ಕೋವಾಕ್ಸಿನ್ ಲಸಿಕೆಗೆ 210 ರೂ ಡಿಸ್ಕೌಂಟ್ ಘೋಷಿಸಿದ ಜಯನಗರ ಯುನೈಟೆಡ್‌ ಆಸ್ಪತ್ರೆ!

By Suvarna News  |  First Published Aug 10, 2021, 6:14 PM IST
  • ಕೊರೋನಾ ಲಸಿಕೆ ಕೋವಾಕ್ಸಿನ್‌ಗೆ ದರದಲ್ಲಿ ರಿಯಾಯಿತಿ
  • 210 ರೂಪಾಯಿ ಡಿಸ್ಕೌಂಟ್ ಘೋಷಿಸಿದ ಜಯನಗರ ಯುನೈಟೆಡ್‌ ಆಸ್ಪತ್ರೆಯ
  • ಸಾಮಾಜಿಕ ಕಾಳಜಿ ಉದ್ದೇಶದಿಂದ ರಿಯಾಯಿತಿಗೆ ಆಡಳಿತ ಮಂಡಳಿ ನಿರ್ಧಾರ
  • ಸರಕಾರಿ ನಿಗದಿತ ದರದಲ್ಲೂ ರಿಯಾಯಿತಿ ನೀಡಲು ನಿರ್ಧಾರ

ಬೆಂಗಳೂರು(ಆ.10): ಕೊರೋನಾ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಸರ್ಕಾರಿ ಕೇಂದ್ರಗಳಲ್ಲಿ ನಿಯಮಿತ ಲಸಿಕೆಗೆ ಸಾಲುಗಟ್ಟಿ ಜನ ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗುತ್ತಿದೆ. ಹೀಗಾಗಿ ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಇದೀಗ ಜಯನಗರದ ಯುನೈಟೆಡ್‌ ಆಸ್ಪತ್ರೆ, ಕೋವಾಕ್ಸಿನ್ ಲಸಿಕೆ ದರದಲ್ಲಿ 210 ರೂಪಾಯಿ ರಿಯಾಯಿತಿ ಘೋಷಿಸಿದೆ. 

ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!

Tap to resize

Latest Videos

ಸಾಮಾಜಿಕ ಕಾಳಜಿಯಿಂದ ಹಾಗೂ ನಮ್ಮ ಬಳಿ ಇರುವ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಯುನೈಟೆಡ್‌ ಆಸ್ಪತ್ರೆ ಈ ಘೋಷಣೆ ಮಾಡಿದೆ. ಇದರಿಂದ 1,410 ರೂಪಾಯಿ ಬೆಲೆಯ ಕೋವಾಕ್ಸಿನ್ ಲಸಿಕೆ ಇದೀಗ 1,200 ರೂಪಾಯಿ ಲಭ್ಯವಿದೆ. 

ಬೆಂಗಳೂರು ನಗರದಲ್ಲೆಡೆ ಲಸಿಕೆಗಳ ಲಭ್ಯತೆಯಲ್ಲಿ ಕೊರತೆ ಕಂಡುಬರುತ್ತಿದೆ. ಅದರಲ್ಲೂ ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್‌ ವೇರಿಯಂಟ್‌ ವಿರುದ್ದ ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್‌ ಲಸಿಕೆಯ ಕೊರತೆ ಹೆಚ್ಚಾಗಿದೆ. ನಮ್ಮ ಆಸ್ಪತ್ರೆಯ ಮಂಡಳಿಯ ವತಿಯಿಂದ ನಾವುಗಳು ಎರಡು ತಿಂಗಳ ಹಿಂದೆ ಕೋವ್ಯಾಕ್ಸಿನ್‌ ಹಾಗೂ ಇತರೆ ಲಸಿಕೆಗಳಿಗೆ ಮುಂಗಡ ಹಣವನ್ನು ನೀಡಿ ಖರೀದಿಸಿದ್ದೇವು. ಇತ್ತೀಚಿಗೆ ನಮ್ಮ ಆಸ್ಪತ್ರೆಗೆ 20,000 ಡೋಸ್‌ ನಷ್ಟು ಕೋವ್ಯಾಕ್ಸಿನ್‌ ಲಸಿಕೆ ಸರಬರಾಜು ಆಗಿದೆ. ಇದರಲ್ಲಿ 5000 ಡೋಸ್‌ ಗಳನ್ನು ನಾವು ಕೊರೋನಾ ಎರಡನೇ ಅಲೆಯಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಿದ ಕಲಬುರ್ಗಿಯ ಆಸ್ಪತ್ರೆಯಲ್ಲಿ ಬಳಸಲಿದ್ದೇವೆ ಎಂದು ಹೇಳಿದರು.

ಭಾರತಕ್ಕೆ ಬಂತು 5ನೇ ಲಸಿಕೆ: ಶೇ.85ರಷ್ಟು ಪರಿಣಾಮಕಾರಿ ಈ ಲಸಿಕೆ!

ಇನ್ನುಳಿದ 15 ಸಾವಿರ ಡೋಸ್‌ ಗಳನ್ನು 15 ಸಹಯೋಗಿ ಆಸ್ಪತ್ರೆಯ ಮತ್ತು ಕ್ಲಿನಿಕ್‌ಗಳ ಮುಖಾಂತರ ಬೆಂಗಳೂರಿನಲ್ಲಿ ಬಳಸಲಿದೆ.  ಸರಕಾರ ನಿಗದಿ ಪಡಿಸಿರುವ 1410 ರೂಪಾಯಿಗಳಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಿ 1200 ರೂಪಾಯಿ ದರದಲ್ಲಿ ನೀಡಲು ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಎರಡನೇ ಡೋಸ್‌ ಕೋವ್ಯಾಕ್ಸಿನ್‌ ಸಿಗದೆ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆಯನ್ನು ರೂಪಿಸಿದ್ದೇವೆ ಎಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

ಜಯನಗರದ ಯುನೈಟೆಡ್‌ ಆಸ್ಪತ್ರೆಯನ್ನು ಕೋವಿಡ್‌ ಲಸಿಕೆ ನೀಡುವ ಸಲುವಾಗಿಯೇ ಕಾಯ್ದಿರಿಸಲಾಗಿದ್ದು. ಇದನ್ನು ಲಸಿಕೆ ನೀಡುವ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರಿಂದಾಗಿ ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಈ ಆಸ್ಪತ್ರೆಯನ್ನು ಲಸಿಕೆ ಪಡೆಯುವವರಿಗೆ ಸೇಫ್‌ ಜೋನ್‌ ಎನ್ನಬಹುದೆಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

ಡೆಲ್ಟಾ ಪ್ಲಸ್‌ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!

ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್‌ ಮುರುಡಾ ಮಾತನಾಡಿ*, ಐಸಿಎಂಆರ್‌ ಸಂಸ್ಥೆಯ ವತಿಯಿಂದ ನಡೆಸಲಾದ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್‌ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ವೇರಿಯೆಂಟ್‌ ವಿರುದ್ದ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ನಮ್ಮ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕರೋನಾ ಮಹಾಮಾರಿಯ ವಿರುದ್ದ ರಕ್ಷಣೆ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಈ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಹಯೋಗಿ ಆಸ್ಪತ್ರೆಗಳ ಮೂಲಕವೂ ಲಸಿಕೆಯನ್ನು ಸಾರ್ವಜನಿಕರಿಗೆ ದೊರಕಿಸಿಕೊಡಲಿದ್ದೇವೆ.

 ಆಸ್ಪತ್ರೆಯ ವತಿಯಿಂದ ಕಡಿಮೆ ದರದಲ್ಲಿ ಸದಸ್ಯತ್ವ ಕಾರ್ಡನ್ನೂ ಪಡೆದುಕೊಳ್ಳುವ ಮೂಲಕ ಎರಡನೇ ಡೋಸ್‌ ಕೋವ್ಯಾಕ್ಸಿನನ್ನು ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ನಮ್ಮ ಆಸ್ಪತ್ರೆಯ ವತಿಯಿಂದ 4 ಸಾವಿರಕ್ಕೂ ಹೆಚ್ಚು ಸ್ಪುಟ್ನಿಕ್‌-ವಿ ಲಸಿಕೆಯ ಎರಡೂ ಡೋಸನ್ನು ನೀಡಲಾಗಿದ್ದು, ಇನ್ನೂ 12 ಸಾವಿರ ಡೋಸ್‌ಗೆ ಆರ್ಡರ್‌ ನೀಡಿದ್ದೇವೆ ಎಂದು ಹೇಳಿದರು.

 ಬೆಂಗಳೂರಿನ ಜಯನಗರದ ಮಾಧವ ಪಾರ್ಕ್‌ನಲ್ಲಿರುವ ಯುನೈಟೆಡ್‌ ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ವಾಟ್ಸಾಪ್‌ ಮೂಲಕ ಸುಲಭವಾಗಿ ಸ್ಲಾಟ್‌ ಬುಕ್‌ ಮಾಡುವ ಸೌಲಭ್ಯ - ವಾಟ್ಸಾಪ್‌ ನಂ: 99169 77777

click me!