ಬೆಂಝ್ ಕಾರಿನಲ್ಲಿ ಸ್ವರ್ಗ ಪ್ರಯಾಣ, ನಿಧನದಲ್ಲೂ ಪ್ರಚಾರ ಪಡೆದ ರಾಜಕಾರಣಿ!

By Suvarna NewsFirst Published Apr 17, 2020, 8:02 PM IST
Highlights

ರಾಜಕಾರಣಿಗಳೇ ಹಾಗೇ, ಯಾವತ್ತೂ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ. ಪ್ರಚಾರಕ್ಕಾಗಿ ಹಲವು ಗಿಮಿಕ್‌ ಕೂಡ ಮಾಡುತ್ತಾರೆ. ಇಲ್ಲೊರ್ವ ರಾಜಕಾರಣಿ ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಸುದ್ದಿಯಲ್ಲಿರಲು ಹೊಸ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ರಾಜಕಾರಣಿಯ ವಿಶೇಷ ಸ್ಟೋರಿ ಇಲ್ಲಿದೆ.

ಜೋಹಾನ್ಸ್‌ಬರ್ಗ್(ಏ.17):  ರಾಜಕಾರಣಿಗಳು ಕೆಲಸ ಮಾಡುವುದಕ್ಕಿಂತ ಪ್ರಚಾರ ಮಾಡುವುದೆ ಹೆಚ್ಚು ಅನ್ನೋ ಆರೋಪಗಳು ಇವೆ. ಇದಕ್ಕೆ ಕಾರಣವೂ ಇದೆ. ಪ್ರಚಾರದ ಮೂಲಕವೇ ಮತದಾರನ್ನು ಸೆಳೆಯುತ್ತಾರೆ.   ತನ್ನೆಲ್ಲಾ ಕೆಲಸ ಕಾರ್ಯಗಳನ್ನು ವಿಭಿನ್ನವಾಗಿ ಮಾಡುತ್ತಿದ್ದ ಸೌತ್ ಆಫ್ರಿಕಾದ ಸೌತ್ ಆಫ್ರಿಕಾದ ರಾಜಕೀಯ ಮುಖಂಡ ಶಿಕೆಡೆ ಭಫ್ಟೋನ್ ಪಿಸ್ತೋ  ಸಾವು ಹಾಗೂ ಅಂತ್ಯಕ್ರಿಯೆಯಲ್ಲೂ ಭಿನ್ನತೆ ತೋರಿದ್ದಾರೆ.

U ಟರ್ನ್ ಬದಲು ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿದ, ಇಳಿದಾಗ ಸಾಹಸಿಗೆ ಕಾದಿತ್ತು ಅಚ್ಚರಿ!.

 ಶಿಕೆಡೆ ಭಫ್ಟೋನ್ ಪಿಸ್ತೋ ಸೌತ್ ಆಫ್ರಿಕಾದ ಯಶಸ್ವಿ ರಾಜಕಾರಣಿ ಹಾಗೂ ಉದ್ಯಮಿ. ರಾಜಕಾರಣದಲ್ಲಿ ಪ್ರಚಾರ ಗಿಟ್ಟಿಸಿಕೊಂಡ ಶಿಕೆಡೆ ಉದ್ಯಮ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಂಪಾದಿಸಿದ್ದರು.  ಶಿಕೆಡೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಮಾರ್ಚ್‌ನಲ್ಲಿ  ಶಿಕೆಡೆ ನಿಧನರಾದರು. ಶಿಕೆಡೆ ನಿಧನ ಸುದ್ದಿಗಿಂತ ಶಿಕಡೆ ಅಂತ್ಯಕ್ರಿಯ ಹೆಚ್ಚು ಸುದ್ದಿಯಾಗಿದೆ. 

ಕಳೆದ 20 ದಿನದಿಂದ ನಿಸಾನ್ ಮೈಕ್ರಾ ಕಾರಿನಲ್ಲೇ ದ.ಕ ಜಿಲ್ಲೆಯ ಇಬ್ಬರ ಜೀವನ!.

ಶಿಕೆಡೆ ಅವರ ಇಚ್ಚೆಯಂತೆ ಸತ್ತ ಮೇಲೆ ತನ್ನನ್ನು ತನ್ನ ಬೆಂಝ್ E500 ಕಾರಿನಲ್ಲೇ ಮಣ್ಣು ಮಾಡಬೇಕು ಎಂದು ಸೂಚಿಸಿದ್ದರು. ಹೀಗಾಗಿ ಇವರ ಆಸೆಯಂತೆ ಇವರ ಮರ್ಸಡೀಸ್ ಬೆಂಝ್ ಕಾರಿನ ಡ್ರೈವರ್ ಸೀಟಿನಲ್ಲಿ ಕೂರಿಸಲಾಯಿತು. ಬಳಿಕ ಸೀಟ್ ಬೆಲ್ಟ್ ಹಾಕಿ, ಶಿಕೆಡೆ ಶವದ ಕೈಗಳನ್ನು ಸ್ಟೇರಿಂಗ್ ಮೇಲಿಡಲಾಯಿತು. ಹೊರಗಿನಿಂದ ನೋಡಿದರೆ ಶಿಕಡೆ ಈ ವಯಸ್ಸೂ ಕಾರು ಡ್ರೈವ್ ಮಾಡಿಕೊಂಡು ಹೋಗುವ ಹಾಗೇ ಕಾಣುತ್ತಿತ್ತು.

 

ಬಳಿಕ ಬೆಂಝ್ ಕಾರಿನ ಜೊತೆಗೆ ಶಿಕೆಡೆ ಅವರನ್ನು ಮಣ್ಣುಮಾಡಲಾಯಿತು. ಶಿಕೆಡೆಗೆ ಮರ್ಸಡೀಸ್ ಬೆಂಝ್ ಕಾರಿನಲ್ಲಿ ಎಲ್ಲಿಲ್ಲದ ಮೋಹ. ಉದ್ಯಮದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಹಲವು ಬೆಂಝ್ ಕಾರುಗಳನ್ನು ಖರೀದಿಸಿದ್ದರು. ಇದರಲ್ಲಿ ಇವರಿಗೆ ಇಷ್ಟವಾದ ಕಾರು ಮೊದಲು ಖರೀಜಿಸಿದ ಬೆಂಝ್ E500. ರಾಜಕೀಯಯಲ್ಲಿ ಕೊಂಚ ಯಶಸ್ಸು ಸಾಧಿಸುತ್ತಿದ್ದಂತೆ ಇತ್ತ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದರು. ಈ ವೇಳೆ ತನ್ನಲ್ಲಿದ್ದ  ಬೆಂಝ್ E500 ಕಾರು ಬಿಟ್ಟು ಇನ್ನುಳಿದ ಎಲ್ಲಾ ಬೆಂಝ್ ಕಾರು ಮಾರಾಟ ಮಾಡಿದ್ದರು. 

ಬೆಂಝ್ E500 ಕಾರಿನ ಮೇಲೆ ಶಿಕೆಡೆಗೆ ಅದೆಷ್ಟು ಪ್ರೀತಿ ಎಂದರೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೂ ಮನೆಯಲ್ಲಿ ಪಾರ್ಕ್ ಮಾಡಿದ ಬೆಂಝ್ E500 ಕಾರಿಗೆ ಒಂದು ಸುತ್ತು ಹಾಕಿ ಬಳಿಕ ಡ್ರೈವರ್ ಸೀಟಿನಲ್ಲಿ ಕುಳಿತು ಎಫ್ಎಂ ಆನ್ ಮಾಡಿ ಹಾಡು ಕೇಳುತ್ತಿದ್ದರು. ಕಾರು ಚಲಾಯಿಸುವಷ್ಟು ಶಕ್ತಿ ಶಿಕಡೆಯಲ್ಲಿ ಇಲ್ಲದಿದ್ದರೂ ಕಾರನ್ನು ಪ್ರತಿ ದಿನ ಸುತ್ತು ಹಾಕುತ್ತಿದ್ದರು.

ಹೀಗಾಗಿಯೇ ತಾನು ಸತ್ತಾಗ ಇದೇ ಕಾರಿನಲ್ಲಿ ಮಣ್ಣು ಮಾಡಬೇಕು ಎಂದಿದ್ದರು. ಶಿಕೆಡೆ ಸತ್ತಾಗ ಸೌತ್ ಆಫ್ರಿಕಾದಲ್ಲಿ ಕೊರೋನಾ ವೈರಸ್ ಕಾರಣ ಲಾಕ್‌ಡೌನ್ ಹೇರಲಾಗಿತ್ತು. ಹೀಗಾಗಿ ಹೆಚ್ಚಿನವರು ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿಲ್ಲ. ಯಾವ ರಾಜಕಾರಣಿಗಳು ಶಿಕೆಡೆ ಅಂತಿಮ ದರ್ಶನ ಪಡೆಯಲಿಲ್ಲ.
 

click me!