TVS ಸ್ಟಾರ್ ಸಿಟಿ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ- ಬೆಲೆ 54 ಸಾವಿರ!

By Web Desk  |  First Published Feb 14, 2019, 2:59 PM IST

1999ರಲ್ಲಿ ಬದ್ಧವೈರಿ ಪಾಕಿಸ್ತಾನ ಸೈನಿಕರನ್ನ ಹಿಮ್ಮೆಟ್ಟಿಸಿ ಕಾರ್ಗಿಲ್ ವಶಪಡಿಸಿಕೊಂಡ ಭಾರತೀಯ ಸೈನಿಕರ ಹೋರಾಟ ಸ್ಮರಣೀಯ. ಕಾರ್ಗಿಲ್ ಯುದ್ದದಲ್ಲಿ ಭಾರತ ಹಲವು ವೀರ ಯೋಧರು ಹುತಾತ್ಮರಾದರು. ಇದೀಗ ಕಾರ್ಗಿಲ್ ಗೌರವ ಸೂಚಕವಾಗಿ TVS ಮೋಟರ್ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ.


ಚೆನ್ನೈ(ಫೆ.14): TVS ಮೋಟರ್ ಸ್ಟಾರ್ ಸಿಟಿ + ಲಿಮಿಟೆಡ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ 1999ರ ಕಾರ್ಗಿಲ್ ಯುದ್ಧದ ಹಾಗೂ ಹುತಾತ್ಮ ಯೋಧರಿಗಾಗಿ  ನೂತನ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಭಾರತೀಯ ಸೇನೆಯ ಬಣ್ಣದಲ್ಲಿ ನೂತನ ಬೈಕ್ ಲಭ್ಯವಿದೆ.

ಇದನ್ನೂ ಓದಿ: ಮಹೀಂದ್ರ XUV 300 ಬಿಡುಗಡೆ- ಕಡಿಮೆ ಬೆಲೆಯ SUV ಕಾರು!

Tap to resize

Latest Videos

undefined

TVS ಕಾರ್ಗಿಲ್ ಎಡಿಶನ್ ಬೈಕ್ ಬೆಲೆ 54,399 ರೂಪಾಯಿ(ಎಕ್ಸ್ ಶೋ ರೂಂ). ಬಿಳಿ ಹಾಗೂ ಹಸಿರು ಮಿಶ್ರಿತ ಬಣ್ಣದಲ್ಲಿ ಆರ್ಮಿ ಸಮವಸ್ತ್ರದ ಗ್ರಾಫಿಕ್ಸ್ ಈ ಬೈಕ್ ಅಂದವನ್ನ ಮತ್ತಷ್ಟು ಹೆಚ್ಚಿಸಿದೆ. ಬದ್ಧವೈರಿ ಪಾಕಿಸ್ತಾನ ಹಿಮ್ಮೆಟ್ಟಿಸಿದ ಭಾರತೀಯ ವೀರ ಯೋಧರ ಸಾಹಸಕ್ಕೆ ಇದೀಗ TVS ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ ಮಾಡೋ ಮೂಲಕ ಗೌರವ ಸೂಚಿಸಿದೆ.

ಇದನ್ನೂ ಓದಿ: 2019ರ ದೀಪಾವಳಿಗೆ ಬಜಾಜ್‌ನಿಂದ ಬಂಪರ್ ಕೊಡುಗೆ!

TVS ಕಾರ್ಗಿಲ್ ಎಡಿಶನ್ ಬೈಕ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. TVS ಮೋಟರ್ ಸ್ಟಾರ್ ಸಿಟಿ + ಎಂಜಿನ್ ಹಾಗೂ ವಿನ್ಯಾಸ ಹೊಂದಿದೆ. 110 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್, 8bhp ಹಾಗೂ 8.7 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

click me!