ಆರೋಗ್ಯ ಕ್ಷೇತ್ರದ ಸುಧಾರಣೆಗೆ ಎಸ್ಟೋನಿಯಾ ಜತೆ ರಾಜ್ಯ ಒಪ್ಪಂದ

Published : Apr 14, 2022, 04:10 AM IST
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಎಸ್ಟೋನಿಯಾ ಜತೆ ರಾಜ್ಯ ಒಪ್ಪಂದ

ಸಾರಾಂಶ

ತಂತ್ರಜ್ಞಾನ ಬಳಸಿ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಎಸ್ಟೋನಿಯಾ ಜತೆ ರಾಜ್ಯ ಒಪ್ಪಂದ ಒಪ್ಪಂದದಿಂದ ರಾಜ್ಯಕ್ಕೆ ಲಾಭ: ಡಾ ಕೆ.ಸುಧಾಕರ್‌

ಬೆಂಗಳೂರು: ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಸುಧಾರಣೆ ತರಲು ಎಸ್ಟೋನಿಯಾ ದೇಶದ ಜತೆ ರಾಜ್ಯ ಆರೋಗ್ಯ ಇಲಾಖೆ ಹೊಸ ಒಡಂಬಡಿಕೆಯನ್ನು ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Sudhakar) ಹೇಳಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಎಸ್ಟೋನಿಯಾ (Estonia) ದೇಶದ ಭಾರತದ ರಾಯಭಾರಿ ಕತ್ರಿನ್‌ಕಿವ್‌ ನೇತೃತ್ವದ ಉನ್ನತ ನಿಯೋಗದ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಎಸ್ಟೋನಿಯಾ ಚಿಕ್ಕ ದೇಶವಾದರೂ ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿದ್ದು, ತಂತ್ರಜ್ಞಾನಕ್ಕೆ ಹೆಸರಾಗಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದೆ. ಹೀಗಾಗಿ ನಿಯೋಗದ ಭೇಟಿಯಿಂದ ರಾಜ್ಯಕ್ಕೆ ಲಾಭವಾಗಲಿದೆ ಎಂದರು.

ಎಸ್ಟೋನಿಯಾ ದೇಶದ ಎಲ್ಲ ಪ್ರಜೆಗಳು ಹೆಲ್ತ್‌ ರಿಜಿಸ್ಟ್ರಿ ಮಾಡಿಕೊಂಡಿದ್ದಾರೆ. ಆ ದೇಶದಲ್ಲಿ ಟೆಲಿಮೆಡಿಸಿನ್‌ ವ್ಯವಸ್ಥೆ ಇದೆ. 400 ವರ್ಷಗಳ ಹಳೆಯ ವಿಶ್ವವಿದ್ಯಾಲಯ ಕೂಡ ಇವೆ. ಇಂತಹ ದೇಶದ ಜತೆ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ (Rajiv Gandhi Univercity) ‘ ಕಾರ್ಯಕ್ರಮಗಳ ವಿನಿಮಯ’ ಕುರಿತು ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದರಿಂದ ಆ ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಪರಿಚಯ ಸಿಗುವುದರ ಜತೆಗೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಕುರಿತು ಅವರಿಗೂ ತಿಳುವಳಿಕೆ ಸಿಗಲಿದೆ ಎಂದು ತಿಳಿಸಿದರು.

ಪೋರ್ಟಿಯಾ ಮೆಡಿಕಲ್‌ಗೆ ಬೃಹತ್ ಸಾಲ.. ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ

ಎಸ್ಟೋನಿಯಾದಲ್ಲಿ ಜೀನೊಮಿಕ್‌ ಲ್ಯಾಬ್‌ ಇದೆ. ವ್ಯಕ್ತಿಯ ಡಿಎನ್‌ಎ (DNA) ಮೂಲಕ ಯಾವ ವ್ಯಕ್ತಿಗೆ ಕ್ಯಾನ್ಸರ್‌, ಪಾರ್ಕಿನ್ಸನ್‌, ಸಾಂಕ್ರಾಮಿಕ ರೋಗಗಳು ಸೇರಿದಂತೆ ಯಾವ ಕಾಯಿಲೆ ಬರಬಹುದು ಎನ್ನುವುದನ್ನು ಸಂಶೋಧನೆ ಮಾಡಲಾಗುತ್ತದೆ. ಈ ಮೂಲಕ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು, ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಮಾತುಕತೆ ನಡೆದಿದೆ ಎಂದು ಸಚಿವರು ವಿವರಿಸಿದರು.

ಕೋವಿಡ್‌ ತಡೆಯುವ ವಿಚಾರದಲ್ಲಿ ಮತ್ತು ರಾಜತಾಂತ್ರಿಕ ಸಂಬಂಧ ಬೆಳೆಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ತತ್ವಜ್ಞಾನಿಯಂತೆ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ದೂರದೃಷ್ಟಿಯ ಯೋಚನೆಗಳು ಭಾರತದಲ್ಲಿ ಆಗಬಹುದಾಗಿದ್ದ ಕೋಟ್ಯಂತರ ಸಾವು-ನೋವುಗಳನ್ನು ತಡೆದಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

Karnataka Budget 2022-23:ಮನೆ ಬಾಗಿಲಿಗೆ ವೈದ್ಯಕೀಯ ಸೇವೆ; ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ
ಲಸಿಕಾಕರಣದಿಂದ ಭಾರತ(India) ಕೋವಿಡ್‌(Covid-19) ಅನ್ನು ಸಮರ್ಥವಾಗಿ ಮತ್ತು ಸಮಗ್ರವಾಗಿ ಎದುರಿಸಿದೆ. ಸಂಭಾವ್ಯ 4ನೇ ಅಲೆಯನ್ನು ತಡೆಯಲು ಕೂಡ ಲಸಿಕೆ(Vaccine) ಒಂದೇ ಅಸ್ತ್ರ. ಸರ್ಕಾರ ನೀಡುವ ಲಸಿಕೆಯನ್ನು ಸಾರ್ವಜನಿಕರು ಶೀಘ್ರದಲ್ಲೇ ಪಡೆದುಕೊಂಡು ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.
 

PREV
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!