ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!

By Web Desk  |  First Published Dec 28, 2018, 5:15 PM IST

ಚಳಿಗಾಲದಲ್ಲಿ ಕಾರು ಡ್ರೈವಿಂಗ್ ಸವಾಲು ಒಡ್ಡಲಿದೆ. ಮಂಜಿನ ವಾತಾವರಣದಲ್ಲಿ ಸುರಕ್ಷತೆಯೊಂದಿಗೆ ವಾಹನ ಚಲಾಯಿಸುವುದು ಹೇಗೆ? ಸೇಫ್ ಡ್ರೈವಿಂಗ್ ಮಾಡಲು ಇಲ್ಲಿದೆ ಕೆಲ ಟಿಪ್ಸ್. 


ಬೆಂಗಳೂರು(ಡಿ.28): ಚಳಿಗಾಲದಲ್ಲಿ ಎಲ್ಲೆಡೆ ಮಂಜು ಮುಸಿಕಿದ ವಾತಾವರಣ ಎಲ್ಲರನ್ನು ಆಕರ್ಷಿಸುತ್ತದೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಫಾಗ್ ವೆದರ್ ಕೈ ಬೀಸಿ ಕರೆಯುತ್ತೆ.  ಆದರೆ ಇದು ಕಾರು ಅಥವಾ ಬೈಕ್ ರೈಡ್ ಮಾಡುವವರಿಗೆ ಹೆಚ್ಚಿನ ಸವಾಲು ತಂದೊಡ್ಡುತ್ತೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

Tap to resize

Latest Videos

undefined

ನಗರಗಳಲ್ಲಿ ಮಂಜು ಸೇರಿದಂತೆ ವಾಯು ಮಾಲಿನ್ಯದ ಪರಿಣಾಮ ಡ್ರೈವಿಂಗ್ ಮತ್ತಷ್ಟು ಕಷ್ಟ. ದಹೆಲಿ, ಮುಂಬೈ ಸೇರಿದಂತೆ ಹಲವು ಮಹಾನಗರಗಳ ವಾಹನ ಸವಾರರು ಈ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಬೆಂಗಳೂರು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಪ್ರಮಾಣ ಕಡಿಮೆ ಇದೆ ಅಷ್ಟೇ. ಈ ಸಂದರ್ಭದಲ್ಲಿ ಸೇಫ್ ಡ್ರೈವಿಂಗ್ ಮಾಡಲು ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.

ಇದನ್ನೂ ಓದಿ: ಕಾರಿಗಿಂತಲೂ ಈ ನಂಬರ್ ಪ್ಲೇಟ್ ಬೆಲೆ ಜಾಸ್ತಿ-ಬರೋಬ್ಬರಿ 132 ಕೋಟಿ!

ಲೋ ಬೀಮ್ ಹೆಡ್‌ಲೈಟ್ ಬಳಸಿ
ಮಂಜು ಮುಸುಕಿದ ವಾತಾವರಣದಲ್ಲಿ ಹೆಚ್ಚಿನವರು ದಾರಿ ಸರಿಯಾಗಿ ಕಾಣಲು ಹೈ ಬೀಮ್ ಲೈಟ್ ಹಾಕುತ್ತಾರೆ. ಇದು ತಪ್ಪು, ಮೊದಲೇ ಮಂಜಿನ ವಾತಾವರಣದಲ್ಲಿ ಹೈ ಬೀಮ್‌ನಿಂದ ವಾಹನ ಚಾಲನೆ ಇನ್ನಷ್ಟು ಕಷ್ಟವಾಗಲಿದೆ.  ಹೀಗಾಗಿ ಲೋ ಬೀಮ್ ಉತ್ತಮ. ಫಾಗ್ ಲ್ಯಾಂಪ್ ಇದ್ದರೆ ಮತ್ತಷ್ಟು ಉತ್ತಮ. ಇಲ್ಲದೇ ಹೋದಲ್ಲಿ ಲೋ ಬೀಮ್ ಲೈಟ್  ಬಳಕೆ ಮಾಡಿ. 

ಪಾರ್ಕಿಂಗ್ ಲೈಟ್ ಹಾಕಬೇಡಿ
ಮಂಜಿನ ವಾತಾವರಣದಲ್ಲಿ ಚಲಿಸುವವರು ಹೆಚ್ಚಾಗಿ ಪಾರ್ಕಿಂಗ್ ಲೈಟ್ ಆನ್ ಮಾಡಿರುತ್ತಾರೆ.  ಹಜಾರ್ಡ್ ಲೈಟ್ ನೀವು ವಾಹನ ನಿಲ್ಲಿಸಿದಾಗ ಬಳಕೆ ಮಾಡಿ. ಇದು ನಿಮ್ಮ ಹಿಂದಿನ ಡ್ರೈವರ್‌ಗೆ ಸ್ಪಷ್ಟವಾಗುತ್ತೆ.  ಮಂಜಿನ ವಾತಾವರಣದಲ್ಲಿ ಹೈವೇ ಪಕ್ಕದಲ್ಲಿ ವಾಹನ ನಿಲ್ಲಿಸುವುದು ಸೂಕ್ತವಲ್ಲ. ಇನ್ನು ಹಜಾರ್ಡ್ ಲೈಟ್ ಆಫ್ ಮಾಡಿ ಹಿಂಬದಿ ಫಾಗ್ ಲ್ಯಾಂಪ್ ಬಳಸಿ. 

ಇದನ್ನೂ ಓದಿ: ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!

ನಿಧಾನವೇ ಪ್ರಧಾನ
ಮಂಜಿನ ವಾತವರಣದಲ್ಲಿ ನಿಧಾನವಾಗಿ ಚಲಿಸುವುದು ಹೆಚ್ಚು ಸೂಕ್ತ. ಮುಂದಿನ ವಾಹನಗಳಿಂದ ಅಂತರ ಕಾಯ್ದುಕೊಳ್ಳಿ. ಮಂಜಿನ ಕಾರಣ ರಸ್ತೆಯಲ್ಲಿದ್ದ ವಸ್ತುಗಳು, ಗುಂಡಿ, ಹಂಪ್ ಸರಿಯಾಗಿ ಕಾಣಿಸುವುದಿಲ್ಲ. ಹೀಗಾಗಿ ಮುಂದಿನ ವಾಹನ ತಕ್ಷಣ ಬ್ರೇಕ್ ಹಾಕಿದಾಗ ಸಮಸ್ಯೆ ಎದುರಾಗಬಹುದು.

ಮ್ಯೂಸಿಕ್ ಬಳಸಬೇಡಿ
ಮಂಜಿನ ವಾತಾವರಣದಲ್ಲಿ ಕಾರು ಚಲಾಯಿಸುವಾಗ ಮ್ಯೂಸಿಕ್ ಬಳಸುವುದು ಸೂಕ್ತವಲ್ಲ. ವಾಹನ ಹಾರ್ನ್ ಶಬ್ದ  ಕೇಳಿಸದೇ ಇರೋ ಸಾಧ್ಯತೆ ಇದೆ. ಇಷ್ಟೇ ಅಲ್ಲ ಲೇನ್ ಬದಲಿಸಬೇಡಿ.

ಇದನ್ನೂ ಓದಿ: ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 5 ಬೈಕ್!

ವಿಂಡ್‌ಸ್ಕ್ರೀನ್ ಕುರಿತು ಗಮನವಿರಲಿ
ಕಾರಿನಲ್ಲಿ ಡಿಫಾಗರ್ ಇದ್ದರೆ ಬಳಸಿ, ಇಲ್ಲದಿದ್ದರೆ ಕಾರಿನ ವಿಂಡೋ ಗ್ಲಾಸ್ ಸ್ವಲ್ಪ ಕೆಳಗಿಳಿಸಿದರೆ ಉತ್ತಮ. ಜೊತೆಗೆ ಕಾರಿನ ಹೀಟರ್, ಎಸಿ ಅಥವಾ ಫ್ಯಾನ್ ಗಾಳಿಯನ್ನ ವಿಂಡ್‌ಸ್ಕ್ರೀನ್‌ಗೆ ಹಾಕಿ,ಇದರಿಂದ ವಿಂಡ್‌ಸ್ಕ್ರೀನ್(ಮುಂಭಾಗದ ಗ್ಲಾಸ್)ಮೇಲಿನ ಮಂಜು ಮಾಯವಾಗುತ್ತದೆ.

ಮಂಜಿನ ವಾತಾವರಣದಲ್ಲಿ ಚಲಿಸುವುದಕ್ಕೂ ಮುನ್ನ ಕಾರಿನ ಹೆಡ್ ಲೈಟ್, ಇಂಡಿಕೇಟರ್, ಫಾಗ್ ಲ್ಯಾಂಪ್ ಸೇರಿದಂತೆ ಸೇಫ್ಟಿ ಫೀಚರ್ಸ್‌ ಪರಿಶೀಲಿಸಿ. ಈ ಮೂಲಕ ನಿಮ್ಮ ಪ್ರಯಾಣ ಸುಖಕರವಾಗರಲಿದೆ.
 

click me!