ದೇಗುಲಗಳ ತಸ್ತೀಕ್‌ ಹಣ 60000ಕ್ಕೆ ಏರಿಸಿ ಸರ್ಕಾರ ಆದೇಶ

Published : Apr 14, 2022, 03:32 AM IST
ದೇಗುಲಗಳ ತಸ್ತೀಕ್‌ ಹಣ 60000ಕ್ಕೆ ಏರಿಸಿ ಸರ್ಕಾರ ಆದೇಶ

ಸಾರಾಂಶ

ಸಿ ವರ್ಗದ ದೇಗುಲಗಳಿಗೆ 48000 ಇದ್ದ ತಸ್ತೀಕ್‌ 60000ಕ್ಕೆ ಏರಿಸಿ ಸರ್ಕಾರ ಆದೇಶ ಬೆಲೆ ಏರಿಕೆಯಿಂದ ಪೂಜಾ ಕಾರ್ಯಗಳ ವೆಚ್ಚ ಹೆಚ್ಚಳ ಹಿನ್ನೆಲೆ  

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಸಿ ವರ್ಗದ ದೇವಾಲಯಗಳಲ್ಲಿ ಪ್ರಸ್ತುತ ವಾರ್ಷಿಕ 48 ಸಾವಿರ ರೂ. ಇರುವ ತಸ್ತೀಕ್‌ ಮೊತ್ತವನ್ನು ಪ್ರಸಕ್ತ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ 60 ಸಾವಿರ ರೂ.ಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ತಸ್ತೀಕ್‌ ಹಣವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಹಲವು ವರ್ಷಗಳಿಂದ ದೇವಸ್ಥಾನಗಳ ಅರ್ಚಕರು (Temple Priest) ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ್ದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು, ದಿನ ಬಳಕೆಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯಗಳ ನಿರ್ವಹಣೆಗಾಗಿ ತಸ್ತೀಕ್‌ ಮೊತ್ತವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ತಸ್ತೀಕ್‌ ಹಣ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಕೂಡ ಪ್ರಸಕ್ತ ಸಾಲಿನ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಈಗ ಅಧಿಕೃತ ಆದೇಶ ಹೊರಬಿದ್ದಿದೆ.

ಇನಾಂ ರದ್ದತಿ ಅಧಿನಿಯಮ 1977ರ ಅನ್ವಯ ದೇವಸ್ಥಾನಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳು (Religious institutions) ಹೊಂದಿದ್ದ ಇನಾಂ ಜಮೀನುಗಳನ್ನು ಕಳೆದುಕೊಂಡ ಹಲವಾರು ಸಂಸ್ಥೆಗಳಲ್ಲಿ ದೈನಂದಿನ ಪೂಜಾ ಕೈಂಕರ್ಯಗಳಿಗೆ (daily worship activities) ಸರ್ಕಾರ ವಾರ್ಷಿಕ ತಸ್ತೀಕ್‌ ಹಣ ನಿಗದಿಪಡಿಸಿ ಕಾಲ ಕಾಲಕ್ಕೆ ಹೆಚ್ಚಿಸಿ 2017-18ನೇ ಸಾಲಿನಲ್ಲಿ 48 ಸಾವಿರ ರು. ಗೆ ನಿಗದಿಪಡಿಸಿತ್ತು. ಇಷ್ಟುಮೊತ್ತದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ಕಷ್ಟಸಾಧ್ಯ ಎಂದು ಅರ್ಚಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಅರ್ಚಕರ ಬಹುದಿನಗಳ ಬೇಡಿಕೆ ಈಡೇರಿದೆ. ಬಹಳಷ್ಟು ಜನ ಅರ್ಚಕರ ಪರಿಸ್ಥಿತಿಯನ್ನು ನೋಡಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಅವರು ಸ್ಪಂದಿಸಿದ್ದು ಸಂತಸದ ವಿಷಯ. ಪ್ರಸಕ್ತ ಸಾಲಿನಿಂದಲೇ ಇದು ಜಾರಿಯಾಗಲಿದೆ ಎಂದರು.


ಸಪ್ತಪದಿ ಉಚಿತ ವಿವಾಹ ಪುನಾರಂಭ

ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ರಾಜ್ಯ ಸರ್ಕಾರದ (State Govt) 'ಸಪ್ತಪದಿ' ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಪುನಾರಂಭಗೊಂಡಿದೆ. ಏ.28, ಮೇ 11 ಮತ್ತು 25ರಂದು ಆಯ್ದ ದೇಗುಲಗಳಲ್ಲಿ ಸಾಮೂಹಿಕ ವಿವಾಹ (Mass Marriage) ನಡೆಯಲಿದೆ ಎಂದು ತಿಳಿದು ಬಂದಿದೆ.

PREV
click me!

Recommended Stories

ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ