ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್ ಬಿಡುಗಡೆ, ಬುಕ್ಕಿಂಗ್ ಆರಂಭ

By Suvarna NewsFirst Published May 13, 2021, 12:57 PM IST
Highlights

ಪ್ರೀಮಿಯಂ ಸ್ಕೂಟರ್ ಉತ್ಪಾದಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಪಿಯಾಜಿಯೊ ಇಂಡಿಯಾ, ಭಾರತೀಯ ಮಾರುಕಟ್ಟೆಗೆ ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಎಕ್ಸ್ ಶೋರೂಮ್ ಬೆಲೆ 1.14 ಲಕ್ಷ ರೂಪಾಯಿಯಾಗಿದೆ. ಏಪ್ರಿಲಿಯಾ ಎಸ್ಎಕ್ಸ್ಆರ್ 160 ಮತ್ತು ಸುಜುಕಿ ಬರ್ಗಮ್ಯಾನ್ 125 ಸ್ಕೂಟರ್‌ಗೆ ಹೋಲಿಸಿದರೆ ಈ ಸ್ಕೂಟರ್ ಹೆಚ್ಚು ಅಗ್ಗವಾಗಿದೆ.

ಭಾರತದಲ್ಲಿ ಪಿಯಾಜಿಯೊ ಕಂಪನಿಯ ಪ್ರೀಮಿಯಂ ಸ್ಕೂಟರ್‌ಗಳು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿವೆ. ಕಂಪನಿ ಏಪ್ರಿಲಿಯಾ ಬ್ರಾಂಡ್‌ನಲ್ಲಿ ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿ, ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದೀಗ ಪಿಯಾಜಿಯೊ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಏಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ ಸ್ಕೂಟರ್. ಇದು ಪಿಯಾಜಿಯೋ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೊಸ ಸ್ಕೂಟರ್. ಭಾರತದಲ್ಲಿ ಈ ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್ ಬೆಲೆ 1.14 ಲಕ್ಷ ರೂ.(ಎಕ್ಸ್ ಶೋರೂಮ್ ಬೆಲೆ) ಆಗಿದೆ. ಈ ಹಿಂದೆಯೇ  ಭಾರತದಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗಿದ್ದ ಏಪ್ರಿಲಾಯ ಎಸ್ಎಕ್ಸ್ಆರ್ 160 ಸ್ಕೂಟರ್‌, ಸುಜುಕಿ ಬರ್ಗಮ್ಯಾನ್ 125ಗೆ ಹೋಲಿಸಿದರೆ ಈಗ ಬಿಡುಗಡೆಯಾಗಿರುವ ಏಪ್ರಿಲಿಯಾ ಎಸ್‌ಎಕ್ಸ್ಆರ್ 125 ಹೆಚ್ಚು ತೀರು ತುಟ್ಟಿಯೇನಲ್ಲ. ಮೊದಲಿನ ಎರಡು ಸ್ಕೂಟರ್‌ಗಳಿಗೆ ಹೋಲಿಸಿದರೆ ಈಗ ಹೊಸದಾಗಿ ಬಿಡುಗಡೆಯಾಗಿರುವ ಹೆಚ್ಚು ಕೈಗೆಟುಕುವ ದರದಲ್ಲಿ ದೊರೆಯುತ್ತದೆ.

ಶೀಘ್ರವೇ ಹೊಸ 2021 ಮಹಿಂದ್ರಾ ಬೊಲೆರೋ ಬಿಡುಗಡೆ ಸಾಧ್ಯತೆ

ಹೊಸದಾಗಿ ಬಿಡುಗಡೆಯಾಗಿರುವ ಏಪ್ರಿಲಿಯಾ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಖರೀದಿಗೆ ಎಲ್ಲ ಡೀಲರ್‌ಗಳಲ್ಲಿ ಈಗಾಗಲೇ ಕಂಪನಿಯು ಬುಕ್ಕಿಂಗ್ ಆರಂಭಿಸಿದೆ.     

ಈಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್‌ನ ಬಹುತೇಕ ವಿನ್ಯಾಸವು ಈ ಹಿಂದೆ ಬಿಡುಗಡೆಯಾಗಿದ್ದ ಸ್ಕೂಟರ್‌ನದ್ದೇ ಹೋಲಿಕೆಯನ್ನು ಹೊಂದಿದೆ. ಇನ್ನೂ ಏಪ್ರಿಲಿಯಾದ ಸಿಗ್ನೇಚರ್ ಗ್ರಾಫಿಕ್ಸ್‌ನೊಂದಿಗೆ ಟ್ರಿಮ್ ಡಾರ್ಕ್ ಕ್ರೋಮ್ ಅಂಶಗಳು, ಹನಿಕೊಂಬ್ ಗ್ರಿಲ್, ಏರ್ ಡ್ಯಾಮ್‌ಗಳು ಮತ್ತು ಕ್ರೋಮ್ ಅಲಂಕರಿಸಿದ ವಿನ್ಯಾಸವು ಅದರ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಿದೆ.

ಸ್ಪೋರ್ಟಿ ಲುಕ್ ಹೊಂದಿದ ಪಟ್ಟಿಗಳು ಮತ್ತು ಸ್ಪೋರ್ಟಿ ಬಂಪರ್‌ ರೀತಿಯ ಲುಕ್‌ನಿಂದಾಗಿ ಸ್ಕೂಟರ್‌ನ ಅಂದ ಮತ್ತಷ್ಟು ಹೆಚ್ಚಾಗಿದೆ. ರ್ಯಾಪಾರೌಂಡ್ ಎಲ್ಇಡಿ ಹೆಡ್‌ಲೈಟ್‌ಗಳು ಹೊಸದಾಗಿದ್ದು, ಮುಂಭಾಗದದಲ್ಲಿ ಇಂಡಿಕೇಟರ್ ಬ್ಲಿಂಕರ್‌ಗಳಿಂದ ಸುತ್ತುವರೆದಿದ್ದು ಮತ್ತು ಮಧ್ಯದಲ್ಲಿ ಹೈ ಬೀಮ್ ಲೈಟ್ ಅನ್ನು ಹೊಂದಿವೆ. ಇಂಟಿಗ್ರೇಟೆಡ್ ರಿಯರ್ ಬ್ಲಿಂಕರ್‌ಗಳೊಂದಿಗೆ ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಅದೇ ವಿನ್ಯಾಸವನ್ನು ಹಿಂಭಾಗದಲ್ಲೂ ಕಾಣಬಹುದಾಗಿದೆ. 5-ಸ್ಪೋಕ್ 12-ಇಂಚಿನ ಅಲಾಯ್ ಚಕ್ರಗಳು ತೀಕ್ಷ್ಣವಾಗಿ ಕಾಣುತ್ತವೆ. ಏಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಅನ್ನು ಮ್ಯಾಟ್ ಬ್ಲ್ಯಾಕ್, ಗ್ಲೋಸಿ ವೈಟ್, ಮ್ಯಾಟ್ ಬ್ಲೂ ಮತ್ತು ಗ್ಲೋಸಿ ರೆಡ್ ಎಂಬ ಮೂರು ಬಣ್ಣಗಳಲ್ಲಿ ಗ್ರಾಹಕರಿಗೆ ಮಾರಾಟಕ್ಕೆ ಲಭ್ಯವಿದೆ.

ಸ್ಮೂಥ್ ರೈಡಿಂಗ್ ಅನುಭವ ನೀಡುವುದಕ್ಕಾಗಿ ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್‌ನ ಮುಂಭಾಗದಲ್ಲಿ ಡ್ಯುಯೆಲ್ ಟೆಲೆಸ್ಕಾಪಿಕ್ ಸಸ್ಪೆನ್ಷನ್ ಇದ್ದರೆ ಹಿಂಬದಿಯ ಅಡ್ಜಸ್ಟೇಬಲ್ ಸಸ್ಪೆನ್ಷನ್‌ಗಳನ್ನು ಟ್ಯೂನ್ ಮಾಡಲಾಗಿದೆ. ವಿಶಾಲವಾದ ಜಾಗವನ್ನು ಹೊಂದಿರುವ ಹಿಂಬದಿಯ ಚರ್ಮದ ಹೊದಿಕೆಯನ್ನು ಹೊಂದಿದ್ದು, ಗ್ರೇ ಮತ್ತು ಕೆಂಪು ಬಣ್ಣದ ದಾರದಲ್ಲಿ ಹೊಲೆಯಲಾಗಿದೆ.

ಏಪ್ರಿಲ್‌ನಲ್ಲಿ ಗರಿಷ್ಠ ದ್ವಿಚಕ್ರವಾಹನ ಮಾರಿದ ಸುಜುಕಿ

ಸ್ಕೂಟರ್‌ನ ಹಿಂಬದಿಯ ಸವಾರರಿಗೆ ನೆರವಾಗುವ ನಿಟ್ಟಿನಲ್ಲಿ ಹಿಂತೆಗೆದುಕೊಳ್ಳುವ ಪುಟ್‌ಪೆಗ್ಸ್ ಒದಗಿಸಲಾಗಿದೆ. ಜೊತೆಗೆ ಹಿಡಿಯಲು ಅನುಕೂಲವಾಗುವ ರೀತಿಯಲ್ಲಿ ಗ್ರ್ಯಾಬ್ ರೇಲ್ಸ್ ಕೂಡ ಕೊಡಲಾಗಿದೆ. ಇನ್ನು ಯಾವುದೇ ತೊಂದರೆ ಇಲ್ಲದೇ ಹೆಲ್ಮೆಟ್ ಇಡಲು ವಿಶಾಲವಾದ ಸ್ಟೋರೇಜ್ ಜಾಗವನ್ನು ಸೀಟ್‌ ನೀಡಲಾಗಿದೆ. ಸಾಕಷ್ಟು ವಿಶಾಲವಾದ ಜಾಗವನ್ನು ಇಲ್ಲಿ ನೀಡಲಾಗಿದೆ.

ಟೆಕೋಮೀಟರ್, ಮೈಲೇಜ್ ಇನ್ಸಟ್ರಕ್ಟರ್, ಆವರೇಜ್ ಸ್ಪೀಡ್, ಟಾಪ್ ಸ್ಪೀಡ್, ಸ್ಪೀಡ್ ಡಿಸ್‌ಪ್ಲೇ, ಫ್ಯೂಯೆಲ್ ಇಂಜೆಕ್ಷನ್, ಒಡೋಮೀಟರ್ ಮತ್ತು ಇತ್ಯಾದಿ ಮಾಹಿತಿಯನ್ನು ಒಳಗೊಂಡ 5.7 ಇಂಚಿನಷ್ಟು ವಿಶಾಲವಾದ ಡಿಜಿಟಲ್ ಇನ್ಸ್‌ಟ್ರುಮೆಂಟ್ ಪ್ಯಾನೆಲ್ ನೀಡಲಾಗಿದೆ.

ಏಪ್ರಿಲಿಯಾ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್‌ನಲ್ಲಿ ಬಿಎಸ್ 6 ನಿಯಮದ 1255 ಸಿಸಿ ಎಂಜಿನ್ ನೀಡಲಾಗಿದೆ. ಈ ಎಂಜಿನ್ ಏರ್‌ಕೋಲ್ಡ್ ಎಂಜಿನ್ ಆಗಿದೆ. ಗರಿಷ್ಠ 9.52 ಬಿಎಚ್‌ಪಿ ಪವರ್ ಹಾಗೂ 9.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಏಪ್ರಿಲಾ ಸ್ಕೂಟರ್ ಎಂಜಿನ್‌ಗಳು ಪವರ್‌ಫುಲ್ ಪ್ರದರ್ಶನದಿಂದಾಗಿ ಗಮನ ಸೆಳೆದಿದೆ. ಹಾಗಾಗಿ, ಈಗ ಬಿಡುಗಡೆಯಾಗಿರುವ ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್‌ನಲ್ಲಿ ಪವರ್‌ಫುಲ್ ಎಂಜಿನ್ ನೀಡಲಾಗಿದೆ.

Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ

click me!