ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಶೀಘ್ರದಲ್ಲೇ SBI ಕ್ಲರ್ಕ್ ಅಧಿಸೂಚನೆ 2023 ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಶೀಘ್ರದಲ್ಲೇ SBI ಕ್ಲರ್ಕ್ ಅಧಿಸೂಚನೆ 2023 ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಪ್ರತಿ ವರ್ಷ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಭಾರತದಾದ್ಯಂತ ವಿವಿಧ ಶಾಖೆಗಳಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಲು SBI ಕ್ಲರ್ಕ್ ಅಧಿಸೂಚನೆ ಹೊರಡಿಸುತ್ತದೆ.
ಅಮೆರಿಕ ಕಂಪೆನಿಯಲ್ಲಿ 1 ಕೋಟಿಗೂ ಅಧಿಕ ಉದ್ಯೋಗ ಆಫರ್ ಪಡೆದ ವೆಲ್ಲೂರು ವಿಐಟಿ ವಿದ್ಯಾರ್ಥಿ!
undefined
ಇದಲ್ಲದೆ, SBI ಕ್ಲರ್ಕ್ ಅಧಿಸೂಚನೆ 2023 ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಅಧಿಕಾರಿಗಳು ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಿದಾಗ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. SBI ಕ್ಲರ್ಕ್ ಪರೀಕ್ಷೆ/ SBI ಕ್ಲರ್ಕ್ 2023 ಅಧಿಸೂಚನೆಯು ಇನ್ನಷ್ಟೇ ಬರಬೇಕಿದೆ, ವಾರ್ಷಿಕವಾಗಿ SBI ಕ್ಲರ್ಕ್ ಅರ್ಜಿ ನಮೂನೆ ಹಲವಾರು ಉದ್ಯೋಗ ಹುಡುಕುತ್ತಿರುವ ಯುವಜನತೆಯನ್ನು ಸೆಳೆಯುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್‌ಗಳಾಗಿ ನೇಮಕಾತಿಯನ್ನು ಬಯಸುವ ಅರ್ಹ ಭಾರತೀಯ ಅಭ್ಯರ್ಥಿಗಳಿಗೆ ಶೀವ್ರವೇ ಅರ್ಜಿ ಸಲ್ಲಿಸಲು ಅಧಿಕೃತ ಸೈಟ್‌ನಲ್ಲಿ ವಿಂಡೋ ತೆರೆಯಲಿದೆ. ಆಸಕ್ತ ಅಭ್ಯರ್ಥಿಗಳು ಒಂದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದೊಳಗೆ SBI ಕ್ಲರ್ಕ್ ಹುದ್ದೆಯ 2023 ಗೆ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಯೋಜನೆಯ ಸಮಯದಲ್ಲಿ ಪ್ರತಿ ಅಭ್ಯರ್ಥಿಗೆ ಒಮ್ಮೆ ಮಾತ್ರ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿದೆ. ನಿರ್ದಿಷ್ಟ ರಾಜ್ಯದಲ್ಲಿ ಎಷ್ಟು ಹುದ್ದೆಗಳು ಇವೆಯೋ ಅದಕ್ಕೆ ಮಾತ್ರ ಆಯಾಯ ರಾಜ್ಯಕ್ಕೆ ಸಂಬಂಧಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮುಂಬರುವ SBI ಕ್ಲರ್ಕ್ 2023 ಅಧಿಸೂಚನೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ.
ಪ್ರತಿಷ್ಠಿತ ಕಂಪೆನಿಯಲ್ಲಿ ದಾಖಲೆಯ 60 ಲಕ್ಷ ಪ್ಯಾಕೇಜ್ ಉದ್ಯೋಗ ಗಿಟ್ಟಿಸಿಕೊಂಡ
ಸೆಪ್ಟೆಂಬರ್ ನಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗೆ ಆಸಕ್ತರು ತಯಾರಾಗಿದೆ. ಇಡೀ ದೇಶದಲ್ಲಿ ಎಲ್ಲಾ ರಾಜ್ಯಗಳಿಗೂ ಏಕಕಾಲದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ರೆಗ್ಯುಲರ್ ಆಗಿ ಕರ್ನಾಟಕದಲ್ಲಿ 316 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. www.sbi.co.in ಅಧಿಕೃತ ಖಾತೆಯಲ್ಲಿ ಅಧಿಸೂಚನೆ ಮುಂದಿನ ತಿಂಗಳು ಪ್ರಕಟವಾಗಲಿದೆ.