ಸ್ವಾತಂತ್ರ್ಯ ದಿನಾಚರಣೆ ದಿನ ಬೆಂಗಳೂರಿನ ಹಲವು ಮಾರ್ಗದಲ್ಲಿ ಟ್ರಾಫಿಕ್ ಜಾಮ್, ಸುಗಮ ಸಂಚಾರಕ್ಕೆ ಸುತ್ತೋಲೆ!

By Suvarna NewsFirst Published Aug 13, 2022, 9:52 PM IST
Highlights

ಸ್ವಾತಂತ್ರ್ಯ ದಿನಾಚರಣೆ ದಿನ ಯಾವ ಯಾವ ರಸ್ತೆಯಲ್ಲಿ ಯಾವ ಟೈಮ್ ಸಂಚಾರ  ಬದಲಿಸಲು ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕದಂತೆ ಮನವಿ ಮಾಡಲಾಗಿದೆ.

ಬೆಂಗಳೂರು(ಆ.13):  ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ನಗರದಲ್ಲಿ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಸರ್ಕಾರದ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ನಡಿಗೆ ಸೇರಿದಂತೆ ಹಲವು ಜಾಥಾಗಳು ನಡೆಯಲಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಆಗಲಿದೆ. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆ ದಿನ ಯಾವ ರಸ್ತೆಯಲ್ಲಿನ ಸಂಚಾರ ಮಾರ್ಗ ಬದಲಿಸಬೇಕು ಅನ್ನೋ ಕುರಿತು ನಗರ ಸಂಚಾರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಆಗಸ್ಟ್ 15 ರಂದು ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಸಂಚಾರ ಮಾರ್ಗ ಬದಲಿಸಲು ಪೊಲೀಸಲು ಮನವಿ ಮಾಡಿದ್ದಾರೆ.

ಯಾವ ಸಮಯದಲ್ಲಿ ಯಾವ ರಸ್ತೆ ಮಾರ್ಗದಲ್ಲಿ ಸಂಚಾರ ಬದಲಿಸಬೇಕು?
ಬೆಳಗ್ಗೆ  6.30 ರಿಂದ 8 ಗಂಟೆವರೆಗೆ..
ಹೆಸರಘಟ್ಟ ರಸ್ತೆಯಲ್ಲಿ ಸಂಚಾರ ಮಾಡದಂತೆ ಸೂಚನೆ.. 

ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ.
ಹೆಚ್ ಎಂಟಿ ರಸ್ತೆಯಲ್ಲಿ ಸಂಚರಿಸದಂತೆ ಸೂಚನೆ.. 

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ..
ವಿಠಲ್ ನಾಗರಾಜ ರಸ್ತೆ, ರಾಜ್ ಕುಮಾರ್ ರಸ್ತೆ, ತುಮಕೂರು ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚರಿಸದಂತೆ ಆದೇಶ..

ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ..
ನೃಪತುಂಗ ರಸ್ತೆ, ಎನ್ ಆರ್ ರೋಡ್, ಜೆ.ಸಿ ರೋಡ್, ಜಿ.ಟಿ ರೋಡ್, ಎಲ್ .ಪಿ.ಟಿ ರೋಡ್, 
ಕೆ.ಜಿ ರೋಡ್, ಗಾಂಧಿ ನಗರ 5th. ಮುಖ್ಯ ರಸ್ತೆಯಲ್ಲಿ ಸಂಚರಿಸದಂತೆ ಸೂಚನೆ.. 

ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ..
ಆನಂದ್ ರಾವ್ ಸರ್ಕಲ್‌ ನಿಂದ ಸುಬೇದಾರ್ ಚತ್ರಂ ರಸ್ತೆ, 
ಗೂಡ್ ಶೆಡ್ ರೋಡ್ ನಿಂದ ಟಿ.ಎಮ್. ಸಿ ರಾಯನ್ ರೋಡ್, 
ಮೆಜೆಸ್ಟಿಕ್ ಪ್ಲಾಟ್ ಫಾರ್ಮ್ ರೋಡ್ ನಿಂದ ಸಂಗೋಳ್ಳಿ ರಾಯಣ್ಣ ಸರ್ಕಲ್, 
ಬಿನ್ನಿಪೇಟೆ - ಹುಣಸೇಮರ ಜಂಕ್ಷನ್ ನಿಂದ ಗೂಡ್ ಶೆಡ್ ರಸ್ತೆ..
ಟ್ಯಾಂಕ್ ಬಂಡ್ ರಸ್ತೆ, ಶೇಷಾದ್ರಿ ರಸ್ತೆ, ಸೌತ್ ಎಂಡ್ ರಸ್ತೆಯಿಂದ ಲಾಲ್ ಬಾಗ್ ಪಶ್ಚಿಮ‌ ಗೇಟ್, 
ಮಿನರ್ವ ಸರ್ಕಲ್ ನಿಂದ ಟೌನ್ ಹಾಲ್ ಕಡೆಗೆ ಸಂಚರಿಸದಂತೆ ಆದೇಶ..

ಸ್ವಾತಂತ್ರ್ಯ ಅಮೃತ ಮಹೋ​ತ್ಸ​ವಕ್ಕೆ ಈಸೂರು ಸಜ್ಜು

ಮಧ್ಯಾಹ್ನ 12 ಗಂಟೆಯಿಂದ 4 ಗಂಟೆವರೆಗೆ.. 
ಶೇಷ್ಮಾಲ್ ಜಂಕ್ಷನ್ ನಿಂದ ರಾಮಕೃಷ್ಣ ಆಶ್ರಮ ಸರ್ಕಲ್, 
ಬುಲ್ ಟೆಂಪಲ್ ರಸ್ತೆ ಮಂಜುನಾಥ ಕಲ್ಯಾಣ ಮಂಟಪದಿಂದ ಉಮಾ ಥಿಯೇಟರ್ ಕಡೆಗೆ,
ಕೆ.ಆರ್ ರಸ್ತೆ ಡಿಎಮ್ ಜಂಕ್ಷನ್‌ ನಿಂದ ಶಿವಶಂಕರ್ ಸರ್ಕಲ್‌ವರೆಗೆ..
ಡಯಾಗನಕ್ ರೋಡ್ ಹೋಮ್ ಸ್ಕೂಲ್ ಜಂಕ್ಷನ್ ನಿಂದ ವಾಸವಿ ರಸ್ತೆ, 
ಮತ್ತು ನ್ಯಾಷನಲ್ ಕಾಲೇಜ್ ಸುತ್ತ ಮುತ್ತ ಸಂಚರಿಸದಂತೆ ಆದೇಶ..
 

click me!