ಮೆಜೆಸ್ಟಿಕ್ ಮೆಟ್ರೋದಲ್ಲಿ ವೀರ ಸಾವರ್ಕರ್ ಫೋಟೋ, ಬೆಂಗಳೂರಿನಲ್ಲಿ ವಿವಾದದ ಕಿಡಿ!

By Suvarna News  |  First Published Aug 16, 2022, 6:14 PM IST

ಶಿವಮೊಗ್ಗದ ಬೆನ್ನಲ್ಲೇ ಇದೀಗ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ವೀರ ಸಾವರ್ಕರ್ ಫೋಟೋ ವಿವಾದ ಆರಂಭಗೊಂಡಿದೆ. ಫೋಟೋ ಕುರಿತು ಕೆಲವರು ಅಪಸ್ವರ ಎತ್ತಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
 


ಬೆಂಗಳೂರು(ಆ.16):  ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಆದರೆ ವಿವಾದಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಶಿವಮೊಗದ್ದಲ್ಲಿ ವೀರ ಸಾವರ್ಕರ್ ಫೋಟೋ ತೆರವು ಭಾರಿ ಗಲಭೆಗೆ ಕಾರಣವಾಗಿದ್ದರೆ, ಇದೀಗ ಬೆಂಗಳೂರಿನಲ್ಲಿ ವೀರ ಸಾವರ್ಕರ್ ಫೋಟೋ ವಿವಾದ ಆರಂಭಗೊಂಡಿದೆ. ಮೆಜಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ವೀರರ ಫೋಟೋ ಹಾಕಲಾಗಿದೆ. ಚಂದ್ರಶೇಖರ್ ಆಜಾದ್, ಉದಮ್ ಸಿಂಗ್ ಜೊತೆಯಲ್ಲಿ ವೀರ ಸಾವರ್ಕರ್ ಫೋಟೋವನ್ನು ಹಾಕಲಾಗಿದೆ. ಇದು ವಿವಾದದ ಕೇಂದ್ರವಾಗಿದೆ. ವೀರ ಸಾವರ್ಕರ್ ಫೋಟೋ ಯಾಕೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಎತ್ತಿದ್ದಾರೆ. ಇದೇ ವೇಳೆ ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಫೋಟೋ ಸಂಸತ್ತಿನಲ್ಲೂ ಇದೆ ಎಂದು ತಿರುಗೇಟು ನೀಡಿರುವ ಘಟನೆಗಳು ನಡೆದಿದೆ. ವೀರ ಸಾವರ್ಕರ್ ಫೋಟೋದಿಂದ ಬೆಂಗಳೂರಿನಲ್ಲಿ ವಿವಾದದ ಕಿಡಿ ಹೊತ್ತಿಕೊಂಡಿದೆ.

ಸ್ವಾತಂತ್ರ್ಯ ಹೋರಾಟಗಾರರ ಫೋಟೋದಲ್ಲಿ ವೀರ ಸಾವರ್ಕರ್ ಫೋಟೋ ಹಾಕಿರುವುದು ತಪ್ಪು ಎಂದು ಕೆಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ರಿಟೀಷರ ಕ್ಷಮೆ ಕೇಳಿದ ಸಾವರ್ಕರ್‌ಗೆ ನಾವು ಯಾಕೆ ಗೌರವ ಕೊಡಬೇಕು? ಬ್ರಿಟೀಷರ ಬೂಟು ನೆಕ್ಕಿದ ಸಾವರ್ಕರ್ ಯಾವ ಸ್ವಾತಂತ್ರ್ಯ ಹೋರಾಟಗಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಕೌಂಟರ್ ಕೂಡ ನೀಡಲಾಗಿದೆ. ಇಂಧಿರಾ ಗಾಂಧಿಯಿಂದ ಹಿಡಿದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿದ್ದ ಕಾಂಗ್ರೆಸ್ ಕೂಡ ವೀರ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಗೌರವಿಸಿದೆ ಎಂಬ ಉತ್ತರವನ್ನು ನೀಡಲಾಗಿದೆ.

Latest Videos

undefined

ಹಿಂದೂ ಯುವಕನಿಗ ಚಾಕು ಇರಿತ, ಸಾವರ್ಕರ್ ಫೋಟೋ ವಿವಾದಿಂದ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ!

ವೀರ ಸಾವರ್ಕರ್ ಫೋಟೋ ಬದಲಿಗೆ ದೇಶವನ್ನು ಒಡೆದ ನೆಹರೂ ಹಾಗೂ ಜಿನ್ನ ಫೋಟೋ ಹಾಕಬೇಕಿತ್ತಾ? ಸಂಸತ್ ಭವನದಲ್ಲೂ ವೀರ ಸಾವರ್ಕರ್ ಫೋಟೋ ಹಾಕಲಾಗಿದೆ. ಇದು ಇಂದು ನಿನ್ನೆಹಾಕಿರುವ ಫೋಟೋ ಅಲ್ಲ. ಈ ಫೋಟೋ. ಈ ಫೋಟೋವನ್ನು ತೆಗೆಯುವ ತಾಕತ್ತು ಇದೆಯಾ? ಎಂದು ಪ್ರಶ್ನಿಸಲಾಗಿದೆ. 

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ವಿವಾದದಿಂದ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವೀರ ಸಾವರ್ಕರ್‌ ಫೋಟೋಗೆ ಸಂಬಂಧಿಸಿದ ಘರ್ಷಣೆ ವಿಕೋಪಕ್ಕೆ ತಿರುಗಿ ಹಿಂದೂ ಯುವಕನೊಬ್ಬನಿಗೆ ಚೂರಿ ಇರಿಯಲಾಗಿದೆ. ಅಮೀರ್‌ ಅಹಮ್ಮದ್‌ ವೃತ್ತದಲ್ಲಿ ಹಾಕಲಾಗಿದ್ದ ಸಾವರ್ಕರ್‌ ಭಾವಚಿತ್ರದ ಫ್ಲೆಕ್ಸ್‌ ಅನ್ನು ಅನ್ಯಕೋಮಿನ ಗುಂಪೊಂದು ತೆಗೆಯಲೆತ್ನಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಇದರ ನಡುವೆ ಗಾಂಧಿ ಬಜಾರ್‌ನ ಉಪ್ಪಾರ ಕೇರಿಯಲ್ಲಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ಮತ್ತು ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಆ.18ರವ​ರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ-ಕಾಲೇಜುಗಳಿಗೂ ಮಂಗಳವಾರ ರಜೆ ಘೋಷಿಸಲಾಗಿದೆ.

 

ಮಂಗಳೂರಿನಲ್ಲೂ ವೀರ ಸಾವರ್ಕರ್ ಪೋಟೋ ಗಲಾಟೆ, ಮಧ್ಯೆ ಪ್ರವೇಶಿಸಿದ ಪೊಲೀಸ್ರು

ಸ್ವಾತಂತ್ರ್ಯ ಅಮೃತ ಮಹೋತ್ಸವ ಘಳಿಗೆಯಲ್ಲಿ ಶಿವಮೊಗ್ಗ ನಗರದಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ಈ ಘಟನೆಗೆ ಕಾರಣವಾದ ದುಷ್ರ್ಕರ್ಮಿಗಳನ್ನು ಬಂಧಿಸಲಾಗುವುದು. ಯಾರೂ ವದಂತಿಗಳಿಗೆ ಕಿವಿಕೊಡದೆ, ಶಾಂತ ರೀತಿಯಲ್ಲಿ ವರ್ತಿಸಬೇಕು. ಪೊಲೀಸರ ಜೊತೆ ಎಲ್ಲರೂ ಕೈ ಜೋಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

click me!