ಶ್ರೀರಾಮನ ಪರವಾಗಿ ವಾದಿಸಿದ್ದ ಕನ್ನಡಿಗ ವಕೀಲ ಕೆ. ಎನ್. ಭಟ್

By Kannadaprabha News  |  First Published Nov 10, 2019, 10:52 AM IST

ರಾಮಜನ್ಮಭೂಮಿ ಅಯೋಧ್ಯೆ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸುಮಾರು 3 ವರ್ಷಗಳ ಕಾಲ ನಿರ್ವಹಣೆ ಮಾಡಿದವರು ಮತ್ತು ಭಗವಾನ್ ‘ಶ್ರೀರಾಮ’ನ ಪರವಾಗಿ ವಾದ ಮಂಡಿಸಿದವರು ಕರ್ನಾಟಕದ ಹಿರಿಯ ವಕೀಲ ಕೆ.ಎನ್. ಭಟ್ ಅವರು. 2010ರಲ್ಲಿ ಅಲಹಾಬಾದ್ ಹೈಕೊರ್ಟ್ ತೀರ್ಪು ನೀಡಿತ್ತು.


ಬೆಂಗಳೂರು(ನ.10): ರಾಮಜನ್ಮಭೂಮಿ ಅಯೋಧ್ಯೆ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸುಮಾರು 3 ವರ್ಷಗಳ ಕಾಲ ನಿರ್ವಹಣೆ ಮಾಡಿದವರು ಮತ್ತು ಭಗವಾನ್ ‘ಶ್ರೀರಾಮ’ನ ಪರವಾಗಿ ವಾದ ಮಂಡಿಸಿದವರು ಕರ್ನಾಟಕದ ಹಿರಿಯ ವಕೀಲ ಕೆ.ಎನ್. ಭಟ್ ಅವರು. 2010ರಲ್ಲಿ ಅಲಹಾಬಾದ್ ಹೈಕೊರ್ಟ್ ತೀರ್ಪು ನೀಡಿತ್ತು. 

ತೀರ್ಪಿನಲ್ಲಿ ಶ್ರೀರಾಮ ಅಯೋಧ್ಯೆ ಯಲ್ಲಿ ಜನ್ಮತಾಳಿದ್ದನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿಪಾದಿಸಿದ್ದರು ಹಾಗೂ ಆ ಸಂಬಂಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದಿಟ್ಟಿ ದ್ದರು. ಸುಪ್ರೀಂ ಕೋರ್ಟ್ ಶನಿವಾರ ನೀಡಿದ ತೀರ್ಪಿನಲ್ಲಿ ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ್ದಕ್ಕೆ ಸಾಕ್ಷ್ಯಗಳು ಪುಷ್ಟೀಕರಿಸಿವೆ ಎಂದು ಉಲ್ಲೇಖಿಸಿದೆ.

Latest Videos

undefined

ಪೇಜಾವರ ಶ್ರೀ ಅಭಿನಂದಿಸಿದ ಮುಸ್ಲಿಂ ಯುವಕರು

ಅಯೋಧ್ಯೆ ಪ್ರಕರಣ ಸುಪ್ರೀಂ ಕೊರ್ಟ್ ಮೆಟ್ಟಿಲೇರಿದ ಸಂದರ್ಭದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಕೂಗು ದೇಶಾದ್ಯಂತ ಬಲವಾಗಿ ಕೇಳಿ ಬಂದಿತ್ತು. ಆದರೆ, ಈ ಸುಗ್ರೀವಾಜ್ಞೆಯೇ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪರಿಹಾರವಲ್ಲ ಎಂದು ಸ್ಪಷ್ಟವಾಗಿ ನುಡಿದವರು ಕೆ.ಎನ್.ಭಟ್. ೧೯೪೦ರಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದಲ್ಲಿ ಜನಿಸಿದ ಕೆ.ಎನ್.ಭಟ್ ಅವರು ಸರ್ಕಾರಿ ಕಾನೂನು ಕಾಲೇಜಿನಲ್ಲಿ 1962ರಲ್ಲಿ ಕಾನೂನು ಪದವಿ ಪಡೆದು ಬೆಂಗಳೂರಿನಲ್ಲಿ ವೃತ್ತಿ ಆರಂಭಿಸಿದವರು. ನಂತರ 1986ರಲ್ಲಿ ಸುಪ್ರೀಂ ಕೊರ್ಟ್ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು.

ಅಯೋಧ್ಯೆ ತೀರ್ಪಿನ ಬಳಿಕ ಬಾಬ್ರಿಯ ಮತ್ತೊಂದು ತೀರ್ಪು ಶೀಘ್ರ ಪ್ರಕಟ

1996ರಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಿಸಿತ್ತು. 2003ರಿಂದ ಅಯೋಧ್ಯೆ ಪ್ರಕರಣದ ನಿರ್ವಹಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನೆಲೆಸಿದ್ದ ಅವರು, ಅಲಹಾಬಾದ್ ಹೈಕೋರ್ಟ್‌ನಲ್ಲಿ ಭಗವಾನ್ ಶ್ರೀರಾಮನ್ನು ಕಕ್ಷಿದಾರರನ್ನಾಗಿ ಮಾಡಿ, ವಾದ ಮಂಡಿಸಿದ್ದರು.

ದೇಶಾದ್ಯಂತ ಸುತ್ತಿ ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಕೋರ್ಟ್‌ ಮುಂದಿಟ್ಟಿದ್ದರು. ಅವರು ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಇದೀಗ ಅಯೋಧ್ಯೆಯಲ್ಲೇ ಶ್ರೀರಾಮ ಜನಿಸಿದ್ದ ಎಂಬ ವಾದವನ್ನು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸಾಬೀತುಪಡಿಸಲು ಪೂರಕವಾದವು.

click me!