ತಿಂಗಳ ಮಾರಾಟ ವರದಿ ಪ್ರಕಟ; 2.8 ಲಕ್ಷ ವಾಹನ ಮಾರಾಟ ಮಾಡಿದ ಹೊಂಡಾ!

By Suvarna News  |  First Published May 3, 2021, 10:25 PM IST

ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಲ್ಲೇ ಹೊಂಡಾ ನಿಗದಿತ ಗುರಿ ತಲುಪಿದೆ. ಕೊರೋನಾ ಕಾರಣ ಹಲವು ರಾಜ್ಯಗಳಲ್ಲಿ ಕಠಿಣ ನಿರ್ಬಂಧ, ಲಾಕ್‌ಡೌನ್, ಕರ್ಫ್ಯೂ ಜಾರಿಯಲ್ಲಿದೆ. ಇದರ ನಡುವೆ ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಹೊಂಡಾ ಯಶಸ್ವಿಯಾಗಿದೆ.


ಗುರುಗ್ರಾಂ(ಮೇ.03 ) : ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್  2021ರ ಏಪ್ರಿಲ್ ತಿಂಗಳ ಮಾರಾಟವನ್ನು ಘೋಷಿಸಿದೆ. ದೇಶದಲ್ಲಿ ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದರೂ, ನಿರೀಕ್ಷಿತ ಮಾರಾಟ ಸಂಖ್ಯೆ ತಲುಪುವಲ್ಲಿ ಯಶಸ್ವಿಯಾಗಿದೆ.
  
2021-22ನೇ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ಹೋಂಡಾದ ಒಟ್ಟು ಮಾರಾಟ (ದೇಶೀಯ + ರಫ್ತು) 2,83,045 ಯುನಿಟ್‍ಗಳಾಗಿದ್ದು, 2,40,100 ದ್ವಿಚಕ್ರ ವಾಹನಗಳನ್ನು ದೇಶೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶಾದ್ಯಂತ ರಾಷ್ಟ್ರೀಯ ಲಾಕ್‍ಡೌನ್ ಇದ್ದ ಹಿನ್ನೆಲೆಯಲ್ಲಿ ದೇಶೀಯ ಮಾರಾಟ ಶೂನ್ಯವಾಗಿತ್ತು ಎನ್ನುವುದು ಗಮನಾರ್ಹವಾಗಿದೆ.

ಸಾಗರೋತ್ತರ ವಹಿವಾಟು ವಿಸ್ತರಣೆಯತ್ತ ಹೊಸದಾಗಿ ಗಮನ ಹರಿಸಲಾಗಿದ್ದು, 2020ರ ಏಪ್ರಿಲ್‍ನಲ್ಲಿ 2630 ಯುನಿಟ್‍ಗಳಿದ್ದ ಹೋಂಡಾದ ರಫ್ತು ಪ್ರಮಾಣ 2021ರ ಏಪ್ರಿಲ್‍ನಲ್ಲಿ 42,945ಕ್ಕೇರಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ತೆರೆದುಕೊಳ್ಳುತ್ತಿದ್ದು, ಹೋಂಡಾದ ರಫ್ತು 36 ತಿಂಗಳಲ್ಲಿ ಮೊದಲ ಬಾರಿಗೆ 40 ಸಾವಿರ ಯುನಿಟ್‍ಗಳ ಗಡಿ ದಾಟಿದೆ. ಹೋಂಡಾದ ಮೇಡ್ ಇನ್ ಇಂಡಿಯಾ ಬಿಎಸ್-6 ಮಾದರಿಯು ಯೂರೋಪ್ (ಎಸ್ಪಿ 125) ಮತ್ತು ಜಪಾನ್ (ಎಚ್‍ನೆಸ್ ಸಿಬಿ 350 ಮತ್ತು ಸಿಬಿ 350ಆರ್‍ಎಸ್) ಗ್ರಾಹಕರನ್ನು ಮುದಗೊಳಿಸುತ್ತಿದೆ.

Latest Videos

undefined

ಏಪ್ರಿಲ್ ಆರಂಭದಿಂದಲೇ ಜಾರಿಯಾದ ಪ್ರಾದೇಶಿಕ ಲಾಕ್‍ಡೌನ್, ಗ್ರಾಹಕರ ಭಾವನೆಗಳನ್ನು ಗಣನೀಯವಾಗಿ ಕೆಳಕ್ಕಿಳಿಸಿದೆ. ಏತನ್ಮಧ್ಯೆ ಮನೆಯಲ್ಲೇ ಸುರಕ್ಷಿತವಾಗಿ ಇರಲು ಜನ ಆದ್ಯತೆ ನೀಡುವುದರಿಂದ ವೈಯಕ್ತಿಕ ಸಂಚಾರ ಅಗತ್ಯತೆ ಇನ್ನೂ ಅಧಿಕವಾಗಿ ಇರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ತಿಂಗಳುಗಳಲ್ಲಿ ಪುನಶ್ಚೇತನಕ್ಕೆ ಒತ್ತು ಸಿಗುವ ನರೀಕ್ಷೆ ಇದೆ. ಮೇ ಒಂದರಿಂದ ಆರಂಭಿಸಿ, ನಾವು ಈಗಾಗಲೇ ದೇಶಾದ್ಯಂತ ಇರುವ ಎಲ್ಲ ನಾಲ್ಕು ಘಟಕಗಳಲ್ಲಿ ಮೇ ತಿಂಗಳ ಮೊದಲ ಪಾಕ್ಷಿಕದ ವರೆಗೆ ಉತ್ಪಾದನಾ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಕೋವಿಡ್-19 ಪರಿಸ್ಥಿತಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತು ಬಳಿಕ ಜಾರಿಯಾದ ಹಲವು ಲಾಕ್‍ಡೌನ್‍ಗಳ ಕಾರಣದಿಂದ, ರೂಪುಗೊಳ್ಳುತ್ತಿರುವ ವಹಿವಾಟು ವಾತಾವರಣವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಈ ಅನಿಶ್ಚಿತ ಕಾಲಘಟ್ಟದಲ್ಲಿ ನಮ್ಮ ವಹಿವಾಟು ಪಾಲುದಾರರಿಗೆ ನೀಡುವ ಬೆಂಬಲವನ್ನು ಮುಂದುವರಿಸುತ್ತೇವೆ ಹಾಗೂ ಅಲ್ಪಾವಧಿಯಲ್ಲಿ ನಮ್ಮ ಮಾರಾಟ ಯೋಜನೆಯನ್ನು ಅದಕ್ಕೆ ಅನುಸಾರವಾಗಿ ಪರಾಮರ್ಶಿಸಲಿದ್ದೇವೆ ಎಂದು  ಹೋಂಡಾ  ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೇಂದ್ರ ಸಿಂಗ್ ಗುಲೇರಿಯಾ ಹೇಳಿದ್ದಾರೆ. 

ಹೋಂಡಾ 2 ವೀಲರ್ ಇಂಡಿಯಾ ಎರಡು ಹೊಸ ಸಾಗರೋತ್ತರ ವಹಿವಾಟು ವಿಸ್ತರಣಾ ಶಾಖೆಗಳನ್ನು ಆರಂಭಿಸಿದೆ. ಹೋಂಡಾ 2ವ್ಹೀಲರ್ಸ್ ಇಂಡಿಯಾ ಒಳಗೆ ಪ್ರಮುಖ ಸಾಂಸ್ಥಿಕ ಪುನರ್ರಚನೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಸಹವರ್ತಿಗಳ ಬಲವನ್ನು ಬಳಸಿಕೊಳ್ಳಲು ಮತ್ತು ಎಸ್‍ಇಡಿಬಿಕ್ಯೂ (ಮಾರಾಟ, ಎಂಜಿನಿಯರಿಂಗ್, ಅಭಿವೃದ್ಧಿ, ಖರೀದಿ ಮತ್ತು ಗುಣಮಟ್ಟ) ಅಚುವಟಿಕೆಗಳನ್ನು ಒಂದೇ ಸೂರಿನಡಿ ಕಾರ್ಯತಂತ್ರಕ್ಕೆ ಅನುಸಾರವಾಗಿ ಸಮನ್ವಯಗೊಳಿಸುತ್ತಿದ್ದೇವೆ. ಈ ಮೂಲಕ ಹೋಂಡಾಗೆ ಭಾರತವನ್ನು ಜಾಗತಿಕ ರಫ್ತು ಹಬ್ ಆಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ!

ಭಾರತದಲ್ಲಿ ಹೊಂಡಾ CBR650R ಬೈಕ್ ಬಿಡುಗಡೆ; ಬುಕಿಂಗ್ ಆರಂಭ!.

ಹೋಂಡಾದ ಪ್ರಿಮಿಯಂ ಮೋಟರ್‍ಸೈಕಲ್ ವಹಿವಾಟು ಜಾಲ ವಿಸ್ತರಣೆ: ಹೋಂಡಾ ತನ್ನ ಬಿಗ್‍ವಿಂಗ್ ಡೀಲರ್‍ಶಿಪ್ ಜಾಲವನ್ನು ವಿಸ್ತರಿಸಿದ್ದು, ಚೆನ್ನೈ,ಮ ಹೈದರಾಬಾದ್, ಜಮ್ಮು, ಲಕ್ನೋ, ತ್ರಿಪುರ ಮತ್ತು ಅಲಪ್ಪುರ ಹೀಗೆ ಆರು ನಗರಗಳಲ್ಲಿ ಹೊಸ ಕೇಂದ್ರಗಳನ್ನು ತೆರೆದಿದೆ.

ಹೋಂಡಾದ ರೆಡ್‍ವಿಂಗ್ ವಹಿವಾಟು: ಎಲ್ಲ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹೋಂಡಾ ರಾಜಸ್ಥಾನದಲ್ಲಿ 20 ಲಕ್ಷ ದ್ವಿಚಕ್ರ ವಾಹನ ಗ್ರಾಹಕರನ್ನು ತಲುಪಿದ ಮೈಲುಗಲ್ಲನ್ನು ಸಂಭ್ರಮಿಸಿದೆ. ಉದಯಪುರದಲ್ಲಿ ಹೋಂಡಾ ಎಕ್ಸ್‍ಕ್ಲೂಸಿವ್ ಅಧಿಕೃತ ಡೀಲರ್‍ಶಿಪ್ (ಎಚ್‍ಇಎಡಿ) ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ತನ್ನ ಜಾಲವನ್ನು ವಿಸ್ತರಿಸಿದೆ.

ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಬಿಡುಗಡೆ; ಆಕರ್ಷಕ ವಿನ್ಯಾಸ ಹಾಗೂ ಬೆಲೆ!

ರಸ್ತೆ ಸುರಕ್ಷೆ: ಹೈದರಾಬಾದ್‍ನಲ್ಲಿ ಸಂಚಾರ ತರಬೇತಿ ಪಾರ್ಕ್‍ನ ಆರನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ಹೋಂಡಾ 1.3 ಲಕ್ಷ ನಾಗರಿಕರಿಗೆ ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಶಿಕ್ಷಣ ನೀಡಿದೆ.

ಹೋಂಡಾ ಮೋಟರ್‍ಸ್ಪೋಟ್ರ್ಸ್: ಮಾರ್ಕ್ ಮಾರ್ಕೆಝ್ ಅವರು ಮೋಟೋ ಜಿಪಿಯ 2 ಮತ್ತು 3ನೇ ಸುತ್ತಿನಲ್ಲಿ ರೋಮಾಂಚಕವಾಗಿ ಚೇತರಿಸಿಕೊಂಡಿದ್ದು, ರೆಪ್ಸೋಲ್ ಹೋಂಡಾ ಸವಾರ 7ನೇ ಸ್ಥಾನ ಹಾಗೂ ಒಟ್ಟಾರೆಯಾಗಿ 14ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ.

click me!