ಈ ತೀರ್ಪನ್ನು ಮತ್ತೆ ಪ್ರಶ್ನಿ ಸುವ ಅವಕಾಶವೇ ಇಲ್ಲ: ಅಶೋಕ್ ಹಾರನಹಳ್ಳಿ

By Kannadaprabha NewsFirst Published Nov 10, 2019, 8:34 AM IST
Highlights

ಹಲವು ದಶಕಗಳಿಂದ ಸಂಕೀರ್ಣವಾಗಿದ್ದ ರಾಮ ಜನ್ಮಭೂಮಿ ವಿವಾದಕ್ಕೆ ಸುಪ್ರೀಂ ಕೊರ್ಟ್ ತೀರ್ಪಿನಿಂದ ಪರಿಹಾರ ಸಿಕ್ಕಿದ್ದು, ಅದನ್ನು ಮತ್ತೆ ಪ್ರಶ್ನಿಸುವ ಅವಕಾಶ ಹಾಗೂ ಸನ್ನಿವೇಶ ಇಲ್ಲವಾಗಿದೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ವಿಶ್ಲೇಷಿಸುತ್ತಾರೆ.

ಬೆಂಗಳೂರು(n.10): ಹಲವು ದಶಕಗಳಿಂದ ಸಂಕೀರ್ಣವಾಗಿದ್ದ ರಾಮ ಜನ್ಮಭೂಮಿ ವಿವಾದಕ್ಕೆ ಸುಪ್ರೀಂ ಕೊರ್ಟ್ ತೀರ್ಪಿನಿಂದ ಪರಿಹಾರ ಸಿಕ್ಕಿದ್ದು, ಅದನ್ನು ಮತ್ತೆ ಪ್ರಶ್ನಿಸುವ ಅವಕಾಶ ಹಾಗೂ ಸನ್ನಿವೇಶ ಇಲ್ಲವಾಗಿದೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ವಿಶ್ಲೇಷಿಸುತ್ತಾರೆ.

ಅಯೋಧ್ಯೆಯು ರಾಮನ ಜನ್ಮ ಭೂಮಿ ಎಂದು ಹಿಂದುಗಳು 1800 ಇಸವಿಯಿಂದಲೇ ನಂಬಿಕೊಂಡು ಬಂದಿದ್ದಾರೆ. ಈ ಸ್ಥಳದಲ್ಲಿ ಮುಸ್ಲಿಮರು ಯಾವುದೇ ಪ್ರಾರ್ಥನೆ ಮಾಡುತ್ತಿರಲಿಲ್ಲ. 1949ರಿಂದ ಭಗವಾನ್ ಶ್ರೀರಾಮನ ಮೂರ್ತಿಗಳನ್ನು ಪ್ರತಿಷ್ಠಾಪನೆ ಸಹ ಮಾಡಲಾಗಿತ್ತು. ಇದೇ ಕಾರಣಕ್ಕೆ ಈ 2 ಎಕರೆ 23 ಗುಂಟೆ ಜಮೀನು ಹಿಂದುಗಳಿಗೆ ನೀಡಿದರೆ, ಮುಸ್ಲಿಮರಿಗೆ ಐದು ಎಕರೆ ಜಮೀನು ನೀಡಿ ಮಸೀದಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ: ಕಾಂಗ್ರೆಸ್

ಆದ್ದರಿಂದ ಎಲ್ಲರಿಗೂ ಸಮಾಧಾನ ತರುವ ರೀತಿಯಲ್ಲಿ ಈ ತೀರ್ಪು ಇದೆ. ಅದನ್ನು ಎಲ್ಲರೂ ಒಪ್ಪಿ ಮುನ್ನಡೆದರೆ ದಶಕಗಳಿಂದ ಇದ್ದ ಸಮಸ್ಯೆಗೆ ಉತ್ತಮ ಪರಿಹಾರ ಲಭಿಸಿದೆ ಎಂಬುದಾಗಿ ಭಾವಿಸಬಹುದು ಎಂದು ತಿಳಿಸಿದರು. ಸುಪ್ರೀಂಕೋಟ್ ನರ್ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಅಥವಾ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಅವಕಾಶ ಹಾಗೂ ಅಗತ್ಯ ಇಲ್ಲವಾಗಿದೆ.

ಫೇಸ್‌ಬುಕ್, ಟ್ವಿಟರ್‌ ಮೇಲೆ ಇನ್ನೂ ಕೆಲ ದಿನ ಕಣ್ಣು..!

ಹಾಗೆಯೇ, ತೀರ್ಪನ್ನು ಬದಲಾಯಿಸುವ ಸಂದರ್ಭವೂ ಇಲ್ಲವಾಗಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ಸ್ಪಷ್ಟವಾಗಿ ಇಲ್ಲ. ಆದರೆ, ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ರೀತಿ ಅರ್ಜಿ ಸಲ್ಲಿಸಿದರೂ ಲಾಭವಿಲ್ಲ. ಅದನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪುವ ಅಥವಾ ತೀರ್ಪನ್ನು ಮರು ಪರಿಶೀಲಿಸುವ ಸಾಧ್ಯತೆಗಳೂ ಇಲ್ಲ. ಕಾರಣ ಇಷ್ಟು ವರ್ಷಗಳಿಂದ ವಾದ-ಪ್ರತಿವಾದ ಆಲಿಸಿ, ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಸುದೀರ್ಘವಾದ ತೀರ್ಪು ನೀಡಿರುವುದರಿಂದ ಈ ಯಾವ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆಗಳಿಲ್ಲ ಎಂದು ಅಶೋಕ್ ಹಾರನಹಳ್ಳಿ ಹೇಳಿದ್ದಾರೆ.

ಅಯೋಧ್ಯೆ ತೀರ್ಪು: ಹಕ್ಕು ಮಂಡಿಸಿದವರಿಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಕ್ಕಿದ್ದೇನು?

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

click me!