ಬೆಂಗಳೂರು ಟ್ರಾಫಿಕ್‌ನಲ್ಲಿ ಅರಳಿದ ಮಾನವೀಯತೆ: ಸಹಾಯಕ್ಕೆ ಬಂದ ರಾಪಿಡೋ ಚಾಲಕ

Published : Oct 03, 2025, 03:25 PM IST
Rapido Driver

ಸಾರಾಂಶ

ಬೆಂಗಳೂರಿನಲ್ಲಿ ಪೆಟ್ರೋಲ್ ಖಾಲಿಯಾಗಿ ಸಂಕಷ್ಟದಲ್ಲಿದ್ದ ಯುವಕನಿಗೆ ರಾಪಿಡೋ ಚಾಲಕನೊಬ್ಬ ನೆರವಾಗಿದ್ದಾನೆ. ತನ್ನ ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ನೀಡಿ, ಹಣವನ್ನೂ ಪಡೆಯದೆ ಮಾನವೀಯತೆ ಮೆರೆದಿದ್ದಾನೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಟ್ಟು ನಿಂತ ಬೈಕ್ :ನೆರವಾದ ರಾಪಿಡೋ ಚಾಲಕ

ನಡುರಸ್ತೆಯಲ್ಲಿ ವಾಹನ ಕೆಟ್ಟು ನಿಂತರೆ ಹೆಣ್ಣು ಮಕ್ಕಳಿಗಾದರೆ ಅಪರಿಚಿತರೂ ಸಹಾಯ ಮಾಡುತ್ತಾರೆ. ಆದರೆ ಗಂಡು ಮಕ್ಕಳಿಗೆ ಸಹಾಯ ಸಿಗುವುದು ಬಹಳ ಕಷ್ಟ. ಯಾರೂ ಸಹಾಯ ಮಾಡುವುದಕ್ಕೆ ಹೋಗುವುದಿಲ್ಲ. ಹೀಗಿರುವಾಗ ನಡುರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿ ಸಂಕಷ್ಟಕ್ಕೀಡಾಗ ಯುವಕನೋರ್ವನಿಗೆ ರಾಪಿಡೋ ಚಾಲಕ ಸಹಾಯ ಮಾಡಿದ್ದಾನೆ. ಈ ವಿಚಾರವನ್ನು ಆ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ದುರ್ಗಾಪೂಜೆಗಾಗಿ ಹೊರಟಿದ್ದ ಯುವಕ ಸ್ನೇಹಿತನ ಬೈಕ್ ತೆಗೆದುಕೊಂಡು ಹೋಗಿದ್ದು, ನಡುರಸ್ತೆಯಲ್ಲೇ ಆ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿ ಬೆಂಗಳೂರಿನ ಟ್ರಾಫಿಕ್‌ನಿಂದಲೇ ಗಿಜಿಗುಡುವ ರಸ್ತೆಯಲ್ಲಿ ಆತನ ಬೈಕ್ ಸ್ಟಕ್ ಆಗಿ ನಿಂತಿದೆ. ಬೈಕನ್ನು ಪಕ್ಕಕ್ಕೆ ತಳ್ಳಿ ಇರಿಸಿದ ಆತ ರಾಪಿಡೋವನ್ನು ಬುಕ್ ಮಾಡಿದ್ದಾನೆ. ರಾಪಿಡೋ ಮೂಲಕ ಪಕ್ಕದ ಪೆಟ್ರೋಲ್‌ ಪಂಪ್‌ಗೆ ಹೋಗಿ ಬಾಟಲ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದು ತನ್ನ ಬೈಕ್‌ಗೆ ಪೆಟ್ರೋಲ್ ಹಾಕುವ ಯೋಚನೆ ಆತನದ್ದಾಗಿತ್ತು. ಆದರೆ ನಂತರ ಬಾಟಲ್‌ನಲ್ಲಿ ಪೆಟ್ರೋಲ್ ಮರಾಟವಿಲ್ಲ ಎಂದು ಅರಿವಾಗಿ ತಲೆ ಚಚ್ಚಿಕೊಂಡ ಆ ಬೈಕ್ ಸವಾರನಿಗೆ ರಾಪಿಡೋ ಚಾಲಕನೇ ನೆರವಾಗಿದ್ದಾನೆ. ತನ್ನ ಬೈಕ್‌ನಿಂದಲೇ ಸ್ವಲ್ಪ ಪೆಟ್ರೋಲ್ ತೆಗೆದು ಆತನ ಬೈಕ್‌ಗೆ ನೀಡಿದ್ದಾನೆ. ಈ ವಿಚಾರವನ್ನು ಬೈಕ್ ಸವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರಾಪಿಡೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಾಪಿಡೋ ಚಾಲಕನಿಗೆ ಕೃತಜ್ಞತೆ

ಹಾಗಂತ ಆ ರಾಪಿಡೋ ಚಾಲಕನ ಬಳಿ ಈ ಬೈಕ್ ಸವಾರ ಸಹಾಯ ಕೇಳಿರಲಿಲ್ಲ. ಆದರೂ ಆ ರಾಪಿಡೋ ಚಾಲಕ ಆತನಿಗೆ ಸಹಾಯ ಮಾಡಿದ್ದು, ಈ ಸಹಾಯಕ್ಕಾಗಿ ಆತ ಯಾವುದೇ ಹಣ ಪಡೆದಿಲ್ಲ, ರಾಪಿಡೋ ಚಾಲಕನ ದೊಡ್ಡತನ ನೋಡಿದ ಬೈಕ್ ಸವಾರ ಆತನಿಗೆ ಕೃತಜ್ಷತೆ ಸಲ್ಲಿಸುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ ನೋಡಿದ ಅನೇಕರು ತಮಗೂ ಈ ರೀತಿ ಗುರುತು ಪರಿಚಯ ಇಲ್ಲದವವರು ನೆರವಾದ ವಿಚಾರವನ್ನು ನೆನಪಿಸಿಕೊಂಡರು.

ಈ ಪೋಸ್ಟ್‌ನ್ನು HiSohan ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಅವರ ಪೋಸ್ಟ್ ಹೀಗಿದೆ. ಬೆಂಗಳೂರು ಅದ್ಭುತ.. ನಾನು ನನ್ನ ಸ್ನೇಹಿತರೊಂದಿಗೆ ದುರ್ಗಾ ಪೂಜೆಗೆ ಹೋಗಲು ಸ್ಕೂಟರ್ ಬಾಡಿಗೆಗೆ ಪಡೆದಿದ್ದೆ. ಮೊದಲ ಪೆಟ್ರೋಲ್ ಪಂಪ್ ತಲುಪುವ ಮೊದಲೇ ನನ್ನ ಸ್ಕೂಟರ್ ನಲ್ಲಿ ಇಂಧನ ಖಾಲಿಯಾಗಿತ್ತು! ನಾನು ರಾಪಿಡೋಗೆ ಕರೆ ಮಾಡಿ, ನನ್ನ ಪರಿಸ್ಥಿತಿಯನ್ನು ವಿವರಿಸಿ, ಪೆಟ್ರೋಲ್ ಪಂಪ್ ಗೆ ಹೋಗೋಣ ಎಂದರೆ ಆದರೆ ಅಲ್ಲಿ ಬಾಟಲಿಯಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂದು ಆತ ಹೇಳಿದ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸ್ಕೂಟರ್ ಅನ್ನು ಪೆಟ್ರೋಲ್ ಪಂಪ್ ಗೆ ತಳ್ಳುವುದು ಅಸಾಧ್ಯವಾಗಿತ್ತು. ಆಗ ನನ್ನ ರಾಪಿಡೋ ಚಾಲಕ ತನ್ನ ಟ್ಯಾಂಕ್ ನಿಂದ ಪೆಟ್ರೋಲ್ ಕೊಟ್ಟ, ನಾನು ಕೇಳಲೂ ಇಲ್ಲ ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೆ, ಮತ್ತು ನಂತರ ಅವನು ನನ್ನ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ಸಹಾಯ ಮಾಡಿದ ಮತ್ತು ಇಂಧನದ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದನು ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂತಹ ಒಳ್ಳೆಯವರು ಹೆಚ್ಚಿನವರಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಒಳ್ಳೆಯವರು ಒಳ್ಳೆಯ ಕೆಲಸ ಕಾಣಿಸಲ್ಲ, ಬಹುತೇಕ ಎಲ್ಲಾ ಸ್ಥಳಗಳಲ್ಲೂ ಇದೇ ರೀತಿಯ ವೈಬ್ ಇದೆ. ಇದು ನಿಜವಾದ ಬೆಂಗಳೂರು ಹಾಗೆಯೇ ನೀವು ಕೂಡ ನಮ್ಮವರಲ್ಲಿ ಒಬ್ಬರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೆಂಗಳೂರಿನ ಟ್ರಾಫಿಕ್ ತುಂಬಾ ಕೆಟ್ಟದಾಗಿದೆ, ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವವರೆಗೆ ಕಾಯುತ್ತಿರುವಾಗ ಇಂಧನ ಖಾಲಿಯಾಗುವ ಸಾಧ್ಯತೆ ಇದೆ ಎಂದು ಮತ್ತೊಬ್ಬ ವ್ಯಕ್ತಿ ಹೇಳಿದರು. ಹೌದುಅಲ್ಲಿ ತುಂಬಾ ಒಳ್ಳೆಯ ಜನರಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ವರದಕ್ಷಿಣೆ ಬೇಡ ಎಂದಿದ್ದಕ್ಕೆ ವಧುವಿನ ತಂದೆ ಮಾಡಿದ್ದೇನು?

ಇದನ್ನೂ ಓದಿ:ಬಂಗಾರದ ನಾಗಾಲೋಟಕ್ಕೆ ಬ್ರೇಕ್ ಹೇಗಿದೆ ಇಂದು ಚಿನ್ನದ ದರ
ಇದನ್ನೂ ಓದಿ:ಪ್ರಧಾನಿ ಮೋದಿ ತನ್ನ ದೇಶದ ಬಗ್ಗೆ ಮೊದಲು ಯೋಚಿಸುವ ಅತ್ಯಂತ ಬುದ್ಧಿವಂತ ನಾಯಕ: ಪುಟಿನ್
ಇದನ್ನೂ ಓದಿ: ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಸಾವಿಗೆ ರೋಚಕ ಟ್ವಿಸ್ಟ್‌: ಬ್ಯಾಂಡ್‌ಮೇಟ್, ಸಹ ಗಾಯಕಿಯೂ ಅರೆಸ್ಟ್

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ