ಪೊಲೀಸರು ಗಸ್ತು ತಿರುಗಲು ಆಧುನಿಕ ವಾಹನಗಳು ಉಪಯೋಗಿಸುತ್ತಾರೆ. ಆದರಲ್ಲೂ ವಿದೇಶಿ ಪೊಲೀಸರು ದುಬಾರಿ ಬೆಲೆಯ ಕಾರು, ಬೈಕ್ ಉಪಯೋಗಿಸುತ್ತಾರೆ. ಇದೀಗ ಭಾರತದ ಪೊಲೀಸರು ಹಿಂದೆ ಬಿದ್ದಿಲ್ಲ. ಇದೀಗ ಭಾರತದ ಪೊಲೀಸರು ಪವರ್‌ಲ್ಯಾಂಡ್ 4X4 ATV ಬೈಕ್ ಉಪಯೋಗಿಸಿ ಸದ್ದು ಮಾಡಿದ್ದಾರೆ.
ಪ್ರಯಾಗ್‌ರಾಜ್ (ಫೆ.14): ಭಾರತದ ಪೊಲೀಸರು ಇದೀಗ ಆಧುನಿಕ ತಂತ್ರಜ್ಞಾನ, ಆಧುನಿಕ ವಾಹನಗಳನ್ನ ಬಳಸೋದರಲ್ಲಿ ಎತ್ತಿದ ಕೈ. ಇದೀಗ ಉತ್ತರ ಪ್ರದೇಶದ ಪೊಲೀಸರು ಗಸ್ತು ತಿರುಗುಲು ಪವರ್‌ಲ್ಯಾಂಡ್ 4X4 ATV ಬೈಕ್ ಬಳಕೆ ಮಾಡಿದ್ದಾರೆ. ಕುಂಭ ಮೇಳದಲ್ಲಿ ಗಸ್ತು ತಿರುಗಲು ಯುಪಿ ಪೊಲೀಸರು ಪವರ್‌ಲ್ಯಾಂಡ್ 4X4 ATV ಬೈಕ್ ಉಪಯೋಗಿಸಿದ್ದಾರೆ.
ಇದನ್ನೂ ಓದಿ: TVS ಸ್ಟಾರ್ ಸಿಟಿ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ- ಬೆಲೆ 54 ಸಾವಿರ!
ಪ್ರಯಾಗ್‌ರಾಜ್‌ನಲ್ಲಿ ನಡೆಯುವ ವಿಶ್ವಪ್ರಸಿದ್ಧ ಕುಂಭ ಮೇಳ ಈ ಬಾರಿ ಹಲವು ವಿಶೇಷತೆಗಳನ್ನ ಒಳಗೊಂಡಿತ್ತು. 45 ದಿನಗಳ ಕಾಲ ನಡೆಯುವ ಕುಂಭ ಮೇಳದಲ್ಲಿ ಯಾವುದೇ ಅವಘಡಗಳು ಸಂಭವಿಸಿದಂತೆ ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಎಚ್ಚರ ವಹಿಸಿತ್ತು. ಇದಕ್ಕಾಗಿ ಪೊಲೀಸರ ಗಸ್ತಿಗಾಗಿ ಪವರ್‌ಲ್ಯಾಂಡ್ 4X4 ATV ಬೈಕ್ ನೀಡಲಾಗಿತ್ತು.
ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!
ಗಂಗಾ ಹಾಗೂ ಯಮುನಾ ನದಿ ತಟದಲ್ಲಿ ಕುಂಭ ಮೇಳ ನಡೆಯುತ್ತೆ. ಹೀಗಾಗಿ ಇಲ್ಲಿ ಇತರ ವಾಹನಗಳಲ್ಲಿ ಗಸ್ತು ತಿರುಗುವುದು ಅಸಾಧ್ಯ. ಹೀಗಾಗಿ ಯೋಗಿ ಆದಿತ್ಯನಾಥ್ ಸರ್ಕಾರ ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್ ನೀಡಿತ್ತು. ಈ ಮೂಲಕ ಸಂಪೂರ್ಣ ಕುಂಭ ಮೇಳದಲ್ಲಿ ಕಟ್ಟೆಚ್ಚರವಹಿಸಲು ಸೂಚಿಸಿತ್ತು.
ಇದನ್ನೂ ಓದಿ: ಪೊಲೀಸ್ ಇಲಾಖೆಗೆ 242 ಮಹೀಂದ್ರ TUV300 SUV ಕಾರು!
ಪವರ್‌ಲ್ಯಾಂಡ್ 4X4 ATV ಬೈಕ್ ಬೆಲೆ 4.90 ಲಕ್ಷ ರೂಪಾಯಿ. 900D ಪವರ್, 800cc, ಲಿಕ್ವಿಡ್ ಕೂಲ್‌ಡ್, V-ಟ್ವಿನ್ ಡೀಸೆಲ್ ಎಂಜಿನ್ 20 Bhp ಪವರ್ 48 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಗಂಟೆಗೆ 45 ಕಿ.ಮೀ ವೇಗದಲ್ಲಿ ಈ ಬೈಕ್ ಪ್ರಯಾಣಿಸಲಿದೆ. ಇದರ ಇಂಧನ ಸಾಮರ್ಥ್ಯ 14 ಲೀಟರ್.