ಕೃಷಿ ಮೇಳದಲ್ಲಿ ರಾರಾಜಿಸಿದ ದೇಸಿ ಹಸುಗಳು: ಗಮನ ಸೆಳೆದ ಹಳ್ಳಿಕಾರ್‌, ಗಿರ್, ಪುಂಗನೂರ್

Published : Nov 15, 2025, 02:35 PM IST
Gkvk krushi mela 2025

ಸಾರಾಂಶ

Bengaluru GKVK Krishi Mela: ಬಗೆ ಬಗೆಯ ಸಸ್ಯಗಳ ತೋಟ, ಕಲರ್ ಫುಲ್ ಮೀನುಗಳು, ಕೀಟಗಳನ್ನ ಕಣ್ತುಂಬಿಕೊಳ್ತಿರೋ ಜನ, ಇತ್ತ ವಿವಿಧ ತಳಿಯ ಹಸು, ಕುರಿಗಳ ಸಾಲು, ಜಿಕೆವಿಕೆ ಕ್ಯಾಂಪಸ್ ನಲ್ಲಿ ಆರಂಭವಾಗಿರೋ 2025ನೇ ಸಾಲಿನ ಕೃಷಿಮೇಳದ ಝಲಕ್ ಇದು. ಡಿಟೇಲ್ ಸ್ಟೋರಿ ಇಲ್ಲಿದೆ

ಬಗೆ ಬಗೆಯ ಸಸ್ಯಗಳ ತೋಟ, ಕಲರ್ ಫುಲ್ ಮೀನುಗಳು, ಕೀಟಗಳನ್ನ ಕಣ್ತುಂಬಿಕೊಳ್ತಿರೋ ಜನ, ಇತ್ತ ವಿವಿಧ ತಳಿಯ ಹಸು, ಕುರಿಗಳ ಸಾಲು, ಜಿಕೆವಿಕೆ ಕ್ಯಾಂಪಸ್ ನಲ್ಲಿ ಆರಂಭವಾಗಿರೋ 2025ನೇ ಸಾಲಿನ ಕೃಷಿಮೇಳದ ಝಲಕ್ ಇದು. ಕೃಷಿಮೇಳಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದ್ರು. ಸಮೃದ್ಧ ಕೃಷಿ-ವಿಕಸಿತ ಭಾರತ ಅನ್ನೋ ಘೋಷವಾಕ್ಯದೊಂದಿಗೆ ಆರಂಭಗೊಂಡ ಕೃಷಿ ಮೇಳಕ್ಕೆ ಕೃಷಿ ಸಾಧಕರಿಗೆ ಸನ್ಮಾನ ಮಾಡೋ ಜೊತೆಗೆ ಬೆಂಗಳೂರು ಕೃಷಿ ವಿವಿಯ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರೋ ವಿವಿಧ ತಳಿಗಳನ್ನ ಅನಾವರಣ ಮಾಡಲಾಯ್ತು. ಸಾವಿರಾರು ಜನರು ಆಗಮಿಸಿ ಕೃಷಿ ಮೇಳವನ್ನ ಕಣ್ತುಂಬಿಕೊಂಡರು. ಅಲ್ಲಿ ಕಾಣಿಸಿದ ಕೆಲ ಗೋ  ತಳಿಗಳ ವಿವರ ಇಲ್ಲಿದೆ ನೋಡಿ.

ಕೃಷಿ ಮೇಳದಲ್ಲಿ ಗಮನ ಸೆಳೆದ ಗಿರ್ ಹಸುಗಳು:

ಭಾರತದ ಗೋಪರಂಪರೆಯಲ್ಲಿ ದೇಸಿ ಹಸುಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ, ಹೈನುಗಾರಿಕೆ ತಳಿಗಳಲ್ಲಿ ಗೀರ್‌ಗೆ ವಿಶಿಷ್ಟ ಸ್ಥಾನ. ದೇಸಿ ಗೋವುಗಳಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗಿರ್ ಹಸುವನ್ನು ಕನ್ನಡದಲ್ಲಿ ಗಿರ್ ಹಸು ಎಂದೇ ಕರೆಯುತ್ತಾರೆ. ಇದು ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಿಂದ ಬಂದ ಭಾರತೀಯ ತಳಿಯ ದೇಸಿ ಹಸುವಾಗಿದ್ದು, ಹೆಚ್ಚಿನ ಹಾಲು ಕೊಡುವ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ವಿದೇಶಗಳಲ್ಲಿಯೂ ಇದು ಜನಪ್ರಿಯವಾಗಿದ್ದು, ಜೆರ್ಸಿ ತಳಿಗಳಂತಹ ಹಸುಗಳ ಅಭಿವೃದ್ಧಿಗೆ ಸಹ ಇದು ಬಳಕೆಯಾಗುತ್ತದೆ. ಗಿರ್ ಹಸು ವಿಶಿಷ್ಟ ನೋಟವನ್ನು ಹೊಂದಿದ್ದು, ಸಾಮಾನ್ಯವಾಗಿ ದುಂಡಾದ ಮತ್ತು ಗುಮ್ಮಟಾಕಾರದ ಹಣೆಯನ್ನು ಹೊಂದಿರುತ್ತವೆ. ಉದ್ದವಾದ ನೇತಾಡುವ ಕಿವಿಗಳು ಮತ್ತು ಕೊಂಬುಗಳು ಸುರುಳಿಯಾಗಿ ಹೊರಗೆ ಮತ್ತು ಹಿಂದಕ್ಕೆ ಇರುತ್ತವೆ. ಗಿರ್ ಸಾಮಾನ್ಯವಾಗಿ ದಿನಕ್ಕೆ 10ರಿಂದ18 ಲೀಟರ್ ಹಾಲು ಕೊಡುವ ಸಾಮರ್ಥ್ಯ ಹೊಂದಿವೆ. ಕಾಡಿನಿಂದ ಬಂದ ತಳಿಯಾದರೂ ಇದರ ಸಾಮಾಜಿಕ ಸ್ವಭಾವ ಅಪೂರ್ವವಾಗಿದೆ.

ಹಲವು ವರ್ಷಗಳಿಂದ ಗಿರ್ ಹಸುಗಳನ್ನು ಸಾಕುತ್ತಿರುವ ಸಚಿನ್ ಎಂಬುವವರು ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ತಾವು ಸಾಕುವ ಗಿರ್ ಹಸುಗಳನ್ನು ಪ್ರದರ್ಶನ ಮಾಡಿದರು. ಹಲವು ವರ್ಷಗಳಿಂದ ಬೆಂಗಳೂರಿನ ಕೆಂಗೇರಿ ಬಳಿ ಇವರು ಗಿರ್ ಹಸುಗಳನ್ನು ಸಾಕುತ್ತಿದ್ದಾರೆ. ದೇಶಿ ಹಸುಗಳಲ್ಲಿ ಜಾಸ್ತಿ ಹಾಲು ಕೊಡುವ ಹಸುಗಳಲ್ಲಿ ಇದು ಒಂದು. 8 ವರ್ಷಗಳಿಂದ ಇದನ್ನು ಸಾಕುತ್ತಿದ್ದೇವೆ. ಇದಕ್ಕೆ ಪ್ರತ್ಯೇಕವಾದ ಆಹಾರ ಪದ್ಧತಿ ಎಂದೇನು ಇಲ್ಲ, ಯಾವುದೇ ಆಹಾರಗಳನ್ನು ನೀಡಬಹುದಾಗಿದೆ. ಆಳುಗಳನ್ನು ಇಟ್ಟುಕೊಂಡು ಈ ಹಸುಗಳನ್ನು ಸುಲಭವಾಗಿ ನಿಭಾಯಿಸಬಹುದು, ಬಹಳ ಸಾಧುಪ್ರಾಣಿಗಳು ಎಂದು ಅವರು ಮಾಹಿತಿ ನೀಡಿದರು.

ಹಳ್ಳೀಕಾರ್ ತಳಿಗಳ ವೈಶಿಷ್ಠ್ಯ:

ಕೃಷಿ ಮೇಳ ಅಂದ್ರೆ ಹಸುಗಳು ಪ್ರದರ್ಶನಕ್ಕೆ ಬಂದೆ ಬರುತ್ತವೆ. ಅದ್ರಲ್ಲೂ ಹಳ್ಳಿಕಾರ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ..?? ಹಳ್ಳಿಕಾರ್ ಕರ್ನಾಟಕ ರಾಜ್ಯದ ಸ್ಥಳೀಯ ಜಾನುವಾರುಗಳ ತಳಿಯಾಗಿದೆ. ಸಾಂಪ್ರದಾಯಿಕವಾಗಿ ಜಾನುವಾರು ಸಾಕಾಣಿಗೆ ಹೆಸರುವಾಸಿದ ಹಳ್ಳಿಕಾರ್ ಸಮುದಾಯದಿಂದ ಇದು ತನ್ನ ಹೆಸರನ್ನು ಪಡೆದುಕೊಂಡಿದೆ. ಉದ್ದವಾದ ದಪ್ಪವಾದ ಮತ್ತು ಹಿಂದಕ್ಕೆ ಭಾಗುವ ಕೊಂಬುಗಳು, ಉದ್ದವಾದ ಗಾತ್ರ ನೋಡಿದ್ರೆ ಸಾಕು, ಇದು ಹಳ್ಳಿಕಾರ್ ತಳಿ ಅಂತ ಗೊತ್ತಾಗುತ್ತೆ. ಇದನ್ನು ಭಾರತದಲ್ಲಿ ಭಾರ ಎತ್ತುವ ತಳಿ ಎಂದು ಹೇಳಲಾಗುತ್ತೆ ಮತ್ತು ದಕ್ಷಿಣ ಭಾರತದಲ್ಲಿ ಹೊಲಗಳನ್ನು ಉಳುಮೆ ಮಾಡಲು ಇದನ್ನ ಬಳಸಲಾಗುತ್ತೆ. ಹಳ್ಳಿಕಾರ್ ದಿನಕ್ಕೆ 18ರಿಂದ 20 ಗಂಟೆಗಳ ಕಾಲ ಕೆಲಸ ಮಾಡವಲ್ಲ ಮತ್ತು ಎರಡರಿಂದ ಮೂರು ಲೀಟರ್ ಹಾಲು ನೀಡಬಲ್ಲ ಕೆಪಾಸಿಟಿ ಹೊಂದಿದೆ.

ಹಾಗೆಯೇ ಇಲ್ಲಿ ಗಮನ ಸೆಳೆದಿದ ಮತ್ತೊಂದು ಆಕರ್ಷಣೆ ಎಂದರೆ ಬನ್ನೂರ್ ಕುರಿಗಳು, ಅಬ್ಬಬ್ಬಾ ನೋಡಿ ಎಷ್ಟು ಚಂದ ಅಲ್ಲಾ..? ಪುಟ್ಟ ಪುಟ್ಟ ಕಾಲು, ಪುಟ್ಟ ಪುಟ್ಟ ಹೆಜ್ಜೆ, ಬಿಳಿ ಬಣ್ಣ, ದೊಡ್ಡದಾದ ದೇಹ, ಎಲೆಗಳನ್ನ ಹೋಲುವ ಜೋತುಬಿದ್ದ ಕಿವಿಗಳು, ಚಿಕ್ಕ ಬಾಲ. ಏನಪ್ಪಾ ಇದು ಅಂತೀರಾ..? ಅದುವೇ ಬನ್ನೂರ್ ಕುರಿ. ಇದಕ್ಕೆ ಮಂಡ್ಯ ಕುರಿ ಮತ್ತು ಬನ್ನೂರ್ ಕುರಿ ಎಂದು ಕರೆಯುತ್ತಾರೆ. ಈ ಬನ್ನೂರ್ ಕುರಿಗೆ ಕರ್ನಾಟಕದ ಬಂಡೂರು ಎಂಬ ಹಳ್ಳಿಯಿಂದ ಈ ಹೆಸರು ಬಂದಿದೆ. ಈ ತಳಿಯನ್ನು ಸಂಪೂರ್ಣವಾಗಿ ಮಾಂಸದ ಉದ್ದೇಶಕ್ಕಾಗಿ ಸಾಕಲಾಗುತ್ತದೆ ಮತ್ತು ಮಾಂಸದ ಗುಣಮಟ್ಟ ಅತ್ಯುತ್ತಮವಾಗಿದೆ. ಬನ್ನೂರ್ ತಳಿಯ ಗುಣಲಕ್ಷಣಗಳು ಮತ್ತು ತೂಕ ಹೆಚ್ಚಾಗುವುದು ಇತರ ತಳಿಗಳಿಗೆ ಹೋಲಿಸಿದ್ರೆ ಉತ್ತಮವಾಗಿಲ್ಲ ಆದರೆ ರುಚಿ ಮತ್ತು ಮಾಂಸದ ಗುಣಮಟ್ಟದಿಂದಾಗಿ ಇದು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೊಂದಿದೆ. ಇದನ್ನ ಮಂಡ್ಯದ ಜನರು ಶೋಕಿಗಾಗಿ ಸಾಕ್ತಾರೆ ಅಂತ ಅಂದ್ರು ತಪ್ಪಾಗಲಿಕ್ಕಿಲ್ಲ. ಮನೆಯಲ್ಲಿ ಮಕ್ಕಳ ತರ ಈ ಬನ್ನೂರ್ ಕುರಿಯನ್ನ ಕೇರ್ ಮಾಡ್ತಾರೆ.

ಇದನ್ನೂ ಓದಿ: ಕತ್ತೆ ಸಾಕಿ ಯಶಸ್ವಿಯಾದ ಉದ್ಯಮಿ: ಜಿಕೆವಿಕೆ ಕೃಷಿ ಮೇಳದಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಸೋಪು ಪ್ರದರ್ಶನ

ಇದನ್ನೂ ಓದಿ: ಪಾಸ್‌ಪೋರ್ಟ್‌ಗೂ ಅರ್ಜಿ ಸಲ್ಲಿಸಿದ್ದ ಟೆರರ್ ಡಾಕ್ಟರ್ ಶಾಹೀನಾ: ದುಬೈಗೆ ಹಾರುವ ಮೊದಲೇ ಜಾಮ್ ಮಾಡಿದ ಪೊಲೀಸರು

 

PREV
Read more Articles on
click me!

Recommended Stories

Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!
ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!