ವರ್ಷದ ಅತ್ಯುತ್ತಮ ಕಾರು-ಬೈಕ್ ಪ್ರಶಸ್ತಿ ಪ್ರಕಟ-ಇಲ್ಲಿದೆ ಲಿಸ್ಟ್!

Published : Dec 28, 2018, 04:15 PM IST
ವರ್ಷದ ಅತ್ಯುತ್ತಮ ಕಾರು-ಬೈಕ್ ಪ್ರಶಸ್ತಿ ಪ್ರಕಟ-ಇಲ್ಲಿದೆ ಲಿಸ್ಟ್!

ಸಾರಾಂಶ

ವರ್ಷದ ಅತ್ಯುತ್ತಮ ಕಾರು ಹಾಗೂ ಬೈಕ್ ಪ್ರಶಸ್ತಿ ಗೆದ್ದ ಆಟೋಮೊಬೈಲ್ ಕಂಪೆನಿಗಳಿಗೆ ಪ್ರಶಸ್ತಿ ವಿತರಿಸಲಾಗಿದೆ.  ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಗೆದ್ದ ಕಾರು ಬೈಕ್ ಯಾವುದು? ಇಲ್ಲಿದೆ ವಿವರ.

ಮುಂಬೈ(ಡಿ.28): ಭಾರತದ ಆಟೋಮೊಬೈಲ್ ಕ್ಷೇತ್ರದ ಪ್ರತಿಷ್ಠಿತ 14ನೇ ಇಂಡಿಯನ್ ಕಾರ್ ಆಫ್ ದಿ ಇಯರ್(ICOTY) ಹಾಗೂ ಇಂಡಿಯನ್ ಮೋಟರ್ ಸೈಕಲ್ ಆಫ್ ದಿ ಇಯರ್(IMOTY) ಪ್ರಶಸ್ತಿ ಪ್ರಧಾನ ಸಮಾರಂಭ ಮುಂಬೈನಲ್ಲಿ ನಡೆದಿದೆ.  ವರ್ಷದ ಕಾರು, ಬೈಕ್ ಸೇರಿದಂತೆ ಹಲವು ವಿಭಾಗಗಳಲ್ಲಿನ ಆಯ್ಕೆಯಾದ ಆಟೋಮೊಬೈಲ್ ಇಂಡಸ್ಟ್ರಿಗೆ ಪ್ರಶಸ್ತಿ ವಿತರಿಸಲಾಗಿದೆ. 

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ಮಾರುತಿ ಸುಜುಕಿ ಸ್ವಿಫ್ಟ್ 2019ರ ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನವಾಗಿದ್ರೆ. ರಾಯಲ್ ಎನ್‌ಫೀಲ್ಡ್  650 ಇಂಡಿಯನ್ ಮೋಟರ್ ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ವರ್ಷದ ಪ್ರಿಮಿಯರ್ ಕಾರು ಆಫ್ ದಿ ಇಯರ್ ವಿಭಾಗದಲ್ಲಿ ವೋಲ್ವೋ XC40 ಕಾರು ಪ್ರಶಸ್ತಿ ಪಡೆದುಕೊಂಡಿದೆ.

ಇದನ್ನೂ ಓದಿ: ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ!

ಜೆಕೆ ಟೈಯರ್ ಇಂಡಸ್ಟ್ರಿ ಚೇರ್ಮೆನ್ ಡಾ.ರಘುಪತಿ ಸಿಂಘಾನಿಯ, ICOTY ಚೇರ್ಮೆನ್ ಯೋಗೇಂದ್ರ ಪ್ರತಾಪ್ ಆಯ್ಕೆಯಾದ ಕಾರು ಬೈಕ್ ಇಂಡಸ್ಟ್ರಿಗೆ ಪ್ರಶಸ್ತಿ ವಿತರಿಸಿದರು. ICOTY ಹಾಗೂ IMOTY ಪ್ರಶಸ್ತಿಗಳು ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಆಸ್ಕರ್ ಇದ್ದಂತೆ ಎಂದು ಜೆಕೆ ಟೈಯರ್ ಇಂಡಸ್ಟ್ರಿ ಚೇರ್ಮೆನ್ ಡಾ.ರಘುಪತಿ ಹೇಳಿದರು.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ