ಪುಣೆ(ಡಿ.4): ಭಾರತದಲ್ಲಿ(India) ಗರಿಷ್ಠ ಮಾರಾಟವಾಗುತ್ತಿರುವ ಬಜಾಜ್ ಪಲ್ಸರ್(Bajaj Pulsar) ಬೈಕ್ ಇತ್ತೀಚೆಗೆ ಪಲ್ಸರ್ 250 ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್(Bike) ಡೀಲರ್ ಬಳಿ ಇನ್ನು ತಲುಪಿಲ್ಲ. ಇದರ ನಡುವೆ ಸಾಮಾಜಿಕ ಜಾಲತಾಣದ ಇನ್ಸ್‌ಸ್ಟಾಗ್ರಾಂ ಬಳಕೆದಾರನಿಗೆ ಉಚಿತ ಪಲ್ಸರ್ 250 ಬೈಕ್(Free Bike) ನೀಡುವುದಾಗಿ ಘೋಷಿಸಿದೆ. ಇನ್ಸ್‌ಸ್ಟಾಗ್ರಾಂ ಯೂಸರ್ ಹಾಕಿದ ಕಮೆಂಟ್‌ಗೆ ಬಜಾಜ್ ಕಂಪನಿ ಈ ಘೋಷಣೆ ಮಾಡಿದೆ ಆದರೆ ಒಂದು ಕಂಡೀಷನ್ ಕೂಡ ಹಾಕಿದೆ.
ಪಲ್ಸರ್ 250 ಬೈಕ್ ಪುಣೆಯ ಬಜಾಜ್ ಘಟಕದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಪುಣೆ ಡೀಲರ್ ಬಳಿ ಈ ಬೈಕ್ ತಲುಪಿದೆ. ಬೈಕ್ ಬಿಡುಗಡೆಯಾದ ಬೆನ್ನಲ್ಲೇ ಬಜಾಜ್ ಸಾಮಾಜಿಕ ಜಾಲತಾಣದಲ್ಲಿ(Social Media) ನೂತನ ಪಲ್ಸರ್ 250 ಬೈಕ್ ಫೋಟೋ ಅಪ್ಲೋಡ್ ಮಾಡಿದೆ. ಮಿ.ವಿಶು ಅನ್ನೋ ಹೆಸರಿನ ಖಾತೆಯ ಇನ್ಸ್‌ಸ್ಟಾಗ್ರಾಂ(Instagram) ಬಳಕೆದಾರ, ನನಗೆ ಈ ಬೈಕ್ ಉಡುಗೊರೆಯಾಗಿ ನೀಡಿ, ಇನ್ನುಳಿದ ಪೆಟ್ರೋಲ್ ನಾನು ಹಾಕುತ್ತೇನೆ ಎಂದು ಕಮೆಂಟ್ ಮಾಡಿದ್ದಾನೆ.
undefined
ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಬಜಾಜ್ ಪಲ್ಸರ್ 250 ಬೈಕ್
ಬೈಕ್, ಕಾರು ಬಿಡುಗಡೆಯಾದಾಗ ಇಂತಹ ಕಮೆಂಟ್ ಸಾಮಾನ್ಯ. ಆದರೆ ಬಜಾಜ್ ಈ ಪ್ರತಿಕ್ರಿಯೆನ್ನು ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ಆತನಿಗೆ ಬಜಾಜ್ ತನ್ನ ಅಧೀಕೃತ ಖಾತೆಯಿಂದ ಪ್ರತಿಕ್ರಿಯೆ ನೀಡಿದೆ. ನೀವು ಹೇಳಿದಂತೆ ಉಚಿತವಾಗಿ ಬೈಕ್ ನೀಡುತ್ತೇವೆ. ನಿಮ್ಮ ಕಮೆಂಟ್‌ಗೆ 2,50,000 ಸಿಗಬೇಕು ಎಂದು ಒಂದು ಕಂಡೀಷನ್ ಹಾಕಿದೆ. ವಿಶು ಹಾಕಿದ ಉಚಿತ ಪಲ್ಸರ್ ನೀಡಿ ಅನ್ನೋ ಕಮೆಂಟ್ 2.5 ಲಕ್ಷ ಲೈಕ್ ಪಡೆಯಬೇಕು. ಹೀಗಾದರೆ ಆತನಿಗೆ ಬಜಾಜ್ ಉಚಿತ ಪಲ್ಸಾರ್ ನೀಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.
ಬಜಾಜ್ ಪಲ್ಸರ್ 250 ಬೈಕ್:
ಹಲವು ವಿಶೇಷತೆ, ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಜಾಜ್ ಪಲ್ಸರ್ 250 ಬೈಕ್ ಬಿಡುಗಡೆಯಾಗಿದೆ. 249.07 cc ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರು ಈ ಬೈಕ್ 24.1 BHP ಪವರ್ ಹಾಗೂ 21.5 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಬಜಾಜ್ ಪಲ್ಸರ್ 250 ಬೈಕ್ ಬೆಲೆ 1.38 ಲಕ್ಷ ರೂಪಾಯಿಂದ 1.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಹೊಚ್ಚ ಹೊಸ ಪಲ್ಸರ್ N250 ಹಾಗೂ F250 ಬೈಕ್ ಬಿಡುಗಡೆ !
ಬಜಾಜ್ ಪಲ್ಸಾರ್ 250 ಬೈಕ್ 37mm ಕನ್ವೆಶನಲ್ ಟಿಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ರೇರ್ ಮೋನೋ ಶಾಕ್ಸ್ ಹೊಂದಿದೆ. ಮುಂಭಾಗದಲ್ಲಿ 300mm ಡಿಸ್ಕ್, 230mm ಡಿಸ್ಕ್ ಬ್ರೇಕ್ ಹೊಂದಿದ್ದು, ಸಿಂಗಲ್ ಚಾನೆಲ್ ABS ಹೊಂದಿದೆ. 17 ಇಂಚಿನ ಅಲೋಯ್ ವ್ಹೀಲ್ಸ್, ಫುಲ್ LED ಲೈಟಿಂಗ್ಸ್, USB ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕನ್ಸೋಲ್ ಹೊಂದಿದೆ.
ಆಕರ್ಷಕ ಲುಕ್; ಬಜಾಜ್ ಅಟೋ ಪಲ್ಸರ್ NS 125 ಸ್ಪೋಟ್ರ್ಸ್ ಬೈಕ್ ಬಿಡುಗಡೆ!
ನವೆಂಬರ್ 2021ರಲ್ಲಿ ಬಜಾಜ್ ಗರಿಷ್ಠ ಮಾರಾಟದ ದಾಖಲೆ ಹೊಂದಿದೆ. ದೇಶದಲ್ಲಿ ಕಳೆದ ತಿಂಗಳು 1,44,442 ಬೈಕ್ ಮಾರಾಟಗೊಂಡಿದೆ. 1,93,520 ಬೈಕ್ ವಿದೇಶಕ್ಕ ರಫ್ತು ಮಾಡಲಾಗಿದೆ. ನೈಜೀರಿಯಾ, ಈಜಿಪ್ಟ್, ಮೆಕ್ಸಿಕೋ ಸೇರಿದಂತೆ ವಿಶ್ವದ 70 ರಾಷ್ಟ್ರಗಳಲ್ಲಿ ಬಜಾಜ್ ಪಲ್ಸರ್ ಬೈಕ್ ಮಾರಾಟವಾಗುತ್ತಿದೆ. ಇತ್ತೀಚೆಗೆ ಬಜಾಜ್ ಪಲ್ಸರ್ F250 ಮತ್ತು N250 ಬೈಕ್ ಬಿಡುಗಡೆ ಮಾಡಿದೆ. ಪಲ್ಸಾರ್ ಎಂಟ್ರಿ ಲೆವೆಲ್ ಬೈಕ್ 125 cc ಯಿಂದ 250 cc ವರೆಗೆ ಎಲ್ಲಾ ಬೈಕ್‌ಗೆ ಭಾರಿ ಬೇಡಿಕೆ ಇದೆ. ಭಾರತದ ಬೈಕ್ ಮಾರಾಟ ಅಂಕಿ ಅಂಶದಲ್ಲಿ ಬಜಾಜ್ ಅಗ್ರಗಣ್ಯನಾಗಿ ಮುಂದುವರಿಯುತ್ತಿದೆ.