Electric Cruiser Bike: ಭಾರತದ ಮೊದಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಕೋಮಾಕಿ ಶೀಘ್ರದಲ್ಲೇ ಬಿಡುಗಡೆ, 250 KM ಮೈಲೇಜ್!

By Suvarna News  |  First Published Dec 2, 2021, 9:05 PM IST
  • ಭಾರತದ ಮೊದಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ರೆಡಿ
  • ಸಂಪೂರ್ಣ ಚಾರ್ಜ್‌ಗೆ 250 ಕಿ.ಮೀ ಮೈಲೇಜ್
  • 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್, ಅತ್ಯಾಕರ್ಷಕ ಬೈಕ್

ನವದೆಹಲಿ(ಡಿ.02):  ಭಾರತದಲ್ಲಿ(India) ಎಲೆಕ್ಟ್ರಿಕ್ ವಾಹನದಲ್ಲಿ(Electric Vehicle) ಕ್ರಾಂತಿಯಾಗಿದೆ. ಅದರಲ್ಲೂ ವಿಶೇಷವಾಗಿ ಸ್ಕೂಟರ್(Electric scooter) ಹಾಗೂ ಬೈಕ್(Electric Bike) ವಿಭಾಗದಲ್ಲಿ ಹೊಸ ಹೊಸ ಕಂಪನಿಗಳು ಎಂಟ್ರಿಕೊಡುತ್ತಿದೆ. ಇತ್ತೀಚಿನ ಬೆಳವಣಿಗೆ ಎಂದರೆ ಬೆಂಗಳೂರು ಮೂಲಕ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ಕಾಲಿಟ್ಟಿದೆ. ಇದೀಗ ಕೋಮಾಕಿ(Komaki) ಎಲೆಕ್ಟ್ರಿಕ್ ಲಿಮಿಟೆಡ್ ಭಾರತದ ಮೊಟ್ಟದ ಮೊದಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ.

ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಬಿಡುಗಡೆ ಮಾಡಿರುವ ಕೋಮಾಕಿ ಲಿಮಿಟೆಡ್ ಇದೀಗ ಕ್ರ್ಯೂಸರ್ ಎಲೆಕ್ಟ್ರಿಕ್(Komaki Cruiser Ranger) ಬೈಕ್ ಬಿಡುಗೆ ಮಾಡಲು ಸಜ್ಜಾಗಿದೆ. ಕೋಮಾಕಿ ಕ್ರ್ಯೂಸರ್ ರೇಂಜರ್ ಅನ್ನೋ ಹೆಸರಿನ ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Latest Videos

undefined

Bounce Infinity E1‌ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ : ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯ!

ಕೋಮಾಕಿ ಕ್ರ್ಯೂಸರ್ ರೇಂಜರ್ ಬೈಕ್ ಮುಂದಿನ ತಿಂಗಳು ಅಂದರೆ 2022ರ ಜನವರಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಕೋಮಾಕಿ ರೇಂಜರ್ ಬೈಕ್ ಅತೀ ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿದೆ. 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಕೋಮಾಕಿ ಗರಿಷ್ಠ ಮೈಲೇಜ್ ನೀಡುವ ಸಾಮರ್ಥ್ಯಹೊಂದಿದೆ.   5,000 ವ್ಯಾಟ್ ಮೋಟಾರು ಬಳಸಲಾಗಿದೆ. ಇದರಿಂದ ಬೈಕ್ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನೂತನ ಕೋಮಾಕಿ ರೇಂಜರ್ ಬೈಕ್ ರಿವರ್ಸ್ ಗೇರ್ ಸ್ವಿಚ್, ಕ್ರ್ಯೂಸ್ ಕಂಟ್ರೋಲ್, ಬ್ಲೂಟೂಥ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಹೊಂದಿದೆ.

ಕೋಮಾಕಿ ರೇಂಜರ್ ಕ್ರ್ಯೂಸರ್ ಎಲಕ್ಟ್ರಿಕ್ ಬೈಕ್ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆದರೆ ಕೋಮಾಕಿ ಪ್ರಕಾರ, ಇದು ಜನಸಾಮಾನ್ಯರ ಬೈಕ್. ಹೀಗಾಗಿ ಅಗ್ಗದ ದರದಲ್ಲಿ ಕೋಮಾಕಿ ರೇಂಜರ್ ಬೈಕ್ ಬಿಡುಗಡೆ ಮಾಡಲಿದೆ. ಕೈಗೆಟುಕುವ ದರದಲ್ಲಿ ಬೈಕ್ ಲಭ್ಯವಾಗಲಿದೆ. ಈ ಕ್ರ್ಯೂಸರ್ ಬೈಕ್ ದೇಶದಲ್ಲಿನ ಹೊಸ ಸಂಚಲನ ಸೃಷ್ಟಿಸುವ ವಿಶ್ವಾಸವಿದೆ ಎಂದು ಕೋಮಾಕಿ ಎಲೆಕ್ಟ್ರಿಕ್ ಬೈಕ್ ಕಂಪನಿ ನಿರ್ದೇಶಕ ಗುಂಜನ್ ಮಲ್ಹೋತ್ರ ಹೇಳಿದ್ದಾರೆ.

Diwali Gift; ನೌಕರರಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನೀಡಿದ ಕಂಪನಿ!

ಕೋಮಾಕಿ ಈಗಾಗಲೇ ಹಲವು ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. 30,000 ರೂಪಾಯಿಯಿಂದ 1 ಲಕ್ಷ ರೂಪಾಯಿ ವರೆಗಿನ ದ್ವಿಚಕ್ರ ವಾಹನ ಲಭ್ಯವಿದೆ. ಕೋಮಾಕಿ 6 ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್, 3ಕ್ಕೂ ಹೆಚ್ಚು ಬೈಕ್, ಮೂರು ಹೈಸ್ಪೀಡ್ ಸ್ಕೂಟರ್ ಹಾಗೂ ಎರಡು ಎಲೆಕ್ಟ್ರಿಕ್ ರಿಕ್ಷಾ ಬಿಡುಡೆ ಮಾಡಿದೆ. 

ದೇಶದಲ್ಲಿ ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಬೆಂಗಳೂರಿನ ಎದರ್ ಎನರ್ಜಿ, ಓಲಾ, ಬಜಾಜ್ ಚೇತರ್, ಟಿವಿಎಸ್ ಐಕ್ಯೂಬ್ ಸೇರಿದಂತೆ ಕೆಲ ಸ್ಕೂಟರ್ ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಹಿರೋ ಎಲೆಕ್ಟ್ರಿಕ್ ಒಪ್ಟಿಮಾ, ಸಿಂಪಲ್ ಒನ್, ಒಕಿನಾವಾ, ಪ್ಯೂರ್, ರಿವೋಲ್ಟ್, ಆ್ಯಂಪರ್, ಬೆಂಗ್ಲಿಂಗ್, ಬೂಮ್ ಮೋಟಾರ್ಸ್, ವೈಟ್ ಕಾರ್ಬನ್, ಅವೆರಾ, ಬ್ಯಾಟ್‌ರೇ ಸೇರಿದಂತ ಹಲವು ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲೂ ಹೊಸ ಹೊಸ ಆವಿಷ್ಕಾರ, ಗರಿಷ್ಠ ಮೈಲೇಜ್ ಕಾರುಗಳು ಬಿಡುಗಡೆಯಾಗುತ್ತಿದೆ. ಇದರಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಟಾಟಾ ನೆಕ್ಸಾನ್ ಇವಿ ಭಾರಿ ಸಂಚಲನ ಮೂಡಿಸಿದೆ. ಭಾರತದಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು, ಎಂಜಿ ಮೋಟಾರ್ಸ್ ಕಂಪನಿಯ ಎಂಜಿ ZS, ಟಾಟಾ ಟಿಗೋರ್ ಇವಿ, ಜಾಗ್ವಾರ್ ಐಪೇಸ್, ಆಡಿ ಇ ಟ್ರೋನ್, ಪೋರ್ಶೆ ಟೈಕಾನ್, ಮಹೀಂದ್ರ ಇ20, ಮಹೀಂದ್ರ ಇ ವೆರಿಟೋ ಕಾರುಗಳು ಲಭ್ಯವಿದೆ. ಶೀಘ್ರದಲ್ಲೇ ಟಾಟಾ ಟಿಯಾಗೋ ಇವಿ, ಟಾಟಾ ಅಲ್ಟ್ರೋಜ್ ಇವಿ, ಮಹೀಂದ್ರ XUV300 ಸೇರಿದಂತೆ ಹಲವು ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

click me!