ಬೆಂಗಳೂರು(ಮೇ.23): ಕೊರೋನಾ ವೈರಸ್ 2ನೇ ಅಲೆಯಿಂದ ದೇಶದ ಆರೋಗ್ಯ ವ್ಯವಸ್ಥೆಗೆ ಅತ್ಯಂತ ಕಠಿಣ ಸವಾಲು ಎದುರಿಸುತ್ತಿದೆ. ಸೋಂಕಿತರ ಚಿಕಿತ್ಸೆಗೆ ಪ್ರತಿ ರಾಜ್ಯ ಹರಸಾಹಸ ಪಡುತ್ತಿದೆ. ಕರ್ನಾಟಕದಲ್ಲಿ ಸಕ್ರೀಯ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿಲ್ಲ. ಜೊತೆಗೆ ಹೊಸ ಪ್ರಕರಣಗಳು ಸರ್ಕಾರದ ತಲೆನೋವಾಗಿ ಪರಿಣಮಿಸಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತೀಯ ಸೇನೆ ನೆರವಾಗಿದೆ. ಸೋಂಕಿತರ ಚಿಕಿತ್ಸೆಗೆ ಭಾರತೀಯ ಸೇನೆ ಬೆಂಗಳೂರಿನಲ್ಲಿ 100 ಬೆಡ್ ಸೌಲಭ್ಯದ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.
ತಮಿಳುನಾಡು ಪಾಸ್ ಪಡೆದು ಕರ್ನಾಟಕಕ್ಕೆ ಬಂದ್ರೆ ವಾಹನ ಸೀಜ್.
ಹಲಸೂರಿನಲ್ಲಿ ಭಾರತೀಯ ಸೇನೆಯ 100 ಬೆಡ್ ಕೋವಿಡ್ ಕೇರ್ ಸೆಂಟರ್ ಆರಂಭಗೊಂಡಿದೆ. ಈ ಕೋವಿಡ್ ಕೇರ್ ಸೆಂಟರ್‌ಗೆ ಕರ್ನಾಟಕ ಸರ್ಕಾರ ವೈದ್ಯಕೀಯ ಸಲಕರಣೆ, ಔಷಧಿ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಲಿದೆ. ಕೋವಿಡ್ ಸೆಂಟರ್ ಸ್ಥಾಪಿಸುವ ಮೂಲಕ ರಾಜ್ಯ ಆಡಳಿತದ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಕರ್ನಾಟಕ ಮತ್ತು ಕೇರಳ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಜೆ.ವಿ.ಪ್ರಸಾದ್ ನೂತನ ಕೋವಿಡ್ ಕೇರ್ ಸೆಂಟರ್‌ನ್ನು ಬಿಜೆಪಿಯ ರಾಜ್ಯ ವಸತಿ ಸಚಿವ ವಿ ಸೋಮಣ್ಣಗೆ ಹಸ್ತಾಂತರಿಸಿದರು. ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೈಲ್ಡ್ ಹಾಗೂ ರೋಗ ರಕ್ಷಣವಿಲ್ಲದ ಸೋಂಕಿತರ ಚಿಕಿತ್ಸೆ ನೀಡಲಾಗುವುದು.
ವ್ಯಾಕ್ಸೀನ್ ಪಡೆದಿದ್ದಕ್ಕೆ ಯಾರೂ ಅಭಿನಂದಿಸಲಿಲ್ಲ: ಲಸಿಕೆ ಪಡೆದ 120ರ ವೃದ್ಧೆ
ಬೆಂಗಳೂರಿನಲ್ಲಿ ಪ್ರತಿ ದಿನ 10,000 ಕ್ಕಿಂತ ಕಡಿಮೆ COVID-19 ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು ನಗರದಲ್ಲಿ ಶನಿವಾರ 8,214 ಸೋಂಕುಗಳು ಮತ್ತು 200 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ 31,000 ಕೊರೋನಾ ಪ್ರಕರಣ ವರದಿಯಾಗಿದೆ. ಮಾರ್ಚ್ 2020 ರಿಂದ ಇಲ್ಲೀವವರೆಗೆ 11 ಲಕ್ಷ ಸೋಂಕುಗಳು ಮತ್ತು 10,856 ಸಾವು ವರದಿಯಾಗಿದೆ.