ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿಗಳ ನಂತರ ಪೊಲೀಸರು ಕೂಡ ತಮ್ಮ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸರ ಹೋರಾಟಕ್ಕೆ ಟಿವಿಎಸ್ ಮೋಟಾರ್ ಕಾರ್ಪ್ ಸಾಥ್ ನೀಡಿದೆ.
ಬೆಂಗಳೂರು(ಏ.18): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಲಾಕ್‌ಡೌನ್ ಆದೇಶವನ್ನು ಬೆಂಗಳೂರು ಪೊಲೀಸರು ಕಟ್ಟು ನಿಟ್ಟಾಗಿ ಜಾರಿಗೊಳಿಸಿದ್ದಾರೆ. ಸಂಕಷ್ಟದಲ್ಲೂ ಪ್ರತಿ ದಿನ ಪೊಲೀಸರು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸರಿಗೆ ಟಿವಿಎಸ್ ಮೋಟಾರ್ ಕಂಪನಿ ಸಾಥ್ ನೀಡಿದೆ. ಪೊಲೀಸರ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಬೈಕ್ ಸರ್ವೀಸ್ ನೀಡುತ್ತಿದೆ
ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!.
undefined
ಟಿ.ವಿ.ಎಸ್ ಮೋಟಾರ್ ಕಂಪನಿಯ ಮುಖ್ಯ ವಿತರಕರಾದ ಸೋಲಾರ್ ಟಿವಿಎಸ್, ಬೆಂಗಳೂರಿನಲ್ಲಿ ಪೊಲೀಸರ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಬೈಕ್ ಸರ್ವೀಸ್ ನೀಡುತ್ತಿದೆ. ಕೋಲಾರದ ಶರವಣನ್ ಎಂಟರ್ ಪ್ರೈಸಸ್ ಸಂಸ್ಥೆ ದೇವನಹಳ್ಳಿ ಪ್ರದೇಶದಲ್ಲಿ ಖಾಸಗಿ ಗ್ಯಾರೇಜ್‍ಗಳ ಮೆಕ್ಯಾನಿಕ್‍ಗಳಿಗೆ ಉಚಿತವಾಗಿ ಆಹಾರವನ್ನು ವಿತರಿಸುತ್ತಿದೆ.
ಆಧುನಿಕ ತಂತ್ರಜ್ಞಾನದೊಂದಿಗೆ TVS ಅಪಾಚೆ ಬೈಕ್ ಬಿಡುಗಡೆ!.
ಟಿ.ವಿ.ಎಸ್. ಮೋಟಾರ್ ಕಂಪನಿಯು ಕೋವಿಡ್-19 ಪಿಡುಗಿನ ವಿರುದ್ಧ ಹೋರಾಟ ನಡೆಸಲು ಪೊಲೀಸ್ ಇಲಾಖೆ ಜೊತೆ ಮಾತ್ರವಲ್ಲ, ಸರ್ಕಾರದ ಜೊತೆಗೆ ಕೈಜೋಡಿಸಿದೆ.. ಸ್ಥಳೀಯ ಸಮುದಾಯದ ಆರೋಗ್ಯ ಮತ್ತು ಪ್ರಗತಿ ಕುರಿತ ಕಂಪನಿಯ ಧ್ಯೇಯಕ್ಕೆ ಅನುಗುಣವಾಗಿ ಟಿವಿಎಸ್ ಮೋಟಾರ್ ಕಂಪನಿಯ ವಿತರಕರೂ ಅನೇಕ ಸಕಾರಾತ್ಮಕ ಕ್ರಮಗಳನ್ನು ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳುತ್ತಿದ್ದಾರೆ.
ಟಿವಿಎಸ್ ಮೋಟಾರ್ ಕಂಪನಿ 60 ವಿವಿಧ ದೇಶಗಳಲ್ಲಿ ಗ್ರಾಹಕರಿಗೆ ಉನ್ನತ ಸೇವಾ ಅನುಭವವನ್ನು ತಮ್ಮ ಟಚ್‍ಪಾಯಿಂಟ್ ಮೂಲಕ ನೀಡುತ್ತಿದೆ. . ಪ್ರತಿಷ್ಠಿತ ಡೇಮಿಂಗ್ ಪ್ರಶಸ್ತಿ ಪಡೆದ ಏಕೈಕ ದ್ವಿಚಕ್ರ ವಾಹನ ಕಂಪನಿಯು ಇದಾಗಿದೆ. ಜೆ.ಡಿ. ಪವರ್ ಐಕ್ಯೂಎಸ್ ಮತ್ತು ಅಪೀಲ್ ಸರ್ವೆಗಳಲ್ಲಿ ಆಯಾ ವರ್ಗದಲ್ಲಿ ಕಳೆದ ಐದು ವರ್ಷಗಳಿಂದ ಉನ್ನತ ಸ್ಥಾನ ಪಡೆದುಕೊಂಡಿವೆ. ಜೆ.ಡಿ.ಪವರ್ ಕಸ್ಟಮರ್ ಸರ್ವೀಸ್ ಸ್ಯಾಟಿಸ್‍ಫ್ಯಾಕ್ಷನ್ ಸವೇಯಲ್ಲಿ ಸತತ ಮೂರು ವರ್ಷಗಳಿಂದ ನಂ. 1 ಕಂಪನಿಯಾಗಿ ಹೊರಹೊಮ್ಮಿದೆ. ಇದೀಗ ಅತ್ಯನ್ನತ ಸೇವೆಯನ್ನು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಬೆಂಗಳೂರು ಪೊಲೀಸರಿಗೂ ನೀಡುತ್ತಿದೆ.