ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್ ಅಗರ್ವಾಲ್‌ಗೆ ಅವಮಾನ ಮಾಡಿದ್ದ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಇದೀಗ ಕ್ಷಮೆ ಯಾಚಿಸಿದ್ದಾರೆ.
ಮೆಲ್ಬರ್ನ್(ಡಿ.27): ಆಸ್ಟ್ರೇಲಿಯಾ ವಿರುದ್ದದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾದರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಬ್ಯಾಟಿಂಗ್ ವೇಳೆ ಮಯಾಂಕ್ ಅವಮಾನ ಮಾಡಿದ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಕ್ಷಮೆ ಯಾಚಿಸಿದ್ದಾರೆ.
ಇದನ್ನೂ ಓದಿ: ಮಯಾಂಕ್ ಹಾಗೂ ರಣಜಿ ಕ್ರಿಕೆಟ್ ಅವಮಾನಿಸಿದ ಆಸಿಸ್ ಕಮೆಂಟೇಟರ್!
ಮಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಕೆರಿ ಓ ಕೀಫೆ, ರಣಜಿ ಕ್ರಿಕೆಟ್‌ನಲ್ಲಿ ಸಿಡಿಸಿದ ತ್ರಿಶತಕ ಕುರಿತು ಅವಮಾನ ಮಾಡಿದ್ದರು. ಮಯಾಂಕ್, ರೈಲ್ವೇಸ್ ಕ್ಯಾಂಟೀನ್ ಸಿಬ್ಬಂಧಿ ವಿರುದ್ಧ ತ್ರಿಶತಕ ಸಿಡಿಸಿದ್ದಾರೆ ಎಂದು ಕಮಂಟ್ರಿ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಕೆರಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: ಮಯಾಂಕ್ ಅವಮಾನಿಸಿದ ಕಮಂಟೇಟರ್‌ಗೆ ಟ್ವಿಟರಿಗರ ಮಂಗಳಾರತಿ!
ವೀಕ್ಷಕ ವಿವರಣೆ ವೇಳೆ ಆಡಿದ ಮಾತಿಗೆ ಕ್ಷಮೆ ಯಾಚಿಸುತ್ತಿದ್ದೇನೆ. ಯಾರನ್ನೂ ಅಥಾವ ಯಾವುದೇ ಕ್ರಿಕೆಟ್ ಗುಣಮಟ್ಟವನ್ನ ಅವಮಾನಿಸೋ ಉದ್ದೇಶ ಇರಲಿಲ್ಲ ಎಂದು ಕೆರಿ ಓ ಕೀಫೆ ಹೇಳಿದ್ದಾರೆ.