220 ಎಂಎಂ ಫ್ರಂಟ್ ಡಿಸ್ಕ್ ಹಾಗೂ ರೇರ್ ಸಿಬಿಎಸ್ ಬ್ರೇಕ್ ಕಾಂಬಿನೇಷನ್ ನೀಡಲಾಗಿದೆ. ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಪೋರ್ಕ್ ನೀಡಲಾಗಿದೆ. 3.8kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದು IP67 ರೇಟಿಂಗ್ ಎಲ್‌ಎಫ್‌ಪಿ ಬ್ಯಾಟರಿಯಾಗಿದೆ. ಬ್ಯಾಟರಿ 110 ಸೇಫ್ಟಿ ಹಾಗೂ ಪ್ರೊಟೆಕ್ಷನ್ ನೀಡಲಿದೆ ಎಂದು ಬಿಗೌಸ್ ಕಂಪನಿ ಹೇಳಿದೆ. 5.63 ಹೆಚ್‌ಪಿ ಪವರ್ ನೀಡಲಿದೆ. ಇಕೋ, ರೈಡ್ ಹಾಗೂ ಸ್ಪೋರ್ಟ್ ಮೂಡ್ ರೈಡ್‌ಗಳಿವೆ. ಸ್ಕೂಟರ್ ಗರಿಷ್ಠ ವೇಗ 75 ಕಿಲೋಮೀಟರ್ ಪ್ರತಿ ಗಂಟೆಗೆ.

ಬಿಗೌಸ್ ಸಿ12 ಮ್ಯಾಕ್ಸ್ಆರ್ ಸ್ಕೂಟರ್ ಉತ್ತಮ ಸ್ಟೋರೇಜ್ ಸ್ಪೇಸ್ ನೀಡಿದೆ. ದ್ವಿಚಕ್ರ ವಾಹನ ಪ್ರಯಾಣದಲ್ಲಿ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಸೀಟ್ ಅಡಿಯಲ್ಲಿ ಎರಡು ಹೆಲ್ಮೆಟ್ ಇಡುವಂತ ಸ್ಟೋರೇಜ್ ನೀಡಲಾಗಿದೆ. ಇನ್ನು ಮೊಬೈಲ್ ಸ್ಟೋರೇಜ್, ಬಾಟಲ್ ಸ್ಟೋರೇಜ್, ಕ್ಲೀನಿಂಗ್ ಬಟ್ಟೆ ಇಡಲು ಜಾಗ ಸೇರಿದಂತೆ ಎಲ್ಲವನ್ನು ಅಚ್ಚುಕಚ್ಟಾಗಿ ನೀಡಲಾಗಿದೆ. ಫ್ಲೋರ್ ಬೋರ್ಡ್‌ನಲ್ಲಿ ಹೆಚ್ಚಿನ ಲಗೇಜ್ ಇಡಲು ಸಹಾಯವಾಗುಂತೆ ವಿನ್ಯಾಸ ಮಾಡಲಾಗಿದೆ.

TFT ಡಿಸ್‌ಪ್ಲೇ, ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಕಾಲ್ ನೋಟಿಫಿಕೇಶನ್, ರೈಡ್, ಚಾರ್ಜ್ ಸೇರಿದಂತೆ ಹಲವು ಮಾಹಿತಿಗಳ ಡಿಸ್‌ಪ್ಲೇ ರೈಡರ್‌ಗೆ ನೆರವಾಗಲಿದೆ. ಸ್ಕೂಟರ್ ಕುರಿತ ಎಲ್ಲಾ ಮಾಹಿತಿಗಳನ್ನು ನೀಡಲಿದೆ.

PREV
Read more Articles on
click me!

Recommended Stories

ಬೈಕ್ ಕೊಳ್ಳುವ ಪ್ಲಾನ್ ಇದೆಯಾ? ಆಗಸ್ಟ್‌ನಲ್ಲಿ ಸೇಲ್ ಆದ ಟಾಪ್ 5 ಸ್ಕೂಟರ್‍‌ಗಳ ಲಿಸ್ಟ್
ಮತ್ತೆ ಬಂತು ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್, ಕೈಗೆಟುಕುವ ಬೆಲೆ ಜೊತೆಗೆ ಹಬ್ಬದ ಆಫರ್ ಘೋಷಣೆ