ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಶಾಖೆಗಳಲ್ಲಿ ಕ್ಲರಿಕಲ್ ಕೇಡರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 7ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಕ್ಲರಿಕಲ್ ಕೇಡರ್ ಹುದ್ದೆಯ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರ: 8283 ಕ್ಲರಿಕಲ್ ಕೇಡರ್ - ಜೂನಿಯರ್ ಅಸೋಸಿಯೇಟ್
undefined
ಈ ಮೇಲಿನ ಹುದ್ದೆಯು ಭಾರತದಾದ್ಯಂತ ಇರುವ ಎಸ್ ಬಿ ಐನ ವಿವಿಧ ಶಾಖೆಗಳಲ್ಲಿ ಖಾಲಿ ಇದ್ದು ಅವುಗಳಲ್ಲಿ ರಾಜ್ಯವಾರು ಉತ್ತರ ಪ್ರದೇಶ -1781, ಆಂಧ್ರ ಪ್ರದೇಶ – 50, ಮಧ್ಯಪ್ರದೇಶ - 288, ರಾಜಸ್ಥಾನ -940, ದೆಹಲಿ- 437, ಉತ್ತರಾಖಂಡ -215, ಛತ್ತೀಸ್‌ಗಢ- 212, ತೆಲಂಗಾಣ -525, ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು -20,ಹಿಮಾಚಲ ಪ್ರದೇಶ -180, ಹರಿಯಾಣ -267, ಜಮ್ಮು ಮತ್ತು ಕಾಶ್ಮೀರ -88, ಒಡಿಶಾ -72, ಪಂಜಾಬ್ -180, ಸಿಕ್ಕಿಂ -04, ತಮಿಳುನಾಡು -171, ಪುದುಚೇರಿ -04, ಪಶ್ಚಿಮ ಬಂಗಾಳ -114, ಕೇರಳ -47 , ಲಕ್ಷದ್ವೀಪ -03 , ಮಹಾರಾಷ್ಟ್ರ - 100 , ಅಸ್ಸಾಂ – 430 , ಅರುಣಾಚಲ ಪ್ರದೇಶ - 69, ಮಣಿಪುರ – 26, ಮೇಘಾಲಯ – 77, ಮಿಜೋರಾಂ – 17, ನಾಗಾಲ್ಯಾಂಡ್ – 40, ತ್ರಿಪುರ – 26 , ಗುಜರಾತ್ - 820 , ಕರ್ನಾಟಕ - 450 , ಲಡಾಖ್ - 50, ಬಿಹಾರ - 415, ಜಾರ್ಖಂಡ್ – 165 ಹುದ್ದೆಗಳು ಖಾಲಿ ಇವೆ.
'ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡಬೇಕು..' ಇನ್ಫ್ರಾ ಸೆಕ್ಟರ್‌ನ ಉದ್ಯೋಗಿಗಳಿಗೆ ನಾರಾಯಣ ಮೂರ್ತಿ ಮಾತು!
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 07-12-2023
ಪೂರ್ವಭಾವಿ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): 27.12.2023 ನಂತರ
ಮುಖ್ಯ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): 15.02.2024 ನಂತರ
ವಯಸ್ಸಿನ ಮಿತಿ (01-04-2023 ರಂತೆ)
ಕನಿಷ್ಠ ವಯಸ್ಸಿನ ಮಿತಿ: 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 28 ವರ್ಷಗಳು
ಏಮ್ಸ್‌ನಲ್ಲಿ 3036 ಬೋಧಕೇತರ ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳು
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ/ ಓಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ : ರೂ. 750
ಎಸ್ ಸಿ/ ಎಸ್ ಟಿ/ ಪಿ ಡಬ್ಲ್ಯೂಡಿ/ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ಇಲ್ಲ
ಶೈಕ್ಷಣಿಕ ಅರ್ಹತೆಗಳು: (31.12.2023 ರಂತೆ)
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಯಾವುದೇ ತತ್ಸಮಾನ ಅರ್ಹತೆ ಹೊಂದಿರಬೇಕು. ಅಥವಾ ತಮ್ಮ ಪದವಿಯ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರೂ ಅರ್ಜಿ ಸಲ್ಲಿಸಬಹುದು. ಆದರೆ ಇವರು ಆಯ್ಕೆಯಾದರೆ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಗಳನ್ನು ಸಲ್ಲಿಸಬೇಕು.
ಆಯ್ಕೆ ವಿಧಾನ ಹೇಗೆ?
ಆಯ್ಕೆ ಪ್ರಕ್ರಿಯೆಯು ಎರಡು ಹಂತದಲ್ಲಿ ಆನ್ಲೈನ್ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ಇಲ್ಲಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಹಂತ-1: ಪೂರ್ವಭಾವಿ ಪರೀಕ್ಷೆ: ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯು 100 ಅಂಕಗಳಿಗೆ ಇಂಗ್ಲೀಷ್ ಭಾಷೆ, ಸಂಖ್ಯಾತ್ಮಕ ಸಾಮರ್ಥ್ಯ , ತಾರ್ಕಿಕ ಸಾಮರ್ಥ್ಯ ವಿಷಯಗಳನ್ನೊಳಗೊಂಡ 100 ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಒಂದು ಗಂಟೆಯ ಅವಧಿಯಲ್ಲಿ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 0.25 ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಹಾಗೂ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದರೆ ಮಾತ್ರ ಹಂತ-2 ಪರೀಕ್ಷೆಗೆ ಅರ್ಹರಾಗುತ್ತಾರೆ
ಹಂತ - 2: ಮುಖ್ಯ ಪರೀಕ್ಷೆ: ಈ ಆನ್‌ಲೈನ್ ಮುಖ್ಯ ಪರೀಕ್ಷೆಯು ಸಾಮಾನ್ಯ/ಹಣಕಾಸು ಅರಿವು, ಸಾಮಾನ್ಯ ಇಂಗ್ಲೀಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ , ತಾರ್ಕಿಕ ಸಾಮರ್ಥ್ಯ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ ವಿಷಯದ ಮೇಲೆ ಒಟ್ಟು 190 ಬಹು ಆಯ್ಕೆಯ ಪ್ರಶ್ನೆಗಳಿದ್ದು, 200 ಅಂಕಗಳಿಗೆ ಎರಡು ಗಂಟೆ ನಲ್ವತ್ತು ನಿಮಿಷಗಳ ಅವಧಿಗೆ ನಡೆಸಲಾಗುತ್ತದೆ.
ವೇತನ ಶ್ರೇಣಿ: ರೂ.17900- 1000/3- 20900- 1230/3- 24590- 1490/4- 30550- 1730/7- 42600- 3270/1-45930- 1990/1- 47920
ಪೂರ್ವ ಪರೀಕ್ಷೆಯ ತರಬೇತಿ: ಎಸ್ ಸಿ / ಎಸ್ ಟಿ/ ಓಬಿಸಿ ಮಾಜಿ ಸೈನಿಕರು/ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಬ್ಯಾಂಕ್ ಪೂರ್ವ ಪರೀಕ್ಷೆಯ ತರಬೇತಿಯನ್ನು ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಸಂಬಂಧಿಸಿದ ಕಾಲಂ ಅನ್ನು ಭರ್ತಿ ಮಾಡಬೇಕು. ನಂತರ ಎಲ್ಲಾ ಅರ್ಹರನ್ನು ಪೂರ್ವ-ಪರೀಕ್ಷಾ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೆಬ್‌ಸೈಟ್ ವೀಕ್ಷಿಸಬಹುದು.