
ಬೆಂಗಳೂರು (ಸೆ.18) ಬೆಂಗಳೂರು ಪ್ರತಿ ಬಾರಿ ಟ್ರಾಫಿಕ್ ವಿಚಾರದಲ್ಲಿ ಸುದ್ದಿಯಾಗುತ್ತದೆ. ಬೆಂಗಳೂರಿನ ಟ್ರಾಫಿಕ್ ಕುರಿತು ಮೀಮ್ಸ್ , ಟ್ರೋಲ್ಸ್ ಹರಿದಾಡುತ್ತದೆ. ಇದೀಗ ಬೆಂಗಳೂರು ಜನತೆ ಮತ್ತಷ್ಟು ಹೈರಾಣಾಗುವ ದಿನ ದೂರವಿಲ್ಲ. ಅಕ್ಟೋಬರ್ 1 ರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಡಬಲ್ ಆಗುತ್ತಿದೆ. ರಸ್ತೆಯಲ್ಲೇ ಗಂಟೆ ಗಟ್ಟಲೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಕಾರಣ ಅಕ್ಟೋಬರ್ 1 ರಿಂದ ಬೆಂಗಳೂರಿನ ಔಟರ್ ರಿಂಗ್ ರೋಡ್ ರಸ್ತೆಯಲ್ಲಿರುವ ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡೆಲ್ ಅಂತ್ಯಗೊಳಿಸುತ್ತಿದೆ. ಅಕ್ಟೋಬರ್ 1 ರಿಂದ ಎಲ್ಲರೂ ಕಚೇರಿಗೆ ಬಂದು ಕೆಲಸ ಮಾಡಬೇಕಿದೆ.
ಬೆಂಗಳೂರಿನ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಆಯ್ಕೆ ಅಂತ್ಯಗೊಳಿಸಿದೆ. ಆದರೂ ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅಥವಾ ವಾರದಲ್ಲಿ 3 ದಿನ ಕಚೇರಿ ಮತ್ತೆ ಮೂರು ದಿನ ಮನೆಯಿಂದ ಕೆಲಸದ ಹೈಬ್ರಿಡ್ ಮಾಡೆಲ್ ಅಂತ್ಯ ಮಾಡುತ್ತಿದೆ. ಎಲ್ಲರೂ ಕಚೇರಿಗೆ ತೆರಳಿ ಕೆಲಸ ಮಾಡುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ ತಿಂಗಳಿನಿಂದ ಬೆಂಗಳೂರಿನ ಟ್ರಾಫಿಕ್ ವಿಪರೀತವಾಗಲಿದೆ.
ಬೆಂಗಳೂರು ವಾಹನ ಸವಾರರೇ ಎಚ್ಚರ; 1 ವಾರ ರಿಂಗ್ ರೋಡ್ ಸಂಚಾರ ಬದಲು, ಪರ್ಯಾಯ ಮಾರ್ಗ ಇಲ್ಲಿದೆ ನೋಡಿ!
ಔಟರ್ ರಿಂಗ್ ರೋಡ್‌ನಲ್ಲಿ ಕಳೆದ ವರ್ಷದಿಂದ ಈ ವರ್ಷಕ್ಕೆ 26 ಪ್ರಮುಖ ಕಂಪನಿಗಳು ಆರಂಭಗೊಂಡಿದೆ. 2024ರ ಜೂನ್ ತಿಂಗಳಿಗೆ ಹೋಲಿಸಿದರೆ ಶೇಕಡಾ 45ರಷ್ಟು ಏರಿಕೆಯಾಗಿದೆ. ಈ ಪೈಕಿ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡೆಲ್ ನೀಡಿದೆ. ಆದರೂ ಕಳೆದ ವರ್ಷ ಈ ಔಟರ್ ರಿಂಗ್ ರೋಡ್ ವಲಯದಲ್ಲಿ ಕಳೆದ ವರ್ಷ ಒಂದು ದಿನ 82,000 ವಾಹನಗಳು ಓಡಾತುತ್ತಿತ್ತು. ಈ ವರ್ಷ ಒಂದು ದಿನ 1,20,000 ವಾಹನಗಳು ಓಡಾಡುತ್ತಿದೆ. ಅಕ್ಟೋಬರ್ 1 ರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.
ಔಟರ್ ರಿಂಗ್ ರೋಡ್ ಜೊತೆಗೆ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು ವಾಹನಗಳಿಂದ ತುಂಬಿ ತುಳುಕಲಿದೆ. ಈ ಭಾಗದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ಹಾಗೂ ಹೈಬ್ರಿಡ್ ಮಾಡೆಲ್ ಅಂತ್ಯಗೊಳಿಸಿದೆ. ಒಂದೆಡೆಯಿಂದ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಹಲವು ಪ್ರಮುಖ ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿದೆ. ಹೀಗಾಗಿ ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ಕಂಪನಿಯ ಕಡ್ಡಾಯ ಆರ್ಡರ್ ಪಾಲಿಸಲು ಮುಂದಾಗಿದ್ದಾರೆ. ಜೊತೆಗೆ ಎಐ ತಂತ್ರಜ್ಞಾನಗಳ ಬಳಕೆಗಳಿಂದ ಉದ್ಯೋಗಿಗಳು ಉದ್ಯೋಗ ಸುರಕ್ಷತೆ ಆತಂಕ ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ 10 ರಿಂದದ 15 ಕಿಲೋಮೀಟರ್ ಪ್ರಯಾಣಕ್ಕೆ 1 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಗಳು ಹೇಳುತ್ತದೆ. ಇದು ಸರಾಸರಿ ವರದಿ. ಮಾರ್ಥಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳು 2 ಗಂಟೆ ಸಮಯ ತೆಗೆದುಕೊಳ್ಳಲಿದೆ. ವರ್ಷದಿಂದ ವರ್ಷಕ್ಕೆ ಈ ಸಮಯ ಹೆಚ್ಚಾಗುತ್ತಲೇ ಇದೆ. ಇದೀಗ ಅಕ್ಟೋಬರ್ ತಿಂಗಳಿನಿಂದ ದಿನದ ಬಹು ಮುಖ್ಯ ಸಮಯ ರಸ್ತೆಯ ಟ್ರಾಫಿಕ್‌ನಲ್ಲಿ ಕಳೆಬೇಕಾಗಲಿದೆ.
ಔಟರ್ ರಿಂಗ್ ರೋಡ್‌ನಲ್ಲಿರುವ ಹಲವು ಕಂಪನಿಗಳು ಕಚೇರಿಯಿಂದ ಕೆಲಸ ಕಡ್ಡಾಯ ಮಾಡಿರುವ ಬೆನ್ನಲ್ಲೇ ಪ್ರತಿ ದಿನ ಕಚೇರಿಗೆ ತೆರಳುತ್ತಿರವು ರೆಡ್ಡಿಟ್ ಬಳಕೆದಾರ ವರ್ಕ್ ಫ್ರಮ್ ಹೋಮ್‌ಗೆ ಮನವಿ ಮಾಡಿದ್ದಾರೆ. ರೆಡ್ಡಿಟ್ ಮೂಲಕ ಮನವಿ ಮಾಡಿಕೊಂಡಿರುವ ಈತ, ಅಕ್ಟೋಬರ್ 1 ರಿಂದ ಎಲ್ಲರೂ ಬೆಂಗಳೂರಿಗೆ ಆಗಮಿಸಿ ಕಚೇರಿಗೆ ತೆರಳಿದರೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಈಗಾಗಲೇ ಹೆಚ್ಚಿನ ಸಮಯ ತೆಗೆದುಕೊಂಡು ಕಚೇರಿಗೆ ತೆರಳುತ್ತಿದ್ದೇನೆ. ಮತ್ತಷ್ಟು ಟ್ರಾಫಿಕ್ ಸಮಸ್ಯೆಯಾದರೆ ಕಚೇರಿಗೆ ಬರುವುದೇ ಕಷ್ಟವಾಗಲಿದೆ. ಜೊತೆಗೆ ಗುಂಡಿ ಬಿದ್ದ ರಸ್ತೆಗಳಿಂದ ಆಫೀಸ್ ಪ್ರಯಾಣ ದುಸ್ತರವಾಗಲಿದೆ. ಹೀಗಾಗಿ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾನೆ.