Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

Published : Dec 04, 2021, 07:01 PM IST
Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಸಾರಾಂಶ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಕ್ರಾಂತಿ, ಹೊಸ ಹೊಸ ವಾಹನ ಬಿಡುಗಡೆ ಗರಿಷ್ಠ ಮೈಲೇಜ್, ಕಡಿಮೆ ಬೆಲೆಗೆ ಭಾರತದಲ್ಲಿ ಹಲವು ಅತ್ಯುತ್ತಮ ಸ್ಕೂಟರ್ ಲಭ್ಯ ಇಲ್ಲಿದೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ವಿವರ

ಬೆಂಗಳೂರು(ಡಿ.04): ಪೆಟ್ರೋಲ್, ಡೀಸೆಲ್(Petrol Diesel) ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದರೂ ಬೆಲೆ 100ಕ್ಕಿಂತ ಕೆಳಗಿಳಿದಿಲ್ಲ. ಹೀಗಾಗಿ ಇಂಧನ ವಾಹನ ನಿರ್ವಹಣೆ ಇದೀಗ ಅತ್ಯಂತ ದುಬಾರಿಯಾಗಿದೆ. ಹೀಗಾಗಿ ಬಹುತೇಕರು ಎಲೆಕ್ಟ್ರಿಕ್ ವಾಹನಗಳತ್ತ(Electric Vehicle) ಮುಖ ಮಾಡಿದ್ದಾರೆ. ಪ್ರತಿ ನಿತ್ಯ ಬಳಕೆಗೆ ಉತ್ತಮ ಮೈಲೇಜ್ ರೇಂಜ್ ಹಾೂ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹುಡುಕಾಟ ನಡೆಸುತ್ತಿದ್ದಾರೆ. ಭಾರತದಲ್ಲಿ(India) ಹಲವು ಎಲಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಇದರಲ್ಲಿ ಟಾಪ್ 10 ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಪಟ್ಟಿ ಇಲ್ಲಿದೆ.

ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈಗಾಗಲೇ FAME II ಅಡಿ ಕೆಲ ಸಬ್ಸಡಿ ಕೂಡ ಘೋಷಿಸಲಾಗಿದೆ. ಕೆಲ ರಾಜ್ಯ ಸರ್ಕಾರಗಳು ಹೆಚ್ಚಿನ ಸಬ್ಸಿಡಿ ಘೋಷಿಸಿದೆ. ಭಾರತದಲ್ಲಿ ಹಲವು ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಕೆಲ ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕೂಡ ಅಗತ್ಯವಿಲ್ಲ. ದರ, ಸ್ಕೂಟರ್ ಪರ್ಪಾಮೆನ್ಸ್, ಮೈಲೇಜ್ ರೇಂಜ್ ಸೇರಿದಂತ ಇತರ ಕೆಲ ವಿಚಾರಗಳಲ್ಲಿ ಉತ್ತಮ ಎನಿಸಿದ 10 ಸ್ಕೂಟರ್ ವಿವರ ಇಲ್ಲಿದೆ.

EV Two Wheelers Launch: ಬೂಮ್ ಕಾರ್ಬೆಟ್ ಅನ್ನು ಇಎಂಐ ಮೂಲಕ ಖರೀದಿಸಿ!

ಓಲಾ ಸ್ಕೂಟರ್
ಓಲಾ ಸ್ಕೂಟರ್(Ola Electri Scooter) ಕಂಪನಿ ಭಾರತದಲ್ಲಿ ಓಲಾ  S1 ಹಾಗೂ ಓಲಾ  S1 Pro ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 181 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಸ್ಕೂಟರ್ ಬೆಲೆ 1 ರಿಂದ 1.30 ಲಕ್ಷ ರೂಪಾಯಿ.

ಎದರ್ ಎನರ್ಜಿ
ಬೆಂಗಳೂರು ಮೂಲದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಎದರ್. 450X ಸ್ಕೂಟರ್ ದೇಶದಲ್ಲಿ ಭಾರಿ ಜನಪ್ರಿಯವಾಗಿದೆ(ather 450x). ಸಂಪೂರ್ಣ ಚಾರ್ಜ್‌ಗೆ 118 ಕಿಲೋಮೀಟರ್ ಮೈಲೇಜ್ ನೀಡವು ಸಾಮರ್ಥ್ಯ ಹೊಂದಿದೆ.  ಎದರ್ 450X ಸ್ಕೂಚರ್ ಬೆಲೆ ಕೊಂಚ ದುಬಾರಿಯಾಗಿದೆ. 1,44,500 ರೂಪಾಯಿ(ಎಕ್ಸ್ ಶೋ ರೂಂ).

ರಿವೋಲ್ಟ್
ಭಾರತದಲ್ಲಿ ರಿವೋಲ್ಟ್(revolt) ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ. ಕಡಿಮೆ ಬೆಲೆಯಲ್ಲಿ ಸ್ಪೋರ್ಟ್ಸ್ ಬೈಕ್ ಲಭ್ಯವಿದೆ. ರಿವೋಲ್ಟ್  RV 300 ಬೈಕ್ 80 ರಿಂದ 180 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸ್ಕೂಟರ್ ಬೆಲೆ 91,000 ರೂಪಾಯಿ(ಎಕ್ಸ್ ಶೋ ರೂಂ)

ಹಿರೋ ಎಲೆಕ್ಟ್ರಿಕ್ ಸ್ಕೂಟರ್
ಅತೀ ದೊಡ್ಡ ಸ್ಕೂಟರ್ ಕಂಪನಿಯಾಗಿರುವ ಹಿರೋ ಎಲೆಕ್ಟ್ರಿಕ್ ಸ್ಕೂಟರ್(hero electric scooter) ವಿಭಾಗದಲ್ಲಿ ಸಂಚಲನ ಮೂಡಿಸಿದೆ. ಹಿರೋ ಒಪ್ಟಿಮಾ, ಆ್ಯಟ್ರಿಯಾ ಸೇರಿದಂತೆ ಹಲವು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ 108 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಈ ಸ್ಕೂಟರ್ ಬೆಲೆ 74,240 ರೂಪಾಯಿಯಿಂದ ಆರಂಭಗೊಳ್ಳುತ್ತದೆ.

ಬಜಾಜ್ ಚೇತಕ್
ಸ್ಕೂಟರ್ ಇತಿಹಾಸ ಹೊಂದಿರುವ ಬಜಾಜ್(bajaj chetak ) ತನ್ನ ಹಳೇ ಹಾಗೂ ರೆಟ್ರೋ ಚೇತಕ್‌ನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರತಂದಿದೆ. 90 ಕಿಲೋಮೀಟರ್ ಮೈಲೇಜ್ ಹೊಂದಿದೆ. ಸ್ಕೂಟರ್ ಬೆಲೆ 1,41,400 ರೂಪಾಯಿ. 

ಟಿವಿಎಸ್ ಐಕ್ಯೂಬ್
ಟಿವಿಎಸ್ ಮೋಟಾರ್ ಭಾರತದಲ್ಲಿ ಐಕ್ಯೂಬ್(tvs iqube) ಎಂಬ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸ್ಕೂಟರ್ ಆರಂಭಿಕ ಬೆಲೆ  90,000 ರೂಪಾಯಿ.

ಸಿಂಪಲ್ ಒನ್
ದೇಶದಲ್ಲಿ ಸಂಚಲನ ಮೂಡಿಸಿದ ಮತ್ತೊಂದು ಸ್ಕೂಟರ್ ಸಿಂಪಲ್ ಓನ್(simple one). ಸಿಂಪಲ್ ಒನ್ ಕಂಪನಿ ಹೇಳುವ ಪ್ರಕಾರ ಈ ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 236 ಕಿಲೋಮೀಟರ್ ಮೈಲೇಜ್ ನೀಡಲಿದೆ. 1947 ರೂಪಾಯಿ ನೀಡಿ ಈ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.

ಬೌನ್ಸ್
ಬೆಂಗಳೂರು ಮೂಲದ ಬೌನ್ಸ್ ಇತ್ತೀಚೆಗೆ ಇನ್ಫಿನಿಟಿ(bounce infinity) ಸ್ಕೂಟರ್ ಬಿಡುಗಡೆ ಮಾಡಿದೆ. ಬ್ಯಾಟರಿ ಬದಲಾಯಿಸಬಲ್ಲ, ಬ್ಯಾಟರಿ ಇಲ್ಲದೆ ಖರೀದಿಸಲು ಲಭ್ಯವಿರುವ ಸ್ಕೂಟರ್ ಇದಾಗಿದೆ. ಬ್ಯಾಟರಿಯೊಂದಿಗೆ ಬೌನ್ಸ್ ಇನ್ಫಿನಿಟಿ ಸ್ಕೂಟರ್ ಬೆಲೆ 68,999 ರೂಪಾಯಿ. ಬ್ಯಾಟರಿ ಇಲ್ಲದೆ ಸ್ಕೂಟರ್ ಬೆಲೆ 45,099 ರೂಪಾಯಿ. 

ಆ್ಯಂಪರ್ ಮೊಬಿಲಿಟಿ
ಆ್ಯಂಪರ್ ಮೊಬಿಲಿಟಿ  V48 ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿ.ಮೀ ಮೈಲೇಜ್ ನೀಡಲಿದೆ(ampere electric). ಸ್ಕೂಟರ್ ಬೆಲೆ 40,000 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

ಪ್ಯೂರ್ ಇವಿ
ಪ್ಯೂರ್ ಇವಿ ಕಂಪನಿ ಪ್ಯೂರ್ ಇವಿ(Pure EV) ಪುಲ್ಟೋ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 90 ರಿಂದ 120 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸ್ಕೂಟರ್ ಬೆಲೆ 83,701 ರೂಪಾಯಿ.

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್